For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸುವ ತರಕಾರಿಗಳ ಫೇಸ್ ಪ್ಯಾಕ್

By Sushma Charhra
|

ಹೊಳೆಯುವ ಮತ್ತು ಕಾಂತಿಯುತವಾದ ಚರ್ಮವನ್ನು ಪಡೆಯುವುದು ಪ್ರತಿಯೊಬ್ಬರ ಕನಸೂ ಆಗಿರುತ್ತೆ. ಆದರೆ ಇದನ್ನು ಪಡೆಯುವುದು ಸಮಯ ಮತ್ತು ದುಡ್ಡು ಎರಡನ್ನೂ ಹಾಳು ಮಾಡುತ್ತೆ ಎಂದು ಭಾವಿಸುತ್ತಾರೆ. ಆದರೆ ನಿಜವಾದ ವಿಷಯ ಏನೆಂದರೆ, ಇದು ಸುಳ್ಳು..! ಮನೆಯಲ್ಲೇ ಕುಳಿತು ನೀವು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಿಕೊಳ್ಳಬಹುದು ಎಂದು ನಾವು ಹೇಳಿದರೆ ನೀವು ನಂಬುತ್ತೀರಾ?

ಎಸ್.. ನೀವು ಕೇಳುತ್ತಿರುವುದು ನಿಜ. ಈ ಲೇಖನ ನಿಮಗೆ ಕೆಲವು ತರಕಾರಿಗಳ ಫೇಸ್ ಪ್ಯಾಕ್ ಗಳನ್ನು ತಿಳಿಸಿಕೊಡುತ್ತೆ. ಈ ಫೇಸ್ ಪ್ಯಾಕ್ ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ಕಾಂತಿಯುತವಾಗಿ, ಸ್ವಚ್ಛವಾಗಿ , ಶುದ್ಧವಾಗಿರುವಂತೆ ನೋಡಿಕೊಳ್ಳುತ್ತೆ. ತರಕಾರಿಗಳು ಖನಿಜಗಳನ್ನು, ವಿಟಮಿನ್ ಗಳನ್ನು, ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತೆ ಮತ್ತು ಇವು ನಿಮ್ಮ ಚರ್ಮದಲ್ಲಿರುವ ಟ್ಯಾನ್, ಕೊಳೆ ಮತ್ತು ಡಾರ್ಕ್ ಸರ್ಕಲ್, ಮೊಡವೆ, ಆಕ್ನೆ ಕಲೆಗಳು, ಇತ್ಯಾದಿಗಳನ್ನು ತೊಡೆದು ಹಾಕಿ ಶುದ್ಧಗೊಳಿಸಲು ನೆರವಾಗುತ್ತೆ.

 

ಈ ವೆಜಿಟೇಬಲ್ ಫೇಸ್ ಪ್ಯಾಕ್ ಗಳನ್ನು ಬಳಸುವಾದ ಆದಷ್ಟು ಕೆಮಿಕಲ್ ರಹಿತ ತರಕಾರಿಗಳನ್ನು ಬಳಸಿ. ನೈಸರ್ಗಿಕವಾಗಿ ಬೆಳೆದ ತರಕಾರಿಗಳು ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತವೆ ಎಂಬುದು ನೆನಪಿರಲಿ.. ನಿಜ, ಕೆಲವು ತರಕಾರಿಗಳಿಗೆ ಕೀಟನಾಶಕಗಳನ್ನು ಹೊಡೆದು ಅತೀ ಹೆಚ್ಚು ಕೆಮಿಕಲ್ ಮಯವಾಗಿ ಬಿಟ್ಟಿರುತ್ತವೆ, ಇವು ನಿಮಗೆ ಉಪಕಾರ ಮಾಡುವುದಕ್ಕಿಂತ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಕೂಡಲೇ ಆಗುತ್ತೆ ಎಂದಲ್ಲ.

