ಅಡುಗೆ ಪದಾರ್ಥಗಳನ್ನು ಬಳಸಿ ತ್ವಚೆಯ ಚರ್ಮದ ಸಮಸ್ಯೆಯನ್ನು ಓಡಿಸಿ...

Posted By: Divya pandit Pandit
Subscribe to Boldsky

ಚರ್ಮ ಎನ್ನುವುದು ನಮ್ಮ ದೇಹದ ರಕ್ಷಾ ಕವಚ. ಅಂತೆಯೇ ಸೌಂದರ್ಯವನ್ನು ಬಿಂಬಿಸುವ ಒಂದು ಅಂಗವೂ ಹೌದು. ಆರೋಗ್ಯಕರ ಚರ್ಮವು ನಮ್ಮ ವಯಸ್ಸನ್ನು ಮರೆಮಾಚುತ್ತದೆ. ಜೊತೆಗೆ ನಮ್ಮ ಆರೋಗ್ಯದ ಗುಣಮಟ್ಟವನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಡುತ್ತದೆ. ಹಾಗಾಗಿಯೇ ಸಾಮಾನ್ಯವಾಗಿ ಬಹುತೇಕ ಮಂದಿ ಚರ್ಮದ ಆರೈಕೆ ಹಾಗೂ ಅದರ ಪೋಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮಾಲಿನ್ಯದ ಪರಿಸರ, ಅತಿಯಾದ ಸೂರ್ಯನ ಕಿರಣ ಹಾಗೂ ಕೆಟ್ಟ ಧೂಳುಗಳಿಂದ ಚರ್ಮವು ಬಹುಬೇಗ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಅದರಂತೆಯೇ ವಿವಿಧ ಆರೈಕೆಯ ವಿಧಾನಗಳೂ ಇವೆ.

ಅತಿ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಅತಿಯಾಗಿಯೇ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಅನಾರೋಗ್ಯವನ್ನು ಸರಿಪಡಿಸುವ ಸಲುವಾಗಿ ಬೆಲೆಬಾಳುವ ವಾಣಿಜ್ಯ ಸೌಂದರ್ಯ ಉತ್ಪನ್ನಗಳನ್ನು ಬಳಸಬಹುದು. ಆದರೆ ಅವುಗಳಲ್ಲಿ ಬಳಸುವ ಕೆಲವು ಉತ್ಪನ್ನಗಳು ತ್ವಚೆಯ ಮೇಲೆ ಗಾಢವಾದ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳು, ದೊಡ್ಡ ರಂಧ್ರಗಳು, ಕಪ್ಪು ವಲಯ ಮತ್ತು ಸುಕ್ಕು ಸೇರಿದಂತೆ ಇನ್ನಿತರ ಸಮಸ್ಯೆಗಳು ಚರ್ಮದ ಆರೋಗ್ಯವನ್ನು ಹಾಗೂ ಸೌಂದರ್ಯವನ್ನು ಹಾಳುಮಾಡುತ್ತದೆ.

ಚರ್ಮದ ಅನಾರೋಗ್ಯಕ್ಕೆ ಕಾರಣವಾಗುವ ಕೆಲವು ಸಾಮಾನ್ಯವಾದ ತೊಂದರೆಗಳಿಗೆ ಮನೆಯಲ್ಲಿ ಅಂದರೆ ಅಡುವೆ ಪದಾರ್ಥಗಳಾಗಿ ಬಳಸುವ ಕೆಲವು ಉತ್ಪನ್ನಗಳ ಬಳಕೆಯಿಂದ ಬಹುಬೇಗ ಆರೈಕೆಯನ್ನು ಮಾಡಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸಿ ಕೊಡಲಿದೆ...

ದೊಡ್ಡ ರಂಧ್ರಗಳ ಚಿಕಿತ್ಸೆಗೆ ಮೊಟ್ಟೆಯ ಬಿಳಿ ಭಾಗ

ದೊಡ್ಡ ರಂಧ್ರಗಳ ಚಿಕಿತ್ಸೆಗೆ ಮೊಟ್ಟೆಯ ಬಿಳಿ ಭಾಗ

ಚರ್ಮದ ಆರೋಗ್ಯಕ್ಕೆ ಪೂರಕವಾದ ಪ್ರೋಟಿನ್‍ಗಳಿಂದ ಕೂಡಿರುವ ಪದಾರ್ಥವೆಂದರೆ ಮೊಟ್ಟೆಯ ಬಿಳಿಭಾಗ. ಇದನ್ನು ಬಳಸುವುದರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ದೊಡ್ಡ ರಂಧ್ರಗಳನ್ನು ಮುಚ್ಚಬಹುದು ಮತ್ತು ಚರ್ಮವನ್ನು ಶುದ್ಧೀಕರಿಸುವುದು.

