For Quick Alerts
ALLOW NOTIFICATIONS  
For Daily Alerts

ಅಕ್ಕಿ ನೀರಿನಿಂದ ಮುಖ ತೊಳೆಯಿರಿ... ಮುಖದ ಕಾಂತಿ ಹೆಚ್ಚುವುದು ನೋಡಿ

|

ಮುಖದ ಸೌಂದರ್ಯ ಹಾಗೂ ಚರ್ಮದ ಆರೈಕೆಗೆ ಸಾಕಷ್ಟು ಆರಕೈಕೆ ಹಾಗೂ ಕಾಳಜಿಯನ್ನು ವಹಿಸುತ್ತಿದ್ದೀರಿ. ಆದರೂ ಯಾವುದೇ ಪ್ರಯೋಜನ ಅಥವಾ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಂಡಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ನಿಮ್ಮ ಬಯಕೆಯಂತೆ ಚರ್ಮವನ್ನು ಆರೈಕೆ ಮಾಡುವ ಉತ್ಪನ್ನ. ಇದು ನೈಸರ್ಗಿಕವಾಗಿ ದೊರೆಯುವ ಪರಿಹಾರವೂ ಹೌದು. ಇದರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಕ್ಕೆ ಒಳಗಾಗದೆಯೇ ಆರೈಕೆಯನ್ನು ಪಡೆದುಕೊಳ್ಳಬಹುದು.

ನಿಜ, ಚರ್ಮದ ಆರೈಕೆಗೆ ಅನುಕೂಲವಾಗುವ ಉತ್ಪನ್ನ ಎಂದರೆ ಅಕ್ಕಿ ನೀರು. ಅಕ್ಕಿ ನೀರಿನಲ್ಲಿ ಅದ್ಭುತವಾದಂತಹ ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಮ್ಲ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾದದ್ದು ಎಂದು ಪರಿಗಣಿಸಲಾಗಿದೆ. ಚರ್ಮಕ್ಕೆ ಅಕ್ಕಿನೀರು ಅತ್ಯುತ್ತಮ ಸೌಂದರ್ಯ ವರ್ಧಕ ಎನ್ನುವುದು ಪುರಾತನ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿದೆ. ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದ ಬಹುತೇಕ ಸ್ತ್ರೀಯರು ಅಕ್ಕಿಯ ನೀರನ್ನು ವ್ಯರ್ಥಮಾಡುವುದಿಲ್ಲ. ಅದರಿಂದ ಮುಖ ತೊಳೆಯುವುದು ಹಾಗೂ ಸೌಂದರ್ಯ ವರ್ಧಕ ಉತ್ಪನ್ನದ ರೂಪದಲ್ಲಿ ಬಳಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿಯೇ ಅವರ ತ್ವಚೆಯು ಸಾಕಷ್ಟು ಆಕರ್ಷಣೆ ಹಾಗೂ ಹೊಳಪಿನಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಅಕ್ಕಿ ನೀರು ತ್ವಚೆಗೆ ಮೂರು ಬಗೆಯಲ್ಲಿ ಅನುಕೂಲಗಳನ್ನು ತಂದುಕೊಡುವುದು

