For Quick Alerts
ALLOW NOTIFICATIONS  
For Daily Alerts

ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!

By Deepu
|

ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಪ್ರಸಾಧನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ.

ವಾಸ್ತವವಾಗಿ ಯಾವುದೇ ರೀತಿಯ ಪ್ರಯೋಜನ ಪಡೆಯಬೇಕಾದರೆ ಮೊದಲು ಚರ್ಮದ ಆರೋಗ್ಯ ಒಳಗಿನಿಂದ ಚೆನ್ನಾಗಿರಬೇಕು. ಆಗಲೇ ಹೊರಗಿನಿಂದಲೂ ಉತ್ತಮವಾದ ಕಾಂತಿ ಪಡೆಯಲು ಸಾಧ್ಯ. ಮಾರುಕಟ್ಟೆಯ ದುಬಾರಿ ಪ್ರಸಾಧನಗಳು ಚರ್ಮದ ಹೊರಗಿನಿಂದ ಆರೈಕೆ ಮಾಡಬಲ್ಲವೇ ಹೊರತು ಒಳಗಿನಿಂದಲ್ಲ. ಅದರಲ್ಲೂ ಒಂದು ವೇಳೆ ಯಾವುದಾದರೊಂದು ರಾಸಾಯನಿಕ ಅಲರ್ಜಿಕಾರಕವಾಗಿದ್ದರೆ ಚರ್ಮವನ್ನು ಪೋಷಿಸುವ ಬದಲು ಆ ಪ್ರಸಾಧನ ಚರ್ಮಕ್ಕೆ ಹಾನಿಯನ್ನೇ ಎಸಗಬಹುದು.

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಸಿಂಪಲ್ ಫೇಸ್ ಪ್ಯಾಕ್...

ಈ ತೊಂದರೆ ಬಂದ ಬಳಿಕ ಪ್ರಸಾಧನ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರೆ ಅವು ನಿಮ್ಮ ಮೇಲೆಯೇ ತಿರುಗಿಬೀಳುವುದು ಖಂಡಿತ, ಏಕೆಂದರೆ ನಾವು ಓದಿಯೇ ಇರದ ಚಿಕ್ಕ ಅಕ್ಷರಗಳ ಪಟ್ಟಿಯಲ್ಲಿ ಇದರ ಪ್ರಯೋಗದಿಂದ ಹಾನಿಯಾದರೆ ನಾವು ಜವಾಬ್ದಾರರಲ್ಲ ಎಂಬರ್ಥದಲ್ಲಿ ಮಾಹಿತಿ ನೀಡಿರುತ್ತಾರೆ. ಈ ದ್ವಂದ್ವದಿಂದ ಪಾರಾಗಲು ನಿಸರ್ಗದತ್ತವಾಗಿ ದೊರೆಯುವ ಮನೆಮದ್ದಿನ ಮೊರೆ ಹೋಗುವುದೇ ಉತ್ತಮ ಏಕೆಂದರೆ ಇವುಗಳ ಪರಿಣಾಮ ಕೊಂಚ ತಡ ಎಂದೆನ್ನಿಸಿದರೂ ಇವುಗಳಲ್ಲಿ ಯಾವುದೇ ಅಡ್ಡಪರಿಣಾಮ ಅಥವಾ ಪರೋಕ್ಷ ಪರಿಣಾಮ ಇಲ್ಲದಿರುವುದರಿಂದ ಸುರಕ್ಷಿತವಾಗಿ ಬಳಸಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ....

