For Quick Alerts
ALLOW NOTIFICATIONS  
For Daily Alerts

  ರಾತ್ರಿ ಬೆಳಗಾಗುವುದರೊಳಗೆ ಸೌಂದರ್ಯ ವೃದ್ಧಿ!

  By Arshad
  |

  ರಾತ್ರಿ ಸಮಯದಲ್ಲಿ ನಡೆಯುವ ಹಲವಾರು ಅನೈಚ್ಛಿಕ ಕಾರ್ಯಗಳಲ್ಲಿ ಚರ್ಮದ ರಿಪೇರಿ ಕೆಲಸವೂ ಒಂದು. ಸತ್ತ ಜೀವಕೋಶಗಳು ಹೊರದೂಡಲ್ಪಟ್ಟು ಹೊಸ ಜೀವಕೋಶಗಳು ಹುಟ್ಟುಪಡೆಯುತ್ತವೆ. ಇದೇ ಕಾರಣಕ್ಕೆ ಕನಿಷ್ಠ ಎಂಟು ಗಂಟೆಗಳ ಗಾಢ ನಿದ್ದೆ ಅಗತ್ಯ. ಸರಿಯಾಗಿ ನಿದ್ದೆ ಪಡೆಯದ ವ್ಯಕ್ತಿಗಳ ತ್ವಚೆ ಜೋಲು ಬೀಳುವುದು ಹಾಗೂ ಕಾಂತಿರಹಿತವಾಗಿರುವುದು ಇದೇ ಕಾರಣಕ್ಕೆ. ಕೇವಲ ತ್ವಚೆ ಮಾತ್ರವಲ್ಲ, ಕೂದಲ ಹಾಗೂ ಒಟ್ಟಾರೆ ಆರೋಗ್ಯಕ್ಕೂ ನಿದ್ದೆ ಅಗತ್ಯವಾಗಿದೆ.

  ಆದ್ದರಿಂದ ನಿದ್ದೆಗೂ ಮುನ್ನ ತ್ವಚೆಗೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಅತ್ಯುತ್ತಮ ಆರೈಕೆ ಪಡೆಯಬಹುದು. ಮರುದಿನ ಬೆಳಿಗ್ಗೆದ್ದಾಗ ನೈಸರ್ಗಿಕ ಕಾಂತಿ, ಸೆಳೆತ ಹಾಗೂ ಸಹಜವರ್ಣದಿಂದ ಕಂಗೊಳಿಸುವ ತ್ವಚೆ ಪಡೆಯಬಹುದು ಹಾಗೂ ಇಡಿಯ ದಿನ ಇದರ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸೌಂದರ್ಯ ಕಾಪಾಡಲು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂತಹದ್ದೊಂದು ನಿಯಮವೆಂದರೆ ರಾತ್ರಿ ಮಲಗುವ ಮುನ್ನ ನಿಮ್ಮ ಮೇಕಪ್ ಅನ್ನು ಸಂಪೂರ್ಣವಾಗಿ ನಿವಾರಿಸಿಯೇ ಮಲಗಬೇಕು.

  ಒಂದು ವೇಳೆ ಮೇಕಪ್ ನಿವಾರಿಸದೇ ಮಲಗಿದರೆ ತ್ವಚೆಯ ಸೂಕ್ಷ್ಮರಂಧ್ರಗಳ ಮೂಲಕ ತ್ವಚೆಗೆ ಉಸಿರಾಡಲು ಸಾಧ್ಯವಾಗದೇ ಹೋಗುತ್ತದೆ ಇದರಿಂದ ತ್ವಚೆಗೆ ಘಾಸಿಯುಂಟಾಗುತ್ತದೆ. ಹೊರಹೋಗಬೇಕಾದ ಕಲ್ಮಶಗಳು ಹೊರಹೋಗದೇ ಒಳಗಡೆಯೇ ಇದ್ದು ಸೋಂಕು ಹರಡುತ್ತದೆ. ಈ ಸೋಂಕುಗಳು ಮೊಡವೆ ಹಾಗೂ ಇತರ ಚರ್ಮದ ತೊಂದರೆಗಳಿಗೆ ಕಾರಣವಾಗುತ್ತದೆ. ಬನ್ನಿ, ಈ ಸುಲಭ ಕಿವಿಮಾತುಗಳ ಬಗ್ಗೆ ಅರಿಯೋಣ...

