For Quick Alerts
ALLOW NOTIFICATIONS  
For Daily Alerts

ಕೈಗಳ ಮೇಲೆ ನೆರಿಗೆ ಮೂಡುತ್ತಿದ್ದರೆ, ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ

By Sushma Charhra
|

ನಿಮ್ಮ ದುರ್ಬಲವಾದ ಸ್ನಾಯುವಿನ ಅಂಗಾಂಶಗಳಿಂದಾಗಿ ನಿಮ್ಮಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತದೆ.ಮುಖವನ್ನು ಹೊರತು ಪಡಿಸಿ, ನೆರಿಗೆಗಳು ಕೈಗಳಲ್ಲೂ ಕಾಣಿಸಿಕೊಳ್ಳುತ್ತೆ..ಆದರೆ ಇದು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಡಿ.ಈಗ ಕಾಲ ಬದಲಾಗಿ ಬಿಟ್ಟಿದೆ. ಯುವಕ, ಯುವತಿಯರಲ್ಲೂ ಕೂಡ ಕೈಗಳ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುವ ಸಮಸ್ಯೆ ಉದ್ಭವವಾಗಿದೆ. ಯಾಕೆಂದರೆ ನಮ್ಮ ಕೈಗಳು ಹೆಚ್ಚು ವಿಚಾರಗಳಿಗೆ ತೆರೆದುಕೊಳ್ಳುತ್ತದೆ. ದೇಹದ ಇತರೆ ಭಾಗಗಳಿಗಿಂತ ಕೈಗಳು ಹೆಚ್ಚು ಕೆಲಸಗಳಲ್ಲಿ ತೊಡಗುತ್ತೆ. ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡುವುದು ಕೂಡ ನಿಮ್ಮ ಕೈಗಳನ್ನು ಹಾಳು ಮಾಡಬಹುದು, ಅರ್ಥಾತ್ ನಿಮ್ಮ ಕೈಗಳ ಸೌಂದರ್ಯಕ್ಕೆ ಕುಂದು ತಂದೊಡ್ಡಬಹುದು.

ಸ್ಮೋಕಿಂಗ್ ಮತ್ತು ವಾಯುಮಾಲಿನ್ಯದಿಂದಲೂ ಕೂಡ ಕೈಗಳ ಚರ್ಮದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತದೆ ಮತ್ತು ಚರ್ಮದ ಅಂದ ಕುಗ್ಗುತ್ತದೆ. ನಿಮ್ಮಲ್ಲಿ ಹಲವರಿಗೆ ಈ ಸಮಸ್ಯೆ ಕಾಣಿಸಿಕೊಂಡಿರಬಹುದು. ಆದರೆ ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಕೆಲವು ಸಿಂಪಲ್ ಸಲಹೆಗಳಿವೆ. ಅದನ್ನು ಪಾಲಿಸಿದ್ರೆ ಸಾಕು.. ಆ ಸಲಹೆಗಳನ್ನು ತಿಳಿಯಬೇಕೆಂದರೆ ನೀವು ಈ ಲೇಖನವನ್ನು ಓದಲೇಬೇಕು.. ಹೌದು ನೀವು ಸರಿಯಾದ ಜಾಗದಲ್ಲೇ ಇದ್ದೀರಿ ಮತ್ತು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಮುಂದೆ ಓದಿ.. ಕೈಗಳ ಚರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಿ ನೆರಿಗೆಗಳನ್ನು ನಿವಾರಿಸುವ ಸುಲಭ ಸೂತ್ರಗಳಿವು. ನಿಮ್ಮ ಮನೆಯಲ್ಲೇ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿ ನೀವು ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಾಗಾದ್ರೆ ಅವುಗಳು ಯಾವುದು ಮತ್ತು ಹೇಗೆ ಬಳಕೆ ಮಾಡುವುದು ಎಂಬ ವಿವರ ಇಲ್ಲಿದೆ ನೋಡಿ..

home remedies for skin tightening on hands in kannada

ಮೊಟ್ಟೆಯ ಬಿಳಿಯ ಭಾಗದ ಮಾಸ್ಕ್

ಮೊಟ್ಟೆಯ ಬಿಳಿ ಭಾಗದ ಸಹಾಯದಿಂದಾಗಿ ಚರ್ಮದ ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿದೆ. ಅಷ್ಟೇ ಅಲ್ಲ, ಇದು ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೂ ಕೂಡ ಇದು ನೆರವಾಗುತ್ತದೆ.