ಅಕ್ಕಿ ನೀರು ತ್ವಚೆಗೆ ಮೂರು ಬಗೆಯಲ್ಲಿ ಅನುಕೂಲಗಳನ್ನು ತಂದುಕೊಡುವುದು

ಹೌದು ಅಕ್ಕಿ ನೀರು ತ್ವಚೆಗೆ ಮೂರು ಬಗೆಯಲ್ಲಿ ಅನುಕೂಲಗಳನ್ನು ತಂದುಕೊಡುವುದು. ಟೋನರ್ ರೂಪದಲ್ಲಿ, ಚರ್ಮದ ಕ್ಲೆನ್ಸರ್, ಫೇಸ್ ವಾಶ್ ರೂಪದಲ್ಲಿ ಸಹಾಯ ಮಾಡುವುದು. ಅಗ್ಗದ ಸೌಂದರ್ಯ ವರ್ಧಕವನ್ನು ಬಳಸುವ ಬದಲು ಅಕ್ಕಿ ನೀರನ್ನು ಉಪಯೋಗಿಸಿಕೊಂಡು ಆರೈಕೆ ಮಾಡಬಹುದು. ನಿಮ್ಮ ಚರ್ಮವನ್ನು ಮೃದುವಾಗಿಸಲು ಹಾಗೂ ಅತ್ಯುತ್ತಮ ರೀತಿಯಲ್ಲಿ ಮುದ್ದಿಸಲು ಅಕ್ಕಿಯ ನೀರನ್ನು ಬಳಸಬಹುದು.

ಅಕ್ಕಿ ನೀರಿನ ಬಳಕೆ ಹೇಗೆ?

ಅಕ್ಕಿ ನೀರಿನ ಬಳಕೆ ಹೇಗೆ?

ಕಂದು ಅಥವಾ ಬಿಳಿ ಅಕ್ಕಿ (ಬೇಯಿಸದೆ ಇರುವುದು) -1/2 ಕಪ್

ಶುದ್ಧವಾದ ನೀರು -2 ಕಪ್

ವಿಧಾನ:

ವಿಧಾನ:

*ಅಕ್ಕಿಯನ್ನು ಮೊದಲು 1/2 ಕಪ್ ನೀರಿನಲ್ಲಿ ನೆನೆಸಿ ಕಲ್ಮಶಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

*ಬಳಿಕ ಅಕ್ಕಿ ಮುಳುಗುವಷ್ಟು ನೀರನ್ನು ಹಾಕಿ 30 ನಿಮಿಷಗಳಕಾಲ ನೆನೆಯಲು ಬಿಡಿ.

*30 ನಿಮಿಷದ ಬಳಿಕ ನೀರು ಮಸುಕಿನ ಬಣ್ಣಕ್ಕೆ ತಿರುವುದು. ಆಗ ಅದರಲ್ಲಿ ವಿಟಮಿನ್‍ಗಳು, ಖನಿಜಗಳು ಬೆರೆತು ಮಾಂತ್ರಿಕವಾದಂತಹ ಮದ್ದು ಉತ್ಪತ್ತಿಯಾಗಿರುತ್ತದೆ.

*ಈ ಅಕ್ಕಿಯ ನೀರನ್ನು ಫ್ರಿಜ್ ಅಲ್ಲಿ ಇಟ್ಟು ಸಂಗ್ರಹಿಸಿಟ್ಟುಕೊಳ್ಳಬಹುದು.

* ಅಗತ್ಯವಿದ್ದಾಗ ಅಕ್ಕಿ ನೀರನ್ನು ತೆಗೆದುಕೊಂಡು ನಿಮ್ಮ ಚರ್ಮಕ್ಕೆ ಅನ್ವಯಿಸಿಕೊಳ್ಳಬಹುದು.

Most Read: ಕೈಗಳ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯುವುದು ಹೇಗೆ?

ಅಕ್ಕಿ ನೀರು ಕ್ಲೆನ್ಸರ್ ರೂಪದಲ್ಲಿ

ಅಕ್ಕಿ ನೀರು ಕ್ಲೆನ್ಸರ್ ರೂಪದಲ್ಲಿ

ಚರ್ಮವನ್ನು ಸ್ವಚ್ಛಗೊಳಿಸಲು ಅಕ್ಕಿ ನೀರನ್ನು ಸುಲಭ ಹಾಗೂ ಸರಳ ಮಾದರಿಯಲ್ಲಿ ಬಳಸಬಹುದು. ಅಕ್ಕಿ ನೀರನ್ನು ಒಂದು ಹತ್ತಿಯ ಚೆಂಡಿನಿಂದ ಅದ್ದಿ ಮುಖಕ್ಕೆ ಅನ್ವಯಿಸಿಕೊಳ್ಳಬೇಕು. ಒಂದೆರಡು ನಿಮಿಷ ಬೆರಳುಗಳ ಸಹಾಯದಿಂದ ಮಸಾಜ್ ಮಾಡಿ. ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಹೀಗೆ ದಿನಕ್ಕೆ ಎರಡುಬಾರಿ ಅನ್ವಯಿಸುವುದರಿಂದ ಬಹುಬೇಗ ಚರ್ಮವು ಮೃದುವಾಗಿ, ಬಿಗಿಯಾಗಿ ಹಾಗೂ ಆಕರ್ಷಕವಾಗಿ ಹೊಳೆಯುವುದು.

