30ರ ಹರೆಯದ ಮಹಿಳೆಯರು ಪಾಲಿಸಬೇಕಾದ ಸೌಂದರ್ಯ ಸಲಹೆಗಳು

Posted By: Hemanth
Subscribe to Boldsky

ಸೌಂದರ್ಯವೆಂದರೆ ಮಹಿಳೆಯರು ಎನ್ನುವ ಮಾತಿದೆ. ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಕಸರತ್ತು ನಡೆಸುವುದು ಇದೆ. ಆದರೆ ಮಹಿಳೆಯರು 30ರ ಹರೆಯಕ್ಕೆ ಬರುತ್ತಿರುವಂತೆ ಅವರಲ್ಲಿ ಹಲವಾರು ರೀತಿಯ ಚರ್ಮದ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. ಚರ್ಮದ ಕೋಶಗಳ ಪುನರುಜ್ಜೀವನ ಪ್ರಕ್ರಿಯೆ ನಿಧಾನವಾಗುವುದು, ಕಾಲಜನ್ ವಿಘಟನೆಗಳ್ಳುವುದು ಅಥವಾ ಸ್ಥಿತಿಸ್ಥಾಪಕತ್ವ ಕುಂದುವುದು ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು.

30 ಹರೆಯದಲ್ಲೂ ಯೌವನದ ಕಳೆ ಇರಲಿ

ಆದರೆ ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯಲು ಹಲವಾರು ರೀತಿಯ ವಿಧಾನಗಳು ಇವೆ ಮತ್ತು ಇದು ಚರ್ಮಕ್ಕೆ ತುಂಬಾ ಒಳ್ಳೆಯ ರೀತಿಯಿಂದ ನೆರವಾಗುವುದು. 30ರ ಹರೆಯದಲ್ಲಿ ಚರ್ಮದ ಸೌಂದರ್ಯ ಮತ್ತು ಅದರ ಆರೋಗ್ಯ ಕಾಪಾಡುವುದು ಹೇಗೆ ಎಂದು ತಿಳಿಯಿರಿ. ವಯಸ್ಸಾಗುವ ಲಕ್ಷಣ ತಡೆಗಟ್ಟುವ ಮತ್ತು ವಯಸ್ಸಾಗುತ್ತಿರುವಂತೆ ಕಾಣಿಸಿಕೊಳ್ಳುವ ಸಮಸ್ಯೆಗೆ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಅನುರಿಸಲು ಬಗ್ಗೆ ಬೋಲ್ಸ್ ಸ್ಕೈ ನಿಮಗೆ ಹೇಳಲಿದೆ.  ಈ ವಿಧಾನಗಳು ಚರ್ಮವನ್ನು ಸುಂದರ ಹಾಗೂ ಅದ್ಭುತವಾಗಿಸಲಿದೆ. ಇದು ಹೇಗೆಂದು ತಿಳಿಯಿರಿ.... 

ಕಣ್ಣಿನ ಕ್ರೀಮ್

ಕಣ್ಣಿನ ಕ್ರೀಮ್

ಕಣ್ಣಿನ ಸುತ್ತಲಿನ ಚರ್ಮ ತುಂಬಾ ತೆಳು ಹಾಗೂ ಸೂಕ್ಷ್ಮವಾಗಿರುವುದು. ಇದು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ದೇಹದ ಇತರ ಭಾಗದ ಚರ್ಮಕ್ಕಿಂತ ಇದಕ್ಕೆ ಬೇಗನೆ ವಯಸ್ಸಾಗುವುದು. ಇದರ ಕಡೆ ಹೆಚ್ಚಿನ ಗಮನಹರಿಸಬೇಕು. ಕಣ್ಣಿನ ಕ್ರೀಮ್ ಬಳಸಿಕೊಂಡು ಕಣ್ಣಿನ ಸುತ್ತಲಿನ ಚರ್ಮವನ್ನು ಕಾಪಾಡಿ. ಯಾವಾಗಲೂ ಮೊಶ್ಚಿರೈಸ್ ಮತ್ತು ತೇವಾಂಶದಿಂದ ಇರುವಂತೆ ಮಾಡಿ.