  • ತೇವ ಭರಿತವಾದ ಮುಖಕ್ಕೆ ಮೊಟ್ಟೆಯ ಬಿಳಿಭಾಗವನ್ನು ತೆಳುವಾಗಿ ಅನ್ವಯಿಸಿ.
  • ಅನ್ವಯಿಸಿದ ಲೇಪನವು ಸಂಪೂರ್ಣವಾಗಿ ಆರಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಶುದ್ಧೀಕರಿಸಿ.
  • ಪ್ರತಿವಾರ ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಕಪ್ಪು ವಲಯದ ನಿವಾರಣೆಗೆ ಸೌತೆಕಾಯಿ

ಕಪ್ಪು ವಲಯದ ನಿವಾರಣೆಗೆ ಸೌತೆಕಾಯಿ

ಸೌತೆಕಾಯಿಯಲ್ಲಿ ಆಂಟಿಆಕ್ಸಿಡೆಂಡ್ ಶಕ್ತಿಯು ಸಮೃದ್ಧವಾಗಿರುವುದರಿಂದ ಕಣ್ಣುಗಳ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ವಲಯಗಳನ್ನು ನಿವಾರಿಸುತ್ತದೆ.

- ತೆಳುವಾದ ಎರಡು ಸೌತೆಕಾಯಿ ಸ್ಲೈಸ್ (ತುಂಡು) ಅನ್ನು ತೆಗೆದುಕೊಳ್ಳಿ.

- ಕಣ್ಣಿನ ಮೇಲೆ ಇರಿಸಿಕೊಂಡು, 20-25 ನಿಮಿಷ ವಿಶ್ರಮಿಸಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶುದ್ಧೀಕರಿಸಿ.

- ನಿತ್ಯವೂ ಈ ಕ್ರಮವನ್ನು 3-4 ಬಾರಿ ಅನ್ವಯಿಸುವುದರಿಂದ ಸಮಸ್ಯೆಯನ್ನು ಬಹುಬೇಗ ನಿವಾರಿಸಬಹುದು.

3. ಚರ್ಮದ ಮೇಲೆ ಪಿಗ್ಮೆಂಟೇಶನ್ ಕಲೆ ತೆಗೆಯಲು ಆಲೂಗಡ್ಡೆ

3. ಚರ್ಮದ ಮೇಲೆ ಪಿಗ್ಮೆಂಟೇಶನ್ ಕಲೆ ತೆಗೆಯಲು ಆಲೂಗಡ್ಡೆ

ಆಲೂಗಡ್ಡೆ ಉತ್ತಮ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಬಣ್ಣವನ್ನು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

- ಆಲೂಗಡ್ಡೆ ಪೇಸ್ಟ್ ಮಾಡಿಕೊಂಡು, ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2 ಬಾರಿ ಈ ಕ್ರಮವನ್ನು ಅನ್ವಯಿಸಿ.

4. ಮೃತ ಕೋಶ ನಿವಾರಣೆಗೆ ಅಡುಗೆ ಸೋಡಾ

4. ಮೃತ ಕೋಶ ನಿವಾರಣೆಗೆ ಅಡುಗೆ ಸೋಡಾ

ಅಡುಗೆ ಸೋಡಾ ಎಫ್ಫೋಲಿಯಾಯಿಂಗ್ ಏಜೆಂಟ್‍ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ರಂಧ್ರಗಳಲ್ಲಿ ಸಂಗ್ರಹಗೊಂಡ ಮೃತ ಕೋಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

- 2 ಟೀಚಮಚ ನೀರಿಗೆ 1/2 ಟೀಚಮಚ ಅಡುಗೆ ಸೋಡಾವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಮೃದುವಾಗಿ 2-3 ನಿಮಿಷಗಳ ಕಾಲ ಮಸಾಜ್ ಮಾಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಪ್ರತಿವಾರ ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮದಲ್ಲಿರುವ ಮೃತ ಕೋಶಗಳನ್ನು ಬಲು ಸುಲಭವಾಗಿ ನಿವಾರಿಸಬಹುದು.

5. ಸೂರ್ಯನ ಕಿರಣದಿಂದ ಮಂಕಾದ ತ್ವಚೆಗೆ ಟೋಮೆಟೋ ಹಣ್ಣುಗಳು

5. ಸೂರ್ಯನ ಕಿರಣದಿಂದ ಮಂಕಾದ ತ್ವಚೆಗೆ ಟೋಮೆಟೋ ಹಣ್ಣುಗಳು

ಸೂರ್ಯನ ಕಿರಣಗಳಿಂದ ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಸಮಸ್ಯೆಯನ್ನು ಟೋಮೆಟೋ ಬಹಳ ಸುಲಭವಾಗಿ ನಿವಾರಿಸುತ್ತದೆ.

