For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ತ್ವಚೆ ಇರುವವರು ಜೇನುತುಪ್ಪವನ್ನು ಬಳಸಿ ನೋಡಿ

By Sushma Charhra
|

ಜೇನುತುಪ್ಪವು ಶತಮಾನದ ಹಿಂದಿನ ಮದ್ದಾಗಿದ್ದು,ನಾವು ಎದುರಿಸುವ ಸೌಂದರ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸುವ ತಾಕತ್ತು ಇದಕ್ಕಿದೆ..ಚರ್ಮದ ಮೇಲೆ ಇದು ಬಹಳ ತ್ವರಿತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಎಲ್ಲಾ ಅಗತ್ಯ ನ್ಯೂಟ್ರಿಯಂಟ್ಸ್ ಗಳೂ ಇದೆ ಮತ್ತು ಇದು ನಮ್ಮ ಚರ್ಮಕ್ಕೆ ಹಲವು ರೀತಿಯಲ್ಲಿ ಲಾಭಗಳನ್ನು ಮಾಡುತ್ತೆ.. ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಇವು ಚರ್ಮಕ್ಕೆ ವಯಸ್ಸಾಗುವುದನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಚರ್ಮದ ಜಿಗುಟುತನವನ್ನು ತೊಡೆದುಹಾಕಿ ಹೊಳೆಯುವ, ಕಾಂತಿಯುಂತವಾದ ತ್ವಚೆಯನ್ನು ನೀಡಲು ಇದು ನೆರವಾಗುತ್ತದೆ.

ಇದನ್ನು ಹೊರತು ಪಡಿಸಿ, ಯಾರದ್ದು ಎಣ್ಣೆ ತ್ವಚೆಯಾಗಿರುತ್ತದೆಯೂ ಅವರಿಗೆ ಜೇನುತುಪ್ಪವು ಅತ್ಯಂತ ಉತ್ತಮವಾದ ಮದ್ದಾಗಿದೆ. ಆಯಿಲಿ ಸ್ಕಿನ್ ಯಾವಾಗ ಆಗುತ್ತದೆಯೆಂದರೆ ಚರ್ಮವು ಸ್ವಯಂಚಾಲಿತವಾಗಿ ಹೆಚ್ಚಿನ ಎಣ್ಣೆಯ ಅಂಶವನ್ನು ದೇಹದಿಂದ ಹೊರ ಹಾಕಲು ಆರಂಭಿಸಿದಾಗ ಈ ಸಮಸ್ಯೆ ಉದ್ಭವವಾಗುತ್ತೆ. ಈ ರೀತಿಯ ಎಣ್ಣೆಯ ಅಂಶವು ಹೊರಬರುವುದರಿಂದಾಗಿ ಆಕ್ನೆ ಮತ್ತು ಮೊಡವೆಯಂತಹ ಸಮಸ್ಯೆಗಳು ಉದ್ಭವವಾಗುತ್ತದೆ. ಅಡುಗೆ ಮನೆಯ ಇತರೆ ಪದಾರ್ಥಗಳೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಬಳಕೆ ಮಾಡುವುದರಿಂದಾಗಿ, ನೀವು ಶಾಶ್ವತವಾದ ಮತ್ತು ಬೇಗನೆ ದೊರಕುವ ಪರಿಹಾರವನ್ನು ಎಣ್ಣೆ ತ್ವಚೆಯಿಂದ ಮುಕ್ತಿ ಪಡೆಯಲು ಬಳಸಬಹುದು. ಹಾಗಾದ್ರೆ ಯಾವ ರೀತಿ ಎಣ್ಣೆ ತ್ವಚೆಯವರು ಜೇನುತುಪ್ಪದಿಂದ ಪರಿಹಾರ ಕಂಡುಕೊಳ್ಳಬಹುದು ಇಲ್ಲಿದೆ ನೋಡಿ.ಮುಂದೆ ಓದಿ.