ಚರ್ಮದ ಟೋನರ್ ರೂಪದಲ್ಲಿ

ಚರ್ಮದ ಟೋನರ್ ರೂಪದಲ್ಲಿ

ಚರ್ಮಕ್ಕೆ ಅತ್ಯುತ್ತಮ ಟೋನರ್ ರೂಪದಲ್ಲಿ ಅಕ್ಕಿ ನೀರು ಆರೈಕೆ ಮಾಡುವುದು. ಚರ್ಮವನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಇರುವ ಇನ್ನೊಂದು ವಿಧಾನ ಅಕ್ಕಿ ನೀರನ್ನು ಟೋನರ್ ಆಗಿ ಬಳಸುವುದು. ಹತ್ತಿಯ ಚೆಂಡಿನಿಂದ ಅಕ್ಕಿ ನೀರನ್ನು ಮುಖಕ್ಕೆ ಅನ್ವಯಿಸಿಕೊಳ್ಳುವುದರಿಂದ ಚರ್ಮದಲ್ಲಿ ಇರುವ ರಂಧ್ರಗಳ ಅಗಲವು ಕಡಿಮೆಯಾಗುವುದು. ಚರ್ಮವು ಬಿಗಿದುಕೊಳ್ಳುತ್ತದೆ. ಇದಲ್ಲದೆ ಚರ್ಮದ ಜೀವಕೋಶಗಳ ಬೆಳವಣಿಗೆಗೆ ಪ್ರಚೋದನೆ ನೀಡುವುದು. ರಕ್ತದ ಹರಿವನ್ನು ಸುಧಾರಿಸುವುದು. ಚರ್ಮವನ್ನು ಮೃದು ಹಾಗೂ ಪ್ರಕಾಶಮಾನವಾಗಿ ಕಾಣುವಂತೆ ಮಾಡುವುದು.

Most Read: ಕೆಂಪು ಈರುಳ್ಳಿಯ ರಸ ಬಳಸಿ ಕೂಡ, ಥೈರಾಯ್ಡ್ ಸಮಸ್ಯೆಯನ್ನು ಗುಣಪಡಿಸಬಹುದು!

ತ್ವಚೆಯ ಕಿರಿಕಿರಿ ನಿವಾರಣೆ

ತ್ವಚೆಯ ಕಿರಿಕಿರಿ ನಿವಾರಣೆ

ಚರ್ಮದಲ್ಲಿ ಉರಿಯೂತ ಕಾಣಿಸಿಕೊಂಡಾಗ ಅಕ್ಕಿ ನೀರನ್ನು ಅನ್ವಯಿಸಬೇಕು. ಡರ್ಮಟಲಾಜಿಕಲ್ ಅಥ್ಯಯನದ ಪ್ರಕಾರ ದಿನಕ್ಕೆ ಎರಡು ಬಾರಿ ಅಕ್ಕಿ ನೀರಿನಿಂದ 15 ನಿಮಿಷಗಳ ಕಾಲ ಸ್ನಾನವನ್ನು ಪಡೆದುಕೊಂಡರೆ ಚರ್ಮದಲ್ಲಿ ಕಾಣಿಸಿಕೊಳ್ಳುವ ಕಿರಿಕಿರಿಗಳು ಶಮನವಾಗುವುದು. ಗಮನಾರ್ಹ ರೀತಿಯಲ್ಲಿ ಚರ್ಮದ ಆರೋಗ್ಯವು ವೃದ್ಧಿಯಾಗುವುದು. ಅಲ್ಲದೆ ಸದಾ ಕಾಂತಿಯಿಂದ ಕಂಗೊಳಿಸುವುದು.

