For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು ಬಳಸಿ 'ಹಾಲಿನ ಫೇಸ್ ಪ್ಯಾಕ್'

|

ಕಾಂತಿಯುತ ತ್ವಚೆ ಹಾಗೂ ಕಲೆಗಳು ಇಲ್ಲದೆ ಇರುವಂತಹ ತ್ವಚೆಯು ಸೌಂದರ್ಯ ಹೆಚ್ಚಿಸುವುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳನ್ನು ಬಳಸುವ ಬದಲು ಮನೆಯಲ್ಲೇ ಕೆಲವೊಂದು ಮನೆಮದ್ದುಗಳನ್ನು ತಯಾರಿಸಿಕೊಂಡು ಬಳಸಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ. ಹೆಚ್ಚಾಗಿ ಹಾಲನ್ನು ಹಲವಾರು ರೀತಿಯ ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳುವರು. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಕೇವಲ ಹಾಲನ್ನು ತ್ವಚೆಗೆ ಹಾಗೆ ಹಚ್ಚಿಕೊಂಡರೂ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎನ್ನುವುದು ನಿಮಗೆ ತಿಳಿದಿದೆಯಾ?

Try These Milk Face Packs For Flawless Skin

ಹಾಲಿನಲ್ಲಿ ವಿಟಮಿನ್ ಎ, ಬಿ12 ಮತ್ತು ಇತರ ಕೆಲವೊಂದು ಪ್ರಮುಖ ಪೋಷಕಾಂಶಗಳು ಇದ್ದು, ಇದು ಕಪ್ಪು ಕಲೆ, ಒಣ ಚರ್ಮ ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಚರ್ಮವನ್ನು ಪುನರ್ಶ್ಚೇತನಗೊಳಿಸಲು ನೆರವಾಗುವುದು. ಹಾಲವನ್ನು ಪಪ್ಪಾಯಿ, ಮೊಟ್ಟೆ ಇತ್ಯಾದಿಗಳೊಂದಿಗೂ ಬಳಸಬಹುದು. ಇದರಿಂದ ಸಿಗುವಂತಹ ಲಾಭವು ಹೆಚ್ಚಾಗುವುದು. ಈಗ ಹಾಲಿನಿಂದ ಫೇಸ್ ಪ್ಯಾಕ್ ಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ನಯವಾದ ಚರ್ಮಕ್ಕಾಗಿ

ನಯವಾದ ಚರ್ಮಕ್ಕಾಗಿ

ಬೇಕಾಗುವ ಸಾಮಗ್ರಿಗಳು

*¼ ಕಪ್ ಹಾಲು

*2 ಚಮಚ ಚಾಕಲೇಟ್ ಹುಡಿ

*ಈ ಮಾಸ್ಕ್ ರಕ್ತಸಂಚಾರವನ್ನು ಉತ್ತಮಪಡಿಸುವುದು ಮತ್ತು ಚರ್ಮದಲ್ಲಿರುವಂತಹ ಎಲ್ಲಾ ರೀತಿಯ ಕಲ್ಮಷಗಳನ್ನು ಹೊರಗೆಹಾಕುವುದು. ಚಾಕಲೇಟಿನಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಕಾಂತಿಯುತ ಹಾಗೂ ಸುಂದರ ಚರ್ಮವನ್ನು ನೀಡುವುದು.

ವಿಧಾನ

1.ಶುದ್ಧವಾದ ಪಿಂಗಾಣಿಗೆ ಚಾಕಲೇಟ್ ಹುಡಿ ಮತ್ತು ಹಾಲನ್ನು ಹಾಕಿ.

2.ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ. ಗಡ್ಡೆ ಬರದಂತೆ ನೋಡಿ.

3.ಇದನ್ನು ಒಂದು ಗಂಟೆ ಕಾಲ ಫ್ರಿಡ್ಜ್ ನಲ್ಲಿಡಿ.