  ತ್ವಚೆಯ ಸೌಂದರ್ಯಕ್ಕೆ ಸಲಹೆಗಳು

  1. ಕಣ್ಣುಗಳು ಊದಿಕೊಳ್ಳುವುದನ್ನು ತಡೆಯಲು

  1. ಕಣ್ಣುಗಳು ಊದಿಕೊಳ್ಳುವುದನ್ನು ತಡೆಯಲು

  ಬೆಳಿಗ್ಗೆದ್ದಾಗ ಕಣ್ಣುಗಳ ಕೆಳಭಾಗ ಊದಿಕೊಳ್ಳುವುದನ್ನು ತಡೆಯಲು ಇದು ಸುಲಭವಾದ ವಿಧಾನವಾಗಿದೆ. ಮಲಗುವ ಮುನ್ನ ನಿಮ್ಮ ಕುತ್ತಿಗೆಯ ಹಿಂದೆ ತೆಳ್ಳಗಿನ, ಅತಿ ಮೃದುವಾದ ಮತ್ತು ಆರಾಮದಾಯಕವಾದ ತಲೆದಿಂಬೊಂದನ್ನು ಇರಿಸಿ ಬೆನ್ನ ಮೇಲೆ ಮಲಗಿಕೊಳ್ಳಿ. ಇದರಿಂದ ಮಲಗಿದಾಗ ತಲೆ ಕೊಂಚವೇ ಬೆನ್ನಿಗಿಂತಲೂ ಕೆಳಗಿರಬೇಕು. ಈ ಭಂಗಿಯಲ್ಲಿ ಮಲಗಿದಾಗ ಕಣ್ಣುಗಳಿಗೆ ಹೆಚ್ಚು ರಕ್ತ ಹಾಗೂ ದುಗ್ಧರಸಗಳು ಲಭಿಸುತ್ತವೆ ಹಾಗೂ ಕಣ್ಣುಗಳ ಕೆಳಭಾಗದಲ್ಲಿ ಊತಕ್ಕೆ ಕಾರಣವಾದ ದ್ರವಗಳು ಇಳಿದು ಹೋಗುತ್ತವೆ.

  2. ಕಣ್ಣುರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿ

  2. ಕಣ್ಣುರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿ

  ರಾತ್ರಿ ಮಲಗುವ ಮುನ್ನ ಕಣ್ಣುರೆಪ್ಪೆಗಳಿಗೆ ಹರಳೆಣ್ಣೆಯನ್ನು ಹಚ್ಚಿ ಮಲಗುವ ಮೂಲಕ ರೆಪ್ಪೆಗಳು ಹೆಚ್ಚು ದಪ್ಪ ಹಾಗೂ ಬಲಯುತವಾಗುತ್ತವೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ಕಣ್ಣುರೆಪ್ಪೆಯನ್ನು ಬಲಪಡಿಸುತ್ತವೆ ಹಾಗೂ ರೆಪ್ಪೆಗಳು ಶಿಥಿಲವಾಗುವುದರಿಂದ ತಡೆಯುತ್ತವೆ.

  3. ಕೂದಲ ಸೊಂಪನ್ನು ಒಂದೇ ರಾತ್ರಿಯಲ್ಲಿ ಹೆಚ್ಚಿಸಿ

  3. ಕೂದಲ ಸೊಂಪನ್ನು ಒಂದೇ ರಾತ್ರಿಯಲ್ಲಿ ಹೆಚ್ಚಿಸಿ

  ರಾತ್ರಿ ಮಲಗುವ ಮುನ್ನ ತಲೆಗೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಹಾಗೇ ಬಿಡಿ. ನಿಮ್ಮ ಕೂದಲು ಒಣದಾಗಿದ್ದರೆ ಕಂಡೀಶನರ್ ಸಹಾ ಉಪಯೋಗಿಸಬಹುದು. ಬಳಿಕ ಶವರ್ ಕ್ಯಾಪ್ ಅಥವಾ ತೆಳುವಾದ ಬಟ್ಟೆಯನ್ನು ಕೂದಲನ್ನು ಆವರಿಸುವಂತೆ ಧರಿಸಿಕೊಂಡು ಮಲಗಿ. ಮರುದಿನ ಬೆಳಿಗ್ಗೆದ್ದು ನಿತ್ಯದ ಶಾಂಪೂವಿನೊಂದಿಗೆ ಸ್ನಾನ ಮಾಡಿ. ಇದರಿಂದ ನಿಮ್ಮ ಕೂದಲು ಮೃದು ಹಾಗೂ ಕಾಂತಿಯುಕ್ತವಾಗುತ್ತದೆ.

