ಮನೆ ಮದ್ದಿನಿಂದಲೇ ಮುಖವನ್ನು ಸುಂದರಗೊಳಿಸಿ

Posted By: Deepu
Subscribe to Boldsky

ನಯವಾದ ಹಾಗೂ ಗುಲಾಬಿ ಬಣ್ಣದ ತ್ವಚೆಯನ್ನು ಹೊಂದಬೇಕು ಎಂದು ಪ್ರತಿಯೊಬ್ಬ ಮಹಿಳೆಯು ಬಯಸುತ್ತಾಳೆ. ಆದರೆ ಕೆಲವು ತ್ವಚೆಯ ಅನಾರೋಗ್ಯ ಹಾಗೂ ಕಲೆಗಳು ನಮ್ಮ ಆಕರ್ಷಣೆಯನ್ನು ಕುಂಟಿತಗೊಳಿಸುತ್ತವೆ. ಅವುಗಳ ಮರೆಮಾಚಲು ಸೌಂದರ್ಯ ವರ್ಧಕ ಮತ್ತು ಇತರ ರಾಸಾಯನಿಕ ಉತ್ಪನ್ನಗಳನ್ನು ಅವಲಂಬಿಸಿರುತ್ತಾರೆ. ಇವು ತಾತ್ಕಾಲಿಕ ನ್ಯಾಯೋಚಿತತೆಯನ್ನು ನೀಡಬಹುದು. ಆದರೆ ಅವು ನಮ್ಮ ಚರ್ಮದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ.

ಚರ್ಮದ ಆರೋಗ್ಯ ಸುಧಾರಿಸಲು ಕೆಲವು ಆಯುರ್ವೇದದ ಆರೈಕೆಗಳು ಇವೆ. ಇವುಗಳ ಮೊರೆ ಹೋಗುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುವುದು. ನೈಸರ್ಗಿಕವಾದ ಕೆಲವು ಉತ್ನ್ನಗಳು ಚರ್ಮದ ಪೋಷಣೆಯನ್ನು ಬಹು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತವೆ. ಇವುಗಳ ಬಳಕೆ ಮಾಡಿದರೆ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದರೆ ಸದಾ ತಾಜಾತನದಿಂದ ಕಂಗೊಳಿಸುತ್ತದೆ. ಜೊತೆಗೆ ಮೃದು ಹಾಗೂ ಆಕರ್ಷಣೆಯನ್ನು ಪಡೆದುಕೊಳ್ಳುವ ಕನಸು ನನಸಾಗುವುದು. ಹಾಗಾದರೆ ಆ ಉತ್ಪನ್ನಗಳು ಯಾವವು? ಅವುಗಳ ಬಳಕೆ ಹೇಗೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಉತ್ಸಾಹದಲ್ಲಿ ಇದ್ದರೆ ಈ ಮುಂದೆ ಇರುವ ವಿವರಣೆಯನ್ನು ಪರಿಶೀಲಿಸಿ....

ದಾಳಿಂಬೆ ಮತ್ತು ಜೇನುತುಪ್ಪ

ದಾಳಿಂಬೆ ಮತ್ತು ಜೇನುತುಪ್ಪ

ದಾಳಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಚರ್ಮವನ್ನು ನೈಸರ್ಗಿಕವಾಗಿ ಇಡಲು ಸಹಾಯ ಮಾಡುತ್ತದೆ.

- ಅರ್ಧ ಕಪ್ ದಾಳಿಂಬೆ ಕಾಳಿನ ಪೇಸ್ಟ್‍ಗೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಉತ್ತಮವಾದ ತ್ವಚೆಯನ್ನು ಹೊಂದಲು ಇದೊಂದು ಅತ್ಯುತ್ತಮ ಮನೆ ಪರಿಹಾರ ಎನ್ನಬಹುದು.

ಹೆಸರು ಕಾಳು ಮತ್ತು ಅರಿಶಿನ

ಹೆಸರು ಕಾಳು ಮತ್ತು ಅರಿಶಿನ

- 2 ಟೇಬಲ್ ಚಮಚಮ ಹೆಸರುಕಾಳು ಹಿಟ್ಟಿಗೆ ಒಂದು ಚಿಟಕಿ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ,20 ನಿಮಿಷಗಳ ಕಾಲ ಬಿಡಿ.

- ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಹೀಗೆ ಮಾಡುವುದರಿಂದ ತ್ವಚೆಯು ತಾಜಾತನದಿಂದ ಕೂಡಿರುವುದು.

ಬಾದಾಮಿ ಮತ್ತು ಜೊಜೊಬಾ ಎಣ್ಣೆ ಫೇಸ್ ಮಾಸ್ಕ್

ಬಾದಾಮಿ ಮತ್ತು ಜೊಜೊಬಾ ಎಣ್ಣೆ ಫೇಸ್ ಮಾಸ್ಕ್

ಬಾದಾಮಿ ಮತ್ತು ಜೊಜೊಬಾ ಎಣ್ಣೆಯ ಫೇಸ್ ಮಾಸ್ಕ್ ನೀವು ಬಳಸಬಹುದಾದ ತುಂಬಾ ಪರಿಣಾಮಕಾರಿ ಫೇಸ್ ಮಾಸ್ಕ್. ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ತ್ವಚೆಗೆ ಕಾಂತಿಯು ಸಿಗುವುದು. ಇದರಲ್ಲಿ ಇರುವ ವಿಟಮಿನ್ ಇ ತ್ವಚೆಗೆ ಒಳ್ಳೆಯ ಪೋಷಕಾಂಶ ನೀಡುವುದು.

ಪುದೀನ ಮತ್ತು ಮುಲ್ತಾನಿ ಮಿಟ್ಟಿ

ಪುದೀನ ಮತ್ತು ಮುಲ್ತಾನಿ ಮಿಟ್ಟಿ

- ತಾಜಾ ಪುದೀನ ಎಲೆಗಳನ್ನು ಪೇಸ್ಟ್ ಮಾಡಿ, ಅದಕ್ಕೆ ಕೆಲವು ಹನಿ ಗುಲಾಬಿ ನೀರು ಮತ್ತು 1 ಟೀ ಚಮಚ ಮುಲ್ತಾನಿಮಿಟ್ಟಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಚರ್ಮವು ಸದಾ ತೇವಾಂಶದಿಂದ ಕೂಡಿರುವುದು.

ಶ್ರೀಗಂಧ ಮತ್ತು ಗುಲಾಬಿ ನೀರು

ಶ್ರೀಗಂಧ ಮತ್ತು ಗುಲಾಬಿ ನೀರು

- ಒಂದು ಟೀ ಚಮಚ ಶ್ರೀಗಂಧದ ಪುಡಿ ಮತ್ತು ಚಿಟಕಿ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಚರ್ಮವು ಸದಾ ತೇವಾಂಶದಿಂದ ಹಾಗೂ ಹೊಳಪಿನಿಂದ ಕೂಡಿರುವುದು.

ಬೇವು ಮತ್ತು ಜೇನುತುಪ್ಪ

ಬೇವು ಮತ್ತು ಜೇನುತುಪ್ಪ

- 1 ಟೀ ಚಮಚ ಜೇನುತುಪ್ಪ, ಚಿಟಕಿ ಅರಿಶಿನ, ಕೆಲವು ಹನಿ ಗುಲಾಬಿ ನೀರು ಮತ್ತು 1 ಟೀ ಚಮಚ ಬೇವಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಚರ್ಮವು ಕಲೆ ರಹಿತವಾಗಿ ಕಂಗೊಳಿಸುವುದು.

ತುಳಸಿ ಮತ್ತು ಬೇವು

ತುಳಸಿ ಮತ್ತು ಬೇವು

- 2 ಟೀ ಚಮಚ ತುಳಸಿ ಪಿಡಿ, 2 ಟೀ ಚಮಚ ಬೇವಿನ ಪುಡಿ ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಚರ್ಮವು ಸೋಂಕು ಮತ್ತು ಕಲೆ ರಹಿತವಾಗಿ, ಆಕರ್ಷಕ ತ್ವಚೆಯಿಂದ ಕಂಗೊಳಿಸುವುದು.

