For Quick Alerts
ALLOW NOTIFICATIONS  
For Daily Alerts

ವಯಸ್ಸಾದ ತ್ವಚೆಗೆ ಮನೆಯಲ್ಲಿ ಮಾಡಬಹುದಾದ 10 ಆರೈಕೆ ವಿಧಾನಗಳು

By Divya Pandit
|

ದಿನಗಳು ಕಳೆದಂತೆ ನಮ್ಮ ವಯಸ್ಸು ಸಹ ಜಾರುತ್ತಲೇ ಹೋಗುತ್ತವೆ. ನಮಗೆ ಅರಿವಿಲ್ಲದಂತೆ ದಿನಗಳು ಕಳೆದರೂ ಚರ್ಮದಲ್ಲಿ ಕಾಣುವ ಕೆಲವು ಗುರುತುಗಳು ನಮಗೆ ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತವೆ. ನಿಜ, ನಮ್ಮ ದೇಹಕ್ಕೆ ವಯಸ್ಸಾದಂತೆ ಚರ್ಮದ ಗುಣಲಕ್ಷಣಗಳು ಬಹುಬೇಗ ಬದಲಾವಣೆಯನ್ನು ಕಂಡುಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಮರೆ ಮಾಚಲು ಅನೇಕ ಉಪಾಯಗಳನ್ನು ಶೋಧನೆ ನಡೆಸುವುದು ಸಾಮಾನ್ಯ.

ನಮ್ಮ ವಯಸ್ಸಿನಿಂದ ಚರ್ಮದಲ್ಲಿ ಬದಲಾವಣೆ ಕಾಣುವುದು ಒಂದು ವಿಚಾರವಾದರೆ ಅತಿಯಾದ ಮಾಲಿನ್ಯ, ಅನುಚಿತ ಆಹಾರ ಸೇವನೆ, ಬಿಸಿಲ ದಗೆ, ಕಳಪೆ ಮಟ್ಟದ ಸೌಂದರ್ಯ ವರ್ಧಕ ಉತ್ಪನ್ನಗಳ ಬಳಕೆ ಹೀಗೆ ಅನೇಕ ಕಾರಣಗಳಿಂದಾಗಿಯೂ ಚಿಕ್ಕ ವಯಸ್ಸಿನವರಲ್ಲಿ ವಯಸ್ಸಾದ ಕುರುಹುಗಳು ಕಾಣಿಸಿಕೊಳ್ಳುವುದು ಇನ್ನೊಂದು ಬಗೆಯಾಗಿದೆ. ಈ ಎರಡು ಕಾರಣಗಳಿಂದಾಗಿ ಚರ್ಮದಲ್ಲಿ ಸುಕ್ಕು ಗಟ್ಟುವುದು, ಗೆರೆಗಳು ಕಾಣಿಸಿಕೊಳ್ಳುವುದು, ಒರಟಾಗುವುದು, ಎಣ್ಣೆ ಅಂಶವನ್ನು ಕಳೆದು ಕೊಳ್ಳುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಚರ್ಮವು ವಯಸ್ಸಾದ ಚಿಹ್ನೆಯಿಂದ ಕೂಡಿರುತ್ತದೆ.