ಸೂರ್ಯನ ಕಿರಣದಿಂದ ಸುಡುವುದು

ಸೂರ್ಯನ ಕಿರಣದಿಂದ ಸುಡುವುದು

ಸೂರ್ಯನ ಕಿರಣದಿಂದ ಚರ್ಮವು ಅತಿಯಾಗಿ ಸುಟ್ಟಿದ್ದರೆ ಅಥವಾ ಉರಿಯೂತ ಉಂಟಾದರೆ ಅಕ್ಕಿ ನೀರು ಅತ್ಯುತ್ತಮ ಪರಿಹಾರವನ್ನು ನೀಡುವುದು. ಇಂತಹ ಸಮಯದಲ್ಲಿ ಅಕ್ಕಿ ನೀರನ್ನು ಬಳಸಬಹುದು. ಗಣನೀಯವಾಗಿ ಅಕ್ಕಿ ನೀರನ್ನು ಬಳಸುವುದರಿಂದ ಸೂರ್ಯನ ಕಿರಣದಿಂದ ಉಂಟಾದ ಹಾನಿಯಿಂದ ಚರ್ಮವು ಚೇತರಿಕೆ ಕಂಡುಕೊಳ್ಳುವುದು. ಅಲ್ಲದೆ ಮುಂದೆ ಉಂಟಾಗಲಿರುವ ಹಾನಿಯನ್ನು ಸಹ ತಡೆಗಟ್ಟುವುದು.

ಮೊಡವೆಗಳ ನಿವಾರಣೆಗೆ

ಮೊಡವೆಗಳ ನಿವಾರಣೆಗೆ

ಮೊಡವೆಯು ಬಹುತೇಕ ಮಂದಿಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎನ್ನಬಹುದು. ಪದೇ ಪದೇ ಮೊಡವೆಯಿಂದ ಉಂಟಾಗುವ ಸಮಸ್ಯೆಗಳಿಗೆ ಅಕ್ಕಿ ನೀರು ಉತ್ತಮ ಪರಿಹಾರವನ್ನು ನೀಡುವುದು. ಗಣನೀಯವಾಗಿ ಅಕ್ಕಿ ನೀರನ್ನು ಆರೈಕೆಯ ರೂಪದಲ್ಲಿ ತ್ವಚೆಗೆ ಅನ್ವಯಿಸಿದರೆ ಮೊಡವೆಯಿಂದ ಉಂಟಾಗುವ ಸಮಸ್ಯೆಯು ಪರಿಹಾರ ಆಗುವುದು. ಮೊಡವೆಯಿಂದ ಉಂಟಾಗುವ ಕೆಂಪು ಚರ್ಮವು ತಿಳಿಯಾಗುವುದು. ಅಲ್ಲದೆ ಚರ್ಮವು ಬಿಗಿತವನ್ನು ಪಡೆದುಕೊಳ್ಳುತ್ತದೆ. ಒಟ್ಟಿನಲ್ಲಿ ಅಕ್ಕಿ ನೀರು ಚರ್ಮದ ಆರೈಕೆ ಮಾಡುವ ಅತ್ಯುತ್ತಮವಾದ ಒಂದು ಸಾಂಪ್ರದಾಯಿಕ ಔಷಧಿ ಅಥವಾ ಪರಿಹಾರ ಎನ್ನಬಹುದು.

Most Read: ಮೊಟ್ಟೆ ತಿಂದ ಕೂಡಲೇ ಹಾಲು ಕುಡಿಯಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?

