For Quick Alerts
ALLOW NOTIFICATIONS  
For Daily Alerts

ಒಣ ತ್ವಚೆ ಹೊಂದಿರುವವರಿಗೆ, ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದುಗಳು

By Jaya Subramanya
|

ಚಳಿಗಾಲ ಬಂತೆಂದರೆ ಸಾಕು ತಣ್ಣಗಿನ ಹವಾಮಾನವನ್ನು ಆಸ್ವಾದಿಸುವುದರ ಜೊತೆಗೆ ಚಳಿಗಾಲ ನೀಡುವ ಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ತ್ವಚೆಯು ತನ್ನ ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಪೋಷಣೆಯನ್ನು ನಮ್ಮ ತ್ವಚೆಗೆ ನಾವು ಮಾಡಬೇಕಾಗುತ್ತದೆ. ತ್ವಚೆಯ ಬಿರುಕು, ಶುಷ್ಕತೆ, ತುರಿಕೆ , ಕಲೆಗಳು ಮೂಡುವುದು ಇವೇ ಮೊದಲಾದ ತ್ವಚೆಯ ಸಮಸ್ಯೆಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಹೆಚ್ಚಿನ ಪೋಷಣೆಯನ್ನು ನಿಮ್ಮ ತ್ವಚೆಯ ವಿಷಯದಲ್ಲಿ ನೀವು ಮಾಡಬೇಕಾಗುತ್ತದೆ. ಹಾಗಿದ್ದರೆ ತ್ವಚೆಯನ್ನು ಮಾಯಿಶ್ಚರೈಸರನ್ನಾಗಿ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಈ ಪ್ರಯೋಗಗಳನ್ನು ನೀವು ಮನೆಯಲ್ಲೇ ಮಾಡಬಹುದಾಗಿದೆ.

beauty tips in kannada

ಹೌದು ತ್ವಚೆಗೆ ಹೆಚ್ಚಿನ ನೈಸರ್ಗಿಕ ವಿಧಾನಗಳನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ತ್ವಚೆಗೆ ಸೂಕ್ತ ಪೋಷಣೆಯನ್ನು ನೀಡಬಹುದಾಗಿದೆ. ಈ ವಿಚಾರದಲ್ಲಿ ಹಣ್ಣುಗಳು ಹೆಚ್ಚು ಪ್ರಭಾವಶಾಲಿಯಾಗಿದೆ. ರಾಸಾಯನಿಕ ಅಂಶಗಳ ಬದಲಿಗೆ ನೈಸರ್ಗಿಕ ಉತ್ಪನ್ನಗಳಾದ ಪ್ರಕೃತಿದತ್ತ ಮೂಲಗಳನ್ನು ಉಪಯೋಗಿಸುವುದು ನಿಮ್ಮ ತ್ವಚೆಯನ್ನು ಕಾಂತಿಯುಕ್ತವನ್ನಾಗಿಸುತ್ತದೆ ಮತ್ತು ಚಳಿಗಾಲದ ಹಲವು ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತದೆ. ಹಾಗಿದ್ದರೆ ಮನೆಯಲ್ಲೇ ಮಾಯಿಶ್ಚರೈಸಿಂಗ್ ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಬಾಳೆಹಣ್ಣು ಅವೊಕಾಡೊ ಮತ್ತು ಪಪ್ಪಾಯ ಪೇಸ್ಟ್

ಬಾಳೆಹಣ್ಣು ಅವೊಕಾಡೊ ಮತ್ತು ಪಪ್ಪಾಯ ಪೇಸ್ಟ್

ಬಾಳೆಹಣ್ಣು ಪೊಟಾಶಿಯಂ ಅನ್ನು ಹೊಂದಿದ್ದು, ವಿಟಮಿನ್ ಇ, ವಿಟಮಿನ್ ಬಿ ಅಂಶಗಳನ್ನು ಒಳಗೊಂಡಿದೆ. ಇದು ಒಣ ತ್ವಚೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ನೀರಿನ ಅಂಶ ಇದರಲ್ಲಿ ಅಧಿಕವಾಗಿದೆ ಇದು ತ್ವಚೆಯನ್ನು ಹೈಡ್ರೇಟ್ ಆಗಿರಿಸುತ್ತದೆ.

