For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು 'ಓಟ್‌ಮೀಲ್' ಪ್ರಯತ್ನಿಸಿ ನೋಡಿ

|

ಮನೆಮದ್ದುಗಳನ್ನು ಹೆಚ್ಚಿನವರು ತಿರಸ್ಕಾರ ಭಾವದಿಂದ ನೋಡುವುದೇ ಹೆಚ್ಚು. ಯಾಕೆಂದರೆ ಅವರಿಗೆ ವೇಗವಾಗಿ ಫಲಿತಾಂಶ ಬೇಕು. ಮನೆಮದ್ದುಗಳು ಫಲಿತಾಂಶ ನೀಡುವುದು ಸ್ವಲ್ಪ ನಿಧಾನವಾದರೂ ಇದು ಪರಿಣಾಮಕಾರಿ ಹಾಗೂ ಶಾಶ್ವತವಾಗಿರುವುದು. ಆದರೆ ಮಾರುಕಟ್ಟೆಯಿಂದ ತಂದಿರುವ ಸೌಂದರ್ಯವರ್ಧಕ ಉತ್ಪನ್ನಗಳು ನಿಮಗೆ ತಕ್ಷಣಕ್ಕೆ ಸೌಂದರ್ಯ ನೀಡಿದರೂ ಇದನ್ನೇ ಬಳಸುತ್ತಾ ಇದ್ದರೆ ಕೆಲವೇ ವರ್ಷಗಳಲ್ಲಿ ನೀವು ವಯಸ್ಸಾದವರಂತೆ ಕಾಣುವುದರಲ್ಲಿ ಸಂಶಯವೇ ಇಲ್ಲ.

Try These Oatmeal Home Remedies For Skin Whitening

ಈ ಲೇಖನದಲ್ಲಿ ತ್ವಚೆಯ ಸೌಂದರ್ಯವನ್ನು ಕಾಪಾಡುವುದು ಹೇಗೆ. ಅದು ಕೂಡ ಮನೆಮದ್ದನ್ನು ಬಳಸಿಕೊಂಡು ಎನ್ನುವುದರ ಬಗ್ಗೆ ಹೇಳಲಿದ್ದೇವೆ. ಇದು ತುಂಬಾ ನೈಸರ್ಗಿಕ ವಿಧಾನವಾಗಿದೆ. ಈ ಸಾಮಗ್ರಿಯನ್ನು ನೀವು ಬೆಳಗ್ಗಿನ ಉಪಾಹಾರಕ್ಕೆ ಬಳಸುತ್ತಿರಲೂಬಹುದು. ಇದನ್ನೇ ಬಳಸಿಕೊಂಡು ತ್ವಚೆಯ ಸೌಂದರ್ಯ ವೃದ್ಧಿಸಿ. ಅದೇ ಓಟ್ ಮೀಲ್. ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯಲು ನೆರವಾಗುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು. ಇದರಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಹಾನಿಗೀಡಾದ ಚರ್ಮವನ್ನು ಸರಿಪಡಿಸಲು ನೆರವಾಗುವುದು.ತ್ವಚೆಗೆ ಓಟ್ ಮೀಲ್ ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯುವ...

ಓಟ್‌ಮೀಲ್ ಮತ್ತು ಮೊಸರು

ಓಟ್‌ಮೀಲ್ ಮತ್ತು ಮೊಸರು

ಬೇಕಾಗುವ ಸಾಮಗ್ರಿಗಳು

*3 ಚಮಚ ಓಟ್ ಮೀಲ್

*3-4 ಚಮಚ ಮೊಸರು

Most Read: ಅಕ್ಟೋಬರ್ 15 ರಿಂದ 21ರ ವರೆಗಿನ ವಾರ ಭವಿಷ್ಯ

ತಯಾರಿಸುವ ವಿಧಾನ

ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿ. ಇದನ್ನು ಮೊಸರಿಗೆ ಹಾಕಿ, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಾಕಿ 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಓಟ್ ಮೀಲ್, ಜೇನುತುಪ್ಪ ಮತ್ತು ಮೊಸರು