  4. ಚುಂಬನಕ್ಕೆ ಪ್ರೇರೇಪಿಸುವ ತುಟಿಗಳಿಗಾಗಿ

  4. ಚುಂಬನಕ್ಕೆ ಪ್ರೇರೇಪಿಸುವ ತುಟಿಗಳಿಗಾಗಿ

  ರಾತ್ರಿ ಮಲಗುವ ಮುನ್ನ ಶಿಯಾ ಬಟರ್ ಅನ್ನು ತೆಳುವಾಗಿ ತುಟಿಗಳಿಗೆ ಹಚ್ಚಿಕೊಳ್ಳಿ. ಇದರಿಂದ ತುಟಿಗಳಿಗೆ ಅಗತ್ಯವಾದ ತೇವ ಮತ್ತು ಆರ್ದ್ರತೆ ಲಭಿಸುತ್ತದೆ ಹಾಗೂ ಮರುದಿನವಿಡೀ ತಾಜಾ ಇರಲು ನೆರವಾಗುತ್ತದೆ. ಶಿಯಾ ಬಟರ್ ನೊಂದಿಗೆ ಕೆಲವು ಹನಿ ಗುಲಾಬಿಯ ಅವಶ್ಯಕ ಎಣ್ಣೆಯ ಕೆಲವು ತೊಟ್ಟುಗಳನ್ನೂ ಸೇಸಿರಬಹುದು ಇದರಿಂದ ತುಟಿಗಳು ಇನ್ನಷ್ಟು ಮೃದುವಾಗುತ್ತವೆ

  5. ಆರೋಗ್ಯಕರ ಉಗುರು ಹಾಗೂ ಉಗುರುಗಳ ಬುಡಕ್ಕೆ

  5. ಆರೋಗ್ಯಕರ ಉಗುರು ಹಾಗೂ ಉಗುರುಗಳ ಬುಡಕ್ಕೆ

  ರಾತ್ರಿ ಮಲಗುವ ಮುನ್ನ ಉಗುರುಗಳ ಬುಡ ಹಾಗೂ ಉಗುರುಗಳ ಮೇಲೆ ವಿಟಮಿನ್ ಇ ಎಣ್ಣೆ ಮತ್ತು ಹರಳೆಣ್ಣೆಯ ಮಿಶ್ರಣವನ್ನು ಹಚ್ಚಿ. ಇದರಿಂದ ಉಗುರುಗಳು ದೃಢವಾಗುತ್ತವೆ ಹಾಗೂ ಉಗುರಬುಡ ಮೃದುವಾಗಿ ಆರೋಗ್ಯಕರ ಉಗುರು ಬೆಳೆಯಲು ನೆರವಾಗುತ್ತದೆ.

  6. ಹಲ್ಲುಗಳನ್ನು ಬಿಳಿಯಾಗಿಸಲು

  6. ಹಲ್ಲುಗಳನ್ನು ಬಿಳಿಯಾಗಿಸಲು

  ಹಲ್ಲುಗಳನ್ನು ಇನ್ನಷ್ಟು ಬಿಳಿಯಾಗಿಸಲು ಹಾಗೂ ಮರುದಿನ ಆತ್ಮವಿಶ್ವಾಸದ ನಗೆ ಬೀರಲು ರಾತ್ರಿ ಮಲಗುವ ಮುನ್ನ ಬೆರಳಿನಲ್ಲಿ ಕೊಂಚ ಅಡುಗೆ ಸೋಡಾವನ್ನು ತೆಗೆದುಕೊಂಡು ಹಲ್ಲುಗಳ ಮತ್ತು ಒಸಡುಗಳ ಮೇಲೆ ಸುಮಾರು ಐದು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ನಿತ್ಯವೂ ರಾತ್ರಿ ಮಲಗುವ ಮುನ್ನ ಈ ವಿಧಾನ ಅನುಸರಿಸಿದರೆ ಬಿಳಿಯಾದ ಅಥವಾ ನಿಮ್ಮ ನೈಸರ್ಗಿಕ ವರ್ಣದ ಹಲ್ಲುಗಳು ಹೊಳೆಯುತ್ತವೆ.

  ಹಲ್ಲುಗಳು ಹಳದಿಯಾಗಿವೆ ಎಂದು ಕೊರಗಬೇಡಿ,ಬೆಳ್ಳಗಾಗಲು ಹೀಗೆ ಮಾಡಿ...

