For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಟೋನರ್ ಗಳನ್ನು ಬಳಸಿ ನೋಡಿ!

By Hemanth
|

ಸುಂದರ ಹಾಗೂ ಶುದ್ಧವಾಗಿರುವ ತ್ವಚೆಯ ಆರೈಕೆಗೆ ಹಲವಾರು ರೀತಿಯ ವಿಧಾನಗಳು ಇವೆ. ಆದರೆ ಹಠಾತ್ ಆಗಿ ಮುಖದ ಕಾಂತಿ ಹೆಚ್ಚಿಸುವ ಸಲುವಾಗಿ ಮೇಕಪ್ ಮಾಡಿಕೊಳ್ಳಬೇಕಾಗುವುದು. ಮೇಕಪ್ ನಲ್ಲಿ ಹಲವು ಹಂತಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಟೋನಿಂಗ್ ಕೂಡ. ಆದರೆ ಹೆಚ್ಚಿನವರು ಇದನ್ನು ಕಡೆಗಣಿಸುವರು. ಟೋನಿಂಗ್ ನಿಂದ ಚರ್ಮದ ಕಲ್ಮಶಗಳು ಹಾಗೂ ಧೂಳು ತೆಗೆಯಲು ಸಾಧ್ಯವಾಗಿ, ಆರೋಗ್ಯವಂತ ಚರ್ಮವು ನಿಮ್ಮದಾಗುವುದು. ಇದು ಚರ್ಮದ ಪಿಎಚ್ ಮಟ್ಟ ಕಾಪಾಡಿಕೊಂಡು ಚರ್ಮದ ರಂಧ್ರಗಳು ಕುಗ್ಗಿ ಅಂತಿಮ ಹಂತವಾಗಿರುವ ಮಾಯಿಶ್ಚರೈಸ್ ಮಾಡಲು ಚರ್ಮವನ್ನು ಸಜ್ಜುಗೊಳಿಸುವುದು.

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಟೋನರ್ ಗಳು ಲಭ್ಯವಿದೆ. ಇದನ್ನು ಬಳಸಿಕೊಳ್ಳಬಹುದಾದರೂ ಮನೆಯಲ್ಲೇ ನೀವು ಟೋನರ್ ತಯಾರಿಸಿದರೆ ತುಂಬಾ ಒಳ್ಳೆಯದು ಮತ್ತು ಯಾವುದೇ ಅಡ್ಡಪರಿಣಾಮಗಳು ಕೂಡ ಇರಲ್ಲ. ನೈಸರ್ಗಿಕವಾಗಿ ತಯಾರಿಸಬಹುದಾದ ಕೆಲವೊಂದು ಟೋನರ್ ಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಪುದೀನಾ ಎಲೆಗಳ ಟೋನರ್
ಬೇಕಾಗುವ ಸಾಮಗ್ರಿಗಳು
1 ಕಪ್ ಪುದೀನಾ ಎಲೆಗಳು
11/2 ಕಪ್ ನೀರು

ವಿಧಾನ
ಒಂದು ಕಪ್ ಪುದೀನಾ ಎಲೆಗಳನ್ನು ಮೇಲೆ ಹೇಳಿದಷ್ಟು ಪ್ರಮಾಣದ ನೀರು ಹಾಕಿಕೊಂಡು ಕುದಿಸಿ. ಕುದಿಸುವಾಗ ಪಾತ್ರೆಗೆ ಮುಚ್ಚಳ ಮುಚ್ಚಿಕೊಳ್ಳಿ. ಈ ನೀರು ತಣ್ಣಗಾಗಲು ಬಿಡಿ. ಇದನ್ನು ಮರುದಿನ ಸೋಸಿಕೊಂಡು ಒಂದು ಪ್ಲಾಸ್ಟಿಕ್ ಬಾಟಲಿಗೆ ಹಾಕಿ. ಇದನ್ನು ನಿಮಗೆ ಬೇಕೆಂದಾಗ ಬಳಸಬಹುದು. ಒಂದು ವಾರ ಕಾಲ ಇದನ್ನು ಫ್ರಿಡ್ಜ್ ನಲ್ಲಿಟ್ಟು ಬಳಸಬಹುದು.

