For Quick Alerts
ALLOW NOTIFICATIONS  
For Daily Alerts

  ವೈಟ್ ಹೆಡ್‌ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದುಗಳು

  |

  ಸೌಂದರ್ಯವೆಂಬುದು ಹೆಣ್ಣಿವೆ ವರದಾವಾಗಿದ್ದರೂ ಪ್ರಸ್ತುತ ದಿನಗಳಲ್ಲಿ ಕಲುಷಿತ ವಾತವಾರಣ ಮತ್ತು ಅವ್ಯವಸ್ಥಿತಿ ಆಹಾರ ಪದ್ಧತಿಯಿಂದ ತ್ವಚೆಯು ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಂಡು ನಿಸ್ತೇಜವಾಗುತ್ತಿದೆ. ಇದನ್ನೆಲ್ಲಾ ಸರಿಪಡಿಸಲು ಬ್ಯೂಟಿಪಾರ್ಲರ್‌ಗಳಿದ್ದರೂ ಅಲ್ಲೆಲ್ಲಾ ವೃಥಾ ದುಡ್ಡು ಸುರಿಯಬೇಕಾಗುತ್ತದೆ ಅಂತೆಯೇ ಇಲ್ಲಿ ದೊರೆಯುವ ಪರಿಹಾರ ಕೂಡ ತಾತ್ಕಾಲಿಕವಾಗಿರುತ್ತದೆ.

  ಅದರಲ್ಲೂ ಮೂಗಿನ ಅಕ್ಕಪಕ್ಕದಲ್ಲಿ ಮತ್ತು ಮೂಗಿನ ಮೇಲ್ಭಾಗದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್‌ನಂತೆಯೇ ವೈಟ್ ಹೆಡ್ ಎಂಬ ಬಿಳಿ ಚುಕ್ಕೆಗಳೂ ಸೌಂದರ್ಯವನ್ನು ಕುಗ್ಗಿಸುವ ಜೊತೆಗೇ ಚಿಂತೆಯನ್ನೂ ಹೆಚ್ಚಿಸುತ್ತವೆ. ವಾಸ್ತವವಾಗಿ ಕಪ್ಪು ಚುಕ್ಕೆಗಳಷ್ಟು ಸ್ಪಷ್ಟವಾಗಿ ಈ ಬಿಳಿಚುಕ್ಕೆಗಳು (ವೈಟ್ ಹೆಡ್ಡ್) ಕಾಣದೇ ಇರುವ ಕಾರಣ ಇವುಗಳನ್ನು ನಿವಾರಿಸ ಹೋದಾಗ ನೋವು ಬಾಧಿಸಬಹುದು. ಬಿಳಿ ಚುಕ್ಕೆಗಳು ಕಪ್ಪು ಚುಕ್ಕೆಯಂತೆಯೇ ಚರ್ಮದ ತೈಲ ಧೂಳು ಮತ್ತು ಬ್ಯಾಕ್ಟೀರಿಯಾಗಳು ಚರ್ಮದ ಸೂಕ್ಷ್ಮರಂಧ್ರದಲ್ಲಿ ಬಂಧಿಯಾಗಿ ಹೊರಹೋಗಲು ಜಾಗವಿಲ್ಲದೇ ಒಳಗೇ ಸೋಂಕು ಉಂಟಾಗುವ ಮೂಲಕ ಕೆಳಚರ್ಮದಲ್ಲಿ ಭದ್ರವಾಗಿ ಕುಳಿತುಕೊಂಡಿರುತ್ತವೆ.

  ಆದರೆ ಇದರ ತುದಿ ಬ್ಲಾಕ್ ಹೆಡ್‪ಗಿಂತಲೂ ಅತಿ ಚಿಕ್ಕದಾಗಿದ್ದು ಥಟ್ಟನೆ ಕಾಣಿಸದೇ ಇದ್ದರೂ ಬುಡದಲ್ಲಿ ಮಾತ್ರ ಹೂಜಿಯಂತೆ ಊದಿಕೊಂಡಿರುತ್ತದೆ. ಇದರ ಪರಿಣಾಮವಾಗಿ ಒಳಗಿನ ಊದಿಕೊಂಡ ಭಾಗ ಹೆಚ್ಚು ಹೆಚ್ಚು ಊದಿಕೊಳ್ಳುತ್ತಾ ಅಕ್ಕಪಕ್ಕದ ನರಗಳಿಗೆ ಸಂವೇದನೆ ನೀಡುವಷ್ಟು ಬೆಳೆದ ಬಳಿಕವೇ ಇವುಗಳ ಇರುವಿಕೆ ಗೊತ್ತಾಗುತ್ತದೆ.