home remedies for oily skin in kannada

ಬಾಳೆ ಹಣ್ಣು ಮತ್ತು ಜೇನುತುಪ್ಪ

ಬಾಳೆ ಹಣ್ಣು ಮತ್ತು ಜೇನುತುಪ್ಪವು ಮಾಯ್ಚರೈಸ್ ಮಾಡಲು ಮತ್ತು ಚರ್ಮವನ್ನು ಹೈಡ್ರೇಟ್ ಮಾಡಲು ನೆರವಾಗುತ್ತದೆ. ಜೇನುತುಪ್ಪವು ಆಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಕೂಡಿರುವುದರಿಂದಾಗಿ, ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಅಧಿಕವಾಗುವುದನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ.

ಬೇಕಾಗುವ ಪದಾರ್ಥಗಳು :
• 2 ಟೇಬಲ್ ಸ್ಪೂನ್ ಜೇನುತುಪ್ಪ
• ½ ಬಾಳೆಹಣ್ಣು

ಮಾಡುವ ವಿಧಾನ ಹೇಗೆ?
1. ಅರ್ಧ ಬಾಳೆಹಣ್ಣು ತೆಗೆದುಕೊಳ್ಳಿ ಮತ್ತು ಅದನ್ನು ಮ್ಯಾಶ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
2. ಈಗ ಅದಕ್ಕೆ ಎರಡು ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
3. ಇದರ ಲೇಯರ್ ಅನ್ನು ಮುಖದ ಮೇಲೆ ಸಮನಾಗಿ ಅಪ್ಲೈ ಮಾಡಿ ಮತ್ತು ಮುಖದ ಮೇಲೆ ಹಾಗೆಯೇ ಬಿಡಿ. 4. 15-20 ನಿಮಿಷ ಬಿಟ್ಟು ಸಾಮಾನ್ಯ ನೀರಿನಲ್ಲಿ ಮುಖವನ್ನು ತೊಳೆಯರಿ.

ಜೇನುತುಪ್ಪ ಮತ್ತು ಓಟ್ಸ್ ಮೀಲ್

ಜೇನುತುಪ್ಪ ಮತ್ತು ಓಟ್ ಮೀಲ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಅದು ಚರ್ಮವನ್ನು ಬೆಳೆಸಲು ಮತ್ತು ಕಳಾಹಿನ ತ್ವಚೆಯನ್ನು ಗುಣಪಡಿಸಲು ನೆರವಾಗುತ್ತದೆ. ವಾರಕ್ಕೆ ಒಮ್ಮೆಯಾದರೂ ಈ ಫೇಸ್ ಪ್ಯಾಕ್ ಬಳಕೆ ಮಾಡಿದರೆ, ನಿಮ್ಮ ಚರ್ಮವು ಹೊಳೆಯುವುವಂತಾಗಲು ನೆರವಾಗುತ್ತದೆ.

ಬೇಕಾಗುವ ಪದಾರ್ಥಗಳು :
• 2 ಟೇಬಲ್ ಸ್ಪೂನ್ ಓಟ್ ಮೀಲ್
• 1 ಟೇಬಲ್ ಸ್ಪೂನ್ ಜೇನುತುಪ್ಪ

ಮಾಡುವ ವಿಧಾನ ಹೇಗೆ? :
- ಮೊದಲು ಓಟ್ ಮೀಲನ್ನು ಬ್ಲೆಂಡ್ ಮಾಡಿ ಮತ್ತು ಉತ್ತಮವಾದ ಪೌಡರ್ ತಯಾರಿಸಿ
- ಎರಡು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ.
- ಸಮನಾಗಿ ಅದನ್ನು ನಿಮ್ಮ ಮುಖದ ಮೇಲೆ ಅಪ್ಲೈ ಮಾಡಿ ಮತ್ತು ನಿಧಾನವಾಗಿ ವೃತ್ತಾಕಾರದಲ್ಲಿ ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿ. ಸುಮಾರು 5 ನಿಮಿಷ ಇದನ್ನು ಮುಂದುವರಿಸಿ.
- 5 ನಿಮಿಷದ ನಂತರ ಸಾಮಾನ್ಯ ನೀರಿನಲ್ಲಿ ಅದನ್ನು ತೊಳೆಯಿರಿ.

