For Quick Alerts
ALLOW NOTIFICATIONS  
For Daily Alerts

  ಚಳಿಗಾಲದಲ್ಲಿ ತ್ವಚೆಯ ಆರೈಕೆಯನ್ನು ಹೀಗೆ ಮಾಡುವುದು ಉತ್ತಮ...

  By Divya Pandith
  |

  ಚಳಿಗಾಲ ಎಂದರೆ ಸಾಮಾನ್ಯವಾಗಿ ಶುಷ್ಕ ವಾತಾವರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಚಳಿಗಾಲದ ಗಾಳಿಯಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ತ್ವಚೆಗಳು ಬಹು ಬೇಗ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಶುಷ್ಕತೆಯಿಂದ ನಿರ್ಜೀವ ಕೋಶಗಳು ಚರ್ಮದ ಮೇಲ್ಭಾಗದಲ್ಲಿ ಇರುತ್ತವೆ. ಈ ಸಮಸ್ಯೆಗಳಿಗೆ ಅನೇಕ ಪ್ರತಿಷ್ಟಿತ ಸಂಸ್ಥೆಗಳ ಔಷಧ, ಕ್ರೀಮ್ ಹಾಗೂ ತೈಲಗಳು ಬಂದಿವೆಯಾದರೂ ದೀರ್ಘ ಸಮಯಗಳ ಕಾಲ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ.

  ಅದೇ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಕೆಲವು ಬದಲಾವಣೆ ಹಾಗೂ ಆರೋಗ್ಯ ಕ್ರಮದಲ್ಲಿ ಸುಧಾರಣೆಯನ್ನು ಮಾಡಿಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಬಹುಬೇಗ ನಿವಾರಿಸಬಹುದು. ಚಳಿಗಾಲ ಎನ್ನುವ ಕೆಲವು ತಿಂಗಳುಗಳ ಕಾಲ ಆದಷ್ಟು ನಮ್ಮ ತ್ವಚೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕಾಗಿ ಸೆಲವು ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗುವುದು. ಹಾಗಾದರೆ ಆ ಕ್ರಮಗಳು ಯಾವವು? ಎನ್ನುವುದನ್ನು ನಿಮಗೆ ತಿಳಿದುಕೊಳ್ಳಬೇಕು ಎನಿಸಿದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಓದಿ...

  ಹೆಚ್ಚು ನೀರನ್ನು ಕುಡಿಯಬೇಕು

  ಹೆಚ್ಚು ನೀರನ್ನು ಕುಡಿಯಬೇಕು

  ನೀರು ನಮ್ಮ ಆಂತರಿಕ ಅಂಗಗಳನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಪ್ರತಿದಿನ ಆರೋಗ್ಯಕರ ಆಹಾರವನ್ನು ನಾವು ಸೇವಿಸುವುದರಲ್ಲಿ ವಂಚಿತರಾಗಬಹುದು. ನಾವು ಸೇವಿಸುವ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಹೊರ ಹಾಕಲು ನೀರು ಸಹಾಯಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚು ತಂಪಿನ ವಾತಾವರಣ ಇರುವುದರಿಂದ ನೀರು ಕುಡಿಯುವ ಬಯಕೆ ಆಗದು. ಆದರೂ ದಿನಕ್ಕೆ ಕನಿಷ್ಠ 3-4 ಲೀ. ನೀರನ್ನು ಕುಡಿಯಬೇಕು. ಆಗ ದೇಹಕ್ಕೆ ಹಾಗೂ ಚರ್ಮಕ್ಕೆ ಬೇಕಾದ ನೀರಿನಂಶವು ದಾರಾಳವಾಗಿ ದೊರೆಯುವುದು. ಚರ್ಮವೂ ಆರೋಗ್ಯದಿಂದ ಕೂಡಿರುವುದು.

  ಉತ್ತಮ ನಿದ್ರೆ

  ಉತ್ತಮ ನಿದ್ರೆ

  ಸ್ನೇಹಿತರೊಂದಿಗೆ ಚಲನಚಿತ್ರ ನೋಡುತ್ತಾ ತಡ ರಾತ್ರಿ ನಿದ್ರೆ ಮಾಡುವುದು ಅಥವಾ ಕೆಲಸದ ಒತ್ತಡದಿಂದ ನಿದ್ರೆಯ ಅವಧಿಯನ್ನು ಕಡಿಮೆ ಮಾಡಿಕೊಳ್ಳುವುದು ಸಹಜ. ಆದರೆ ಚಳಿಗಾಲದಲ್ಲಿ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ ಎನ್ನುವುದನ್ನು ಮರೆಯಬಾರದು. ಚಳಿಗಾಲದ ನಿದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಿದ್ರಾಹೀನತೆ ಉಂಟಾದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು. ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆ ಬೀಳುವುದು ಹಾಗೂ ಜೀವನದಲ್ಲಿ ಉತ್ಸಾಹವನ್ನು ಕಳೆದು ಕೊಳ್ಳಬೇಕಾಗುವುದು.