ಅವೊಕಾಡೊದಲ್ಲಿ ಮಿನರಲ್ ಅಂಶಗಳಿವೆ. ಅಂದರೆ ಐರನ್, ಕ್ಯಾಲ್ಶಿಯಂ, ಪೊಟಾಶಿಯಂ, ಕಾಪರ್, ಮೆಗ್ನೇಶಿಯಂ ಮೂಲಗಳಿವೆ. ಇದು ತ್ವಚೆಗೆ ಅತ್ಯುತ್ತಮವಾಗಿದೆ. ಅಂತೆಯೇ ಇದು ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತದೆ.

ಮಾಡುವ ವಿಧಾನ:

ಅವೊಕಾಡೊ, ಪಪ್ಪಾಯ ಬಾಳೆಹಣ್ಣನ್ನು ಹೋಳುಗಳನ್ನಾಗಿ ಮಾಡಿಕೊಳ್ಳಿ

ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ

ಹದಿನೈದು ನಿಮಿಷಗಳ ತರುವಾಯ ಈ ಪೇಸ್ಟ್ ಅನ್ನು ತೊಳೆದುಕೊಳ್ಳಿ

ದಿನಕ್ಕೊಮ್ಮೆಯಾದರೂ ಇದನ್ನು ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ

ಜೇನು, ಮೊಟ್ಟೆಯ ಹಳದಿ ಭಾಗ ಮತ್ತು ಹಾಲಿನ ಪುಡಿಯ ಪೇಸ್ಟ್

ಜೇನು, ಮೊಟ್ಟೆಯ ಹಳದಿ ಭಾಗ ಮತ್ತು ಹಾಲಿನ ಪುಡಿಯ ಪೇಸ್ಟ್

ತ್ವಚೆಯ ನೀರಿನಂಶವನ್ನು ಪೋಷಿಸುವ ಅಂಶವನ್ನು ಜೇನು ಒಳಗೊಂಡಿದೆ. ಇದು ಮಾಯಿಶ್ಚರೈಸ್ ಮಾಡುತ್ತದೆ ಅಂತೆಯೇ ಮೊಟ್ಟೆಯ ಹಳದಿ ಭಾಗ ಮಲ್ಟಿವಿಟಮಿನ್ ಅಂಶಗಳನ್ನು ಒಳಗೊಂಡಿದೆ. ಹಾಗೂ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ.

ಮಾಡುವ ವಿಧಾನ:

ಒಂದು ಬೌಲ್‌ನಲ್ಲಿ ಮೊಟ್ಟೆಯ ಹಳದಿ ಭಾಗ, ಒಂದು ಚಮಚ ಜೇನು, ಎರಡು ಚಮಚ ಹಾಲಿನ ಪುಡಿಯನ್ನು ಹಾಕಿಕೊಳ್ಳಿ

ಇದನ್ನು ಸಂಪೂರ್ಣವಾಗಿ ಮಿಶ್ರ ಮಾಡಿಕೊಳ್ಳಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಅನ್ನು ಹಚ್ಚಿ

ಹದಿನೈದು ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರಕ್ಕೆ ಎರಡು ಬಾರಿ ಇದನ್ನು ಹಚ್ಚಿ

ಆಲೀವ್ ಆಯಿಲ್

ಆಲೀವ್ ಆಯಿಲ್

ಆಲೀವ್ ಆಯಿಲ್ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ. ಇದು ಸೂರ್ಯನ ಹಾನಿಕಾರಕ ಅಂಶಗಳಿಂದ ನಿಮ್ಮ ತ್ವಚೆಯನ್ನು ಸಂರಕ್ಷಿಸುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು ತ್ವಚೆ ಒಣಗುವುದರಿಂದ ಸಂರಕ್ಷಿಸುತ್ತದೆ. ಇದು ತ್ವಚೆಯ ಮಾಯಿಶ್ಚರೈಸ್ ಅನ್ನು ಲಾಕ್ ಮಾಡುತ್ತದೆ.