  ಇದನ್ನು ನಿವಾರಿಸಲು ಚಿವುಟಿದರೆ ತುಂಬಾ ನೋವಾಗುತ್ತದೆ. ಬೇಸರದ ಸಂಗತಿ ಎಂದರೆ ಇವುಗಳನ್ನು ಒಂದೇ ಪ್ರಯತ್ನದಲ್ಲಿ ನಿವಾರಿಸುವ ವಿಧಾನ ಅಥವಾ ಔಷಧಿ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ಸೂಕ್ತ ಆರೈಕೆಯಿಂದ ನಿಧಾನವಾಗಿ ಇದನ್ನು ಗುಣಪಡಿಸಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ಹಲವು ಮದ್ದುಗಳು, ಕ್ರೀಮುಗಳು ಲಭ್ಯವಿವೆ. ಸೌಂದರ್ಯ ಮಳಿಗೆಯಲ್ಲಿಯೂ ಉತ್ತಮ ಸೇವೆ ಪಡೆಯಬಹುದು. ಆದರೆ ಇವೆಲ್ಲವೂ ದುಬಾರಿ, ಸಮಯ ಕಬಳಿಸುವ ಮತ್ತು ನೋವು ಅನಿವಾರ್ಯವಾದ ವಿಧಾನಗಳಾಗಿವೆ. ಸ್ವತಃ ಬಳಸಬಹುದಾದ ಮೂಗಿನ ಮೇಲೆ ಅಡ್ಡಲಾಗಿ ಹಚ್ಚಿ ಎಳೆದು ಕೀಳಬಹುದಾದ ಪಟ್ಟಿಗಳೂ ಲಭ್ಯವಿವೆ.

  ಆದರೆ ಈ ವಿಧಾನದಿಂದ ವೈಟ್ ಹೆಡ್ ಚುಕ್ಕಿಯ ತುದಿಭಾಗವನ್ನು ಮಾತ್ರ ಕೀಳಬಹುದೇ ಹೊರತು ಬುಡದ ಊದಿಕೊಂಡ ಭಾಗವನ್ನಲ್ಲ. ಇದು ಮತ್ತೆ ತುಂಬಿಕೊಂಡು ಪದೇ ಪದೇ ಈ ಪಟ್ಟಿಯನ್ನು ಉಪಯೋಗಿಸುತ್ತಾ ಇರಬೇಕಾಗುತ್ತದೆ. ಇದರಿಂದ ಪಟ್ಟಿ ತಯಾರಿಸುವ ಸಂಸ್ಥೆಯ ತಿಜೋರಿ ತುಂಬುತ್ತದೆಯೋ ಹೊರತು ನಿಮ್ಮ ವೈಟ್ ಹೆಡ್ ನಿವಾರಣೆಯಾಗುವುದಿಲ್ಲ. ಆದರೆ ಇದನ್ನು ಬುಡಸಹಿತ ನಿವಾರಿಸಲು ಅತ್ಯಂತ ಸರಳ ಮನೆಮದ್ದುಗಳನ್ನು ನೀಡಿದ್ದೇವೆ ಮುಂದೆ ಓದಿ...

  1. ಓಟ್‌ಮೀಲ್ ಮತ್ತು ಮೊಸರು

  1. ಓಟ್‌ಮೀಲ್ ಮತ್ತು ಮೊಸರು

  1 ಚಮಚ ಓಟ್‌ಮೀಲ್

  1 ಚಮಚ ಮೊಸರು

  ಬಳಸುವ ವಿಧಾನ

  ಈ ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ

  ನಿಮ್ಮ ಮುಖದ ಸುತ್ತ ಇದನ್ನು ಹಚ್ಚಿ

  10-15 ನಿಮಿಷ ಹಾಗೆಯೇ ಬಿಡಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ನಿಮ್ಮ ಮುಖದಲ್ಲಿರುವ ವೈಟ್‌ಹೆಡ್ಸ್‌ಗಳ ನಿವಾರಣೆಗೆ ಇವುಗಳು ಪರಿಣಾಮಕಾರಿಯಾಗಿವೆ.