ಆದರೆ ಕ್ರಮೇಣ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಗಳಿರುತ್ತೆ. ಹಾಗಾದ್ರೆ ತರಕಾರಿಗಳನ್ನು ಫೇಸ್ ಪ್ಯಾಕ್ ಆಗಿ ಬಳಸುವುದು ಹೇಗೆ ಮತ್ತು ಆ ಮೂಲಕ ಆರೋಗ್ಯವಾದ ಹೊಳೆಯುವ ತ್ವಚೆ ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ..

carrot face pack

ಕ್ಯಾರೆಟ್ ಫೇಸ್ ಪ್ಯಾಕ್

ವಿಟಮಿನ್ ಸಿ ಗಳನ್ನು ಹೊಂದಿರುವ ಕ್ಯಾರೆಟ್ ನಿಮ್ಮ ಚರ್ಮದ ಬಿಳುಪುಗೊಳಿಸುತ್ತೆ ಮತ್ತು ಮೊಡವೆ,ಆಕ್ನೆ ಕಲೆಗಳನ್ನು ನಿವಾರಿಸುವ ತಾಕತ್ತನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಟ್ಯಾನ್ ಮತ್ತು ಧೂಳಿನಿಂದ ಆಗಿರುವ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ.

ಬೇಕಾಗುವ ಸಾಮಗ್ರಿಗಳು

 

2 ಟೇಬಲ್ ಸ್ಪೂನ್ ಕ್ಯಾರೆಟ್ ಪೇಸ್ಟ್, 1 ಟೇಬಲ್ ಸ್ಪೂನ್ ಮೊಸರು, 1 ಟೇಬಲ್ ಸ್ಪೂನ್ ಕಡಲೆಹಿಟ್ಟು, ಸ್ವಲ್ಪವೇ ಸ್ವಲ್ಪ ಅರಿಶಿನ

ಬಳಸುವ ವಿಧಾನ ಹೇಗೆ?

- ಒಂದು ಬೌಲ್ ತೆಗೆದುಕೊಳ್ಳಿ, ಎಲ್ಲಾ ಪದಾರ್ಥಗಳನ್ನುಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಗಂಟುಗಳಾಗದಂತೆ ಕಲಸಿ ಪೇಸ್ಟ್ ತಯಾರಿಸಿ. ಗಟ್ಟಿಯಾದ ಈ ಪೇಸ್ಟನ್ನು ಮುಖಕ್ಕೆ ಅಪ್ಲೈ ಮಾಡಿ. ಕೇವಲ ಮುಖಕ್ಕೆ ಮಾತ್ರವಲ್ಲ. ಕುತ್ತಿಗೆಯ ಭಾಗಕ್ಕೂ ಹಚ್ಚಿ. 20 ನಿಮಿಷ ಹಾಗೆಯೇ ಬಿಡಿ. 20 ನಿಮಿಷದ ನಂತರ ನಾರ್ಮಲ್ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಈರುಳ್ಳಿ ಫೇಸ್ ಪ್ಯಾಕ್

ಈರುಳ್ಳಿಯಲ್ಲಿ ಹಲವು ವಿಟಮಿನ್ ಗಳಿದ್ದು ಇವು ಮುಖದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತೆ. ಮತ್ತು ಮುಖದಲ್ಲಿ ನೆರಿಗೆಗಳಾಗುವುದನ್ನು ತಡೆದು ಚರ್ಮವು ಆರಾಮಾಗಿರಲು ಸಹಾಯ ಮಾಡುತ್ತೆ.

ಬೇಕಾಗುವ ಪದಾರ್ಥಗಳು- ಒಂದು ಚಿಕ್ಕ ಈರುಳ್ಳಿ, ಹತ್ತಿ ತುಂಡುಗಳು

ಹೇಗೆ ಬಳಸುವುದು -ಈರುಳ್ಳಿಯನ್ನು ಕತ್ತರಿಸಿ ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ.ಚೆನ್ನಾಗಿ ರುಬ್ಬಿ ಅದರ ರಸವನ್ನು ತೆಗೆದುಕೊಳ್ಳಿ, ಹತ್ತಿಯ ತುಂಡುಗಳನ್ನು ಅದರಲ್ಲಿ ಅದ್ದಿ ರಸವನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡಿ. ಇದನ್ನು 15 ರಿಂದ 20 ನಿಮಿಷ ಮುಖದಲ್ಲಿ ಹಾಗೆಯೇ ಇರುವಂತೆ ನೋಡಿಕೊಳ್ಳಿ. ನಂತರ ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಇದನ್ನು ಮಾಡಿನೋಡಿ. ಬೇಗನೆ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ.

