For Quick Alerts
ALLOW NOTIFICATIONS  
For Daily Alerts

ಚರ್ಮದ ಮೇಲೆ ಮೂಡುವ ಸುಟ್ಟ ಗಾಯಗಳನ್ನು ನಿವಾರಿಸಲು ಸರಳ ಮನೆಮದ್ದುಗಳು

|

ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಅಲ್ಲೊಂದು ಇಲ್ಲೊಂದು ಸುಟ್ಟ ಗಾಯಗಳು ಆಗುತ್ತಲೇ ಇರುತ್ತವೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಟ ಒಮ್ಮೆಯಾದರೂ ಸುಟ್ಟಗಾಯದ ರುಚಿ ಕಂಡವರೇ ಆಗಿದ್ದು ಈ ಗಾಯ ಮಾಗಿದ ಬಳಿಕ ಕಲೆಯೊಂದು ಶಾಶ್ವತವಾಗಿ ಉಳಿದಿರುತ್ತದೆ. ಒಂದು ವೇಳೆ ಇದು ಮುಖ, ಕುತ್ತಿಗೆ, ಕೈ ಮೊದಲಾದ ಭಾಗಗಳಲ್ಲಿದ್ದರೆ ಈ ಕಲೆಗಳು ಸದಾ ಮುಜುಗರಕ್ಕೆ ಕಾರಣವೂ ಆಗುತ್ತವೆ. ಇವನ್ನು ನಿವಾರಿಸಲು ಕೆಲವೊಂದು ಮನೆಮದ್ದುಗಳಿವೆ ಹಾಗೂ ನೈಸರ್ಗಿಕವಾದ ಇವುಗಳ ಸುಲಭ ಬಳಕೆ ಹಾಗೂ ಅಗ್ಗವೂ ಆಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬಳಸಲು ಸುರಕ್ಷಿತವಾಗಿವೆ.

ಇಂದಿನ ಲೇಖನದಲ್ಲಿ ವಿವರಿಸಲಾಗಿರುವ ಕೆಲವು ವಿಧಾನಗಳು ಫಲಪ್ರದವಾಗಿದ್ದರೂ ಇವುಗಳ ಪರಿಣಾಮ ನಿಧಾನವಾಗಿ ಆಗುವುದರಿಂದ ಕೊಂಚ ತಾಳ್ಮೆ ವಹಿಸುವುದು ಅಗತ್ಯ. ಖಂಡಿತವಾಗಿಯೂ ಇವು ಧನಾತ್ಮಕ ಫಲಿತಾಂಶಗಳನ್ನೇ ಒದಗಿಸುತ್ತವೆ ಹಾಗೂ ಇದಕ್ಕಾಗಿ ಸತತವಾಗಿ ಬಳಕೆಯನ್ನು ಮುಂದುವರೆಸುವುದು ಅಗತ್ಯ. ಒಂದು ವೇಳೆ ಸುಟ್ಟ ಗಾಯ ಈಗ ತಾನೇ ಆಗಿದ್ದರೆ ಮೊತ್ತ ಮೊದಲಾಗಿ ತಣ್ಣೀರಿನಲ್ಲಿ ಗಾಯಗಳನ್ನು ತೋಯಿಸಿ ಕೆಲವು ನಿಮಿಷಗಳ ಬಳಿಕ ಈ ವಿಧಾನಗಳಲ್ಲೊಂದನ್ನು ಅನುಸರಿಸುವ ಮೂಲಕ ಗಾಯ ಶೀಘ್ರವೇ ಮಾಗಲು ಮತ್ತು ಕಲೆಯಿಲ್ಲದೇ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಬನ್ನಿ, ಹಳೆಯ ಸುಟ್ಟ ಗಾಯಗಳನ್ನು ನಿವಾರಿಸಲು ಸಮರ್ಥವಾಗಿರುವ ಕೆಲವು ಮನೆಮದ್ದುಗಳ ಬಗ್ಗೆ ಅರಿಯೋಣ...

ಜೇನು

ಜೇನು

ಹಲವು ವಿಧವಾದ ಗಾಯಗಳನ್ನು ಮಾಗಿಸಲು ಜೇನು ಅತ್ಯುತ್ತಮವಾದ ಔಷಧಿಯಾಗಿದೆ. ಹುಣ್ಣು, ಸೋಂಕಿಗೊಳಗಾದ ಗಾಯಗಳು, ಸುಟ್ಟ ಗಾಯಗಳು, ಕೀಟಗಳ ಕಡಿತ ಮೊದಲಾದವುಗಳ ಚಿಕಿತ್ಸೆಗೆ ಜೇನನ್ನು ನೇರವಾಗಿ ಹಚ್ಚಿಕೊಳ್ಳುವುದು ಅತ್ಯುತ್ತಮ ಪ್ರಥಮ ಚಿಕಿತ್ಸೆಯಾಗಿದೆ ಹಾಗೂ ಗಾಯಗಳನ್ನು ಶೀಘ್ರವಾಗಿ ಮಾಗಿಸಿ ಚರ್ಮದಲ್ಲಿ ಕಲೆಯನ್ನು ಕನಿಷ್ಟ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ.

