For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿ ಹೆಚ್ಚಿಸಲು ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಗೆ 'ತುಳಸಿ ಎಲೆಗಳ' ಫೇಸ್ ಪ್ಯಾಕ್

By Hemanth Amin
|

ಭಾರತವು ಆಯುರ್ವೇದದ ತವರು. ಆಯುರ್ವೇದವು ಭಾರತದಲ್ಲಿ ಹುಟ್ಟಿ ಈಗ ವಿಶ್ವದಾದ್ಯಂತ ವ್ಯಾಪಿಸಿದೆ. ಆದರೆ ಭಾರತೀಯರಾದ ನಮಗೆ ಇದರ ಬಗ್ಗೆ ಅಸಡ್ಡೆ. ನಮ್ಮ ಸುತ್ತಮುತ್ತಲು ಸಿಗುವಂತಹ ಗಿಡಮೂಲಿಕೆಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಇದೆಲ್ಲವನ್ನೂ ಬಿಟ್ಟು ದುಬಾರಿಯಾಗಿರುವ ಔಷಧೀಯ ಕ್ರಮಗಳನ್ನು ಪಾಲಿಸಿಕೊಂಡು ಹೋಗುತ್ತೇವೆ.

ಹಿಂದಿನಿಂದಲೂ ಆಯುರ್ವೇದದಲ್ಲಿ ತುಳಸಿಯನ್ನು ಔಷಧೀಯ ಸಸ್ಯವಾಗಿ ಬಳಸಲಾಗುತ್ತಿದೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಇದೆ. ಶತಮಾನಗಳಿಂದಲೂ ತುಳಸಿಯನ್ನು ಭಾರತೀಯರು ಹೆಚ್ಚಿನ ಔಷಧಿಗಳಲ್ಲಿ ಬಳಸುತ್ತಿದ್ದಾರೆ. ಸುಗಂಧಿತ ಸಸ್ಯವಾಗಿರುವ ತುಳಸಿಯು ನಿಮ್ಮ ತ್ವಚೆಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಇದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿಯಿರಿ.

ಮುಖದ ಕಾಂತಿ ಹೆಚ್ಚಿಸಲು

ಮುಖದ ಕಾಂತಿ ಹೆಚ್ಚಿಸಲು

* ಒಂದು ಚಿಕ್ಕಚಮಚ ಒಣಗಿದ ತುಳಸಿ ಎಲೆಗಳ ಪುಡಿಯನ್ನು ಎರಡು ಚಿಕ್ಕಚಮಚ ಬೇವಿನ ಪುಡಿಯೊಂದಿಗೆ ಬೆರೆಸಿ

* ಇದಕ್ಕೆ ಎರಡು ಚಿಕ್ಕ ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ಕೆಲವು ಹನಿ ಗುಲಾಬಿ ನೀರು ಹಾಗೂ ಅರ್ಧ ಚಿಕ್ಕ ಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ.

* ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನ ಮುಖದ ಮೇಲೆ ಹಚ್ಚಿದಾಗ ಇಳಿಯದಷ್ಟು ಗಾಢವಾಗಿರಬೇಕು. ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ಇದಕ್ಕೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಬೆರೆಸಲು ಮರೆಯದಿರಿ. ಇದರಿಂದ ಒಣಚರ್ಮದವರಲ್ಲಿ ಕೊರತೆಯಿದ್ದ ಆರ್ದ್ರತೆ ಪೂರೈಸಿದಂತಾಗುತ್ತದೆ.

* ಈ ಲೇಪನವನ್ನು ಹಚ್ಚಿಕೊಳ್ಳುವ ಮುನ್ನ ಮೊದಲು ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಂಡ ಬಳಿಕ ಹಬೆಯಲ್ಲಿ ಸುಮಾರು ಮೂರು ನಿಮಿಷದಷ್ಟು ಕಾಲು ಮುಖವನ್ನು ಒಡ್ಡಬೇಕು. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ತೆರೆದು ಈ ಮುಖಲೇಪದ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ.

* ಈ ಲೇಪವನ್ನು ಇಡಿಯ ಮುಖಕ್ಕೆ ತೆಳುವಾಗಿ ಹಚ್ಚಿ ಒಣಗಲು ಬಿಡಬೇಕು. ಚರ್ಮದ ಬಗೆಯನ್ನು ಅನುಸರಿಸಿ ಕೆಲವರಿಗೆ ಹೆಚ್ಚು ಸಮಯ ಹಿಡಿಯಬಹುದು. ಪೂರ್ಣ ಒಣಗಿದ ಬಳಿಕ ಈ ಲೇಪ ಒಂದು ಕಡೆಯಿಂದ ಬಿರುಕು ಬಿಡಲು ಪ್ರಾರಂಭಿಸುತ್ತದೆ. ಆಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ವಿಧಾನದಿಂದ ಚರ್ಮ ತಕ್ಷಣವೇ ಉತ್ತಮ ಕಾಂತಿ ಪಡೆಯುತ್ತದೆ.