- ಟೋಮೆಟೋ ತಿರುಳನ್ನು ತೆಗೆದು, ಪೀಡಿತ ಪ್ರದೇಶದ ಮೇಲೆ ಅನ್ವಯಿಸಿ.

- ನಂತರ 15-20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2-3 ಬಾರಿ ಈ ಕ್ರಮವನ್ನು ಅನ್ವಯಿಸಿ.

6. ಮೊಡವೆಗಳ ನಿವಾರಣೆಗೆ ಅರಿಶಿನ:

6. ಮೊಡವೆಗಳ ನಿವಾರಣೆಗೆ ಅರಿಶಿನ:

ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿರುವ ನೈಸರ್ಗಿಕ ಉತ್ಪನ್ನ ಅರಿಶಿನ. ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ಮೊಡವೆಗಳ ನಿವಾರಣೆಗೂ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

- 1 ಟೀ ಚಮಚ ಗುಲಾಬಿ ನೀರಿಗೆ ಒಂದು ಪಿಂಚ್ ಅರಿಶಿನ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.

- 5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶಕ್ಕಾಗಿ ಈ ಕ್ರಮವನ್ನು ಗಣನೀಯವಾಗಿ ಅನ್ವಯಿಸಿ.

7. ಎಣ್ಣೆಯ ತ್ವಚೆಗೆ ಕಡ್ಲೇ ಹಿಟ್ಟು:

7. ಎಣ್ಣೆಯ ತ್ವಚೆಗೆ ಕಡ್ಲೇ ಹಿಟ್ಟು:

ಕಡ್ಲೇ ಹಿಟ್ಟು ಮೇದೋಗ್ರಂಥಿಗಳ ಸ್ರಾವ ಮತ್ತು ಎಣ್ಣೆಯನ್ನು ಹೀರಿಕೊಳ್ಳುವಂತಹ ಉತ್ಕರ್ಷಣ ನಿರೋಧಕ ಗುಣವನ್ನು ಒಳಗೊಂಡಿದೆ.

- 1/2 ಟೀ ಚಮಚ ಕಡ್ಲೇ ಹಿಟ್ಟಿಗೆ 1 ಟೇಬಲ್ ಚಮಚ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- 10 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ

8. ಮೊಡವೆ ಮುಕ್ತ ತ್ವಚೆಗೆ ಅಲೋವೆರಾ

8. ಮೊಡವೆ ಮುಕ್ತ ತ್ವಚೆಗೆ ಅಲೋವೆರಾ

ಅಲೋವೆರಾ ವಿಟಮಿನ್ ಇ ಹೊಂದಿರುವ ಅತ್ಯುತ್ತಮ ನೈಸರ್ಗಿಕ ಘಟಕ. ಇದರ ಅನ್ವಯದಿಂದ ಬಹುಬೇಗ ಮೊಡವೆಗಳನ್ನು ನಿವಾರಿಸಬಹುದು. ಜೊತೆಗೆ ಚರ್ಮವನ್ನು ಆರೋಗ್ಯವಾಗಿರುವಂತೆ ಮಾಡಬಹುದು.

- ತಾಜಾ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಅನ್ವಯಿಸಿ.

- ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶಕ್ಕೆ ದಿನದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸಿ.

9. ಶುಷ್ಕ ತ್ವಚೆಗೆ ಬಾಳೆಹಣ್ಣು

9. ಶುಷ್ಕ ತ್ವಚೆಗೆ ಬಾಳೆಹಣ್ಣು

ಬಾಳೆ ಹಣ್ಣು ನೈಸರ್ಗಿಕವಾಗಿ ಆದ್ರ್ರಕಾರಿ ಗುಣವನ್ನು ಒಳಗೊಂಡಿದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ.

- ಕಳಿತ ಬಾಳೆ ಹಣ್ಣನ್ನು ಕಿವುಚಿ, ಮುಖಕ್ಕೆ ಅನ್ವಯಿಸಿ.

- ಮೃದುವಾಗಿ ಮಸಾಜ್ ಮಾಡಿ, 15-20 ನಿಮಿಷಗಳಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

English summary

ten-super-effective-kitchen-ingredients-for-different-skin-problems

Today, at Boldsky, we're letting you know about the beauty ingredients for the aforementioned skin problems that can be easily found in your kitchen. These ingredients are far more safe and effective than store-bought products. So, read on to know more about these ingredients and the way to use them for different skin problems.