ಬೀಟ್ ರೂಟ್ ಫೇಸ್ ಪ್ಯಾಕ್

ಈ ಫೇಸ್ ಪ್ಯಾಕ್ ನಿಮ್ಮ ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಲು ನೆರವಾಗುತ್ತೆ. ಮತ್ತು ಚರ್ಮವನ್ನು ಮೃದು ಮತ್ತು ಮೆತ್ತಗಾಗಿಸಲು ಇದು ಸಹಾಯ ಮಾಡುತ್ತೆ.

ಬೇಕಾಗುವ ಸಾಮಗ್ರಿಗಳು

-4 ಟೇಬಲ್ ಸ್ಪೂನ್ ಬೀಟ್ ರೂಟ್ ಜ್ಯೂಸ್, 3 ಟೇಬಲ್ ಸ್ಪೂನ್ ಮೊಸರು

ಮಾಡುವ ವಿಧಾನ - ಅರ್ಧ ಬೀಟ್ ರೂಟ್ ನ್ನು ರುಬ್ಬಿಕೊಳ್ಳಿ. ಬೀಟ್ ರೂಟ್ ಜ್ಯೂಸ್ ತೆಗೆಯಿರಿ. 4 ಟೇಬಲ್ ಸ್ಪೂನ್ ಬೀಟ್ ರೂಟ್ ಜ್ಯೂಸ್ ನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ.ಅದಕ್ಕೆ ಮೂರು ಟೇಬಲ್ ಸ್ಪೂನ್ ನಷ್ಟು ಮೊಸರನ್ನು ಸೇರಿಸಿ. ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. ಕಡಿಮೆ ಅಂದ್ರೂ 25 ನಿಮಿಷ ಇದು ನಿಮ್ಮ ಮುಖದಲ್ಲಿ ಇರಲಿ. ನಂತರ ನಾರ್ಮಲ್ ನೀರಿನಿಂದ ತೊಳೆಯಿರಿ.

cucumber face pack

ಸೌತೆಕಾಯಿ ಫೇಸ್ ಪ್ಯಾಕ್

ಇದು ಸರಳವಾದ ಫೇಸ್ ಪ್ಯಾಕ್ ಆಗಿದೆ. ಸೌತೆಕಾಯಿ ಫೇಸ್ ಪ್ಯಾಕ್ ನಿಮಗೆ ಡ್ರೈ ಸ್ಕಿನ್ ಇದ್ದರೆ ಅದನ್ನು ನಿವಾರಿಸಲು ಬಹಳ ಸಹಕಾರಿ. ಯಾಕೆಂದರೆ ಸೌತೆಕಾಯಿಲ್ಲಿ ಆಂಟಿ ಏಜಿಂಗ್ ಗುಣಗಳಿವೆ. ಇದನ್ನು ಆಂಟಿ ಏಜಿಂಗ್ ಮಾಸ್ಕ್ ಆಗಿ ಕೂಡ ಬಳಕೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು -

2 ರಿಂದ 3 ಟೇಬಲ್ ಸ್ಪೂನ್ ಸೌತೆಕಾಯಿ ಜ್ಯೂಸ್ , 1 ಟೇಬಲ್ ಸ್ಪೂನ್ ಹುಳಿ ಕ್ರೀಮ್ ಅರ್ಥಾತ್ ಮೊಸರು

ಮಾಡುವ ವಿಧಾನ

- ಎಲ್ಲಾ ಪದಾರ್ಥಗಳನ್ನು ಸೇರಿಸಿ , ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ.15 ನಿಮಿಷ ಹಾಗೆಯೇ ಬಿಡಿ. ಹದ ಬೆಚ್ಚಗಿರುವ ನೀರಿನಿಂದ 15 ನಿಮಿಷದ ನಂತರ ವಾಷ್ ಮಾಡಿ. ಈ ಫೇಸ್ ಪ್ಯಾಕ್ ನಿಮ್ಮ ಚರ್ಮವನ್ನು ಸ್ಮೂತ್ ಮತ್ತು ಹೈಡ್ರೇಟ್ ಮಾಡುತ್ತೆ. ಹಾಗಾಗಿ ಚರ್ಮದ ಶುಷ್ಕತೆ ನಿವಾರಣೆಯಾಗುತ್ತೆ.

