For Quick Alerts
ALLOW NOTIFICATIONS  
For Daily Alerts

ಡಾರ್ಕ್ ಸರ್ಕಲ್ಸ್ ಸಮಸ್ಯೆ ಇದೆಯೇ? ಹಾಗಾದರೆ ರೋಸ್ ವಾಟರ್ ಬಳಸಿ

|

ನಿಮ್ಮ ಸೌಂದರ್ಯಕ್ಕೆ ಮಾರಕವಾಗಿರುವ ಯಾವುದೇ ಸೌಂದರ್ಯ ಸಮಸ್ಯೆಗಳು ನಿಮ್ಮನ್ನು ಬಹಳಷ್ಟು ನೋವಿಗೆ ಗುರಿ ಮಾಡುತ್ತವೆ. ಮುಖದಲ್ಲಿನ ಮೊಡವೆ, ಕಲೆಗಳನ್ನು ಮೇಕಪ್ ಮೂಲಕ ಮುಚ್ಚಿ ಹಾಕಬಹುದು ಆದರೆ ಇದು ಶಾಶ್ವತವಾಗಿರುವುದಿಲ್ಲ . ಅತ್ಯಧಿಕ ಮೇಕಪ್‌ಗಳಿಂದ ನಿಮ್ಮ ತ್ವಚೆಗೆ ಹಾನಿ ಖಂಡಿತವಾಗಿರುತ್ತದೆ. ಆದಷ್ಟೂ ಪ್ರಸಾಧನ ಸಾಮಾಗ್ರಿಗಳನ್ನು ಬಳಸದೆಯೇ ನಿಮ್ಮ ತ್ವಚೆಯ ಸಮಸ್ಯೆಗಳನ್ನು ದೂರ ಮಾಡುವುದು ಹೇಗೆ ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ.

use rose water to get rid of dark circles

ಇಲ್ಲಿ ನಾವು ನೀಡಿರುವ ಸಲಹೆಗಳು ನಿಮ್ಮ ಮುಖದ ಯಾವುದೇ ಸಮಸ್ಯೆಗಳನ್ನು ನಿವಾರಿಸುವುದು ಖಂಡಿತವಾಗಿದೆ. ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಅಥವಾ ಕಪ್ಪು ವರ್ತುಲ ಹಲವಾರು ಕಾರಣಗಳಿಂದ ಬಂದಿರುತ್ತವೆ. ನಿದ್ದೆ ಸರಿಯಾಗಿ ಮಾಡದೇ ಇರುವುದು, ವಯಸ್ಸಾಗುವುದರಿಂದ ಹೀಗೆ ಅನೇಕ ಕಾರಣಗಳಿಂದ ಡಾರ್ಕ್ ಸರ್ಕಲ್ ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಮೂಡುತ್ತವೆ. ಇವುಗಳನ್ನು ನಿವಾರಿಸುವುದು ಈಗ ತುಂಬಾ ಸುಲಭ. ಅದೂ ಕೂಡ ರೋಸ್ ವಾಟರ್ ನಿಮ್ಮ ಕಪ್ಪು ವರ್ತುಲಗಳನ್ನು ಸರಾಗವಾಗಿ ಹೋಗಲಾಡಿಸಲಿದೆ. ರೋಸ್ ವಾಟರ್ ಯಾವುದೇ ರಾಸಾಯನಿಕ ಅಂಶಗಳನ್ನು ತನ್ನಲ್ಲಿ ಒಳಗೊಂಡಿಲ್ಲ ಇದನ್ನು ಇನ್ನಿತರ ಸಾಮಾಗ್ರಿಗಳೊಂದಿಗೆ ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು ಜೊತೆಗೆ ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ರೋಸ್‌ವಾಟರ್ ಮತ್ತು ಸೌತೆಕಾಯಿ

ರೋಸ್‌ವಾಟರ್ ಮತ್ತು ಸೌತೆಕಾಯಿ

ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದುಕೊಳ್ಳಿ. ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಜಜ್ಜಿಕೊಳ್ಳಿ. ಇದಕ್ಕೆ ಒಂದು ಚಮಚ ರೋಸ್ ವಾಟರ್ ಹಾಕಿ ಕಲಸಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ. ನಿಮ್ಮ ಕಣ್ಣುಗಳ ಕೆಳಗೆ ಇದನ್ನು ಹಚ್ಚಿಕೊಳ್ಳಿ 15 ನಿಮಿಷ ಹಾಗೆಯೇ ಬಿಡಿ. ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ ಮತ್ತು ಒಣಗಲು ಬಿಡಿ. ನಿತ್ಯವೂ ಇದನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಿ.

Most Read: ಮುಖದ ಸೌಂದರ್ಯ ಹೆಚ್ಚಿಸಲು 'ಓಟ್‌ಮೀಲ್' ಪ್ರಯತ್ನಿಸಿ ನೋಡಿ

ರೋಸ್‌ವಾಟರ್ ಮತ್ತು ಬಾದಾಮಿ ಎಣ್ಣೆ

ರೋಸ್‌ವಾಟರ್ ಮತ್ತು ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಕೆ ನಿಮ್ಮ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. 1 ಚಮಚದಷ್ಟು ರೋಸ್‌ವಾಟರ್ ಮತ್ತು ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ಈ ದ್ರಾವಣದಲ್ಲಿ ಮುಳುಗಿಸಿ. ನಿಮ್ಮ ಕಣ್ಣುಗಳ ಮೇಲೆ ಇದನ್ನು ಇರಿಸಿಕೊಳ್ಳಿ ಮತ್ತು 30 ನಿಮಿಷ ಹಾಗೆಯೇ ಬಿಡಿ. ಈ ಹತ್ತಿಯ ತುಂಡನ್ನು ಕಣ್ಣುಗಳಿಂದ ತೆಗೆಯಿರಿ. ನಿಮಗೆ ಭಿನ್ನತೆ ದೊರೆಯುವವರೆಗೆ ಇದನ್ನು ಮಾಡಿ.