ಮಾಡುವ ವಿಧಾನ:

ಮೂರು ಚಮಚ ಆಲೀವ್ ಆಯಿಲ್ ಅನ್ನು ಬೌಲ್‌ನಲ್ಲಿ ತೆಗೆದುಕೊಳ್ಳಿ

ನಿಮ್ಮ ತ್ವಚೆಗೆ ಹತ್ತು ನಿಮಿಷ ಮಸಾಜ್ ಮಾಡಿಕೊಳ್ಳಿ

ತ್ಚಚೆಯಲ್ಲಿ ಎಣ್ಣೆಯನ್ನು ಹಾಗೆಯೇ ಬಿಡಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಇನ್ನಷ್ಟು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ರಾತ್ರಿ ಮಲಗುವ ಮುನ್ನ ಆಲೀವ್ ಆಯಿಲ್‌ನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ

ಅಲೊವೇರಾ

ಅಲೊವೇರಾ

ತ್ವಚೆಗೆ ಉತ್ತಮವಾಗಿರುವ ಮಾಯಿಶ್ಚರೈಸರ್ ಆಗಿದೆ ಅಲೊವೇರಾ. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಎಂಜೀಮ್‌ಗಳನ್ನು ಪಡೆದುಕೊಂಡಿವೆ. ಇದು ತ್ವಚೆಯನ್ನು ಮೃದುವಾಗಿಸುತ್ತದೆ.

ಮಾಡುವ ವಿಧಾನ:

ಅಲೊವೇರಾ ಜ್ಯೂಸ್ ಅನ್ನು ಹೊರತೆಗೆಯಿರಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಜ್ಯೂಸ್ ಅನ್ನು ಹಚ್ಚಿಕೊಳ್ಳಿ

ಐದರಿಂದ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ನಿತ್ಯವೂ ಇದನ್ನು ಬಳಸಿ ಮೃದುವಾದ ತ್ವಚೆಯನ್ನು ಪಡೆದುಕೊಳ್ಳಿ

ತೆಂಗಿನ ಹಾಲು

ತೆಂಗಿನ ಹಾಲು

ತೆಂಗಿನ ಹಾಲು ವಿಟಮಿನ್ ಇ, ಸಿ, ಮತ್ತು ಐರನ್ ಅಂಶವನ್ನು ಒಳಗೊಂಡಿದೆ. ಇದು ತ್ವಚೆಗೆ ಅತ್ಯಂತ ಉತ್ತಮವಾದುದು. ಇದು ತ್ವಚೆಯಲ್ಲಿರುವ ಹಾನಿಕಾರಕ ಅಂಶಗಳನ್ನು ನಿವಾರಿಸಿ ತ್ವಚೆಗೆ ಸೂಕ್ತ ಪೋಷಣೆಯನ್ನು ನೀಡುತ್ತದೆ.

ಮಾಡುವ ವಿಧಾನ:

ನಿಮ್ಮ ಮುಖಕ್ಕೆ ತೆಂಗಿನ ಹಾಲನ್ನು ಹಚ್ಚಿಕೊಂಡು ರಾತ್ರಿ ಪೂರ್ತಿ ಹಾಗೆಯೇ ಬಿಡಿ

ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಪ್ರತಿದಿನ ಇದನ್ನು ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಮುಳ್ಳುಸೌತೆ

ಮುಳ್ಳುಸೌತೆ

ಮುಳ್ಳು ಸೌತೆ ವಿಟಮಿನ್ ಎ, ಇ, ಐರನ್, ಪೊಟಾಶಿಯಂ, ಮೆಗ್ನೇಶಿಯಂ, ಫೋಲೆಟ್, ಸಿಲಿಕಾ ಅಂಶಗಳನ್ನು ಒಳಗೊಂಡಿದೆ. ಇದು ಒಣ ತ್ವಚೆಯನ್ನು ಪೋಷಿಸಲು ಅನುಕೂಲಕರವಾಗಿದೆ. ಇದು ತ್ವಚೆಯನ್ನು ಉತ್ತಮಗೊಳಿಸುತ್ತದೆ.