Toners

ಆಪಲ್ ಸೀಡರ್ ವಿನೇಗರ್
ಬೇಕಾಗುವ ಸಾಮಗ್ರಿಗಳು
1 ಚಮಚ ಆ್ಯಪಲ್ ಸೀಡರ್ ವಿನೇಗರ್

ನೀರು
ತಯಾರಿಸುವ ವಿಧಾನ
ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಒಂದು ಹತ್ತಿ ಉಂಡೆ ಹಾಕಿಕೊಂಡು ಅದರಲ್ಲಿ ಮುಳುಗಿಸಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ನೀವು ಮೇಕಪ್ ರಿಮೂವರ್ ಆಗಿಯೂ ಬಳಸಬಹುದು. ಮುಖದಲ್ಲಿರುವ ಕಲ್ಮಶ ತೆಗೆಯಲು ಇದು ನಿಮಗೆ ನೆರವಾಗುವುದು.

ಅಲೋವೆರಾ
ಹಲವಾರು ರೀತಿಯ ಸೌಂದರ್ಯ ಸಾಧನಗಳಿಗೆ ಅಲೋವೆರಾ ಬಳಸಲಾಗುತ್ತದೆ. ಇದು ಟೋನರ್ ಆಗಿಯೂ ಕೆಲಸ ಮಾಡುವುದು.
ಬೇಕಾಗುವ ಸಾಮಗ್ರಿಗಳು
ಒಂದು ತಾಜಾ ಅಲೋವೆರಾದ ಲೋಳೆ
ನೀರು

ವಿಧಾನ
ಅಲೋವೆರಾದ ಎಲೆ ಕತ್ತರಿಸಿಕೊಂಡು ಅದರ ಲೋಳೆಯನ್ನು ಹೊರಗೆ ತೆಗೆಯಿರಿ. ತಾಜಾ ಅಲೋವೆರಾ ಸಿಗದೆ ಇದ್ದರೆ ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಬಳಸಿ. ಎರಡು ಚಮಚ ಅಲೋವೆರಾ ಗೆ ನೀರು ಹಾಕಿ ಸ್ವಲ್ಪ ತೆಳು ಮಾಡಿಕೊಳ್ಳಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿ ಮತ್ತು ನಿಮಗೆ ಬೇಕಾದಾಗ ಬಳಸಿ.

ಸೌತೆಕಾಯಿ ಟೋನರ್
ಬೇಕಾಗುವ ಸಾಮಗ್ರಿಗಳು
1 ಸೌತೆಕಾಯಿ
ನೀರು

ವಿಧಾನ
ಒಂದು ಸಣ್ಣ ಸೌತೆಕಾಯಿ ತೆಗೆದುಕೊಳ್ಳಿ ಮತ್ತು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಸುಮಾರು 8-10 ನಿಮಿಷ ಕಾಲ ಕುದಿಸಿ. ಮುಚ್ಚಳ ಹಾಕಿ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಇದನ್ನು ಸೋಸಿಕೊಂಡು ಸ್ಪ್ರೇ ಬಾಟಲಿಗೆ ಹಾಕಿ ಮತ್ತು ರೆಫ್ರಿಜರೇಟರ್ ನಲ್ಲಿಡಿ. 7 ದಿನಗಳ ಕಾಲ ಇದು ಬಾಳಿಕೆ ಬರುವುದು.