Anti Aging masks, how to prepare a home made masks for anti aging

ಪುರಾಣ ಇತಿಹಾಸದ ಕಾಲದಿಂದಲೂ ನಮ್ಮ ಪೂರ್ವಜರು ಕೆಲವು ಮನೆ ಆರೈಕೆ ವಿಧಾನಗಳಿಂದಲೇ ತಮ್ಮ ಸೌಂದರ್ಯವನ್ನು ಸದಾ ಕಂಗೊಳಿಸುವಂತೆ ಇಟ್ಟಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಅವರಿಗೆ ಯಾವುದೇ ಬಗೆಯ ದುಬಾರಿ ಮೌಲ್ಯದ ಸೌಂದರ್ಯ ಉತ್ಪನ್ನಗಳ ಬಳಕೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ಅವರು ಬಳಸುವ ನೈಸರ್ಗಿಕ ಉತ್ಪನ್ನಗಳು ಅವರ ಸೌಂದರ್ಯವನ್ನು ಕಾಪಾಡುತ್ತಿದ್ದವು. ನೀವು ಸಹ ನಿಮ್ಮ ಚರ್ಮವನ್ನು ವಯಸ್ಸಾದ ಚಿಹ್ನೆಗಳಿಂದ ಮುಕ್ತಿಗೊಳಿಸುವ ಮನೆ ಪರಿಹಾರಗಳನ್ನು ಹುಡುಕುತ್ತಿದ್ದರೆ ಈ ಮುಂದೆ ವಿವರಿಸಲಾದ 10 ಮನೆ ಆರೈಕೆಯ ವಿಧಾನವನ್ನು ಅರಿಯಿರಿ.

1. ತೆಂಗಿನ ಎಣ್ಣೆಯ ಮುಖವಾಡ:

1. ತೆಂಗಿನ ಎಣ್ಣೆಯ ಮುಖವಾಡ:

- ಒಂದು ಬೌಲ್ ಅಲ್ಲಿ ಒಂದು ಟೇಬಲ್ ಚಮಚ ತೆಂಗಿನ ಎಣ್ಣೆ ಹಾಗೂ ಅರ್ಧ ಟೀಚಮಚ ದಾಳಿಂಬೆ ಬೀಜದ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- ಅರ್ಧ ಗಂಟೆಯ ಕಾಲ ಆರಲು ಬಿಡಿ. ಬಳಿಕ ಸ್ವಚ್ಛ ನೀರಿನಿಂದ ತೊಳೆಯಿರಿ.

2. ಕಡಲ ಕಳೆ ಮುಖವಾಡ:

2. ಕಡಲ ಕಳೆ ಮುಖವಾಡ:

- ಒಂದು ಟೇಬಲ್ ಚಮಚ ಕಡಲ ಕಳೆಯ ಪುಡಿಗೆ ಎರಡು ಟೇಬಲ್ ಚಮಚ ಬೆಚ್ಚಗಿನ ನೀರನ್ನು ಸೇರಿಸಿ, ಮೃದುವಾದ ಮಿಶ್ರಣ ತಯಾರಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 30 ನಿಮಿಷಗಳ ಕಾಲ ಮೃದುವಾಗಿ ಮೇಲ್ಮುಖದ ಚಲನೆಯಲ್ಲಿ ಮಸಾಜ್ ಮಾಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಅತ್ಯುತ್ತಮ ಫಲಿತಾಂಶ ಪಡೆಯಲು ಸ್ವಚ್ಛಗೊಳಿಸಿದ ನಂತರ ಮಾಯ್ಚುರೈಸ್ ಕ್ರೀಮ್ ಅನ್ವಯಿಸಬಹುದು.

3. ಜೇಡಿ ಮಣ್ಣಿನ ಮುಖವಾಡ:

3. ಜೇಡಿ ಮಣ್ಣಿನ ಮುಖವಾಡ:

- ಲೋಹವಲ್ಲದ ಬೌಲ್‍ಅಲ್ಲಿ 2 ಟೀಚಮಚ ಜೇಡಿಮಣ್ಣು ಹಾಗೂ ಸ್ವಲ್ಪ ನೀರನ್ನು ಅಥವಾ ಗುಲಾಬಿ ನೀರನ್ನು ಸೇರಿಸಿ, ಮೃದುವಾದ ಮಿಶ್ರಣ ತಯಾರಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಕಾಲ ಒಣಗಲು ಅಥವಾ ಆರಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

4. ಕಾಫಿ ಮುಖವಾಡ:

4. ಕಾಫಿ ಮುಖವಾಡ:

- ಒಂದು ಬೌಲ್ ಅಲ್ಲಿ ಒಂದು ಟೇಬಲ್ ಚಮಚ ಕಾಫಿ ಪುಡಿ, ಒಂದು ಟೀಚಮಚ ಕೊಕಾ ಪುಡಿ ಸೇರಿಸಿ ಮಿಶ್ರಗೊಳಿಸಿ. ಬಳಿಕ ಒಂದು ಟೀಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಪುನಃ ಮಿಶ್ರಗೊಳಿಸಿ.

