ಒಂದೇ ವಾರದಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಬೇಕೆ? 'ಅರಿಶಿನ ಪ್ಯಾಕ್' ಬಳಸಿ

Posted By: Divya pandit Pandit
Subscribe to Boldsky

ಅರಿಶಿನ ಎಂದರೆ ಮಸಾಲೆ ಪದಾರ್ಥಗಳ ರಾಜ ಎಂದು ಕರೆಯಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ, ಆಹಾರ ಪದಾರ್ಥಗಳ ತಯಾರಿಕೆಗೆ, ಆರೋಗ್ಯ ಸುಧಾರಣೆಯ ಔಷಧ ರೂಪದಲ್ಲಿ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳಾಗಿಯೂ ಸಹ ಬಳಸಲಾಗುತ್ತದೆ. ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು.

ನಂಜು ನಿರೋಧಕ ಗುಣವನ್ನು ಹೊಂದಿರುವ ಇದನ್ನು ಪುರಾತನ ಕಾಲದಿಂದಲೂ ಸೌಂದರ್ಯ ಆರೈಕೆ ಹಾಗೂ ಚರ್ಮಗಳ ಪೋಷಣೆಯ ಉದ್ದೇಶಕ್ಕೆ ಬಳಸಿಕೊಂಡು ಬರಲಾಗುತ್ತಿದೆ. ಇದರ ಸೂಕ್ತ ಬಳಕೆ ಹಾಗೂ ಗಣನೀಯವಾದ ಆರೈಕೆಯಿಂದ ಚರ್ಮವನ್ನು ಬಿಳುಪು ಹಾಗೂ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು.  ಮನೆಯಲ್ಲಿಯೇ ಸಿಗುವ ಈ ನೈಸರ್ಗಿಕ ಉತ್ಪನ್ನವನ್ನು ಎಲ್ಲಾ ಬಗೆಯ ಚರ್ಮದವರು ಸಹ ಬಳಸಬಹುದು. ಇದರ ಬಳಕೆಯಿಂದ ಯಾವೆಲ್ಲಾ ಸಮಸ್ಯೆಯನ್ನು ನಿವಾರಿಸಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಮದಿನ ವಿವರಣೆಯಲ್ಲಿ ತಿಳಿಸಿಕೊಟ್ಟಿದೆ...

ಮೊಡವೆಯಿಂದ ಕೂಡಿದ ತ್ವಚೆಗೆ

ಮೊಡವೆಯಿಂದ ಕೂಡಿದ ತ್ವಚೆಗೆ

ಅರಿಶಿನವು ಬ್ಯಾಕ್ಟೀರಿಯ ಮತ್ತು ಉರಿಯೂತದ ಗುಣ ಲಕ್ಷಣವನ್ನು ನಿವಾರಿಸುವುದರಿಂದ ಮೊಡವೆ ಪೀಡಿತ ಚರ್ಮಕ್ಕೆ ಅತ್ಯುತ್ತಮ ಆರೈಕೆ ನೀಡುವುದು. ಕಡ್ಲೇ ಹಿಟ್ಟು ಚರ್ಮದ ಮೇಲಿರುವ ಸತ್ತ ಜೀವಕೋಶವನ್ನು ತೆಗೆದುಹಾಕುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರುವುದರಿಂದ

ಅದು ಮೊಡವೆ ಹಾಗೂ ಬ್ಯಾಕ್ಟೀರಿಯಾಗಳ ನಿವಾರಣೆಗೆ ಸಹಾಯ ಮಾಡುವುದು.

- ಕಡ್ಲೇ ಹಿಟ್ಟು, ಮೊಸರು, ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ದಪ್ಪವಾಗಿ ಅನ್ವಯಿಸಿ, ಮಸಾಜ್ ಮಾಡಿ.

- 20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಇನ್ನೊಮ್ಮೆ ಮೃದುವಾಗಿ ಮಸಾಜ್ ಮಾಡಿ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನೀವು ಬಿಳುಪಾದ ಚರ್ಮವನ್ನು ಹೊಂದಿದ್ದರೆ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿರುವಂತೆ ಕಾಣುವುದು.

- ಗಣನೀಯವಾಗಿ ಇದನ್ನು ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಶುಷ್ಕ ತ್ವಚೆಗೆ

ಶುಷ್ಕ ತ್ವಚೆಗೆ

ಅರಿಶಿನವನ್ನು ಬಳಸುವಾಗ ಶುಷ್ಕ ತ್ವಚೆಯವರು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಅರಿಶಿನವು ತ್ವಚೆಯನ್ನು ಇನ್ನಷ್ಟು ಒಣಗಿಸುವುದು. ಹಾಗಾಗಿ ಶುಷ್ಕ ತ್ವಚೆಯವರು ಅರಿಶಿನದ ಮುಖವಾಡ ಹೊಂದುವಾಗ ತೆಂಗಿನೆಣ್ಣೆ ಹಾಗೂ ಹಾಲಿನ ಕೆನೆ ಸೇರಿಸುವುದನ್ನು ಮರೆಯಬಾರದು. ಇವು ಚರ್ಮವನ್ನು ಶುಷ್ಕವಾಗದಂತೆ ತಡೆಯುತ್ತವೆ.