.ಜೇನುತುಪ್ಪ ಮತ್ತು ಹಾಲು

ಜೇನುತುಪ್ಪ ಮತ್ತು ಹಾಲನ್ನು ಉತ್ತಮವಾದ ಮಾಯಿಶ್ಚರೈಸರ್ ಎಂದು ಹೇಳಲಾಗುತ್ತದೆ ಮತ್ತು ಇದು ಚರ್ಮವನ್ನು ಹೈಡ್ರೇಟ್ ಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಹೊರತುಪಡಿಸಿ ಚರ್ಮಕ್ಕೆ ಬ್ರೈಟ್ ನೆಸ್ ನೀಡಲು ಕೂಡ ಇದು ಸಹಾಯಕ.

ಬೇಕಾಗುವ ಪದಾರ್ಥಗಳು :
• ½ ಕಪ್ ಹಾಲು
• ½ ಕಪ್ ಜೇನುತುಪ್ಪ

ಮಾಡುವ ವಿಧಾನ ಹೇಗೆ? :
* ಒಂದು ಬೌಲ್ ನಲ್ಲಿ ಅರ್ಧ ಕಪ್ ಹಾಲನ್ನು ಸೇರಿಸಿ
* ನಂತರ, ಅದಕ್ಕೆ ಅದೇ ಪ್ರಮಾಣದ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಕಲಸಿ.,
* ಈ ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಅಪ್ಲೈ ಮಾಡಿ ಮತ್ತು ಅದನ್ನು ಒಣಗಲು ಬಿಡಿ.
* ನಂತರ ಸಾಮಾನ್ಯ ನೀರಿನಲ್ಲಿ ಅದನ್ನು ತೊಳೆಯಿರಿ.

ಉತ್ತಮ ಫಲಿತಾಂಶಕ್ಕಾಗಿ ಇದನ್ನು ಒಂದು ದಿನ ಬಿಟ್ಟು ಮತ್ತೊಂದು ದಿನ ಪ್ರಯತ್ನಿಸಿ ನೋಡಿ

. ಜೇನುತುಪ್ಪ ಮತ್ತು ಎಣ್ಣೆಯ ಫೇಸ್ ಮಾಸ್ಕ್

ಜೇನುತುಪ್ಪ ಮತ್ತು ಆಲಿವ್ ಎಣ್ಣೆಯಲ್ಲಿರುವ ಧಾತುಗಳು ಚರ್ಮದ ರಂಧ್ರಗಳನ್ನು ಶ್ರಿಂಕ್ ಮಾಡುತ್ತದೆ ಮತ್ತು ಚರ್ಮವು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು :
• 1 ಟೇಬಲ್ ಸ್ಪೂನ್ ಆಲಿವ್ ಆಯಿಲ್
• 1 ಟೇಬಲ್ ಸ್ಪೂನ್ ಜೇನುತುಪ್ಪ
• ಕೆಲವೇ ಕೆಲವು ಹನಿ ನಿಂಬೆಯ ರಸ

ಮಾಡುವ ವಿಧಾನ ಹೇಗೆ? :
*ಮೊದಲಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಆಲಿವ್ ಎಣ್ಣೆಯನ್ನು ಬಿಸಿ ಮಾಡಿ.
* ಯಾವಾಗ ಎಣ್ಣೆ ಬಿಸಿಯಾಗುತ್ತದೆಯೋ ಅದಕ್ಕೆ 1 ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿ ಮತ್ತು ಈಗ ತಾನೆ ಹಿಂಡಿದ ತಾಜಾ ನಿಂಬೆ ರಸವನ್ನು ಸೇರಿಸಿ.
* ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಇರಲು ಬಿಡಿ.
* 20 ನಿಮಿಷದ ನಂತರ, ಮುಖವನ್ನು ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಮೊದಲು ತೊಳೆದು ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.