- ದಪ್ಪದಾದ ಪೇಸ್ಟ್ ನ ರೂಪಕ್ಕೆ ಬಂದ ಬಳಿಕ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- ಅರ್ಧ ಗಂಟೆ ಆರಲುಬಿಡಿ. ಮುಖದ ಮೇಲೆ ಮಿಶ್ರಣ ಗಟ್ಟಿಯಾದಂತೆ ತೋರುವಾಗ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

5. ಆವಕಾಡೂ/ಬೆಣ್ಣೆಹಣ್ಣು ಮುಖವಾಡ:

5. ಆವಕಾಡೂ/ಬೆಣ್ಣೆಹಣ್ಣು ಮುಖವಾಡ:

- ಒಂದು ಆವಕಾಡೂ ಹಣ್ಣನ್ನು ಕಿವುಚಿಕೊಳ್ಳಿ, ಬಳಿಕ ಟೇಬಲ್ ಚಮಚ ಓಟ್ಸ್ ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಕಾಲ ಮುಖವನ್ನು ವೃತ್ತಾಕಾರದ ಮಾದರಿಯಲ್ಲಿ ಮೃದುವಾಗಿ ಮಸಾಜ್ ಮಾಡಿ.

- ಬಳಿಕ ಪುನಃ 10 ನಿಮಿಷ ಆರಲು ಬಿಟ್ಟು ಸ್ವಚ್ಛಗೊಳಿಸಬಹುದು.

6. ಸೌತೆಕಾಯಿ ಮುಖವಾಡ:

6. ಸೌತೆಕಾಯಿ ಮುಖವಾಡ:

- ಅರ್ಧ ಸೌತೆಕಾಯನ್ನು ರುಬ್ಬಿ ಒಂದು ಪ್ಲಾಸ್ಟಿಕ್ ಬೌಲ್‍ಗೆ ವರ್ಗಾಯಿಸಿ.

- ಸೌತೆಕಾಯಿ ಪೇಸ್ಟ್ ಗೆ ಒಂದು ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10-20 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆ ತಾಜಾಗೊಳ್ಳುವುದಷ್ಟೇ ಅಲ್ಲದೆ ವಯಸ್ಸಾದ ಚಿಹ್ನೆಯನ್ನು ಹೋಗಲಾಡಿಸಿ ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ.

7. ಅಕ್ಕಿ ನೀರಿನ ಮುಖವಾಡ:

7. ಅಕ್ಕಿ ನೀರಿನ ಮುಖವಾಡ:

- ಒಂದು ಟವೆಲ್ ಅನ್ನು ತೆಗೆದುಕೊಂಡು, ಅದರಲ್ಲಿ ಕಣ್ಣು, ಮೂಗು ಮತ್ತು ಬಾಯಿ ಬರುವಂತ ಭಾಗದಲ್ಲಿ ಒಂದೊಂದು ರಂಧ್ರಮಾಡಿ.

- ಬಳಿಕ ಆ ಟವೆಲ್ ಅನ್ನು ಅಕ್ಕಿ ನೀರಿನಲ್ಲಿ ಅದ್ದಿ, ಮುಖದ ಮೇಲೆ ಇಟ್ಟುಕೊಳ್ಳಿ.

- 15 ನಿಮಿಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದಂತೆ ವಿಶ್ರಮಿಸಲು ಬಿಡಿ.

- ಬಳಿಕ ಟವೆಲ್ ಅನ್ನು ನಿಧಾನವಾಗಿ ತೆಗೆಯಿರಿ. ನಂತರ ಅರ್ಧಗಂಟೆಗಳ ಕಾಲ ಆರಲು ಬಿಡಿ.