ತ್ವಚೆಯ ಮೇಲಿನ ನೆರಿಗೆಗಳನ್ನು ಕಡಿಮೆಮಾಡುತ್ತದೆ

ತ್ವಚೆಯ ಮೇಲಿನ ನೆರಿಗೆಗಳನ್ನು ಕಡಿಮೆಮಾಡುತ್ತದೆ

ನಿಮ್ಮ ಕಣ್ಣುಗಳ ಮೂಲೆಗಳಲ್ಲಿ ನೆರಿಗೆಗಳು ಅಥವಾ ಸುಕ್ಕುಗಳು ಕಾಣಿಸಿಕೊಳ್ಳಲಾರ೦ಭಿಸಿದಾಗ, ಅಕ್ಕಿಯ ನೀರಿನ್ನು ಬಳಸಿಕೊಳ್ಳುವುದರ ಮೂಲಕ ಕೂಡಲೇ ಅವುಗಳ ಆರೈಕೆ ಮಾಡಿರಿ. ಆದರೆ, ಈ ಪ್ರಕರಣದಲ್ಲಿ, ನೀವು ಕುಚ್ಚಲಕ್ಕಿಯನ್ನು ಬಳಸಿಕೊ೦ಡು ಪಡೆದ ನೀರನ್ನು ಉಪಯೋಗಿಸಬೇಕಾಗುತ್ತದೆ.

ತ್ವಚೆಯನ್ನು ಬಿಗಿಗೊಳಿಸುತ್ತದೆ

ತ್ವಚೆಯನ್ನು ಬಿಗಿಗೊಳಿಸುತ್ತದೆ

ನಿಮ್ಮ ತ್ವಚೆಯ ಕುರಿತ೦ತೆ, ಅಕ್ಕಿ ನೀರಿನ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಅಕ್ಕಿಯ ನೀರು ಜೋತುಬಿದ್ದಿರುವ ನಿಮ್ಮ ತ್ವಚೆಯನ್ನು ಬಿಗಿಗೊಳಿಸಲು ನೆರವಾಗುತ್ತದೆ. ತೂಕನಷ್ಟವನ್ನು ಹೊ೦ದಿರುವವರು ತಮ್ಮ ತ್ವಚೆಯನ್ನು ಬಿಗಿಗೊಳಿಸಿಕೊಳ್ಳುವ೦ತಾಗಲು ಅಕ್ಕಿಯ ನೀರು ಒ೦ದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ.

ಸೀಳಾದ ತುದಿಗಳುಳ್ಳ ಕೂದಲನ್ನು ಕಡಿಮೆಮಾಡಲು

ಸೀಳಾದ ತುದಿಗಳುಳ್ಳ ಕೂದಲನ್ನು ಕಡಿಮೆಮಾಡಲು

ನಿಮ್ಮ ಕೂದಲುಗಳ ತುದಿಭಾಗದ ಸೀಳುಗಳನ್ನು ನೈಸರ್ಗಿಕವಾಗಿ ನೀವು ನಿವಾರಿಸಬಯಸುವಿರಾದರೆ, ಈ ಸಲಹೆಯನ್ನು ಅನುಸರಿಸಿರಿ. ನಿಮ್ಮ ಕೂದಲುಗಳ ತುದಿಭಾಗಗಳನ್ನು, ಅಕ್ಕಿಯನ್ನು ನೆನೆಸಿಟ್ಟ ನೀರಿರುವ ಬಟ್ಟಲೊ೦ದರಲ್ಲಿ ಅದ್ದಿರಿ. ಹದಿನೈದು ನಿಮಿಷಗಳ ಬಳಿಕ, ಕೂದಲುಗಳನ್ನು ಬಟ್ಟಲಿನಿ೦ದ ಹೊರತೆಗೆಯಿರಿ ಹಾಗೂ ತದನ೦ತರ ಅವುಗಳನ್ನು ಹರಿಯುವ ನೀರಿನಿ೦ದ ತೊಳೆದುಬಿಡಿರಿ.

English summary

Wash your face with Rice water for Skin lightening!

Rice water for skin is something that has been known to women in Asian cultures since ages. As a tradition, the female rice farmers in China, Japan, and other southeast Asian countries did not throw the water after cleaning rice but used it for washing their face, hair and taking bath.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more