ಐಸ್
ಐಸ್ ತುಂಬಾ ಪರಿಣಾಮಕಾರಿ ಮತ್ತು ಸುಲಭವಾದ ಟೋನರ್

ಬೇಕಾಗುವ ಸಾಮಗ್ರಿಗಳು
2-3 ಐಸ್ ತುಂಡುಗಳು
ಒಂದು ತುಂಡು ಬಟ್ಟೆ

ವಿಧಾನ
ಸಣ್ಣ ಬಟ್ಟೆ ತುಂಡಿನಲ್ಲಿ ಐಸ್ ತುಂಡುಗಳನ್ನು ಕಟ್ಟಿಕೊಂಡು ಅದನ್ನು ಮುಖ ಹಾಗೂ ಕುತ್ತಿಗೆಗೆ ಉಜ್ಜಿಕೊಳ್ಳಿ. ಐಸ್ ನಿಂದ ರಕ್ತ ಪರಿಚಲನೆ ಉತ್ತಮವಾಗುವುದು ಮತ್ತು ಚರ್ಮದ ಟೋನಿಂಗ್ ಗೆ ನೆರವಾಗುವುದು. ನೇರವಾಗಿ ಐಸ್ ನ್ನು ಚರ್ಮಕ್ಕೆ ಹಚ್ಚಬೇಡಿ. ಇದರಿಂದ ಸೂಕ್ಷ್ಮ ಚರ್ಮದ ಮೇಲೆ ಹಾನಿಯಾಗಬಹುದು. ದಿನದಲ್ಲಿ ಒಂದು ಸಲ ಇದನ್ನು ನೀವು ಬಳಸಬಹುದು.

ಲಿಂಬೆರಸ
ಚರ್ಮ ಶುದ್ಧೀಕರಿಸಲು ಲಿಂಬೆರಸವು ಪ್ರಮುಖ ಪಾತ್ರ ವಹಿಸುವುದು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇದರಿಂದ ಸಂಪೂರ್ಣ ಚರ್ಮವನ್ನು ಇದು ಸುಧಾರಿಸುವುದು.

ಬೇಕಾಗುವ ಸಾಮಗ್ರಿಗಳು
2 ಚಮಚ ಲಿಂಬೆರಸ
ನೀರು

ವಿಧಾನ
ಒಂದು ಪಿಂಗಾಣಿಯಲ್ಲಿ 2 ಚಮಚ ಲಿಂಬೆರಸ ಹಾಕಿ. ಇದನ್ನು ನೀರಿನೊಂದಿಗೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಒಂದು ಹತ್ತಿ ಉಂಡೆ ಹಾಕಿಕೊಳ್ಳಿ ಮತ್ತು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 5 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ. ಪರ್ಯಾಯವಾಗಿ ಲಿಂಬೆ ತುಂಡನ್ನು ಮುಖಕ್ಕೆ ಉಜ್ಜಿಕೊಳ್ಳಿ ಮತ್ತು ಇದನ್ನು ಮೇಲೆ ಹೇಳಿದಂತೆ ಮತ್ತೆ ಪುನರಾವರ್ತಿಸಿ.

ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ತುಂಬಾ ತಾಜಾ ಹಾಗೂ ಯೌವನಯುತವಾಗಿರಿಸುವುದು.

ಬೇಕಾಗುವ ಸಾಮಗ್ರಿಗಳು
ಗ್ರೀನ್ ಟೀ

ವಿಧಾನ
ಒಂದು ಕಪ್ ಗ್ರೀನ್ ಟೀ ಮಾಡಿಕೊಂಡು ಅದನ್ನು ತಣ್ಣಗಾಗಿಸಿ. ಇದನ್ನು ಮುಖ ತೊಳೆದ ಬಳಿಕ ಪ್ರತೀ ಸಲ ಹಚ್ಚಿಕೊಳ್ಳಬಹುದು. ಗ್ರೀನ್ ಟೀ ಪ್ರತಿನಿತ್ಯ ಬಳಸುವುದರಿಂದ ಚರ್ಮವು ತುಂಬಾ ತಾಜಾವಾಗಿ ಕಾಣಿಸುವುದು ಮಾತ್ರವಲ್ಲದೆ ವಯಸ್ಸಾಗುವ ಲಕ್ಷಣಗಳನ್ನು ತೋರಿಸುವ ನೆರಿಗೆ ನಿವಾರಣೆ ಮಾಡುವುದು.

ಪಪ್ಪಾಯಿ ಟೋನರ್
ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಪಪ್ಪಾಯಿ
ನೀರು
ಪಪ್ಪಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದರನ್ನು ರುಬ್ಬಿ ಪೇಸ್ಟ್ ಮಾಡಿ. ಇದನ್ನು ನೀರಿಗೆ ಹಾಕಿ ತೆಳು ಮಾಡಿ ಸ್ಪ್ರೇ ಬಾಟಲಿಗೆ ಹಾಕಿ. ಇದನ್ನು ನೀವು ಫ್ರಿಡ್ಜ್ ನಲ್ಲಿ ಇಡಬಹುದು ಮತ್ತು ಇದು 4-5 ದಿನಗಳ ಕಾಲ ಹಾಗೆ ಇರುವುದು. ಈ ಟೋನರ್ ನ್ನು ನಿಮಗೆ ಬೇಕಾದಂತೆ ಬಳಸಬಹುದು.