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

*ಎರಡು ದೊಡ್ಡ ಚಮಚ ಅಪ್ಪಟ ಜೇನು

*ಒಂದು ಚಿಟಿಕೆ ಅರಿಶಿನ

ಒಂದು ಚಿಕ್ಕ ಬೋಗುಣಿಯಲ್ಲಿ ಜೇನು ಮತ್ತು ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅಂಟಂಟಾಗಿರುವ ಲೇಪನ ತಯಾರಿಸಿ. ಈ ಲೇಪನವನ್ನು ಸುಟ್ಟ ಭಾಗದ ಅಥವಾ ಕಲೆಯ ಮೇಲೆ ದಪ್ಪನಾಗಿ ಹಚ್ಚಿಕೊಂಡು ಕೆಲವು ನಿಮಿಷಗಳವರೆಗೆ ಒಣಗಲು ಬಿಡಿ. ಇದಕ್ಕೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳೇ ಬೇಕಾಗಬಹುದು. ಬಳಿಕ ಒಂದು ತೇವವಾದ ಬಟ್ಟೆಯಿಂದ ಒರೆಸಿ ತೆಗೆಯಿಸಿ. ಈ ವಿಧಾನವನ್ನು ನಿತ್ಯವೂ ಒಂದೇ ಸಮಯಕ್ಕೆ ಅನುಸರಿಸುತ್ತಾ ಬಂದರೆ ಕ್ರಮೇಣ ಉತ್ತಮ ಪರಿಣಾಮವನ್ನು ಪಡೆಯಬಹುದು.

ಲೋಳೆಸರ

ಲೋಳೆಸರ

ಆಲೋವೆರಾ ಅಥವಾ ಲೋಳೆಸರದ ಉರಿಯೂತ ನಿವಾರಕ ಗುಣ ಹಾಗೂ ಗಾಯಗಳನ್ನು ಮಾಗಿಸುವ ಗುಣ ಚರ್ಮಕ್ಕೆ ಹಲವಾರು ವಿಧದ ಪ್ರಯೋಜನಗಳನ್ನು ಒದಗಿಸುವ ಜೊತೆಗೇ ಸುಟ್ಟ ಗಾಯದ ಉರಿಯನ್ನು ಶಮನಗೊಳಿಸಿ ಕಲೆಯಿಲ್ಲದೇ ಹೊಸ ಚರ್ಮ ಬೆಳೆಯುವಂತೆ ಮಾಡುತ್ತದೆ ಹಾಗೂ ಹಳೆಯ ಗುರುತನ್ನು ನಿವಾರಿಸಲೂ ನೆರವಾಗುತ್ತದೆ.

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

ಎರಡು ದೊಡ್ಡ ಚಮಚ ಒಂದು ಲೋಳೆಸರದ ಕೋಡಿನಿಂದ ನಿವಾರಿಸಿದ ತಾಜಾ ತಿರುಳು ಒಂದು ದೊಡ್ಡ ಚಮಚ ಗುಲಾಬಿ ನೀರು.

ಬಳಕೆಯ ವಿಧಾನ:

ಲೋಳೆಸರದ ತಿರುಳು ಮತ್ತು ಗುಲಾಬಿನೀರನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವೆನಿಸಿದರೆ ಗುಲಾಬಿನೀರಿನ ಪ್ರಮಾಣವನ್ನು ಕೊಂಚ ಹೆಚ್ಚಿಸಲೂಬಹುದು. ಈ ಮಿಶ್ರಣವನ್ನು ಕಲೆಯಿರುವ ಭಾಗದಲ್ಲಿ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಬಳಿಕ ಸುಮಾರು ಹತ್ತು ಹದಿನೈದು ನಿಮಿಷ ಒಣಗಳು ಬಿಡಿ. ನಂತರ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಅರಿಶಿನ ಮತ್ತು ಹಾಲು

ಅರಿಶಿನ ಮತ್ತು ಹಾಲು

ಅರಿಶಿನದ ಉರಿಯೂತ ನಿವಾರಕ ಮತ್ತು ಪ್ರತಿಜೀವಕ ಗುಣಗಳು ಕಲೆಗಳನ್ನು ನಿವಾರಿಸಲು ಸಮರ್ಥವಾಗಿವೆ. ಹಾಲು ಉರಿಯುವ ಚರ್ಮವನ್ನು ಶಮನಗೊಳಿಸಿ ಕಲೆಗಳಿಲ್ಲದೇ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ. ಇವುಗಳ ಸತತ ಬಳಕೆಯಿಂದ ಶೀಘ್ರವೇ ಕಲೆಗಳು ಇಲ್ಲವಾಗಲು ಸಾಧ್ಯವಾಗುತ್ತದೆ.