ವೇಗವಾದ ಮತ್ತು ಉತ್ತಮವಾದ ಫಲಿತಾಂಶ ಪಡೆಯಲು ವಾರಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಿ ನೋಡಿ.

. ಜೇನುತುಪ್ಪ ಮತ್ತು ಅರಿಶಿನ

ಒಂದು ವೇಳೆ ನಿಮಗೆ ಯಾವುದೇ ರೀತಿಯ ಸೋಂಕುಗಳಿದ್ದಲ್ಲಿ, ಗಾಯಗಳಿದ್ದಲ್ಲಿ, ಚರ್ಮದಲ್ಲಿ ಉರಿ ಇದ್ದಲ್ಲಿ, ಆಗ ನಿಮಗೆ ಈ ಫೇಸ್ ಪ್ಯಾಕ್ ಆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ತಾಕತ್ತು ಈ ಫೇಸ್ ಪ್ಯಾಕ್ ಗೆ ಇಧೆ.,

ಬೇಕಾಗುವ ಪದಾರ್ಥಗಳು :
• 1 ಟೇಬಲ್ ಸ್ಪೂನ್ ಜೇನುತುಪ್ಪ
• ಸ್ವಲ್ಪವೇ ಸ್ವಲ್ಪ ಅರ್ಥಾತ್ ಚಿಟಿಕೆ ಅರಿಶಿನ

ಮಾಡುವ ವಿಧಾನ ಹೇಗೆ? :
* ಒಂದು ಬೌಲ್ ನಲ್ಲಿ ಜೇನುತುಪ್ಪ ಮತ್ತು ಅದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಅದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ.
* 20 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಅದನ್ನು ತೊಳೆಯಿರಿ.
ವಾರಕ್ಕೆ ಎರಡರಿಂದ ಮೂರು ಬಾರಿ ಇದನ್ನು ಪುನರಾವರ್ತಿಸಿ

. ಜೇನುತುಪ್ಪ ಮತ್ತು ನಿಂಬೆಯ ರಸ

ನಿಂಬೆಯ ರಸ ಮತ್ತು ಜೇನುತುಪ್ಪದ ಮಿಶ್ರಣವು ಮೊಡವೆ ಮತ್ತು ಆಕ್ನೆ ಕಲೆಯನ್ನು ತೆಗೆದು ಉತ್ತಮ ಫಲಿತಾಂಶವನ್ನು ನಿಮ್ಮ ಚರ್ಮದ ಮೇಲೆ ನೀಡುತ್ತದೆ.

ಬೇಕಾಗುವ ಪದಾರ್ಥಗಳು :
• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ಟೇಬಲ್ ಸ್ಪೂನ್ ನಿಂಬೆ ರಸ

ಮಾಡುವ ವಿಧಾನ ಹೇಗೆ? :
* ಸಮ ಪ್ರಮಾಣದ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಒಂದು ಕಾಟನ್ ತುಂಡನ್ನು ಬಳಸಿ ತೊಂದರೆಗೊಳಗಾದ ಪ್ರದೇಶಕ್ಕೆ ಅಪ್ಲೈ ಮಾಡಿ.
* 10 ನಿಮಿಷಿದ ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ...
ಉತ್ತಮ ಫಲಿತಾಂಶಕ್ಕಾಗಿ ಇದನ್ನು ಒಂದು ದಿನ ಬಿಟ್ಟು ಮತ್ತೊಂದು ದಿನ ಪ್ರಯತ್ನಿಸಿ ನೋಡಿ..

English summary

Simple Ways To Use Honey To Get Rid Of Oily Skin

Honey is an age-old remedy for most of the common beauty-related problems that we all face. It works incredibly well on the skin. It contains all the required nutrients and agents that benefit our skin in many ways. Honey contains antioxidants that help in delaying the ageing of the skin. It also helps in improving the complexion of the skin by removing tan and blemishes.
X
Desktop Bottom Promotion