  2. ಟೊಮೇಟೊ ಮತ್ತು ಲಿಂಬೆ ರಸದ ಫೇಸ್ ಪ್ಯಾಕ್

  2. ಟೊಮೇಟೊ ಮತ್ತು ಲಿಂಬೆ ರಸದ ಫೇಸ್ ಪ್ಯಾಕ್

  1 ಚಮಚ ಟೊಮೇಟೊ ರಸ

  1/2 ಚಮಚ ಲಿಂಬೆ ರಸ

  ಬಳಸುವ ವಿಧಾನ

  ಈ ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ

  ನಿಮ್ಮ ಮುಖದ ಸುತ್ತ ಇದನ್ನು ಹಚ್ಚಿ

  10-15 ನಿಮಿಷ ಹಾಗೆಯೇ ಬಿಡಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ನಿಮ್ಮ ಮುಖದಲ್ಲಿರುವ ವೈಟ್‌ಹೆಡ್ಸ್‌ಗಳ ನಿವಾರಣೆಗೆ ಇವುಗಳು ಪರಿಣಾಮಕಾರಿಯಾಗಿವೆ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ ನೋಡಿ

  3. ಗ್ರೀನ್ ಟಿ ಮತ್ತು ಕಡಲೆಹಿಟ್ಟಿನ ಫೇಸ್ ಪ್ಯಾಕ್

  3. ಗ್ರೀನ್ ಟಿ ಮತ್ತು ಕಡಲೆಹಿಟ್ಟಿನ ಫೇಸ್ ಪ್ಯಾಕ್

  1 ಚಮಚ ಗ್ರೀನ್ ಟಿ

  1/2 ಚಮಚ ಕಡಲೆ ಹಿಟ್ಟು

  ಬಳಸುವ ವಿಧಾನ

  ಈ ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು ನುಣ್ಣಗೆ ಪೇಸ್ಟ್ ಮಾಡಿ

  ನಿಮ್ಮ ಮುಖದ ಸುತ್ತ ಇದನ್ನು ಹಚ್ಚಿ

  10 ನಿಮಿಷ ಹಾಗೆಯೇ ಬಿಡಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ನಿಮ್ಮ ಮುಖದಲ್ಲಿರುವ ವೈಟ್‌ಹೆಡ್ಸ್‌ಗಳ ನಿವಾರಣೆಗೆ ಇವುಗಳು ಪರಿಣಾಮಕಾರಿಯಾಗಿವೆ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ ನೋಡಿ ಅಂತೆಯೇ ಇವುಗಳು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ.

  4. ವಿಜ್ ಹೇಜಲ್ ಮತ್ತು ಜೇನು ಫೇಸ್ ಪ್ಯಾಕ್

  4. ವಿಜ್ ಹೇಜಲ್ ಮತ್ತು ಜೇನು ಫೇಸ್ ಪ್ಯಾಕ್

  4-5 ಹನಿ ವಿಚ್ ಹೇಜಲ್

  1 ಚಮಚ ಜೇನು

  ಬಳಸುವ ವಿಧಾನ

  ಮೊದಲಿಗೆ ಎಲ್ಲವನ್ನೂ ಬೌಲ್‌ನಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ

  ನಿಮ್ಮ ಮುಖ ಇದನ್ನು ಹಚ್ಚಿಕೊಳ್ಳಿ

  5-10 ನಿಮಿಷ ಹಾಗೆಯೇ ಬಿಡಿ

  ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಇದನ್ನು ಮಾಡಿ

  ಜೇನು ನಿಮ್ಮ ಮುಖಕ್ಕೆ ಉತ್ತಮ ಮಸಾಜ್ ಅನ್ನು ನೀಡಿ ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ

  5. ವಿಟಮಿನ್ ಇ ಆಯಿಲ್ ಮತ್ತು ಟ್ರೀ ಟ್ರೀ ಆಯಿಲ್

  5. ವಿಟಮಿನ್ ಇ ಆಯಿಲ್ ಮತ್ತು ಟ್ರೀ ಟ್ರೀ ಆಯಿಲ್

  1 ವಿಟಮಿನ್ ಇ ಕ್ಯಾಪ್ಸುಲ್

  3-4 ಹನಿ ಟ್ರೀ ಟ್ರೀ ಆಯಿಲ್

  ಬಳಸುವ ವಿಧಾನ

  ವಿಟಮಿನ್ ಇ ಆಯಿಲ್‌ಗೆ ಸಮ ಪ್ರಮಾಣದಲ್ಲಿ ಟಿ ಟ್ರಿ ಆಯಿಲ್ ಅನ್ನು ತೆಗೆದುಕೊಳ್ಳಿ

  ನಿಮ್ಮ ಮುಖಕ್ಕೆ ಇದರಿಂದ ಮಸಾಜ್ ಮಾಡಿಕೊಂಡು 10-15 ನಿಮಿಷ ಹಾಗೆಯೇ ಬಿಡಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ತಿಂಗಳಿಗೆ ಎರಡು ಬಾರಿ ಇದನ್ನು ಬಳಸಿ ನೋಡಿ

  ಮುಖದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಮುಖದ ಪ್ರಖರತೆಗೆ ಈ ಫೇಸ್ ಪ್ಯಾಕ್ ನೆರವು ನೀಡುತ್ತದೆ.

  6. ಶ್ರೀಗಂಧದ ಹುಡಿ ಮತ್ತು ರೋಸ್ ವಾಟರ್

  6. ಶ್ರೀಗಂಧದ ಹುಡಿ ಮತ್ತು ರೋಸ್ ವಾಟರ್

  1/2 ಚಮಚ ಶ್ರೀಗಂಧದ ಹುಡಿ

  2 ಚಮಚ ರೋಸ್ ವಾಟರ್

  ಬಳಸುವ ವಿಧಾನ

  ಬೌಲ್‌ನಲ್ಲಿ ಈ ಎರಡೂ ಸಾಮಾಗ್ರಿಗಳನ್ನು ತೆಗೆದುಕೊಂಡು ಬ್ಲೆಂಡ್ ಮಾಡಿಕೊಳ್ಳಿ

  ನಿಮ್ಮ ಮುಖಕ್ಕೆ ಇದರಿಂದ ಮಸಾಜ್ ಮಾಡಿಕೊಂಡು 10-15 ನಿಮಿಷ ಹಾಗೆಯೇ ಬಿಡಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ತಿಂಗಳಿಗೆ ಎರಡು ಬಾರಿ ಇದನ್ನು ಬಳಸಿ ನೋಡಿ

  ಮುಖದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಮುಖದ ಪ್ರಖರತೆಗೆ ಈ ಫೇಸ್ ಪ್ಯಾಕ್ ನೆರವು ನೀಡುತ್ತದೆ.

  ಈ ಎರಡೂ ಸಾಮಾಗ್ರಿಗಳು ಅಗತ್ಯ ಅಂಶಗಳನ್ನು ಒಳಗೊಂಡಿದ್ದು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡು ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡುತ್ತದೆ.

  7. ಮೆಂತೆ ಮತ್ತು ಅಲೊವೇರಾ ಜೆಲ್

  7. ಮೆಂತೆ ಮತ್ತು ಅಲೊವೇರಾ ಜೆಲ್

  ಮುಷ್ಟಿಯಷ್ಟು ಮೆಂತ್ಯ

  2 ಚಮಚ ಅಲೊವೇರಾ ಜೆಲ್

  ಬಳಸುವ ವಿಧಾನ

  ಒಂದು ಬೌಲ್‌ನಲ್ಲಿ ಮೆಂತ್ಯವನ್ನು 5-6 ಗಂಟೆ ನೆನೆ ಹಾಕಿ

  ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ ಹಾಗೂ ಅಲೊವೇರಾ ಜೆಲ್‌ನೊಂದಿಗೆ ಮಿಶ್ರ ಮಾಡಿ

  ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿ

  10 ನಿಮಿಷ ಹಾಗೆಯೇ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ

  ಇದು ವೈಟ್‌ಹೆಡ್ಸ್‌ಗಳ ನಿವಾರಣೆಯನ್ನು ಮಾಡುವುದರ ಜೊತೆಗೆ ಮುಖಕ್ಕೆ ಕಾಂತಿಯನ್ನುಂಟು ಮಾಡುತ್ತದೆ.

  Read more about: skincare beauty
  English summary

  super-easy-diy-face-packs-to-tackle-whiteheads

  Whiteheads are tiny, round, white bumps that occur when your skin pores become clogged with dead skin cells, oil and impurities. They are a type of acne lesions that can pop up at any part of your face. This skin problem is common among women of all age groups. There are tons of whitehead-combating commercial skin care products that are available in the beauty stores these days. However, very few of them actually live up to the hype.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more