ಮಾಡುವ ವಿಧಾನ:

ಮುಳ್ಳು ಸೌತೆಯನ್ನು ಸಣ್ಣ ತುಂಡುಗಳನ್ನಾಗಿ ಹಚ್ಚಿಕೊಳ್ಳಿ

ಇದನ್ನು ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಳ್ಳಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಜ್ಯೂಸ್ ಹಚ್ಚಿ

ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

ನಿತ್ಯವೂ ಇದನ್ನು ಹಚ್ಚಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ

ಓಟ್‌ಮೀಲ್ ಮತ್ತು ಬಾಳೆಹಣ್ಣು ಪೇಸ್ಟ್

ಓಟ್‌ಮೀಲ್ ಮತ್ತು ಬಾಳೆಹಣ್ಣು ಪೇಸ್ಟ್

ಓಟ್‌ಮೀಲ್‌ನಲ್ಲಿ ಸಪೊನಿನ್ಸ್ ಅಂಶವಿದ್ದು ಇದು ಒಣ ಕೋಶಗಳನ್ನು ಪೋಷಿಸುತ್ತದೆ ಮತ್ತು ಮೃದುವಾದ ರಚನೆಯನ್ನು ತ್ವಚೆಗೆ ಪೂರೈಕೆ ಮಾಡುತ್ತದೆ. ಅಂತೆಯೇ ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ಚಚೆಯನ್ನು ರಕ್ಷಿಸುತ್ತದೆ.

ಮಾಡುವ ವಿಧಾನ

ಬಾಳೆಹಣ್ಣನ್ನು ಬೌಲ್‌ನಲ್ಲಿ ತೆಗೆದುಕೊಳ್ಳಿ

ಇದಕ್ಕೆ ಎರಡು ಚಮಚ ಓಟ್‌ಮೀಲ್ ಅನ್ನು ಸೇರಿಸಿ ಸ್ವಲ್ಪ ಬಿಸಿನೀರಿನಲ್ಲಿ ಜ್ಯೂಸ್‌ನಂತೆ ಮಾಡಿಕೊಳ್ಳಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಮಿಶ್ರಣವನ್ನು ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

ಸಾದಾ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಎರಡು ಮೂರು ಬಾರಿ ಈ ಕ್ರಿಯೆಯನ್ನು ಅನುಸರಿಸಿ

ಗ್ಲಿಸರಿನ್ ಮತ್ತು ರೋಸ್ ವಾಟರ್

ಗ್ಲಿಸರಿನ್ ಮತ್ತು ರೋಸ್ ವಾಟರ್

ತ್ವಚೆಯ ಮಾಯಿಶ್ಚರೈಸರ್ ಅನ್ನು ಲಾಕ್ ಮಾಡುವ ಅಂಶವನ್ನು ಗ್ಲಿಸರಿನ್ ಒಳಗೊಂಡಿದೆ. ರೋಸ್ ವಾಟರ್ ಹೆಚ್ಚು ಸಮಯದವರೆಗೆ ತ್ವಚೆಗೆ ಮಾಯಿಶ್ಚರೈಸರ್ ಅನ್ನು ಪೂರೈಸುತ್ತದೆ.

ಮಾಡುವ ವಿಧಾನ

ಒಂದು ಚಮಚ ಗ್ಲಿಸರಿನ್ ಅನ್ನು ಒಂದು ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ

ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಮೂವ್ವತ್ತು ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ

ನಿತ್ಯವೂ ಈ ಕ್ರಿಯೆಯನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಿ

ಸ್ಟ್ರಾಬೆರ್ರಿ ಮತ್ತು ಗ್ಲಿಸರಿನ್ ಮಿಶ್ರಣ

ಸ್ಟ್ರಾಬೆರ್ರಿ ಮತ್ತು ಗ್ಲಿಸರಿನ್ ಮಿಶ್ರಣ

ಸ್ಟ್ರಾಬೆರ್ರಿಯು ವಿಟಮಿನ್ ಸಿ ಅಂಶವನ್ನು ಒಳಗೊಂಡಿದೆ ಮತ್ತು ಇದು ತ್ವಚೆಯ ನೆರಿಗೆಯನ್ನು ಕಡಿಮೆ ಮಾಡುತ್ತದೆ. ಇದು ಆಲ್ಫಾ - ಹೈಡ್ರೋಕ್ಸಿಲಿಕ್ ಆಸಿಡ್ ಅನ್ನು ಹೊಂದಿದ್ದು ಮೃತಕೋಶಗಳನ್ನು ನಿವಾರಿಸುತ್ತದೆ. ಸ್ಟ್ರಾಬೆರ್ರಿಯು ತ್ವಚೆಗೆ ಅತ್ಯುತ್ತಮ ಟೋನರ್ ಆಗಿದೆ.