ಸೌತೆಕಾಯಿ + ಮೊಸರು

ಸೌತೆಕಾಯಿ + ಮೊಸರು

ಸೌತೆಕಾಯಿ ಮತ್ತು ಮೊಸರಿನ ಫೇಸ್ ಪ್ಯಾಕ್ ನಷ್ಟು ಉಲ್ಲಾಸಕರ ಮತ್ತು ತೇವಾಂಶಯುಕ್ತ ತ್ವಚೆ ನಿಮಗೆ ಬೇರೆ ಯಾವುದೇ ಸೌಂದರ್ಯವರ್ಧಕಗಳನ್ನು ಬಳಸಿದರೂ ಸಿಗದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ, ಮುಖದಲ್ಲಿನ ಮೊಡವೆ ಹಾಗೂ ಟ್ಯಾನ್ (ಕಪ್ಪು ಕಲೆಯನ್ನು) ಹೋಗಲಾಡಿಸುವುದು ಮಾತ್ರವಲ್ಲದೇ ತ್ವಚೆಯಲ್ಲಿ ವಿಟಮಿನ್ ತುಂಬಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಸೌತೆಕಾಯಿ ಮತ್ತು ಮೊಸರನ್ನು ಒಟ್ಟೂಡಿಸಿ ಅತ್ಯಂತ ಸುಲಭವಾಗಿ ಈ ಪ್ಯಾಕ್ ನ್ನು ತಯಾರಿಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. ಕಣ್ಣಿನ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟುಕೊಳ್ಳುವುದು ಕಣ್ಣಿಗೆ ಬಹಳ ಒಳ್ಳೆಯದು.

ಕುಂಬಳಕಾಯಿ ಫೇಸ್ ಪ್ಯಾಕ್

ಕುಂಬಳಕಾಯಿ ಫೇಸ್ ಪ್ಯಾಕ್

ಮೊದಲಿಗೆ ಕುಂಬಳಕಾಯಿಯನ್ನು ಸಣ್ಣದಾಗಿ ಹೋಳುಗಳಾಗಿ ಕತ್ತರಿಸಿಕೊಂಡು, ಕುಕ್ಕರಿನಲ್ಲಿ ಎರಡು ಅಥವಾ ಮೂರು ವಿಸಿಲ್ ಹಾಕಿ, ಬೇಯಿಸಿಕೊಂಡು, ದಪ್ಪ ಪೇಸ್ಟಿನಂತೆ ಮಾಡಿಕೊಳ್ಳಿ. ತದನಂತರ ಎರಡು ಚಮಚ ಕುಂಬಳಕಾಯಿ ದ್ರವ್ಯವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದಕ್ಕೆ ಎರಡು ಚಮಚ ಮಲಾಯಿ ಕ್ರೀಮ್ ಮತ್ತು ಸ್ವಲ್ಪ ಜೇನನ್ನು ಬೆರೆಸಿ. ಮಲಾಯಿ ಕ್ರೀಮ್ ನಲ್ಲಿ ಹೆಚ್ಚು ಸತ್ವಯುಕ್ತ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಹೇರಳವಾಗಿದ್ದು, ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೇಲಿನ ಮಿಶ್ರಣಕ್ಕೆ 4 ಚಮಚ ಸಕ್ಕರೆಯನ್ನು ಬೆರೆಸಿ. ಸಕ್ಕರೆಯಲ್ಲಿರುವ ವಿಶಿಷ್ಟ ಗುಣವು ಚರ್ಮದ ಮೇಲಿರುವ ಸತ್ತ ಜೀವ ಕೋಶಗಳನ್ನು ಹೊರಹಾಕುತ್ತದೆ. ಈ ಮಿಶ್ರಣವನ್ನು ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ ಮುಖಕ್ಕೆ ನಯವಾಗಿ ಹಚ್ಚಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್

ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್

ಒಂದು ಪಾತ್ರೆಯಲ್ಲಿ ಒಂದು ಚಮಚದಷ್ಟು ಕಲ್ಲಂಗಡಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರನ್ನು ಬೆರೆಸಿ. ಇದನ್ನು ಎಲ್ಲವನ್ನೂ ಮಿಶ್ರ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್ ಡ್ರೈ ಆದ ನಂತರ, ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಬೇಸಿಗೆಯಲ್ಲಿ ಮುಖದಲ್ಲಿ ಉಂಟಾಗುವ ಕಲೆಗಳ ನಿವಾರಣೆಗೆ ಈ ಕಲ್ಲಂಗಡಿ ಫೇಸ್‌ಪ್ಯಾಕ್ ಹಿತಕಾರಿಯಾದುದು