ಬೇಕಾಗುವ ಸಾಮಗ್ರಿಗಳು
• 1 ಮೊಟ್ಟೆಯ ಬಿಳಿ ಭಾಗ
• 2 ಟೇಬಲ್ ಸ್ಪೂನ್ ಜೇನುತುಪ್ಪ

ಮಾಡುವ ವಿಧಾನ ಹೇಗೆ ?
1. ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪವನ್ನು ಸೇರಿಸಿ
2. ಈ ಮಾಸ್ಕನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ
3. ನಂತರ ಇದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ
4. ತಿಂಗಳಿಗೆ ಮೂರು ಬಾರಿ ಈ ಮಾಸ್ಕ್ ನ್ನು ಕೈಗಳಿಗೆ ಬಳಕೆ ಮಾಡುವುದು ಒಳ್ಳೆಯದು. ಆ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವ ಗುಣವು ಹೆಚ್ಚಾಗಲಿದೆ.

ಬಾಳೆಹಣ್ಣಿನ ಮಾಸ್ಕ್

ಬಾಳೆಹಣ್ಣಿನಲ್ಲಿ ಮಿನರಲ್ ಗಳು ಮತ್ತು ವಿಟಮಿನ್ ಗಳಿದ್ದು, ಇದು ಬೇಗನೆ ವಯಸ್ಸಾಗುವುದನ್ನು ತಡೆಯುತ್ತದೆ.

ಬೇಕಾಗುವ ಸಾಮಗ್ರಿಗಳು :
• ಬಾಳೆಹಣ್ಣು
• 2-3 ಸ್ಪೂನ್ ನಿಂಬೆ ರಸ

ಮಾಡುವ ವಿಧಾನ ಹೇಗೆ ?
1. ಬಾಳೆಹಣ್ಣನ್ನು ಸ್ಮ್ಯಾಶ್ ಮಾಡಿಕೊಳ್ಳಿ ಇದನ್ನು ನಿಮ್ಮ ಪೂರ್ತಿ ಕೈಗಳಿಗೆ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
2. ಬಾಳೆಹಣ್ಣಿನ ಪೇಸ್ಟಿಗೆ ಒಂದೆರಡು ಹನಿ ನಿಂಬೆರಸವನ್ನು ಸೇರಿಸಿ
3. 15 ನಿಮಿಷ ನಿಮ್ಮ ಕೈಗಳಲ್ಲಿ ಇದನ್ನು ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆಯಿರಿ..
ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಈ ಮಾಸ್ಕ್ ಬಳಕೆ ಮಾಡಬಹುದು.

. ಮೊಸರು

ಮೊಸರಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇರುತ್ತೆ ಇದು ನಿಮ್ಮ ಚರ್ಮದ ರಂದ್ರಗಳನ್ನು ಕುಗ್ಗುವಂತೆ ಮಾಡುತ್ತದೆ ಮತ್ತು ಚರ್ಮವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ,. ಹಾಗಾಗಿ, ಇದು ಚರ್ಮದ ಹಿಡಿತಕ್ಕಾಗಿ ಉತ್ತಮ ಮದ್ದಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು :
• 2 ಟೇಬಲ್ ಸ್ಪೂನ್ ಮೊಸರು
• ಕೆಲವು ಹನಿ ನಿಂಬೆ ರಸ

ಮಾಡುವ ವಿಧಾನ ಹೇಗೆ ?
1.ಮೊಸರಿಗೆ ಒಂದೆರಡು ಹನಿ ನಿಂಬೆರಸ ಸೇರಿಸಿ, ಕಲಸಿ
2. ಈ ಮಿಶ್ರಣವನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ.
3. 10 ನಿಮಿಷ ನಿಮ್ಮ ಕೈಗಳನ್ನು ಮಸಾಜ್ ಮಾಡಿ ಮತ್ತು ಮತ್ತೊಂದು ಐದು ನಿಮಿಷ ಹಾಗೆಯೇ ಬಿಡಿ... ನಂತರ ನೀರಿನಿಂದ ತೊಳೆಯಿರಿ

ಕಾಫಿ

ಕಾಫಿಯು ಚರ್ಮವನ್ನು ಸ್ಥಿರಗೊಳಿಸಲು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಯಾಕೆಂದರೆ ಇದರಲ್ಲಿರುವ ಕೆಫೀನ್ ಅಂಶವು ಇದಕ್ಕೆ ನೆರವು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು :
•1/4ಕಪ್ ನಷ್ಟು ಕಾಫಿ ಪೌಡರ್
•1/4th ಕಪ್ ನಷ್ಟು ಬ್ರೌನ್ ಶುಗರ್
•3 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್
•1/2 ಟೀ ಸ್ಪೂನ್ ಚಕ್ಕೆಯ ಪುಡಿ

ಮಾಡುವ ವಿಧಾನ ಹೇಗೆ ?
1. ಒಂದು ಬೌಲ್ ನಲ್ಲಿ, ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಒಂದು ವೇಳೆ ಕೊಬ್ಬರಿ ಎಣ್ಣೆ ಗಟ್ಟಿ ಇದ್ದರೆ ಅದನ್ನು ಕರಗಿಸಿಕೊಳ್ಳಿ.
2. ಈ ಮಿಶ್ರಣವನ್ನು ನಿಮ್ಮ ಕೈಗಳಿಗೆ ಅಪ್ಲೈ ಮಾಡಿ ಮತ್ತು ನಿಧಾನವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ.. ಮತ್ತು ಕೆಲವು ನಿಮಿಷ ಹಾಗೆಯೇ ಬಿಡಿ.
3. ಅತಿಮವಾಗಿ , ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ. ಈ ಸ್ಕ್ರಬ್ ನ್ನು ವಾರಕ್ಕೆ ಎರಡು ಬಾರಿ ಬಳಕೆ ಮಾಡಿ.