ಮಾಡುವ ವಿಧಾನ

ಬ್ಲೆಂಡರ್‌ನಲ್ಲಿ ಅರ್ಧದಷ್ಟು ಸ್ಟ್ರಾಬೆರ್ರಿಯನ್ನು ತೆಗೆದುಕೊಂಡು ಜ್ಯೂಸ್ ಮಾಡಿಕೊಳ್ಳಿ

ಇದಕ್ಕೆ ಎರಡು - ಮೂರು ಚಮಚ ಗ್ಲಿಸರಿನ್ ಸೇರಿಸಿ

ಡ್ರೈ ತ್ವಚೆಗೆ ಇದನ್ನು ಹಚ್ಚಿ

ಹತ್ತರಿಂದ - ಹದಿನೈದು ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ನಿತ್ಯವೂ ಈ ಕ್ರಿಯೆಯನ್ನು ಅನುಸರಿಸಿ

ಅರಿಶಿನ, ಜೇನು ಮತ್ತು ಆಲೀವ್ ಆಯಿಲ್

ಅರಿಶಿನ, ಜೇನು ಮತ್ತು ಆಲೀವ್ ಆಯಿಲ್

ಅರಿಶಿನವು ಕರ್‌ಕ್ಯೂಮಿನ್ ಅನ್ನು ಒಳಗೊಂಡಿದ್ದು ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ತ್ವಚೆಯ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ತ್ವಚೆಯ ಕೋಶಗಳನ್ನು ಇದು ಉತ್ತಮಗೊಳಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ.

ಮಾಡುವ ವಿಧಾನ:

ಒಂದು ಬೌಲ್‌ನಲ್ಲಿ ಒಂದು ಚಮಚ ಅರಿಶಿನ, ಒಂದು ಚಮಚ ಜೇನು, ಒಂದು ಚಮಚ ಆಲೀವ್ ಆಯಿಲ್ ಅನ್ನು ತೆಗೆದುಕೊಳ್ಳಿ

ಎಲ್ಲವನ್ನೂ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ

ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಎರಡು ಬಾರಿ ಈ ಕ್ರಿಯೆಯನ್ನು ಅನುಸರಿಸಿ

ಕೊನೆಯ ಮಾತು

ಮೇಲೆ ತಿಳಿಸಿರುವ ಪರಿಹಾರಗಳು ಒಣ ತ್ವಚೆಗೆ ಆಗಿದೆ. ಇದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ನೀವು ರೂಢಿಸಿಕೊಳ್ಳಬೇಕು. ವಿಟಮಿನ್‌ಗಳ ಕೊರತೆಯಿಂದ ಕೂಡ ತ್ವಚೆಯು ಹಾನಿಗೆ ಒಳಗಾಗುತ್ತದೆ. ನೀವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದೀರಿ ಮತ್ತು ಸಾಕಷ್ಟು ನೀರು ಸೇವನೆ ಮಾಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬಾದಾಮಿ, ಆಲೀವ್ ಆಯಿಲ್, ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ತೆಗೆದುಕೊಳ್ಳಿ. ಇವುಗಳು ತ್ವಚೆಯನ್ನು ಹೈಡ್ರೇಟ್ ಮಾಡುತ್ತವೆ.

English summary

Tips For Getting Rid Of Dry Skin In Winter

Your skin takes a toll during the cold season. It becomes dry, itchy, and flaky, and loses its moisture. The top layer of our skin starts to break drown and therefore develops a flaky texture with visible lines or cracks. It is important to take care of your skin during the winter season. So how do we keep our skin moisturized? We often depend on store-bought products, but sometimes, we are not sure about how effective they are and sometimes our skin may not agree with various chemicals present in the products either. In this article, we will show you how to make your own moisturizer at home. Let's take a look.
Story first published: Monday, January 15, 2018, 20:07 [IST]
X
Desktop Bottom Promotion