ರೋಸ್‌ವಾಟರ್ ಮತ್ತು ಹಾಲು

ರೋಸ್‌ವಾಟರ್ ಮತ್ತು ಹಾಲು

ಕಪ್ಪು ವರ್ತುಲಗಳನ್ನು ನಿವಾರಿಸಲು ಇದು ಅತ್ಯುತ್ತಮ ವಿಧಾನವಾಗಿದೆ. 1 ಚಮಚ ರೋಸ್‌ವಾಟರ್ ತೆಗೆದುಕೊಂಡು ಅದನ್ನು 1/2 ಚಮಚ ಹಸಿ ಹಾಲಿನಲ್ಲಿ ಮಿಶ್ರ ಮಾಡಿ ಎರಡನ್ನೂ ಜೊತೆಯಾಗಿ ಸೇರಿಸಿ. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿ. ನಿಮ್ಮ ಕಣ್ಣಿನ ಕೆಳಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. 15 ನಿಮಿಷ ಕಾಯಿರಿ ನಂತರ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ದಿನವೂ ಇದನ್ನು ಮಾಡಿ.

Most Read: ಮುಖದ ಸೌಂದರ್ಯ ಹೆಚ್ಚಿಸಲು, 'ಸೋರೆಕಾಯಿ' ಪ್ರಯತ್ನಿಸಿ ನೋಡಿ

ರೋಸ್‌ವಾಟರ್ ಮತ್ತು ಗ್ಲಿಸರಿನ್

ರೋಸ್‌ವಾಟರ್ ಮತ್ತು ಗ್ಲಿಸರಿನ್

1/4 ಚಮಚ ರೋಸ್‌ವಾಟರ್, 1/4 ಚಮಚ ಗ್ಲಿಸರಿನ್ ಮತ್ತು ತಾಜಾ ಲಿಂಬೆ ರಸವನ್ನು ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಜೊತೆಯಾಗಿ ಬೆರೆಸಿಕೊಂಡು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಯಿರಿ ಈ ಸಮಯದಲ್ಲಿ ಈ ಮಿಶ್ರಣ ಒಣಗುತ್ತದೆ. ನಂತರ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ನಿತ್ಯವೂ ಇದನ್ನು ಮಾಡಿ. ಮಲಗುವ ಮುಂಚೆ ಇದನ್ನು ಮಾಡಿ ವೇಗವಾದ ಫಲಿತಾಂಶಗಳನ್ನು ಪಡೆದುಕೊಳ್ಳಿ.

ರೋಸ್‌ವಾಟರ್ ಮತ್ತು ಶ್ರೀಗಂಧದ ಪೌಡರ್

ರೋಸ್‌ವಾಟರ್ ಮತ್ತು ಶ್ರೀಗಂಧದ ಪೌಡರ್

ಈಗಿನ ದಿನಗಳಲ್ಲಿ ಶ್ರೀಗಂಧದ ಹುಡಿ ಹಲವಾರು ಪ್ರಸಾಧನ ಸಾಮಾಗ್ರಿಗಳಲ್ಲಿ ಬಳಕೆಯಾಗುತ್ತಿದೆ. 1/2 ಚಮಚ ಶ್ರೀಗಂಧದ ಹುಡಿಯನ್ನು ಕೆಲವು ಹನಿ ರೋಸ್‌ವಾಟರ್‌ನಲ್ಲಿ ಮಿಶ್ರ ಮಾಡಿಕೊಳ್ಳಿ ಮತ್ತು ಇದನ್ನು ಪೇಸ್ಟ್‌ನಂತೆ ಮಾಡಿ. ಇದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಯಿರಿ ಮತ್ತು ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.

Most Read: ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ 'ಮೊಟ್ಟೆಯ ಬಿಳಿ ಭಾಗದ' ಚಿಕಿತ್ಸೆ-ಪ್ರಯತ್ನಿಸಿ ನೋಡಿ

ರೋಸ್‌ವಾಟರ್ ಮತ್ತು ಅಲೊವೇರಾ

ರೋಸ್‌ವಾಟರ್ ಮತ್ತು ಅಲೊವೇರಾ

ಅಲೊವೇರಾದಿಂದ ಜೆಲ್ ಪ್ರತ್ಯೇಕಿಸಿ ಮತ್ತು ಅದನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ ಇದಕ್ಕೆ 1 ಚಮಚ ರೋಸ್‌ವಾಟರ್ ಮಿಶ್ರ ಮಾಡಿ. ಇದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ ನಂತರ ಇದನ್ನು ಹಾಗೆಯೇ ಬಿಡಿ. ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ ಮತ್ತು ಒರೆಸಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ಎರಡು ಬಾರಿ ಬಳಸಿ ನೋಡಿ.

English summary

use rose water to get rid of dark circles

In this article, we'll sharing with you some effective home remedies to remove dark circles using rosewater. have a look...
X
Desktop Bottom Promotion