ಚರ್ಮದ ಸೋಂಕಿನಿಂದ ಪರಿಹಾರ

ಚರ್ಮದ ಸೋಂಕಿನಿಂದ ಪರಿಹಾರ

*ತುಳಸಿಯು ಈ ಕೊಲಿ ಮತ್ತು ಬಿ ಅಂಥ್ರಾಸಿಸ್ ಎನ್ನುವ ಬ್ಯಾಕ್ಟೀರಿಯಾವು ಬೆಳೆಯದಂತೆ ಮಾಡಿ ಚರ್ಮದ ಸೋಂಕು ಕಡಿಮೆ ಮಾಡುವುದು.

ತುರಿಕಚ್ಚಿ ನಿವಾರಣೆ ಮಾಡಲು ತುಳಸಿ ಎಲೆಗಳ ಪೇಸ್ಟ್ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ.

*ವಿಟಲಿಗೋ ಚರ್ಮದ ಕಾಯಿಲೆಯಾಗಿದ್ದು, ಬಿಳಿ ಮಚ್ಚೆಗಳು ಮೂಡುವುದು. ಇದರ ನಿವಾರಣೆಗೆ ನೀವು ಪ್ರತಿನಿತ್ಯ ತುಳಸಿ ಎಲೆಗಳನ್ನು ತಿನ್ನಿ.

*ತುರಿಗಜ್ಜಿ ಮತ್ತು ಇಸಬು ನಿವಾರಣೆಗೆ ತುಳಸಿ ಜ್ಯೂಸ್ ಕುಡಿಯಿರಿ.

*ಚಳಿಗಾಲದಲ್ಲಿ ಸಾಸಿವೆ ಎಣ್ಣೆಯಲ್ಲಿ ತುಳಸಿ ಎಲೆಗಳನ್ನು ಹಾಕಿ ಅದು ಕಪ್ಪಾಗುವ ತನಕ ಕುದಿಸಿ. ಇದನ್ನು ತಣ್ಣಗೆ ಮಾಡಿ, ಸೋಸಿಕೊಂಡು ಬಳಿಕ ದೇಹಕ್ಕೆ ಹಚ್ಚಿಕೊಂಡರೆ ಸೋಂಕು ನಿವಾರಣೆಯಾಗುವುದು.

Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ತ್ವಚೆಯಲ್ಲಿನ ಬೊಕ್ಕೆ, ಮೊಡವೆಗಳಿಗೆ ಗುಡ್ ಬೈ

ತ್ವಚೆಯಲ್ಲಿನ ಬೊಕ್ಕೆ, ಮೊಡವೆಗಳಿಗೆ ಗುಡ್ ಬೈ

ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ತುಳಸಿಯು ತ್ವಚೆಗೆ ಬರುವಂತಹ ಮೊಡವೆ, ಬೊಕ್ಕೆಗಳ ನಿವಾರಣೆ ಮಾಡುವುದು. ತುಳಸಿ ಎಲೆಗಳ ಪೇಸ್ಟ್, ಶ್ರೀಗಂಧ ಅಥವಾ ರೋಸ್ ವಾಟರ್ ಅಥವಾ ಕಹಿಬೇವಿನ ಎಲೆ ಪೇಸ್ಟ್ ಬೆರೆಸಿಕೊಂಡು ತ್ವಚೆಗೆ ಹಚ್ಚಿದರೆ ಆಗ ಮೊಡವೆ ಹಾಗೂ ಬೊಕ್ಕೆಗಳು ದೂರವಾಗುವುದು. ಮೂಗಿನ ಎರಡು ಭಾಗಗಳಲ್ಲಿ ಒದ್ದೆಯಾಗಿರುವ ತುಳಸಿ ಎಲೆಗಳನ್ನು ಸ್ವಲ್ಪ ಸಮಯ ಇಟ್ಟುಕೊಳ್ಳಿ ಮತ್ತು ಇದರ ಬಳಿಕ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಮಾಡಿದರೆ ಕಪ್ಪುಕಲೆಗಳು ಮಾಯವಾಗುವುದು.

ಕಲೆರಹಿತ ಚರ್ಮಕ್ಕೆ ಸ್ವಾಗತ

ಕಲೆರಹಿತ ಚರ್ಮಕ್ಕೆ ಸ್ವಾಗತ

ತುಳಸಿ ಹಾಗೂ ಕಡಲೆಹಿಟ್ಟಿನ ಮಿಶ್ರಣವು ತ್ವಚೆಗೆ ಅದ್ಭುತವನ್ನು ಉಂಟು ಮಾಡುವುದು. ಇದೆರಡರನ್ನು ಮಿಶ್ರಣ ಮಾಡಿಕೊಂಡು ತ್ವಚೆಗೆ ಹಚ್ಚಿದರೆ ಅದರಿಂದ ಕಲೆಗಳು ಮಾಯವಾಗುವುದು.

ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆ ನಿವಾರಿಸುವುದು ಮತ್ತು ಕಡಲೆಹಿಟ್ಟು ಕಪ್ಪು ಕಲೆಗಳು, ಗಾಯದ ಗುರುತು ತೆಗೆಯುವುದು.

ಚರ್ಮದ ಕಿರಿಕಿರಿಯಿಂದ ಮುಕ್ತಿ

ಚರ್ಮದ ಕಿರಿಕಿರಿಯಿಂದ ಮುಕ್ತಿ

ಕೂದಲು ತೆಗೆಯುವ ವೇಳೆ ಉಂಟಾಗುವ ಚರ್ಮದ ಕಿರಿಕಿರಿ ತಪ್ಪಿಸಲು ತುಳಸಿ ಪೇಸ್ಟ್ ನ್ನು ಹಚ್ಚಿಕೊಳ್ಳಬೇಕು.

ತುರಿಕೆ ಕಡಿಮೆ ಮಾಡಲು ತುಳಸಿ ಎಲೆಗಳನ್ನು ಉಜ್ಜಿಕೊಳ್ಳಿ ಅಥವಾ ತುಳಸಿ ಮತ್ತು ಲಿಂಬೆರಸ ಮಿಶ್ರಣ ಮಾಡಿ ತುರಿಸುವ ಭಾಗಕ್ಕೆ ಹಚ್ಚಿ.

Most Read: ಮುಖದ ಸೌಂದರ್ಯ ಹೆಚ್ಚಿಸಲು, 'ಸೋರೆಕಾಯಿ' ಪ್ರಯತ್ನಿಸಿ ನೋಡಿ

ಚರ್ಮ ಬಿಗಿಯಾಗಲು

ಚರ್ಮ ಬಿಗಿಯಾಗಲು

ಮೊಟ್ಟೆಯ ಬಿಳಿ ಲೋಳೆ ಮತ್ತು ತುಳಸಿ ಎಲೆಗಳ ಪೇಸ್ಟ್ ನ್ನು ಮಿಶ್ರಣ ಮಾಡಿ ಸೋಂಕಿನ ಭಾಗಕ್ಕೆ ಹಚ್ಚಿ ಮತ್ತು ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಮೊಟ್ಟೆಯ ಬಿಳಿ ಲೋಳೆಯು ರಂಧ್ರವನ್ನು ಬಿಗಿಯಾಗಿಸುವುದು ಮತ್ತು ತುಳಸಿಯು ಚರ್ಮಕ್ಕೆ ಬರುವಂತಹ ಸೋಂಕನ್ನು ತಡೆಯುವುದು.

ಚಿಕಿತ್ಸಕ ಗುಣ

ಚಿಕಿತ್ಸಕ ಗುಣ

ಸುಟ್ಟ, ಗಾಯ, ತರುಚಿದ ಗಾಯ ಮತ್ತು ಕೀಟ ಕಡಿತಕ್ಕೆ ತುಳಸಿಯು ಪರಿಣಾಮಕಾರಿಯಾಗಿದೆ. ತುಳಸಿಯ ಒಣ ಎಲೆಗಳಿಗೆ ಪಟಿಕ ಹಾಕಿ ರುಬ್ಬಿಕೊಳ್ಳಿ. ಈ ಹುಡಿಯನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇನ್ನು ತುಳಸಿ ರಸ ಮತ್ತು ತೆಂಗಿನೆಣ್ಣೆಯನ್ನು ಸುಟ್ಟ ಗಾಯಕ್ಕೆ ಹಚ್ಚಿದರೆ ನೋವು ಶಮನವಾಗುವುದು.

Most Read: ನೀವೇ ಮನೆಯಲ್ಲಿ ಮಾಡಿ ನೋಡಿ: ಕಾಂತಿಯುತ ತ್ವಚೆಗಾಗಿ ಸರಳ ಫೇಸ್ ಮಾಸ್ಕ್‌ಗಳು

ವಯಸ್ಸಾಗುವುದನ್ನು ತಡೆಯುವುದು

ವಯಸ್ಸಾಗುವುದನ್ನು ತಡೆಯುವುದು

ತುಳಸಿ ಎಲೆಗಳು ಅಕಾಲಿಕ ವಯಸ್ಸಾಗುವುದನ್ನು ತಡೆಯುವುದು. ತುಳಸಿ ಎಲೆಗಳ ಹುಡಿ, ಮುಲ್ತಾನಿ ಮಿಟ್ಟಿ, ಹಾಲು, ಜೇನುತುಪ್ಪ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. ಒಣಗಿದ ಬಳಿಕ ತೊಳೆದುಕೊಂಡರೆ ಫಲಿತಾಂಶವು ನಿಮಗೆ ತಿಳಿಯುವುದು.

English summary

Tulsi For Face Whitening and other Beauty Issues

India is the origin of Ayurveda. When you talk about Ayurveda, Tulsi or the holy basil holds its place, since the ancient times. This aromatic plant, whether in the form of leaves or essential oil, gifts you beautiful skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more