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

*ಎರಡು ದೊಡ್ಡ ಚಮಚ ಹಸಿ ಹಾಲು

*ಒಂದು ಚಿಟಿಕೆ ಅರಿಶಿನ

ಬಳಕೆಯ ವಿಧಾನ

ಒಂದು ಚಿಕ್ಕ ಬೋಗುಣಿಯಲ್ಲಿ ಇವೆರಡೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಹತ್ತಿಯುಂಡೆಯನ್ನು ಈ ದ್ರಾವಣವನ್ನು ಮುಳುಗಿಸಿ ಕಲೆಯಿರುವ ಭಾಗದ ಮೇಲೆ ಹಚ್ಚಿಕೊಳ್ಳಿ. ಬಳಿಕ ಕೆಲವು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿಕೊಳ್ಳಿ. ಬಳಿಕ ಐದು ನಿಮಿಷ ಒಣಗಲು ಬಿಟ್ಟು ನಂತರ ಒದ್ದೆಯಾದ ಸ್ವಚ್ಛಬಟ್ಟೆಯಿಂದ ಒರೆಸಿಕೊಳ್ಳಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ಉತ್ತಮ ಫಲಿತಾಂಶ ಕಂಡುಬರುತ್ತದೆ.

ಟೊಮಾಟೊ, ಮೊಸರು ಮತ್ತು ಮೊಟ್ಟೆಯ ಬಿಳಿಭಾಗ

ಟೊಮಾಟೊ, ಮೊಸರು ಮತ್ತು ಮೊಟ್ಟೆಯ ಬಿಳಿಭಾಗ

ಈ ಮೂರರಲ್ಲಿಯೂ ನೈಸರ್ಗಿಕ ಶಮನಕಾರಿ ಗುಣವಿದೆ. ಟೊಮಾಟೋ ಗಾಢವಾಗಿರುವ ಕಲೆಯನ್ನು ತಿಳಿಯಾಗಿಸುವ ಗುಣ ಹೊಂದಿದ್ದು ಸುಟ್ಟ ಗಾಯಗಳ ಕಪ್ಪುಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ಒದಗಿಸಿ ಚರ್ಮಕ್ಕೆ ಆಳದಿಂದ ಆರೈಕೆ ಒದಗಿಸುತ್ತದೆ. ಇದರೊಂದಿಗೆ, ಮೊಸರು ಮತ್ತು ಮೊಟ್ಟೆಯ ಬಿಳಿಭಾಗ ಕಲೆಗಳು ಶೀಘ್ರವಾಗಿ ಇಲ್ಲವಾಗಲು ನೆರವಾಗುತ್ತವೆ.

 ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

*ಒಂದು ದೊಡ್ಡ ಚಮಚ ಟೊಮಾಟೋ ಹಣ್ಣಿನ ತಿರುಳು

*ಒಂದು ದೊಡ್ಡ ಚಮಚ ಮೊಸರು

*ಒಂದು ದೊಡ್ಡ ಚಮಚ ಮೊಟ್ಟೆಯ ಬಿಳಿಭಾಗ

ಬಳಕೆಯ ವಿಧಾನ

ಒಂದು ಬೋಗುಣಿಯಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಬಾಧಿತ ಚರ್ಮದ ಮೇಲೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಬಳಿಕ ಸುಮಾರು ಹದಿನೈದು ನಿಮಿಷ ಒಣಗಲು ಬಿಟ್ಟು ನಂತರ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ವಿಧಾನವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಆಲೂಗಡ್ಡೆ

ಆಲೂಗಡ್ಡೆ

ಅಲುಗಡ್ಡೆ ಚರ್ಮದ ಬಿಸಿಯನ್ನು ಹೀರಿಕೊಂಡು ಶಮನಗೊಳಿಸುವ ಗುಣ ಹೊಂದಿರುವ ಕಾರಣ ಸುಟ್ಟ ಗಾಯಗಳಿಗೆ ಆರೈಕೆ ನೀಡಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಅಲ್ಲದೇ ಇವುಗಳ ನಿಯಮಿತ ಮತ್ತು ದೀರ್ಘಕಾಲದ ಬಳಕೆಯಿಂದ ಗಾಯಗಳ ಕಲೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

ಒಂದು ಬೇಯಿಸಿದ ಆಲುಗಡ್ಡೆ, ಬಳಿಕ ಸಿಪ್ಪೆ ಸುಲಿದು ಎರಡು ಭಾಗಗಳನ್ನಾಗಿ ಕತ್ತರಿಸಿಕೊಳ್ಳಿ.

