ಸುಂದರವಾಗಿ ಕಾಣಬೇಕೆ? ಹಾಗಾದರೆ ಪ್ರತಿನಿತ್ಯ ಈ ಸರಳ ಟಿಪ್ಸ್ ಅನುಸರಿಸಿ

Posted By: Hemanth
Subscribe to Boldsky

ರಾತ್ರಿ ಪಾರ್ಟಿ ಮುಗಿಸಿಕೊಂಡು ಬಂದು, ಹಾಗೆ ಮಲಗಿ ಬೆಳಗ್ಗೆ ಬೇಗ ಎದ್ದು ಕಚೇರಿಗೆ ಹೋಗುವ ಧಾವಂತ. ಇಂತಹ ಪರಿಸ್ಥಿತಿಯಲ್ಲಿ ಚರ್ಮದ ಆರೈಕೆ ಮಾಡಲು ನಮಗೆ ಸಮಯವೇ ಸಿಗುವುದಿಲ್ಲ. ಚರ್ಮದ ಆರೈಕೆಯಲ್ಲಿ ನಾವು ಮಾಡುವಂತಹ ದೊಡ್ಡ ತಪ್ಪು ಇದಾಗಿದೆ. ಇದನ್ನು ನಿವಾರಣೆ ಮಾಡಬೇಕೆಂದರೆ ಬೆಳಗ್ಗೆ ಹಾಗೂ ರಾತ್ರಿ ವೇಳೆ ಚರ್ಮದ ಆರೈಕೆಯ ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಇದರಿಂದ ಚರ್ಮವು ಯೌವನಯುತ ಹಾಗೂ ತಾಜಾತನ ಹೊಂದಿರುವುದು.

ಬೆಳಗ್ಗೆ ಎದ್ದು ಕಚೇರಿಗೆ ಹೋಗುವ ಮೊದಲು ಮೇಕಪ್ ಮಾಡಿಕೊಳ್ಳುವಂತಹ ಮಹಿಳೆಯರು ಈ ವಿಧಾನಗಳನ್ನು ತಪ್ಪದೆ ಪಾಲಿಸಬೇಕು. ಇದರಿಂದ ಮೇಕಪ್ ಮಾಡಲು ಸುಲಭವಾಗುವುದು. ಮುಖ ತೊಳೆಯದೆ ಯಾವತ್ತು ಕೂಡ ಮೇಕಪ್ ಮಾಡಿಕೊಳ್ಳಲು ಹೋಗಬೇಡಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲ್ಮಶಗಳು ಹಾಗೆ ಉಳಿದು, ಇದರಿಂದ ಮೊಡವೆಗಳು ಬರುವುದು. ನೀವು ಚರ್ಮದ ಆರೈಕೆಗೆ ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಅದು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ... 

ಚೆನ್ನಾಗಿ ಮುಖ ತೊಳೆಯಿರಿ

ಚೆನ್ನಾಗಿ ಮುಖ ತೊಳೆಯಿರಿ

ಬೆಳಗ್ಗೆ ಎದ್ದ ಬಳಿಕ ಮುಖ ತೊಳೆಯಿರಿ, ಇದರಿಂದ ನಿದ್ರೆಯಿಂದ ಹೊರಬರುವಿರಿ ಮತ್ತುರಾತ್ರಿ ಮಲಗಿರುವ ವೇಳೆ ಮುಖದಲ್ಲಿ ಕುಳಿತಿರುವಂತಹ ಧೂಳು ಹೋಗುವುದು. ರಾತ್ರಿ ಮಲಗುವ ವೇಳೆ ನೀವು ಹಾಕಿರುವಂತಹ ಕ್ರೀಮ್‌ಗಳು ಧೂಳನ್ನು ಸೆಳೆಯುವುದು. ನಿಮ್ಮ ನೆಚ್ಚಿನ ಕ್ಲೆನ್ಸರ್ ಬಳಸಿಕೊಳ್ಳಿ. ನೀವು ಜೆಲ್ ಅಥವಾ ಫಾಮ್ ಕ್ಲೆನ್ಸರ್ ಬಳಸಬೇಕೆಂದು ನಾವು ಸಲಹೆ ಮಾಡುತ್ತೇವೆ. ಎಣ್ಣೆಯ ಕ್ಲೆನ್ಸರ್ ಅನ್ನು ರಾತ್ರಿ ಮಾತ್ರ ಬಳಸಿಕೊಳ್ಳಬದು. ಮುಖದಲ್ಲಿರುವ ಮೇಕಪ್ ತುಂಬಾ ಗಾಢವಾಗಿರುವ ಕಾರಣದಿಂದಾಗಿ ಎಣ್ಣೆಯುಕ್ತ ಕ್ಲೆನ್ಸರ್ ಬಳಸಿ.