4.ಈ ಮಿಶ್ರಣವನ್ನು ಮುಖಕ್ಕೆ ನಿಧಾನವಾಗಿ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ.

5.15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದು, ಒರೆಸಿಕೊಳ್ಳಿ.

Most Read: ನಿಷ್ಠಾವಂತರಾದ 'ಮಿಥುನ ರಾಶಿ'ಯವರಿಗೆ ಸಂಬಂಧಗಳ ವಿಷಯದಲ್ಲಿ ಕಷ್ಟ ಬರಬಹುದು!

ವಯಸ್ಸಾಗುವ ಲಕ್ಷಣ ತಡೆಯಲು

ವಯಸ್ಸಾಗುವ ಲಕ್ಷಣ ತಡೆಯಲು

ಬೇಕಾಗುವ ಸಾಮಗ್ರಿಗಳು

*2 ಚಮಚ ಹಾಲು

*1 ಮೊಟ್ಟೆ

*ಹಾಳು ಮತ್ತು ಮೊಟ್ಟೆಯ ಮಿಶ್ರಣವು ಚರ್ಮವನ್ನು ಬಿಗಿಗೊಳಿಸುವುದು ಮತ್ತು ಮುಖದಲ್ಲಿ ನೆರಿಗೆ ಬರದಂತೆ ತಡೆಯುವುದು. ಮೊಟ್ಟೆಯು ಚರ್ಮದಲ್ಲಿನ ಸತ್ತಕೋಶಗಳನ್ನು ಕಿತ್ತುಹಾಕುವುದು.

ವಿಧಾನ

*ಪಿಂಗಾಣಿಯಲ್ಲಿ ಮೊಟ್ಟೆಯನ್ನು ಅದರ ಬಿಳಿ ಲೋಳೆಯಿಂದ ಬೇರ್ಪಡಿಸಿ.

*ಇದಕ್ಕೆ ತಾಜಾ ಹಾಲು ಹಾಕಿ ಮತ್ತು ಮೆತ್ತಗಿನ ಮಿಶ್ರಣವಾಗುವ ತನಕ ಕಲಸಿಕೊಳ್ಳಿ.

*ಬ್ರಷ್ ಬಳಸಿಕೊಂಡು ಈ ಮಿಶ್ರಣದ ಪದರ ಹಚ್ಚಿಕೊಳ್ಳಿ.

*ಇದನ್ನು ಒಣಗಲು ಬಿಡಿ ಮತ್ತು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಕಾಂತಿಯುತ ತ್ವಚೆಗೆ

ಕಾಂತಿಯುತ ತ್ವಚೆಗೆ

ಬೇಕಾಗುವ ಸಾಮಗ್ರಿಗಳು

*4 ಚಮಚ ಹಾಲು

*2 ಚಮಚ ಮುಲ್ತಾನಿ ಮಿಟ್ಟಿ

*ಮುಲ್ತಾನಿ ಮಿಟ್ಟಿಯು ರಕ್ತಸಂಚಾರವನ್ನು ಹೆಚ್ಚಿಸಿ, ಚರ್ಮವನ್ನು ಉತ್ತೇಜಿಸುವುದು ಮತ್ತು ಹಾಲಿನೊಂದಿಗೆ ಇದನ್ನು ಬೆರೆಸಿದಾಗ ಕಾಂತಿಯುತ ಚರ್ಮ ಪಡೆಯಬಹುದು.

ವಿಧಾನ

*ಒಂದು ಪಿಂಗಾಣಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ತಾಜಾ ಹಾಲು ಹಾಕಿ.

*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಸ್ವಲ್ಪ ಮಿಶ್ರಣ ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿಕೊಳ್ಳಿ.

*20 ನಿಮಿಷ ಹಾಗೆ ಬಿಟ್ಟ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

*ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಸಲ ಇದನ್ನು ಬಳಸಿ.