  ಆದಷ್ಟು ಹಸಿ ತರಕಾರಿಯನ್ನು ಸೇವಿಸಿ

  ಆದಷ್ಟು ಹಸಿ ತರಕಾರಿಯನ್ನು ಸೇವಿಸಿ

  ಚಳಿಗಾಲದ ವಾತಾವರಣ ನಮಗೆ ಬಿಸಿ ಬಿಸಿಯಾದ ಮತ್ತು ಮಸಾಲಯುಕ್ತ ಆಹಾರವನ್ನು ಸೇವಿಸಬೇಕೆನ್ನುವ ಮನಸ್ಸಾಗುವುದು ಸಹಜ. ಆದರೆ ನಮ್ಮ ಕೆಲವು ಬಯಕೆಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ನಿತ್ಯವು ಒಂದಿಷ್ಟು ಹಸಿ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.

  ಶವರ್ ಸ್ನಾನ ಒಳ್ಳೆಯದ್ದಲ್ಲ

  ಶವರ್ ಸ್ನಾನ ಒಳ್ಳೆಯದ್ದಲ್ಲ

  ಚಳಿಗಾಲದಲ್ಲಿ ಬೆಚ್ಚಗಿನ ನೀರಿನಲ್ಲಿ ಅಧಿಕ ಸಮಯಗಳ ಕಾಲ ಶವರ್ ಸ್ನಾನ ಮಾಡಬಾರದು. 10 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಸಿನೀರಿನ ಶವರ್ ಸ್ನಾನ ದೇಹದಲ್ಲಿರುವ ಅಂದರೆ ತ್ವಚೆಯ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮವು ಬಹು ಬೇಗ ಬಿರುಕು, ಒಣಗಿರುವ ಸಂವೇದನೆ ಹಾಗೂ ಉರಿಯೂತವನ್ನು ಅನುಭವಿಸುವುದು.

  ಉತ್ತಮ ವ್ಯಾಯಾಮ ಅಗತ್ಯ

  ಉತ್ತಮ ವ್ಯಾಯಾಮ ಅಗತ್ಯ

  ಚಳಿಗಾಲದ ಚಳಿಯಲ್ಲಿ ದೈಹಿಕವಾಗಿ ಹೆಚ್ಚು ಚಟುವಟಿಕೆಗೆ ನಡೆಸಲು ಮನಸ್ಸು ಬಯಸದು. ಆದರೆ ನಿತ್ಯವು ನಿರ್ದಿಷ್ಟವಾದ ವ್ಯಾಯಾಮ ಮಾಡುವುದರಿಂದ ದೇಹವು ಹೆಚ್ಚು ಆರೋಗ್ಯದಿಂದ ಕೂಡಿರುತ್ತದೆ. ಯೋಗ, ವ್ಯಾಯಾಮ, ಮುಂಜಾನೆಯ ನಡಿಗೆ ಹಾಗೂ ಇನ್ನಿತರ ದೈಹಿಕ ಕಸರತ್ತುಗಳು ದೇಹ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ.

  ಚಳಿಯಿಂದ ರಕ್ಷಣೆ

  ಚಳಿಯಿಂದ ರಕ್ಷಣೆ

  ಚಳಿಗಾಲದಲ್ಲಿ ನಮ್ಮ ದೇಹವನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ಸಹ ಬಹಳ ಪ್ರಮುಖವಾದದ್ದು. ಮಾರುಕಟ್ಟೆಯಲ್ಲಿ ದೊರೆಯುವ ದಪ್ಪದಾದ ಹತ್ತಿ ಹಾಗೂ ಉಣ್ಣೆ ಬಟ್ಟೆಯನ್ನು ಬಳಸಿ. ಕಿವಿ, ಎದೆ, ಕೈ-ಕಾಲುಗಳು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಅದರಲ್ಲೂ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಹೊರಗೆ ಹೋಗುವಾಗ ಮತ್ತು ತಣ್ಣನೆ ಗಾಳಿ ಬೀಸುವಾಗ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುವುದು. ಪಪ್ಪಾಯಿಯಲ್ಲಿರುವಂತಹ ಅಧಿಕ ನೀರಿನಾಂಶವು ಚರ್ಮವನ್ನು ತುಂಬಾ ನಯ, ಮೃಧು ಹಾಗೂ ತೇವಾಂಶದಿಂದ ಇಡುವುದು.ಅವಕಾಡೋ ಮತ್ತು ಬಾಳೆಹಣ್ಣಿನಲ್ಲಿ ವಿಟಮಿನ್ ಇ ಮತ್ತು ಪೊಟಾಶಿಯಂ ಅತ್ಯಧಿಕವಾಗಿದೆ. ಇದರಿಂದ ಚರ್ಮದಲ್ಲಿ ಮಾಯಿಶ್ಚರೈಸರ್ ಅನ್ನು ಉಳಿಸಿ ಕೊಳ್ಳಬಹುದು.