ಎಳ್ಳು ಮತ್ತು ಅರಿಶಿನ

ಎಳ್ಳು ಮತ್ತು ಅರಿಶಿನ

- ಎಳ್ಳನ್ನು 12 ಗಂಟೆಗಳ ಕಾಲ ನೆನೆಸಿ, ರುಬಬಿಕೊಳ್ಳಿ.

- ಎಳ್ಳಿನ ಪೇಸ್ಟ್‍ಗೆ ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಮತ್ತು ಚಿಟಕಿ ಅರಿಶಿನ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಚರ್ಮವು ಆಕರ್ಷಣೆಯಿಂದ ಕಂಗೊಳಿಸುವುದು.

ಲಿಂಬೆ ಮತ್ತು ಹಾಲಿನ ಕ್ರೀಮ್

ಲಿಂಬೆ ಮತ್ತು ಹಾಲಿನ ಕ್ರೀಮ್

ಲಿಂಬೆ ಮತ್ತು ಹಾಲಿನ ಕ್ರೀಮ್‌ನ ಮಾಸ್ಕ್ ಅನ್ನು ಹಚ್ಚಿಕೊಂಡರೆ ಬೆಳಿಗ್ಗೆ ಎದ್ದಾಗ ನೀವು ಕಾಂತಿಯುತ ತ್ವಚೆ ಪಡೆಯಬಹುದು. ಒಂದು ಚಮಚ ಲಿಂಬೆ ರಸ ಮತ್ತು ¼ ಚಮಚ ಹಾಲಿನ ಕ್ರೀಮ್ ತೆಗೆದುಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ತೊಳೆಯಿರಿ.

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡಿ ಬಿಗಿಗೊಳಿಸುವುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು. ಜೇನುತುಪ್ಪದೊಂದಿಗೆ ಸೇರಿಸಿದಾಗ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು. ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ.

ಹಸಿರು ಟೀ ಕುದಿಸಿ ಸೋಸಿದ ನೀರು

ಹಸಿರು ಟೀ ಕುದಿಸಿ ಸೋಸಿದ ನೀರು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

 ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ನಾಲ್ಕು ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ದಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ...

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ...

ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಆಲೂಗಡ್ಡೆ ಫೇಸ್ ಪ್ಯಾಕ್

ಆಲೂಗಡ್ಡೆ ಫೇಸ್ ಪ್ಯಾಕ್

ಒಂದು ಆಲೂಗಡ್ಡೆಯನ್ನು ಬೇಯಿಸಿ ಇದನ್ನು ಕಿವುಚಿ ಮತ್ತೆ ನೀರಿಗೆ ಬೆರೆಸಿ ಚೆನ್ನಾಗಿ ಕಲಕಿ ಮತ್ತೊಮ್ಮೆ ಕುದಿಸಿ. ಈ ನೀರು ತಣಿದ ಬಳಿಕ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಸಮಪ್ರಮಾಣದಲ್ಲಿ ಹಸಿ ಹಾಲನ್ನು ಬೆರೆಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಲ್ಲಿ ಹತ್ತಿಯುಂಡೆಯನ್ನು ಅದ್ದಿ ಮುಖದ ಚರ್ಮಕ್ಕೆ ನವಿರಾಗಿ ಹಚ್ಚಿ ಹತ್ತು ಅಥವಾ ಹದಿನೈದು ನಿಮಿಶ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಕಡಿಮೆ ವಯಸ್ಸಿನಲ್ಲಿಯೇ ಎದುರಾದ ನೆರಿಗೆಗಳನ್ನು ನಿವಾರಿಸಬಹುದು.

English summary

tips to get Fair And Pinkish Glowing Face At Home

There are some effective homemade face packs that will make your skin fair and also remove all spots and acne marks. These face packs will make your skin look younger and soft. Opt for natural homemade face packs for fairness that you can easily prepare at your home with natural home ingredients. These natural face packs for fair skin will make your skin permanently fair and glowing.