ಸೌತೆಕಾಯಿ ಫೇಸ್ ಪ್ಯಾಕ್

ಸೌತೆಕಾಯಿ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ನಿಮ್ಮ ಮುಖ ಮತ್ತು ತ್ವಚೆಗೆ ಬಳಸಬಹುದಾದ ಅತ್ಯುತ್ತಮ ತರಕಾರಿಗಳ ಪಟ್ಟಿಯಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿಯ ದಪ್ಪನೆಯ ರಸವನ್ನು ಸಿದ್ಧಪಡಿಸಿ ಇದಕ್ಕೆ ಮೂರು ಚಮಚದಷ್ಟು ಸಕ್ಕರೆ ಮತ್ತು ಒಂದು ಚಮಚ ಮೊಸರು ಸೇರಿಸಿಕೊಳ್ಳಿ. ಪ್ಯಾಕ್ ತಯಾರಾದ ಒಡನೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ ನಂತರ ಒಣಗಲು ಬಿಡಿ. 15 ನಿಮಿಷಗಳ ನಂತರ, ಫೇಸ್ ಪ್ಯಾಕ್ ಸಿಪ್ಪೆ ಸಹಿತ ನಿಧಾನಕ್ಕೆ ತೆಗೆಯಿರಿ. ನಿಮ್ಮ ಮುಖದ ಕಾಂತಿ ಮತ್ತು ಮೃದುತ್ವ ದುಪ್ಪಟ್ಟುಗೊಂಡಿರುವುದನ್ನು ಗಮನಿಸಬಹುದಾಗಿದೆ.

ಬೀಟ್‌ರೂಟ್

ಬೀಟ್‌ರೂಟ್

ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಅರಿಶಿನ, ಚಂದನ ಮತ್ತು ಹಾಲು

ಅರಿಶಿನ, ಚಂದನ ಮತ್ತು ಹಾಲು

ಚಂದನದ ಪುಡಿ ಅಥವಾ ಕಲ್ಲಿನ ಮೇಲೆ ಗಂಧದ ಕೊರಡನ್ನು ತೇದಿದ ದ್ರವ, ಅರಿಶಿನ ಪುಡಿಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕೆಲವು ಹನಿ ಹಸಿಹಾಲನ್ನು ಸೇರಿಸಿ ನಯವಾದ ಮಿಶ್ರಣ ತಯಾರಿಸಿ. ಈ ಲೇಪನವನ್ನು ಮುಖದ ಮೇಲೆ ಹಚ್ಚಿ ಐದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದರಿಂದ ನಿಮ್ಮ ಚರ್ಮ ತಾಜಾ ಮತ್ತು ತಕ್ಷಣವೇ ಸಹಜಕಾಂತಿಯನ್ನು ಪಡೆಯುತ್ತದೆ.

ಮೊಸರಿನ ಫೇಸ್ ಪ್ಯಾಕ್

ಮೊಸರಿನ ಫೇಸ್ ಪ್ಯಾಕ್

ಮೊಸರನ್ನು ತ್ವಚೆಗೆ ಬಳಸಿಕೊಂಡಲ್ಲಿ ಚರ್ಮದ ಬಣ್ಣವನ್ನು ಅದು ನೈಸರ್ಗಿವಾಗಿ ಸುಧಾರಿಸುತ್ತದೆ. ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಮೊಸರನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ರಂಧ್ರಗಳನ್ನು ತೆರೆಯಲು ಮೊಸರು ಸಹಕಾರಿಯಾಗಿದ್ದು ನೈಸರ್ಗಿಕ ಹೊಳಪನ್ನೂ ಇದು ನೀಡುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

2 ಚಮಚ ಮಾಗಿದ ಪಪ್ಪಾಯಿಗೆ 10ರಿಂದ 12 ಹನಿ ನಿಂಬೆ ರಸವನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆಯಿರಿ. ಕೆಲವು ದಿನಗಳ ಬಳಿಕ ಕಪ್ಪು ಕಲೆ ಹಾಗೂ ಇತರ ಕಲೆಗಳು ದೂರವಾಗುತ್ತದೆ. ಕಾಂತಿಯುತ ಚರ್ಮವನ್ನು ನೀವು ಪಡೆಯಬಹುದು.

English summary

Simple homemade skin whitening and natural face packs

Every woman dreams of having picture perfect, flawless skin and in an endeavour to turn this dream into reality, we try out almost all the beauty and skincare products available in the market, hardly knowing that in this process we are doing more harm than good to our skin. So boldsky share some natural home
X
Desktop Bottom Promotion