ಫೇಶಿಯಲ್

ಫೇಶಿಯಲ್

30ರ ಹರೆಯಕ್ಕೆ ತಲುಪುವ ಮೊದಲು ಮಾಡಬೇಕಾದ ಮತ್ತೊಂದು ಕೆಲಸವೆಂದರೆ ಫೇಶಿಯಲ್. ವಯಸ್ಸಾಗುತ್ತಾ ಹೋದಂತೆ ಚರ್ಮವು ತನ್ನ ನೈಸರ್ಗಿಕ ಕಾಂತಿ ಕಳೆದುಕೊಳ್ಳುವುದು. ಇದನ್ನು ತಪ್ಪಿಸುವ ಸಲುವಾಗಿ ಚರ್ಮಕ್ಕೆ ಪುನರ್ ಚೇತನ ನೀಡಲು ಫೇಶಿಯಲ್ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ವಯಸ್ಸು ಏನೇ ಆಗಿದ್ದರೂ ಚರ್ಮವು ಕಾಂತಿ ಪಡೆಯುವುದು.

ಮುಖದ ಸ್ಕ್ರಬ್

ಮುಖದ ಸ್ಕ್ರಬ್

ಚರ್ಮದ ಮೇಲಿನ ಎಲ್ಲಾ ರೀತಿಯ ಕಲ್ಮಶಗಳನ್ನು ಕಿತ್ತು ಹಾಕುವುದು ಅತೀ ಅಗತ್ಯವಾಗಿದೆ. ವಯಸ್ಸಾಗುತ್ತಾ ಇರುವಂತೆ ಸತ್ತ ಚರ್ಮವನ್ನು ತೆಗೆದು ಚರ್ಮದ ರಂಧ್ರಗಳನ್ನು ಶುದ್ಧೀಕರಿಸಬೇಕು. ಇಲ್ಲವಾದಲ್ಲಿ ಚರ್ಮದಲ್ಲಿ ಮೊಡವೆ ಕಾಣಿಸುವುದು. ಮೊಡವೆಗಳನ್ನು ದೂರವಿಡಲು ಮತ್ತು ವಯಸ್ಸಾಗುವ ಲಕ್ಷಣ ತಡೆಯಲು ವಾರದಲ್ಲಿ ಎರಡು ಸಲ ಸ್ಕ್ರಬ್ ಮಾಡಿಕೊಳ್ಳಿ.

ವಿಟಮಿನ್ ಸಿ

ವಿಟಮಿನ್ ಸಿ

ಪ್ರಮುಖ ಆ್ಯಂಟಿಆಕ್ಸಿಡೆಂಟ್ ಆಗಿರುವಂತಹ ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಸ್ಥಿತಿಸ್ಥಾಪಕತ್ವ ಸುಧಾರಿಸುವುದು. ವಯಸ್ಸಾಗುವ ಲಕ್ಷಣ ತಡೆಯಲು ವಿಟಮಿನ್ ಸಿ ಅತೀ ಅಗತ್ಯ. ಬಿಗಿಯಾದ, ಕಾಂತಿಯುತ ಚರ್ಮಕ್ಕಾಗಿ ವಿಟಮಿನ್ ಸಿ ಸಾರ ಅತೀ ಅಗತ್ಯವಾಗಿದೆ.

 ಮುಖದ ಎಣ್ಣೆ

ಮುಖದ ಎಣ್ಣೆ

ಮುಖದ ಎಣ್ಣೆಯಲ್ಲಿ ಚರ್ಮಕ್ಕೆ ಲಾಭವಾಗುವಂತಹ ಪೋಷಕಾಂಶಗಳು ಮತ್ತು ವಿಟಮಿನ್ ಗಳಿವೆ. ಈ ಗುಣಗಳು ವಯಸ್ಸಾಗುವ ಲಕ್ಷಣಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಮತ್ತು ಚರ್ಮವು ನಿಸ್ತೇಜ ಹಾಗೂ ಸತ್ತಂತೆ ಕಾಣುವುದನ್ನು ತಡೆಯಬಹುದು. ಮುಖದ ಎಣ್ಣೆಯನ್ನು ನಿಮ್ಮ ಚರ್ಮದ ಆರೈಕೆಯ ಪ್ರಮುಖ ಸಾಮಗ್ರಿಯಾಗಿಸಿ. ಇದರಿಂದ ಚರ್ಮವು ಸಮಸ್ಯೆ ರಹಿತ ಹಾಗೂ ವಯಸ್ಸಾಗದೆ ಇರುವಂತೆ ಕಾಣಿಸುವುದು.

ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್(ಆ್ಯಂಟಿ ಏಜಿಂಗ್)

ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್(ಆ್ಯಂಟಿ ಏಜಿಂಗ್)

ವಯಸ್ಸಾಗುವ ಲಕ್ಷಣವನ್ನು ತಡೆಯುವ ಕ್ರೀಮ್ ಗೆ ನೀವು ಹಾಕುವ ಹಣವು ವ್ಯರ್ಥವಾಗದು. ಹೆಚ್ಚಿನ ಕ್ರೀಮ್ ಗಳಲ್ಲಿ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ಫ್ರೀ ರ್ಯಾಡಿಕಲ್ ನಿಂದ ಚರ್ಮ ಹಾನಿಗೊಳಗಾಗುವುದನ್ನು ತಡೆಯುವುದು. 30ರ ಹರೆಯಕ್ಕೆ ಮೊದಲು ಒಳ್ಳೆಯ ಅ್ಯಂಟಿ ಏಜಿಂಗ್ ಕ್ರೀಮ್ ಬಳಸಿಕೊಳ್ಳಿ. ಇದು ವಯಸ್ಸಾಗು ಲಕ್ಷಣಗಳನ್ನು ತಡೆಯುವುದು.

ಫೇಸ್ ಮಾಸ್ಕ್

ಫೇಸ್ ಮಾಸ್ಕ್

ಫೇಶಿಯಲ್ ಮಾಸ್ಕ್ ನಿಮ್ಮ ಚರ್ಮದ ಮೇಲೆ ಅದ್ಭುತವಾಗಿ ಕೆಲಸ ಮಾಡುವುದು. ಹಿಂದಿನಿಂದ ಹಲವಾರು ರೀತಿಯ ಫೇಶಿಯಲ್ ಮಾಸ್ಕ್ ಗಳು ವಯಸ್ಸಾಗುವ ಲಕ್ಷಣ ತೋರಿಸುವ ಚರ್ಮದ ಸಮಸ್ಯೆ ನಿವಾರಿಸುವುದು. ಕಾಲಜನ್ ಹೆಚ್ಚಿಸುವ ಮತ್ತು ನೆರಿಗೆ ತಡೆಯುವಂತಹ ಫೇಶಿಯಲ್ ಮಾಸ್ಕ್ ಬಳಸಿಕೊಳ್ಳಿ. ಇದರಿಂದ 30 ದಾಟಿದ ಬಳಿಕ ಕೂಡ ನೀವು ಸುಂದರವಾಗಿ ಕಾಣುವಿರಿ.

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ಕೆಲವೇ ನಿಮಿಷ ಕಾಲ ಹೊರಗಡೆ ಹೋಗುವುದಿದ್ದರೂ ಸನ್ ಸ್ಕ್ರೀನ್ ಬಳಸಿಕೊಳ್ಳಿ. ಸಣ್ಣ ವಯಸ್ಸಿನಲ್ಲಿ ಬಿಸಿಲಿನಿಂದ ನಿಮ್ಮ ಚರ್ಮದ ಮೇಲೆ ಆಗಿರುವ ದುಷ್ಪರಿಣಾಮವು 30 ಮತ್ತು 40ರಲ್ಲಿ ಕಾಣಿಸಿಕೊಳ್ಳುವುದು. ಇದರಿಂದ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿ ವಯಸ್ಸಾಗುವ ಲಕ್ಷಣ ತಡೆಯಿರಿ.

English summary

things-you-need-to-work-into-your-skin-care-routine

As a woman turns 30, her skin goes through a lot of changes. Be it hyperpigmentation, slower skin cell renewalprocess, breakdown of collagen or decreased elasticity, her skin experiences a lot of drastic changes.Today, at Boldsky, we've compiled a list of things that you need to work into your skin care routine to up the anti-ageing game and prevent the age-related problems from ruining your skin's natural beauty.