ಹೊಳೆಯುವ ತ್ವಚೆಗಾಗಿ

ಹೊಳೆಯುವ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು

*¼ ಕಪ್ ಹಾಲು

*ಹಣ್ಣಾಗಿರುವ ಪಪ್ಪಾಯಿ

*ಪಪ್ಪಾಯಿಯಲ್ಲಿ ಪಪೈನ್ ಎನ್ನುವ ಕಿಣ್ವವಿದ್ದು, ಇದು ಚರ್ಮದ ಬಣ್ಣ ಸುಧಾರಣೆ ಮಾಡುವುದು ಮತ್ತು ಚರ್ಮವನ್ನು ಬಿಳಿಯಾಗಿಸುವುದು. ಹಾಲಿನೊಂದಿಗೆ ಇದನ್ನು ಬೆರೆಸಿದಾಗ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು.

ವಿಧಾನ

*ಅರ್ಧ ಹಣ್ಣಾದ ಪಪ್ಪಾಯಿ ತೆಗೆದುಕೊಂಡು ಸಿಪ್ಪೆ ತೆಗೆಯಿರಿ.

*ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಹಸಿ ಹಾಲಿಗೆ ಹಾಕಿ ಪೇಸ್ಟ್ ಮಾಡಿ.

*ಚರ್ಮದ ರಂಧ್ರವು ತೆರೆದುಕೊಳ್ಳಲು ಮುಖಕ್ಕೆ ಹಬೆಯಾಡಿಸಿ.

*ಹಾಲು ಮತ್ತು ಪಪ್ಪಾಯಿಯ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಹಾಗೆ ಬಿಡಿ.

*ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.

Most Read: ಮೊಡವೆಯ ಸಮಸ್ಯೆ-ನಿವಾರಣೆಗೆ ಬರೀ ಒಂದೇ-ಒಂದು ಚಮಚ ಹರಳೆಣ್ಣೆ ಸಾಕು!

ನಯವಾದ ತ್ವಚೆಗಾಗಿ

ನಯವಾದ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು

*3ಚಮಚ ಹಸಿ ಹಾಲು

*1 ಮಧ್ಯಮ ಗಾತ್ರದ ಸೇಬು

ಸೇಬಿನಲ್ಲಿ ಇರುವಂತಹವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ಆಳವಾಗಿ ಪೋಷಣೆ ನೀಡುವುದರಿಂದ ಚರ್ಮವನ್ನು ನಯವಾಗಿಸುವುದು. ತ್ವಚೆಯಲ್ಲಿ ಕಪ್ಪುಕಲೆಗಳು ಇದ್ದರೆ ಆಗ ನೀವು ಇದನ್ನು ಪ್ರತಿನಿತ್ಯ ಬಳಸಿದರೆ ಲಾಭ ಪಡೆಯಬಹುದು.

ವಿಧಾನ

*ಸೇಬಿನ ಸಿಪ್ಪೆ ತೆಗೆದು, ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ ಮತ್ತು ಮಿಕ್ಸಿಗೆ ಹಾಕಿ.

*ಇದಕ್ಕೆ ಹಸಿ ಹಾಲು ಹಾಕಿಕೊಂಡ ಬಳಿಕ ರುಬ್ಬಿಕೊಳ್ಳಿ.

*ಈ ಮಾಸ್ಕ್ ನ್ನು ನೀವು ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಹಾಗೆ ಬಿಡಿ.

*ಈ ಮಿಶ್ರಣವು ಮುಖದಲ್ಲಿ ಒಣಗಲಿ ಮತ್ತು ತಣ್ಣೀರಿನಿಂದ ತೊಳೆಯಿರಿ.

English summary

Try These Milk Face Packs For Flawless Skin

Radiant and flawless skin is just one step away now. Yes, you read that right. We will give you some awesome remedies using milk to solve all your skin problems. A very basic and common ingredient, milk, is available in all the households. We all know the health benefits of drinking milk every day. But did you know that even the topical application of milk can do so much on the skin
X
Desktop Bottom Promotion