ಟೋನರ್

ಟೋನರ್

ಹೆಚ್ಚಿನ ಮಹಿಳೆಯರು ಈ ಕ್ರಮವನ್ನು ಬಿಟ್ಟುಬಿಡುವರು. ಯಾಕೆಂದರೆ ಟೋನರ್ ಹೆಚ್ಚು ಮುಖ್ಯವಲ್ಲವೆಂದು ಅವರು ಭಾವಿಸಿರುವರು. ಒಳ್ಳೆಯ ಟೋನರ್ ಬಳಸಿಕೊಂಡಾಗ ನಿಮಗೆ ಅದರ ಪ್ರಾಮುಖ್ಯತೆ ತಿಳಿದುಬರುವುದು. ಒಳ್ಳೆಯ ಟೋನರ್ ರಂಧ್ರಗಳನ್ನು ಮುಚ್ಚುವುದು ಮಾತ್ರವಲ್ಲದೆ, ಚರ್ಮದಲ್ಲಿನ ಪಿಎಚ್ ಮಟ್ಟ ಕಾಪಾಡುವುದು, ನೀವು ಬಳಸಿರುವ ಕ್ರೀಮ್ ಮತ್ತು ಎಣ್ಣೆಯನ್ನು ಚರ್ಮದಿಂದ ತೆಗೆಯುವುದು. ಇದು ಚರ್ಮದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಪ್ರಮುಖ ಪಾತ್ರ ವಹಿಸುವುದು. ಟೋನರ್ ಬಳಸಿದರೆ ಹತ್ತಿ ಉಂಡೆಯಲ್ಲಿರುವ ಹೆಚ್ಚಿನ ಧೂಳು ನಿಮಗೆ ಕಂಡುಬರುವುದು. ಈ ಧೂಳನ್ನು ಕ್ಲೆನ್ಸರ್ ನಿಂದ ತೆಗೆಯಲು ಸಾಧ್ಯವಾಗಿಲ್ಲ. ನೀವು ಟೋನರ್ ಬಳಸದೆ ಮಾಯಿಶ್ಚಿರೈಸರ್ ಮುಖಕ್ಕೆ ಹಾಕಿಕೊಂಡಿದ್ದರೆ ಆಗ ಧೂಳು ಮುಖದಲ್ಲೇ ಉಳಿದುಬಿಡುತ್ತಿತ್ತು. ಇದರಿಂದಾಗಿ ಮೊಡವೆ ಉಂಟಾಗುತ್ತಿತ್ತು. ಇದರಿಂದ ಮಾಯಿಶ್ಚಿರೈಸರ್‌ನಷ್ಟೇ ಟೋನರ್ ಕೂಡ ಮುಖ್ಯ.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ನೀವು ತುಂಬಾ ಲಘು, ಜೆಲ್ ಇರುವಂತಹ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ದಿನದಲ್ಲಿ ಹೆಚ್ಚು ಬೆವರು ಕಾರಣದಿಂದ ಇದು ಒಳ್ಳೆಯದು. ಇದರಿಂದ ನಿಮಗೆ ಇನ್ನಷ್ಟು ಬೆವರು ಬರದೇ ಇರಲು ತುಂಬಾ ಲಘು ಮೊಶ್ಚಿರೈಸರ್ ಬಳಸಿ. ದಿನದಲ್ಲಿ ಬಳಸುವಂತಹ ಕ್ರೀಮ್‌ಗಳು ತುಂಬಾ ಲಘುವಾಗಿರುವುದು ಮತ್ತು ಇದರ ಮೇಲೆ ಮೇಕಪ್ ಹಾಕಿಕೊಳ್ಳಬಹುದು. ನೀವು ದಪ್ಪಗಿನ ಕ್ರೀಮ್ ಬಳಸಿದರೆ ಅದು ಕರಗುವುದು. ಇದರೊಂದಿಗೆ ಮೇಕಪ್ ಕೂಡ ಕರಗಿ ಬರುವುದು. ಇದರಿಂದ ನಿಮ್ಮ ಚರ್ಮ ಎಷ್ಟೇ ಒಣಗಿದ್ದರೂ ನೀವು ಹಗುರ ಜೆಲ್ ಕ್ರೀಮ್ ಬಳಸಿ.