  7. ರಾತ್ರಿ ಮಲಗುವ ಮುನ್ನ ಮೇಕಪ್ ನಿವಾರಿಸಿ

  7. ರಾತ್ರಿ ಮಲಗುವ ಮುನ್ನ ಮೇಕಪ್ ನಿವಾರಿಸಿ

  ರಾತ್ರಿ ಮಲಗುವ ಮುನ್ನ ಮೇಕಪ್ ನಿವಾರಿಸದೇ ಇದ್ದರೆ ಇದು ಚರ್ಮಕ್ಕೆ ಉಸಿರಾಡಲು ಅವಕಾಶ ಮಾಡಿಕೊಡುವುದಿಲ್ಲ ಅಲ್ಲದೇ ಇದರ ಹಾನಿಕಾರಕ ಕಣಗಳು ಚರ್ಮದ ಸೂಕ್ಷ್ಮರಂದ್ರಗಳಿಂದ ಇಳಿದು ಚರ್ಮದಾಳದಲ್ಲಿ ಸೋಂಕು ಹರಡಿಸಬಹುದು ಹಾಗೂ ಮೊಡವೆಗಳಿಗೆ ಕಾರಣವಾಗಬಹುದು. ಮೇಕಪ್ ನಲ್ಲಿರುವ ರಾಸಾಯನಿಕಗಳು ತ್ವಚೆಯ ಹೊರಪದರದ ಬಣ್ಣ ಗಾಢವಾಗಲೂ ಕಾರಣವಾಗಬಹುದು. ಆದ್ದರಿಂದ ರಾತ್ರಿ ಎಷ್ಟೇ ಮನ ಒಪ್ಪದೇ ಇದ್ದರೂ ಸರಿ, ನಿವಾರಿಸಿಯೇ ಮಲಗಬೇಕು. ಇದರಿಂದ ರಾತ್ರಿಹೊತ್ತಿನಲ್ಲಿ ಚರ್ಮ ಪುನರ್ಜೀವನ ಪಡೆಯಲು ನೆರವಾಗುತ್ತದೆ.

  8. ಕ್ಲೆನ್ಸರ್

  8. ಕ್ಲೆನ್ಸರ್

  ಆಕರ್ಷಕ ತ್ವಚೆ ಬೇಕೆಂದು ಬಯಸುವುದಾದರೆ ಪ್ರತಿನಿತ್ಯ ಸಾಯಂಕಾಲ ಅಥವಾ ರಾತ್ರಿ ಕ್ಲೆನ್ಸಿಂಗ್ ಮಾಡಿದರೆ ಒಳ್ಳೆಯದು. ಕ್ರೀಮ್ ಹಚ್ಚಿ ಹಾಗೇ ಮಲಗಿದರೆ ಅದರಲ್ಲಿ ಕೆಮಿಕಲ್ ಇರುವುದರಿಂದ ತ್ವಚೆಗೆ ಅಷ್ಟು ಒಳ್ಳೆಯದಲ್ಲ. ಆದ್ದರಿಂದ ಕ್ಲೆನ್ಸಿಂಗ್ ಮಾಡಿದರೆ ತ್ವಚೆ ರಂಧ್ರಗಳು ಉಸಿರಾಡಲು ಸಹಕಾರಿಯಾಗಿದೆ.

  9. ಸರಿಯಾಗಿ ನೀರು ಕುಡಿದು ಮಲಗಿ

  9. ಸರಿಯಾಗಿ ನೀರು ಕುಡಿದು ಮಲಗಿ

  ತ್ವಚೆ ಆರೋಗ್ಯಕ್ಕೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೆ 10 ಗ್ಲಾಸ್ ನಿರು ಕುಡಿಯಬೇಕು. ಮಲಗುವ ಮುಂಚೆ ಒಂದು ಲೋಟ ನೀರು ಕುಡಿದು ಮಲಗುವುದು ಒಳ್ಳೆಯದು.

  10. ರಾತ್ರಿ ಮಲಗುವ ಮುನ್ನ ಓಟ್ಸ್-ಮೊಸರಿನ ಫೇಸ್ ಪ್ಯಾಕ್ ಹಚ್ಚಿ

  10. ರಾತ್ರಿ ಮಲಗುವ ಮುನ್ನ ಓಟ್ಸ್-ಮೊಸರಿನ ಫೇಸ್ ಪ್ಯಾಕ್ ಹಚ್ಚಿ

  ಓಟ್ಸ್ ಮತ್ತು ಮೊಸರಿನ ಮುಖಲೇಪ ಕೊಂಚ ಓಟ್ಸ್ ರವೆಯನ್ನು ಒಣದಾಗಿಯೇ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಪುಡಿ ಮಾಡಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ಚೆನ್ನಾಗಿ ಬೆರೆಸಿ. ಬಳಿಕ ಒಂದು ಚಿಕ್ಕ ಚಮಚ ಜೇನು ಮತ್ತು ಅರ್ಧ ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚುವಂತೆ ತೆಳುವಾಗುವಷ್ಟು ನೀರು ಸೇರಿಸಿ. ಈ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