ಓಟ್ ಮೀಲ್, ಜೇನುತುಪ್ಪ ಮತ್ತು ಮೊಸರು

ಬೇಕಾಗುವ ಸಾಮಗ್ರಿಗಳು

*5-6 ಬಾದಾಮಿ

*2 ಚಮಚ ಓಟ್ ಮೀಲ್

*2 ಚಮಚ ಮೊಸರು

*2 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಬಾದಾಮಿಯನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಇದಕ್ಕೆ ಓಟ್ ಮೀಲ್ ಹುಡಿ, ಮೊಸರು ಮತ್ತು ಜೇನುತುಪ್ಪ ಹಾಕಿಕೊಳ್ಳಿ ಮತ್ತು ಸರಿಯಾಗಿ ರುಬ್ಬಿ. ಈ ಪೇಸ್ಟ್ ನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ ಮತ್ತು ಕೆಲವು ನಿಮಿಷ ಹಾಗೆ ಬಿಡಿ. ತಣ್ಣೀರಿನಿಂದ ತೊಳೆದ ಬಳಿಕ ಒರೆಸಿಕೊಳ್ಳಿ.

ಓಟ್ ಮೀಲ್ ಮತ್ತು ಬಾಳೆಹಣ್ಣು

ಓಟ್ ಮೀಲ್ ಮತ್ತು ಬಾಳೆಹಣ್ಣು

ಬೇಕಾಗುವ ಸಾಮಗ್ರಿಗಳು

*1 ಕಪ್ ಓಟ್ ಮೀಲ್

*1 ಬಾಳೆಹಣ್ಣು

*1 ಚಮಚ ಗ್ಲಿಸರಿನ್

*ಕೆಲವು ಹನಿ ರೋಸ್ ವಾಟರ್

Most Read: ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?

ತಯಾರಿಸುವ ವಿಧಾನ

ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಬಾಳೆಹಣ್ಣನ್ನು ಹಿಚುಕಿ ಪೇಸ್ಟ್ ಮಾಡಿ. ಇದಕ್ಕೆ ಓಟ್ ಮೀಲ್ ಹುಡಿ ಹಾಕಿ. ಬಳಿಕ ಗ್ಲಿಸರಿನ್ ಹಾಕಿಕೊಂಡು ಅಂತಿಮವಾಗಿ ರೋಸ್ ವಾಟರ್ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ 15-20 ನಿಮಿಷ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ನ್ನು ನೀವು ತಿಂಗಳಿಗೆ ಒಂದು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಓಟ್ ಮೀಲ್ ಮತ್ತು ಮೊಟ್ಟೆಯ ಬಿಳಿ ಲೋಳೆ

ಓಟ್ ಮೀಲ್ ಮತ್ತು ಮೊಟ್ಟೆಯ ಬಿಳಿ ಲೋಳೆ

ಬೇಕಾಗುವ ಸಾಮಗ್ರಿಗಳು

*2 ಚಮಚ ಓಟ್ ಮೀಲ್

*1 ಮೊಟ್ಟೆ

ತಯಾರಿಸುವ ವಿಧಾನ

ಓಟ್ ಮೀಲ್ ನ್ನು ಹುಡಿ ಮಾಡಿಕೊಂಡು ಅದನ್ನು ಒಂದು ಪಿಂಗಾಣಿಗೆ ಹಾಕಿ. ಮೊಟ್ಟೆಯ ಬಿಳಿಭಾಗ ತೆಗೆದು ಪ್ರತ್ಯೇಕಿಸಿ ಮತ್ತು ಇದನ್ನು ಓಟ್ ಮೀಲ್ ಹುಡಿಗೆ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು, ಅದನ್ನು ಸರಿಯಾಗಿ ತೊಳೆದ ಮುಖಕ್ಕೆ ಹಚ್ಚಿ. ಕೆಲವು ನಿಮಿಷ ಕಾಲ ಹಾಗೆ ಬಿಡಿ. ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಬಳಸಿದರೆ ಇದು ಉತ್ತಮ ಫಲಿತಾಂಶ ನೀಡುವುದು.

English summary

Try These Oatmeal Home Remedies For Skin Whitening

A clear, bright and flawless skin is something that all of us wish to have. In order to achieve this, we experiment with a wide range of products form face wash to fairness creams available in the market. But did you know that the constant change of products will lead to many more skin issues in the long run? Yes, these ready-made products are infused with chemicals that might cause damage to the skin.So, it is important that we switch to natural and home-made remedies.
Story first published: Monday, October 15, 2018, 13:13 [IST]
X
Desktop Bottom Promotion