ಆಲೂಗಡ್ಡೆ ರಸದ ಫೇಸ್ ಪ್ಯಾಕ್

ಆಂಟಿ ಆಕ್ಸಿಡೆಂಟ್ ಗುಣಗಳು ಆಲೂಗಡ್ಡೆಯಲ್ಲಿರುವುದರಿಂದಾಗಿ ಇದು ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತೆ. ಅಷ್ಟೇ ಅಲ್ಲ ಇದು ನಿಮ್ಮ ಚರ್ಮದಲ್ಲಿನ ಸತ್ತ ಜೀವಕೋಶಗಳ ನಿವಾರಣೆಗೂ ನೆರವಾಗುತ್ತೆ. ಯಾಕೆಂದರೆ ಇದರಲ್ಲಿ ಬ್ಲೀಚ್ ಮಾಡುವ ಕೆಲವು ಅಂಶಗಳಿವೆ..

ಬೇಕಾಗುವ ಪದಾರ್ಥಗಳು - 1 ಆಲೂಗಡ್ಡೆ, ಹತ್ತಿ ತುಂಡುಗಳು

ಮಾಡುವ ವಿಧಾನ - ಆಲೂಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ರುಬ್ಬಿಕೊಂಡು ಅದರ ಸೋಸಿ ರಸ ತೆಗೆದುಕೊಳ್ಳಿ. ಹತ್ತಿಯ ತುಂಡುಗಳನ್ನು ಆ ರಸದಲ್ಲಿ ಅದ್ದಿ, ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. 15 ರಿಂದ 20 ನಿಮಿಷ ಹಾಗೆಯೇ ಬಿಡಿ., ನಂತರ ನಾರ್ಮಲ್ ನೀರಿನಿಂದ ಮುಖವನ್ನು ತೊಳೆಯಿರಿ

ಟೋಮೆಟೋ ಫೇಸ್ ಪ್ಯಾಕ್

ಟೋಮೆಟೋದಲ್ಲಿ ವಿಟಮಿನ್ ಅಂಶಗಳಿರುತ್ತೆ ಮತ್ತು ಇದು ನಿಮ್ಮ ಚರ್ಮವನ್ನು ಫ್ರೆಶ್ ಆಗಿ, ಆರೋಗ್ಯವಾಗಿ ಹೊಳೆಯುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಟೋಮೆಟೋ ರಸವು ನಿಮ್ಮ ಚರ್ಮವನ್ನು ಬಳಲಿದಂತೆ ಕಾಣಲು ಬಿಡುವುದಿಲ್ಲ ಹಾಗಾಗಿ ಯಾವಾಗಲೂ ತಾಜಾತನದಿಂದ ಕೂಡಿರುವಂತೆ ನೋಡಿಕೊಳ್ಳುತ್ತೆ. ಹಾಗಾಗಿ ಮನೆಮದ್ದಿನಿಂದಲೇ ನೀವು ತಾಜಾವಾದ ಚರ್ಮವನ್ನು ಪಡೆಯಲು ಸಾಧ್ಯವಾಗುತ್ತೆ.

tomato face pack

ಬೇಕಾಗುವ ಸಾಮಗ್ರಿಗಳು -1 ಟೋಮೆಟೋ ಮತ್ತು 1 ಕಪ್ ನಷ್ಟು ನೀರು

ಮಾಡುವ ವಿಧಾನ

- ಒಂದು ಮೀಡಿಯಮ್ ಸೈಜಿನ ಟೊಮೆಟೋವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

ಚೆನ್ನಾಗಿ ಬ್ಲೆಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ಮೊದಲ ಬಾರಿ ಬಳಕೆ ಮಾಡಿದಾಗಲೇ ನೀವು ಅದರ ವ್ಯತ್ಯಾಸವನ್ನು ಗುರುತಿಸಿಕೊಳ್ಳಬಹುದು.

English summary

These Veggies Can Save Your Skin

Vegetables contain minerals, vitamins and antioxidants that help in keeping the skin fresh and rejuvenated by removing tan, dark circles, pimples and acne scars and also help in skin whitening. While using vegetable face packs, make sure that you use organic and chemical-free vegetables.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more