  11. ಚಂದನದ ಫೇಸ್ ಪ್ಯಾಕ್

  11. ಚಂದನದ ಫೇಸ್ ಪ್ಯಾಕ್

  ಗಂಧದ ಕೊರಡನ್ನು ನೀರಿನೊಂದಿಗೆ ತೇದಿದ ಲೇಪವನ್ನು ಸಂಗ್ರಹಿಸಿ. ಮುಖದಲ್ಲಿ ಮೊಡವೆಗಳಿದ್ದರೆ ನೀರಿನ ಬದಲು ಹಸಿ ಹಾಲು ಉಪಯೋಗಿಸಿ. ಈ ಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆದ್ದ ಬಳಿಕ ತಣ್ಣೀನಿಂದ ತೊಳೆದುಕೊಳ್ಳಿ. ಒಂದು ವೇಳೆ ಗಂಧದ ಕೊರಡು ಇಲ್ಲದೇ ಇದ್ದರೆ ಉತ್ತಮ ಗುಣಮಟ್ಟದ ಚಂದನದ ಪುಡಿಯನ್ನೂ ಉಪಯೋಗಿಸಬಹುದು. ಈ ಪುಡಿಯನ್ನು ಕೊಂಚ ಹಾಲು, ಲ್ಯಾವೆಂಡರ್ ಎಣ್ಣೆ ಮತ್ತು ಎರಡು ಚಿಕ್ಕಚಮಚ ಕಡ್ಲೆಹಿಟ್ಟಿನೊಂದಿಗೆ ಬೆರೆಸಿ ಮಿಶ್ರಣ ಮಾಡಿ ಉಪಯೋಗಿಸಿ.

  12. ಗೊಂಡೆ ಹೂವಿನ ಫೇಸ್ ಪ್ಯಾಕ್

  12. ಗೊಂಡೆ ಹೂವಿನ ಫೇಸ್ ಪ್ಯಾಕ್

  ಈ ಹೂವಿನಲ್ಲಿ ಪ್ರತಿಜೀವಕ ಹಾಗೂ ಬ್ಯಾಕ್ಟೀರಿಯಾನಿವಾರಕ ಗುಣಗಳಿರುತ್ತವೆ. ಇವು ನಿಮ್ಮ ಚರ್ಮವನ್ನು ಕೋಮಲವಾಗಿಸಲು ನೆರವಾಗುತ್ತವೆ. ಈ ಹೂವಿನ ಎಸಳುಗಳನ್ನು ಅರೆದು ತಯಾರಿಸಿದ ಮುಖಲೇಪವನ್ನು ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆದ್ದು ತಣ್ಣೀನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಮಾತ್ರ ಅನುಸರಿಸಿದರೆ ಗರಿಷ್ಟ ಫಲಿತಾಂಶವನ್ನು ಪಡೆಯಬಹುದು.

  13. ಹಲಸಿನ ಹಣ್ಣಿನ ಮಾಸ್ಕ್!

  13. ಹಲಸಿನ ಹಣ್ಣಿನ ಮಾಸ್ಕ್!

  ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿ, ಅದೇ ಕ್ರಮೇಣ ನೆರಿಗೆಗಳಂತೆ ಕಾಣಿಸಿಕೊಳ್ಳೋದಿದೆ. ನಿಮ್ಮ ಸೌಂದರ್ಯ ಹಾಳು ಮಾಡುವ ಇಂತಹ ನೆರಿಗೆಗಳ ನಿವಾರಣೆಗೆ ನೀವು ಹಲಸಿನ ಹಣ್ಣನ್ನು ಬಳಸಿಕೊಳ್ಳಬಹುದು. ಕೆಲವು ಹಲಸಿನ ಹಣ್ಣಿನ ತುಂಡು, ತಣ್ಣನೆಯ ಹಾಲು ಮಿಕ್ಸ್ ಮಾಡಿ ಅಪ್ಲೈ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಅಪ್ಲೈ ಮಾಡಿ. ಇದರಿಂದ ಕಣ್ಣಿಗೆ ತಂಪು ಫೀಲಿಂಗ್ ಆಗೋದು ಮಾತ್ರವಲ್ಲ, ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತಲಿನ ನೆರಿಗೆಗಳು ಕಡಿಮೆಯಾಗುತ್ತದೆ.

  English summary

  Tips To Get Beautiful Skin Overnight

  Night is a time when your skin is repaired and rejuvenated. This is the reason it is said to have a beauty sleep for at least eight hours during night. People who don't get proper sleep have dull and sagged skin. Sleep is also important for your hair and generally speaking for your overall health.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more