ಟೊಮೆಟೋ

ಟೊಮೆಟೋ ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ನೆರಿಗೆಗಳನ್ನು ನಿವಾರಿಸುತ್ತೆ. ಹಾಗಾದ್ರೆ ಅತ್ಯಂತ ಸುಲಭದ ಚರ್ಮವನ್ನು ಉತ್ತಮಗೊಳಿಸುವ ಈ ರೆಮಿಡಿಯನ್ನು ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿಗಳು :
• 1 ಟೊಮೆಟೋ
• ಕಾಟನ್ ಬಾಲ್ ಗಳು

ಮಾಡುವ ವಿಧಾನ ಹೇಗೆ ?
* ಸಣ್ಣ ಮೊಟೆಮೋವನ್ನು ಹಿಂಡಿ ಮತ್ತು ಅದರಿಂದ ರಸ ತೆಗೆಯಿರಿ.
* ಅದರಲ್ಲಿ ಕಾಟನ್ ಬಾಲ್ ನ್ನು ಅದ್ದಿ ಮತ್ತು ನಿಮ್ಮ ಕೈಗಳಿಗೆ ಅದರಿಂದ ಆ ರಸವನ್ನು ಹಚ್ಚಿಕೊಳ್ಳಿ
* 10 ರಿಂದ 15 ನಿಮಿಷ ಹಾಗೆಯೇ ಬಿಡಿ ಮತ್ತು ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ .
ಇದನ್ನು ದಿನಕ್ಕೆ ಎರಡು ಬಾರಿ ಮಾಡಿ.. ಇದೊಂದು ಸುಲಭದ ವಿಧಾನವಾಗಿದ್ದು, ನೆರಿಗೆಗಟ್ಟಿರುವ ಚರ್ಮವನ್ನು ಸರಿಪಡಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.

ಪಪ್ಪಾಯ

ಪಪ್ಪಾಯದಿಂದಾಗಿ ಚರ್ಮವು ಮೃದು ಮತ್ತು ಉತ್ತಮಗೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್ ಗಳಿವೆ. ಪಪ್ಪಾಯದಲ್ಲಿರುವ ಎಝೈಮ್ಸ್ ಗಳು ಚರ್ಮದ ನೆರಿಗೆಗಳ ನಿವಾರಣೆಗೆ ಸಹಾಯ ಮಾಡುತ್ತೆ.

ಬೇಕಾಗುವ ಸಾಮಗ್ರಿಗಳು :
• ಪಪ್ಪಾಯ ಪಲ್ಪ್
• 1-2 ಟೇಬಲ್ ಸ್ಪೂನ್ ಅಕ್ಕಿಹಿಟ್ಟು

ಮಾಡುವ ವಿಧಾನ ಹೇಗೆ ?
* ಪಪ್ಪಾಯವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಅದನ್ನು ಬ್ಲೆಂಡ್ ಮಾಡಿ.
* ಈಗ, ಅದಕ್ಕೆ ಸ್ವಲ್ಪ ಅಕ್ಕಿಹಿಟ್ಟನ್ನು ಸೇರಿಸಿ ಮತ್ತು ನಿಧಾನವಾಗಿ ಮಸಾಜ್ ಮಾಡಿ.
* 15 ನಿಮಿಷ ಇದನ್ನು ಮುಂದುವರಿಸಿ ಮತ್ತು ನಂತರ ತಣ್ಣನೆಯ ನೀರಿನಿಂದ ವಾಷ್ ಮಾಡಿ.. ವಾರಕ್ಕೆ ಒಮ್ಮೆ ಇದನ್ನು ಪುನರಾವರ್ತಿಸುವುದರಿಂದಾಗಿ ಬೇಗನೆ ಫಲಿತಾಂಶವನ್ನು ಪಡೆಯಬಹುದು.

English summary

try these amazing remedies for treating wrinkles on hands

Wrinkles appear on the skin due to weakened muscle tissues. Apart from the face, wrinkles also appear on the hands. The fact is that this is not restricted to old age. Now, the scenario is different. Young people also have this problem of sagging skin on the hands. This is because our hands are more exposed to several factors than any other part of our body.
X
Desktop Bottom Promotion