- ಒಂದು ಟೀ ಚಮಚ ತೆಂಗಿನ ಎಣ್ಣೆ, ಒಂದು ಟೀ ಚಮಚ ಹಾಲಿನ ಕೆನೆ ಹಾಗೂ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- ಒಣಗಿದ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಮುಖವಾಡ ಹೊಂದುವುದರಿಂದ ತ್ವಚೆಯು ಹೊಳಪಿನಿಂದ ಕೂಡಿರುತ್ತದೆ.

ಸುಟ್ಟ ತ್ವಚೆಗೆ

ಸುಟ್ಟ ತ್ವಚೆಗೆ

ಭಾರತೀಯರು ಸಾಮಾನ್ಯವಾಗಿ ಸೂರ್ಯನ ಕಿರಣಗಳಿಗೆ ಅಧಿಕವಾಗಿಯೇ ತೆರೆದುಕೊಳ್ಳುತ್ತಾರೆ. ಹಾಗಾಗಿ ಚರ್ಮವು ಸೂರ್ಯನ ಕಿರಣಕ್ಕೆ ಕಪ್ಪಾಗುವುದು ಅಥವಾ ಕಂದು ಬಣ್ಣಕ್ಕೆ ತಿರುಗುವುದು ಸಹಜ. ಹಾಗಾಗಿ ಅರಿಶಿನ ಹಾಗೂ ನಿಂಬೆಯನ್ನು ಸೂರ್ಯನ ಕಿರಣದಿಂದ ಸುಟ್ಟ ಕಲೆಯನ್ನು ತೆಗೆಯುತ್ತವೆ. ನಿಂಬೆ ನೈಸರ್ಗಿಕವಾಗಿ ಬ್ಲೀಚ್ ಮಾಡುತ್ತದೆ.

-ನಿಂಬೆ ರಸ ಮತ್ತು ಅರಿಶಿನ ವನ್ನು ಬೆರೆಸಿ, ಮಿಶ್ರಗೊಳಿಸಿ

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಒಣಗಿದ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಮುಖವಾಡ ಹೊಂದುವುದರಿಂದ ತ್ವಚೆಯು ಬಿಳುಪಿನಿಂದ ಕೂಡಿರುತ್ತದೆ.

ಎಣ್ಣೆಯುಕ್ತ ಚರ್ಮಕ್ಕೆ

ಎಣ್ಣೆಯುಕ್ತ ಚರ್ಮಕ್ಕೆ

ಎಣ್ಣೆಯುಕ್ತ ಚರ್ಮದವರಲ್ಲಿ ಮೇದೋಗ್ರಂಥಿಗಳ ಸ್ರಾವವನ್ನು ಸಮತೋಲನದಲ್ಲಿ ಇಡುವುದು ಸ್ವಲ್ಪ ಕಷ್ಟ. ಇಂತಹ ತ್ವಚೆಯವರು ಶ್ರೀಗಮಧ ಹಾಗೂ ಅರಿಶಿನದ ಸಂಯೋಜನೆಯ ಮುಖವಾಡ ಹೊಂದುವುದು ಸೂಕ್ತ. ಶ್ರೀಗಂಧ ಉತ್ತಮ ಖನಿಜವನ್ನು ಹೊಂದಿರುತ್ತದೆ. ಇದು ಮೇದೋಗ್ರಂಥಿಗಳ ಸ್ರಾವವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಸಾಮಾನ್ಯ ಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ.

- ಗುಲಾಬಿ ನೀರು, ಶ್ರೀಗಂಧದ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಮುಖವಾಡ ಹೊಂದುವುದರಿಂದ ತ್ವಚೆಯು ತಾಜಾತನದಿಂದ ಕೂಡಿರುತ್ತದೆ.

ಸೂಕ್ಷ್ಮ ತ್ವಚೆಗಾಗಿ

ಸೂಕ್ಷ್ಮ ತ್ವಚೆಗಾಗಿ

ಸೂಕ್ಷ್ಮ ತ್ವಚೆಯವರಿಗೆ ಚರ್ಮವು ಬಹುಬೇಗ ಹಾನಿಗೆ ಒಳಗಾಗುತ್ತದೆ. ದದ್ದು, ಉರಿಯೂತ, ಮೊಡವೆ, ಸೂರ್ಯನ ಕಿರಣದಿಂದ ಉಂಟಾಗುವ ಹಾನಿ ಬಹುಬೇಗ ಉಂಟಾಗುವುದು. ಈ ಬಗೆಯ ಚರ್ಮದವರಿಗೆ ಅಲೋವೆರಾ ಮತ್ತು ಅರಿಶಿನದ ಮಿಶ್ರಣ ಉತ್ತಮ ಉಪಯೋಗಕಾರಿಯಾಗಿರುತ್ತದೆ. ಅಲೋವೆರಾ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ, ತಂಪಾಗಿರುವಂತೆ ಮಾಡುತ್ತದೆ.

- ಅಲೋವೆರಾ ಮತ್ತು ಅರಿಶಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಮುಖವಾಡ ಹೊಂದುವುದರಿಂದ ತ್ವಚೆಯು ತಾಜಾ ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ.

English summary

Turmeric Face Packs For Different Skin Types

Turmeric is a huge part of Indian culture due to its health and beauty benefits. Now, thanks to the advent of the internet, people world over are realizing the amazing benefits of this spice. Not only is this spice used to add flavour to our curries, it has antiseptic properties as well. Eating turmeric can actually be good for you. There are some age-old remedies to cure cold, involving the use of turmeric. For beauty purposes, turmeric is known to make the skin look brighter and more even toned. That is why, it is used on brides right before their wedding, to give them that golden glow.