  ಬಳಸುವುದು ಹೇಗೆ?

  *ಬಾಳೆಹಣ್ಣಿನ ಸಿಪ್ಪೆ ತೆಗೆದು ಅದನ್ನು ಅವಕಾಡೋ ಮತ್ತು ಪಪ್ಪಾಯಿ ತಿರುಳಿನ ಜತೆ ಸೇರಿಸಿ. ಇದನ್ನು ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ.

  *ಪೇಸ್ಟ್ ನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

  *ಮುಖದ ಮೇಲೆ ಸುಮಾರು 15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

  *ನೀರಿನಿಂದ ಮುಖ ತೊಳೆಯಿರಿ.

  *ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ

  ಶಿಯಾ ಬೆಣ್ಣೆ

  ಶಿಯಾ ಬೆಣ್ಣೆ

  ಎಲ್ಲಾ ಬಗೆಯ ಚರ್ಮದವರಿಗೂ ಶಿಯಾ ಬೆಣ್ಣೆ ಉತ್ತಮವಾಗಿದ್ದು ನಿಮ್ಮ ಪ್ರಸಾಧನಗಳಲ್ಲಿ ಈ ಅಂಶವಿದೆಯೋ ಎಂದು ಪರಿಶೀಲಿಸಿಕೊಳ್ಳಿ. ಈ ಪೋಷಕಾಂಶ ಇತರ ಎಲ್ಲಾ ಪೋಷಕಾಂಶಗಳಿಗಿಂತಲೂ ಅತಿ ಹೆಚ್ಚು ಕಾಲ ಪೋಷಣೆ ನೀಡುತ್ತಾ ಇರುವ ಮೂಲಕ ಹೆಚ್ಚು ಹೊತ್ತು ಚರ್ಮದ ರಕ್ಷಣೆ ಮಾಡುತ್ತದೆ. ಶಿಯಾ ಬೆಣ್ಣೆ ಚರ್ಮಕ್ಕೆ ಅಗತ್ಯವಾದ ಆದ್ರತೆ ನೀಡುವ ಮೂಲಕ ಒಣಗುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಹೊಸ ಜೀವಕೋಶಗಳು ಹುಟ್ಟಲು ಮತ್ತು ಚಳಿಗಾಲವನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತದೆ.

  ಕೊಬ್ಬರಿ ಎಣ್ಣೆ

  ಕೊಬ್ಬರಿ ಎಣ್ಣೆ

  ಒಣ ಚರ್ಮದವರಿಗೆ ಚಳಿಗಾಲ ಶತ್ರುವಾಗಿದೆ. ಏಕೆಂದರೆ ಮೊದಲೇ ಒಣಚರ್ಮವಾಗಿದ್ದು ಈಗ ಚಳಿಗಾಲದ ಕಾರಣದಿಂದ ಇನ್ನಷ್ಟು ಒಣಗುತ್ತದೆ. ಇವರಿಗೆ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆಯಾಗಿದ್ದು ಚರ್ಮ ಸೌಮ್ಯ ಮತ್ತು ನಯವಾಗಿರಲು ನೆರವಾಗುತ್ತದೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಕೊಂಚ ಕೊಬ್ಬರಿ ಎಣ್ಣೆ ಸವರಿ ಮಲಗುವ ಮೂಲಕ ಒಣಚರ್ಮ ಆರೋಗ್ಯಕರವಾಗಿರುತ್ತದೆ. ಕೊಬ್ಬರಿ ಎಣ್ಣೆ ಚರ್ಮದ ಆಳಕ್ಕೆ ಇಳಿದು ಒಣಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಹಾಗೂ ಚರ್ಮ ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುವ ಮೂಲಕ ಇನ್ನಷ್ಟು ಒಣಗುವುದರಿಂದ ತಡೆಯುತ್ತದೆ.

  English summary

  Skin Care Tips To Remember This Winter

  Winter is already here and you must be worried about the harsh weather taking a toll over your health and skin. After the last few months of hot and sticky weather, winter truly comes as a blessing. But this season, there are certain winter preparedness tips that you must follow for good health and beauty. A healthy diet with right exercise is a solution for protecting yourself against any kind of weather, especially the cold winter. You can wear thick cottons and cover yourself with shawls. Try to avoid woolen clothes. You definitely would not want to wear an animal's skin. Here are a few winter health care tips that you must follow for a healthy body and glowing skin.
  Story first published: Thursday, January 4, 2018, 23:40 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more