ಕಣ್ಣಿನ ಕ್ರೀಮ್

ಕಣ್ಣಿನ ಕ್ರೀಮ್

ಕಣ್ಣಿನ ಕೆಳಭಾಗದಲ್ಲಿರುವ ಚರ್ಮವು ತುಂಬಾ ಸೂಕ್ಷ್ಮ ಮತ್ತು ತೆಳುವಾಗಿರುವುದು. ಇದರಿಂದ ಇದಕ್ಕೆ ಹೆಚ್ಚಿನ ಮಾಯಿಶ್ಚರೈಸರ್ ಬೇಕಾಗುವುದು. ನೀವು ಇದಕ್ಕಾಗಿ ಕಣ್ಣಿನ ಕ್ರೀಮ್ ಬಳಸಿಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಕಣ್ಣಿನ ಕೆಳಗಿನ ಭಾಗವು ಒಳ್ಳೆಯ ರೀತಿಯಿಂದ ಮಾಯಿಶ್ಚರೈಸರ್ ಆಗಿರುವುದು. ಇದರಿಂದ ನೆರಿಗೆ ಬೀಳುವುದನ್ನು ತಪ್ಪಿಸಬಹುದು. ಕಣ್ಣಿನ ಕಳೆಗಿನ ಭಾಗದಲ್ಲಿ ವಯಸ್ಸಾಗುವ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುವುದು. ಕಣ್ಣಿನ ಕ್ರೀಮ್ ಬಳಸುವುದರಿಂದ ಇದನ್ನು ನಿವಾರಣೆ ಮಾಡಬಹುದು.

ಅಲೋವೆರಾ ಬಳಸಿ

ಅಲೋವೆರಾ ಬಳಸಿ

ಒಂದು ಅಲೋವೆರಾ ಎಲೆಯನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ.

ಒಂದು ಕಪ್ ನೀರಿಗೆ 2 ಟೇಬಲ್ ಚಮಚ ಅಲೋವೆರಾ ಜೆಲ್ ಬೆರೆಸಿ.

ಬಳಿಕ ಒಂದು ಹತ್ತಿಯ ಉಂಡೆಯಿಂದ ಮುಖಕ್ಕೆ ಅನ್ವಯಿಸಿ.

ಈ ಕ್ರಮವನ್ನು ಗಣನೀಯವಾಗಿ ಅನ್ವಯಿಸುವುದರಿಂದ ಚರ್ಮದ ಮೇಲಿರುವ ದದ್ದು ಮತ್ತು ಸುಟ್ಟ ಕಲೆಯು ನಿವಾರಣೆ ಹೊಂದುವುದು.

English summary

Skin Care Tips And Tricks One Should Follow Every Morning

We have seen that having a routine like this actually helps in waking you up and helping you feel refreshed. It also helps to brighten up your face before. And for those of you ladies who use makeup in the morning, a skin care routine would help your makeup go on a lot smoother. So, here's a skincare routine that you must follow during the day time.
Story first published: Wednesday, April 11, 2018, 7:01 [IST]