ನೈಸರ್ಗಿಕ ಟೋನರ್ ಬಳಸಿ...
ಹೆಚ್ಚಿನ ಮಹಿಳೆಯರು ಈ ಕ್ರಮವನ್ನು ಬಿಟ್ಟುಬಿಡುವರು. ಯಾಕೆಂದರೆ ಟೋನರ್ ಹೆಚ್ಚು ಮುಖ್ಯವಲ್ಲವೆಂದು ಅವರು ಭಾವಿಸಿರುವರು. ಒಳ್ಳೆಯ ಟೋನರ್ ಬಳಸಿಕೊಂಡಾಗ ನಿಮಗೆ ಅದರ ಪ್ರಾಮುಖ್ಯತೆ ತಿಳಿದುಬರುವುದು. ಒಳ್ಳೆಯ ಟೋನರ್ ರಂಧ್ರಗಳನ್ನು ಮುಚ್ಚುವುದು ಮಾತ್ರವಲ್ಲದೆ, ಚರ್ಮದಲ್ಲಿನ ಪಿಎಚ್ ಮಟ್ಟ ಕಾಪಾಡುವುದು, ನೀವು ಬಳಸಿರುವ ಕ್ರೀಮ್ ಮತ್ತು ಎಣ್ಣೆಯನ್ನು ಚರ್ಮದಿಂದ ತೆಗೆಯುವುದು. ಇದು ಚರ್ಮದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಪ್ರಮುಖ ಪಾತ್ರ ವಹಿಸುವುದು.

ಟೋನರ್ ಬಳಸಿದರೆ ಹತ್ತಿ ಉಂಡೆಯಲ್ಲಿರುವ ಹೆಚ್ಚಿನ ಧೂಳು ನಿಮಗೆ ಕಂಡುಬರುವುದು. ಈ ಧೂಳನ್ನು ಕ್ಲೆನ್ಸರ್ ನಿಂದ ತೆಗೆಯಲು ಸಾಧ್ಯವಾಗಿಲ್ಲ. ನೀವು ಟೋನರ್ ಬಳಸದೆ ಮಾಯಿಶ್ಚಿರೈಸರ್ ಮುಖಕ್ಕೆ ಹಾಕಿಕೊಂಡಿದ್ದರೆ ಆಗ ಧೂಳು ಮುಖದಲ್ಲೇ ಉಳಿದುಬಿಡುತ್ತಿತ್ತು. ಇದರಿಂದಾಗಿ ಮೊಡವೆ ಉಂಟಾಗುತ್ತಿತ್ತು. ಇದರಿಂದ ಮಾಯಿಶ್ಚಿರೈಸರ್‌ನಷ್ಟೇ ಟೋನರ್ ಕೂಡ ಮುಖ್ಯ.

ಹುಣಸೆಹಣ್ಣಿನ ಟೋನರ್
ಹುಣಸೆಹಣ್ಣನ್ನು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಬಳಸುವುದರ ಜೊತೆಗೆ, ಇದನ್ನು ನೀವು ನಿಮ್ಮ ತ್ವಚೆಯ ಪರಿಪೂರ್ಣ ಟೋನರ್ ಆಗಿ ಸಹ ಬಳಸಬಹುದು. ಹುಣಸೆ ಹಣ್ಣನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಮತ್ತು ಬೇಸಿಗೆಯಲ್ಲಿ ಟೋನರ್ ಆಗಿ ಬಳಸಿ.

English summary

These DIY Toners Will Give You A Glowing Skin

Toning is an essential part of the skin care routine. All of us must have definitely heard this term in our everyday beauty regime but a very few of us know how important this step is. Exfoliating, cleansing, toning and moisturizing are the four basic steps that are essential for a healthy skin. But most of us do not give much importance to toning. Toning is basically cleaning your skin by removing excess dirt that cleansing couldn't do. It helps in maintaining the pH balance of our skin by shrinking the pores and keeping the skin ready for the last step, that is, moisturizing.
X
Desktop Bottom Promotion