For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ವಯಸ್ಸಾದ ಕಲೆಗಳನ್ನು ತೆಗೆಯಲು ಮನೆ ಔಷಧಿಗಳು

|

ವಯಸ್ಸಾದಂತೆ ನಮ್ಮ ತ್ವಚೆ ಹಾಗೂ ಮಾಂಸಖಂಡಗಳು ಜೋಲುವುದು. ಶಕ್ತಿಯನ್ನು ಕಳೆದುಕೊಂಡ ಚರ್ಮದ ಮೇಲೆ ಕಪ್ಪು ಕಲೆಗಳು, ವಿಸ್ತಾರವಾದ ರಂಧ್ರಗಳು, ಸುಕ್ಕುಗಳು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದಂತೆ ನಮ್ಮ ದೇಹದಲ್ಲಾಗುವ ಬದಲಾವಣೆಗೆ ವಿರುದ್ಧವಾಗಿ ಆಕರ್ಷಣೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಚರ್ಮದ ಮೇಲೆ ಉಂಟಾಗುವ ಅಥವಾ ಕಾಣಿಸಿಕೊಳ್ಳುವ ವಯಸ್ಸಾದ ಛಾಯೆಯನ್ನು ಮರೆಮಾಚಬಹುದು.

ಇತ್ತೀಚಿನ ದಿನದಲ್ಲಿ ವಯಸ್ಸಾದವರಷ್ಟೇ ಅಲ್ಲ ವಯಸ್ಸಿನಲ್ಲಿ ಇರುವವರು ಸಹ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಹೆಚ್ಚು ಸಮಯ ಕಂಪ್ಯೂಟರ್ ಮುಂದೆ ಕುಳಿತಿರುವುದು, ತಾಜಾ ಗಾಳಿಯನ್ನು ಪಡೆದುಕೊಳ್ಳದೆ ಇರುವುದು, ಪೌಷ್ಠಿಕಾಂಶದ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ತ್ವಚೆಯು ತನ್ನ ಸ್ಥಿತಿ ಸ್ಥಾಪಕತ್ವವನ್ನು ಕಳೆದುಕೊಳ್ಳುತ್ತಿದೆ.

ಚರ್ಮವು ವಿಪರೀತ ಮೆಲನಿನ್ ಅಥವಾ ಚರ್ಮದ ವರ್ಣದ್ರವ್ಯವನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಉತ್ಪಾದಿಸಿದಾಗ ವಯಸ್ಸಾದ ಕಲೆಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದವರಲ್ಲಿ ಅಥವಾ ವಯಸ್ಕರಲ್ಲಿಯೇ ಈ ಸಮಸ್ಯೆಗಳು ಕಾಣಿಸಿಕೊಂಡರೆ ಕೆಲವು ಮನೆ ಔಷಧಿಗಳನ್ನು ಪ್ರಯೋಗಿಸುವುದರ ಮೂಲಕ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾದರೆ ಆ ಆರೈಕೆ ವಿಧಾನಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಬಯಸುತ್ತಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ನಿಂಬೆ ರಸ

ನಿಂಬೆ ರಸ

ನಿಂಬೆ ರಸದಲ್ಲಿ ಸಿಟ್ರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಇದು ಕೋಶಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲಿರುವ ಪದರಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಹೊಸ ಚರ್ಮದ ಹುಟ್ಟಿಗೆ ಉತ್ತೇಜಿಸುವುದು. ಹಾಗಾಗಿ ಇದನ್ನು ನೈಸರ್ಗಿಕ ಬ್ಲೀಚಿಂಗ್ ಉತ್ಪನ್ನ ಎನ್ನಬಹುದು.

- ನಿಂಬೆ ರಸವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

-ಈ ಆರೈಕೆಗೆ ಒಳಗಾದ ತಕ್ಷಣವೇ ಸೂರ್ಯನ ಕಿರಣಕ್ಕೆ ಹೋಗದಿರಿ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಆಲ್ಫ-ಹೈಡ್ರಾಕ್ಸಿ ಆಮ್ಲಗಳಿಂದ ಕೂಡಿದೆ. ಇದು ಆಸಿಡ್‍ಗಳನ್ನು ಹೆಚ್ಚಿಸಿ ಸೌಂದರ್ಯವರ್ಧಕ ಉತ್ಪನ್ನಗಳಾಗಿ ಬಳಸಬಹುದು. ಅಲ್ಲದೆ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುವುದು. ಇದನ್ನು ಬಳಸಿದಾಗ ಕೆಂಪು ಬಣ್ಣವನ್ನು ಅನುಭವಿಸಿದ ಅನುಭವಾಗುವುದು ಎನ್ನುವುದನ್ನು ಮರೆಯಬಾರದು.

- ಒಂದು ಭಾಗ ಆಪಲ್ ಸೈಡರ್‌ಗೆ ಎರಡು ಭಾಗದಷ್ಟು ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಬಿಡಿ.

- ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿತ್ಯವೂ ಅನ್ವಯಿಸಿ.

ಹರಳೆಣ್ಣೆ

ಹರಳೆಣ್ಣೆ

ವಯಸ್ಸಾದ ಚಿಹ್ನೆಗಳನ್ನು ನಿವಾರಿಸಲು ಹರಳೆಣ್ಣೆ ಅತ್ಯುತ್ತಮ ರೀತಿಯಲ್ಲಿ ಸಹಾಯಮಾಡುವುದು.

- ಪೀಡಿತ ಪ್ರದೇಶಕ್ಕೆ ಹರಳೆಣ್ಣೆಯನ್ನು ಅನ್ವಯಿಸಿ ಮಸಾಜ್ ಮಾಡಿ.

- ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿತ್ಯವೂ ಅನ್ವಯಿಸಿ.

ಹಾಲು

ಹಾಲು

ವಯಸ್ಸಾದ ಚಿಹ್ನೆಯನ್ನು ಮರೆಮಾಚಲು ಸಹಾಯ ಮಾಡುವ ಶಾಂತವಾದ ಪದಾರ್ಥ ಹಾಲು. ಇದರಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಆರೈಕೆ ಮಾಡುವುದು. ಸೂಕ್ಷ್ಮವಾದ ತ್ವಚೆಯುಳ್ಳವರಿಗೆ ಇದು ಅತ್ಯುತ್ತಮ ಪರಿಹಾರ ಕ್ರಮ

- ಹಾಲನ್ನು ಪೀಡಿತ ಪ್ರದೇಶಕ್ಕೆ ಅನ್ವಯಸಿ.

- ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯಿರಿ.

- ಇದು ಚರ್ಮವನ್ನು ಮೃದುಗೊಳಿಸಿ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಟೊಮ್ಯಾಟೋ ರಸ

ಟೊಮ್ಯಾಟೋ ರಸ

ಟೊಮ್ಯಾಟೋ ರಸ ನಿಂಬೆಯ ರಸದಂತೆ ಅತ್ಯುತ್ತಮ ರೀತಿಯಲ್ಲಿ ಪರಿಣಾಮಕಾರಿಯಾಗಿದೆ. ಇದು ಚರ್ಮವನ್ನು ಸಾಕಷ್ಟು ಮೃದು ಹಾಗೂ ಆರೋಗ್ಯದಿಂದ ಕೂಡಿರುವಂತೆ ಮಾಡುತ್ತದೆ.

- ಟೊಮ್ಯಾಟೋ ರಸವನ್ನು ನಿಮ್ಮ ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿತ್ಯವೂ ಅನ್ವಯಿಸಿ.

_ ಈ ಆರೈಕೆಗೆ ಒಳಗಾದ ತಕ್ಷಣವೇ ಸೂರ್ಯನ ಕಿರಣಕ್ಕೆ ಹೋಗದಿರಿ.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ ಕಲೆಗಳು ಮತ್ತು ವರ್ಣದ್ರವ್ಯಗಳ ನಿವಾರಣೆಗೆ ಸಹಾಯ ಮಾಡುತ್ತದೆ.

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಹೊರತೆಗೆದು, ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ.

- ಈ ಕ್ರಮ ಅನ್ವಯಿಸುವುದರಿಂದ ಬಹುಬೇಗ ಸಮಸ್ಯೆಗಳನ್ನು ನಿವಾರಿಸಿ, ಚರ್ಮದ ಆರೋಗ್ಯವನ್ನು ಕಾಪಾಡಬಹುದು.

ಅರಿಶಿನ

ಅರಿಶಿನ

ಪುರಾತನ ಕಾಲದಿಂದಲೂ ಚರ್ಮದ ಆರೋಗ್ಯ ಸಂರಕ್ಷಣೆಗಾಗಿ ಬಳಸುವ ಅತ್ಯುತ್ತಮ ನೈಸರ್ಗಿಕ ಉತ್ಪನ್ನ ಅರಿಶಿನ. ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವುದು.

- ಸ್ವಲ್ಪ ಗುಲಾಬಿ ನೀರಿನೊಂದಿಗೆ ಅರಿಶಿನವನ್ನು ಬೆರೆಸಿ, ಮಿಶ್ರಗೊಳಿಸಿ.

- ಸ್ವಲ್ಪ ಸಮಯದ ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿತ್ಯವೂ ಅನ್ವಯಿಸಿ.

English summary

Treating Age Spots With Home Remedies

Age spots happen when the skin produces excessive melanin or skin pigment, in a particular area. These are most common in people who are over fifty but can happen to younger people as well, if they happen to spend more time out in the sun, although it happens most often to people who have very light skin. A good tip we can give you is that you must always carry your sunscreen with you and keep reapplying it at regular intervals. Here are some home remedies for age spots.
Story first published: Tuesday, February 27, 2018, 19:48 [IST]
X
Desktop Bottom Promotion