- ಮಿಶ್ರಣವು ಬಿಗಿದಂತಹ ಸಂವೇದನೆ ನೀಡುತ್ತಿದ್ದಂತೆಯೇ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

_ ಈ ಕ್ರಮವನ್ನು ಅನ್ವಯಿಸುವುದರಿಂದ ವಯಸ್ಸಾದ ಕಳೆಯನ್ನು ಬಹುಬೇಗ ಹೋಗಲಾಡಿಸಬಹುದು.

8. ಅಲೋವೆರಾ ಮುಖವಾಡ:

8. ಅಲೋವೆರಾ ಮುಖವಾಡ:

- ಒಂದು ಬೌಲ್ ಅಲ್ಲಿ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಅದಕ್ಕೆ ಕೆಲವು ಹನಿ ನಿಂಬೆ ರಸ ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮದಿಂದ ತ್ವಚೆಯಲ್ಲಿ ಕಾಲಜನ್ ಅನ್ನು ಪುನರ್ ಜೋಡಿಸುತ್ತದೆ. ಜೊತೆಗೆ ಚರ್ಮವು ಆರೋಗ್ಯವಾಗಿರುವಂತೆ ಮಾಡುವುದು.

9. ಮೆಂತ್ಯೆ ಮುಖವಾಡ:

9. ಮೆಂತ್ಯೆ ಮುಖವಾಡ:

- ಮೆಂತ್ಯೆಯನ್ನು ಒಂದು ರಾತ್ರಿ ನೆನೆಯಿಡಿ. ಮುಂಜಾನೆ ಅದನ್ನು ನೀರಿನಿಂದ ಬೇರ್ಪಡಿಸಿ, ರುಬ್ಬಿ.

- ಮೆಂತ್ಯೆ ಪೇಸ್ಟ್‍ಗೆ ಒಂದು ಟೀಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ. ಕಣ್ಣು ಮತ್ತು ಬಾಯಿಗೆ ಪೆಸ್ಟ್ ತಗುಲದಂತೆ ನೋಡಿಕೊಳ್ಳಿ.

- ಅರ್ಧ ಗಂಟೆಗಳ ಕಾಲ ಮುಖವಾಡ ಒಣಗಲು ಬಿಡಿ.

- ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

10. ಅರಿಶಿನ ಮುಖವಾಡ:

10. ಅರಿಶಿನ ಮುಖವಾಡ:

- ಒಂದು ಬೌಲ್‍ಅಲ್ಲಿ 1 ಟೇಬಲ್ ಚಮಚ ಕಸ್ತೂರಿ ಅರಿಶಿನ ಪುಡಿ ಮತ್ತು 3 ಟೀಚಮಚ ಗುಲಾಬಿ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ದಪ್ಪದಾದ ಮಾದರಿಯಲ್ಲಿ ತಯಾರಿಸಿಕೊಂಡ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯಗಳ ಕಾಲ ಮೃದುವಾಗಿ ಮಸಾಜ್ ಮಾಡಿ. 40 ಮಿಷಗಳಿಗಿಂತ ಅಧಿಕ ಕಾಲ ಮುಖದ ಮೇಲೆ ಇರಲು ಬಿಡಬೇಡಿ. ಸುಡುವ ಅಥವಾ ಕಿರಿಕಿರಿಯ ಸಂವೇದನೆ ಉಂಟಾಗಬಹುದು.

- ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

- ಈ ಕ್ರಮ ಅನ್ವಯಿಸುವುದರಿಂದ ಚರ್ಮವು ಆರೋಗ್ಯ ಹಾಗೂ ಕಾಂತಿಯಿಂದ ಕಂಗೊಳಿಸುವುದು.

Read more about: ಮನೆ ಚರ್ಮ
English summary

THE BEST HOMEMADE ANTI-AGING MASKS

If your skin looks healthy, you can easily hide your age. When your skin lacks glow, you might look older than your age.
Story first published: Wednesday, May 9, 2018, 14:59 [IST]
X
Desktop Bottom Promotion