ಬಳಕೆಯ ವಿಧಾನ:

ಆಲುಗಡ್ಡೆಯ ಒಳಭಾಗದಿಂದ ಕಲೆಯ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಉಜ್ಜಿಕ್ಕೊಳ್ಳಿ. ಸುಮಾರು ಹತ್ತು ನಿಮಿಷಗಳ ಕಾಲ ಬೆರಳುಗಳಿಂದ ಈ ಭಾಗವನ್ನು ಆಲುಗಡ್ಡೆಯ ಹಿಟ್ಟಿನೊಂದಿಗೆ ಮಸಾಜ್ ಮಾಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪರ್ಯಾಯವಾಗಿ ಹಸಿ ಆಲುಗಡ್ಡೆಯ ಸಿಪ್ಪೆಯನ್ನು ದಪ್ಪನಾಗಿ ಸುಲಿದು ಇದರ ಒಳಭಾಗವನ್ನೂ ಉಜ್ಜಿಕೊಳ್ಳಬಹುದು. ಒಂದು ವೇಳೆ ಕಲೆ ಗಾಢವಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ನಿತ್ಯವೂ, ದಿನಕ್ಕೆರಡು ಬಾರಿ ದೀರ್ಘಕಾಲದವರೆಗೆ ಮುಂದುವರೆಸಿ.

ಈರುಳ್ಳಿ ಮತ್ತು ಲ್ಯಾವೆಂಡರ್ ಅವಶ್ಯಕ ತೈಲ

ಈರುಳ್ಳಿ ಮತ್ತು ಲ್ಯಾವೆಂಡರ್ ಅವಶ್ಯಕ ತೈಲ

ಈರುಳ್ಳಿಯಲ್ಲಿರುವ ಗಂಧಕ ಮತ್ತು ಕ್ವೆರ್ಸಟಿನ್ ಎಂಬ ಅಂಶಗಳು ಕಠಿಣವಾದ ಕಲೆಗಳನ್ನು ಚರ್ಮದಿಂದ ನಿವಾರಿಸಲು ನೆರವಾಗುತ್ತವೆ. ಲ್ಯಾವೆಂಡರ್ ಅವಶ್ಯಕ ತೈಲದಲ್ಲಿರುವ ಪ್ರತಿಜೀವಕ ಗುಣ ಸುಟ್ಟ ಚರ್ಮವನ್ನು ಶಮನಗೊಳಿಸಲು ಹಾಗೂ ವಿಶೇಷವಾಗಿ ಉರಿಯುವ ಚರ್ಮವನ್ನು ಸಾಂತ್ವಾನಗೊಳಿಸಲು ನೆರವಾಗುತ್ತದೆ.

ಅಗತ್ಯವಾದ ಸಾಮಾಗ್ರಿಗಳು

ಅಗತ್ಯವಾದ ಸಾಮಾಗ್ರಿಗಳು

*ಒಂದು ದೊಡ್ಡ ಚಮಚ ಅರೆದ ಈರುಳ್ಳಿ

*ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆ

ಬಳಕೆಯ ವಿಧಾನ

ಈರುಳ್ಳಿಯ ಸಿಪ್ಪೆ ಸುಲಿದು ಚಿಕ್ಕ ತುಂಡುಗಳನ್ನಾಗಿಸಿ ಗ್ರೈಂಡರಿನ ಚಿಕ್ಕ ಜಾರ್ ನಲ್ಲಿ ನುಣ್ಣಗಾಗುವಂತೆ ಕಡೆಯಿರಿ. ಬಳಿಕ ಈ ಲೇಪನದಲ್ಲಿ ಒಂದು ದೊಡ್ಡ ಚಮಚದಷ್ಟನ್ನು ಒಂದು ಚಿಕ್ಕ ಬೋಗುಣಿಗೆ ಹಾಕಿ ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಂದು ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಕಲೆಯಿರುವ ಭಾಗದ ಮೇಲೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ನಂತರ ಸುಮಾರು ಐದು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆರಡು ಬಾರಿ ಪುನರಾವರ್ತಿಸಿ.

English summary

Simple Home Remedies To Remove Burn Marks From The Skin

Burns are inevitable, and so are the marks. Home remedies are a perfect and an economic solution to most of your concerns as they are completely safe. Treat burn marks at home now with honey, onion juice, potato peel, yogurt, aloe vera, turmeric or even milk. These remedies are quite effective and definitely show positive results with prolonged use.
X
Desktop Bottom Promotion