For Quick Alerts
ALLOW NOTIFICATIONS  
For Daily Alerts

ಈ ಚಿಹ್ನೆಗಳು ಮುಖದಲ್ಲಿ ಕಾಣಿಸಿಕೊಂಡರೆ, ನಿಮಗೆ ವಯಸ್ಸಾಗಿದೆ ಎಂದರ್ಥ!

|

ಸಾಮಾನ್ಯವಾಗಿ ಮಹಿಳೆಯರು 25 ವರ್ಷ ದಾಟುತ್ತಿದ್ದಂತೆ ತ್ವಚೆಯಲ್ಲಿ ಹೊಳಪು ಹಾಗೂ ಆಕರ್ಷಣಾ ಗುಣವು ಕಡಿಮೆಯಾಗುತ್ತಾ ಹೋಗುತ್ತವೆ. ಅಲ್ಲದೆ ಚರ್ಮದಲ್ಲಿ ಸುಕ್ಕುಗಳು ಹಾಗೂ ಕಲೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಕುಸಿತ ಉಂಟಾಗುವುದು. ಇದರ ಪರಿಣಾಮವಾಗಿಯೇ ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳುವುದು ಎಂದು ವೈದ್ಯಕೀಯ ಶಾಸ್ತ್ರ ವಿವರಿಸುತ್ತದೆ. ಆದರೆ ಇದು ಸಾಮೂಹಿಕವಾಗಿ ಒಂದೇ ರೀತಿಯಲ್ಲಿ ಇರುತ್ತದೆ ಎನ್ನಲಾಗುವುದಿಲ್ಲ. ಕೆಲವು ವಂಶಾವಳಿಯ ಆಧಾರದ ಮೇಲೆ ಇಂತಹ ಕುರುಹುಗಳು ನಿಧಾನವಾಗಿ ಬರುವ ಸಾಧ್ಯತೆಗಳಿರುತ್ತವೆ.

ವಯಸ್ಸಾದ ಚಿಹ್ನೆಗಳು ಬಹು ಬೇಗ ಮುಖದಲ್ಲಿ ಬಿಂಬಿತವಾಗುತ್ತಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿರುತ್ತದೆ. ಅಂತೆಯೇ ಈ ಪ್ರಕ್ರಿಯೆಗೆ ಪೂರಕವಾಗಿ ಅನೇಕ ನೈಸರ್ಗಿಕ ಚಿಕಿತ್ಸೆಗಳಿವೆ. ಅವುಗಳ ಮೊರೆ ಹೋದರೆ ಅಥವಾ ಆರೈಕೆಯ ಪರಿಯನ್ನು ಅನ್ವಯಿಸಿದರೆ ಉತ್ತಮ ಚೇತರಿಕೆ ಕಾಣಬಹುದು. ಜೊತೆಗೆ ಸದಾ ಪುನರ್ ಯೌವನದಿಂದ ಕೂಡಿರುವಂತೆ ಕಂಗೊಳಿಸಬಹುದು. ಚಿಕಿತ್ಸೆಯನ್ನು ಪಡೆಯುವ ಮೊದಲು ವಯಸ್ಸಾದ ಕಳೆ ಅಥವಾ ಚಿಹ್ನೆಗಳು ಯಾವವು? ಎನ್ನುವುದನ್ನು ಮೊದಲು ಗುರುತಿಸಿಕೊಳ್ಳಬೇಕು. ನಂತರ ಅದಕ್ಕೆ ಸೂಕ್ತ ರೀತಿಯ ಆರೈಕೆ ಮಾಡಬಹುದು.

Must Never Overlook

ನಿಮಗೆ 25 ವರ್ಷ ವಯಸ್ಸಾಗಿದೆ ಅಥವಾ ಇನ್ನೇನು 25ನ್ನು ದಾಟುವ ಹಂತದಲ್ಲಿದ್ದೀರಿ ಎಂದಾದರೆ ನಿಮ್ಮ ಆರೋಗ್ಯದ ಬಗ್ಗೆ ಒಮ್ಮೆ ಪರಿಶೀಲನೆ ನಡೆಸಿ. ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುವ ಕೆಲವು ವ್ಯತ್ಯಾಸವನ್ನು ಗುರುತಿಸಿ. ಹಾಗಾದರೆ ಆ ಬದಲಾವಣೆಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಅರಿಯಿರಿ...

ಶುಷ್ಕತೆ

ಶುಷ್ಕತೆ

ಚರ್ಮ ವಯಸ್ಸಾದಂತೆ ಗೋರಿಸುವ ಮೊದಲ ಗುಣಲಕ್ಷಣವೆಂದರೆ ಶುಷ್ಕತೆ. 25 ವರ್ಷ ಕಳೆದ ನಂತರ ಬಹುತೇಕ ಮಹಿಳೆಯರಲ್ಲಿ ಚರ್ಮವು ಶುಷ್ಕತೆಗೆ ಒಳಗಾಗುತ್ತದೆ. ಚರ್ಮದಲ್ಲಿರುವ ತೈಲ ಗ್ರಂಥಿಗಳು ಮುಚ್ಚಿಕೊಳ್ಳಲು ಪ್ರಾರಂಭವಾಗುತ್ತವೆ. ಇದರ ಪರಿಣಾಮವಾಗಿ ತ್ವಚೆಯು ಶುಷ್ಕತೆಯನ್ನು ಅನುಭವಿಸುತ್ತದೆ.

ಮಂಕಾಗುವಿಕೆ

ಮಂಕಾಗುವಿಕೆ

ವಯಸ್ಸಾದ ಮತ್ತೊಂದು ಚಿಹ್ನೆಯೆಂದರೆ ಮಂಕಾದ ತ್ವಚೆಯನ್ನು ಹೊಂದುವುದು. ವಯಸ್ಸಾದಂತೆ ತ್ವಚೆಯು ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ. ತ್ವಚೆಯಲ್ಲಿ ಪೋಷಕಾಂಶದ ಗುಣ ಕಡಿಮೆಯಾಗುವುದರಿಂದ ನಿರ್ಜೀವವಾಗಿರುವಂತೆ ಅಥವಾ ಮಂಕಾದ ಸ್ಥಿತಿಯನ್ನು ಹೊಂದಿರುತ್ತದೆ.

ಕಾಗೆಯ ಕಾಲು!

ಕಾಗೆಯ ಕಾಲು!

ವ್ಯಕ್ತಿಯ ಕಣ್ಣಿನ ಬಾಹ್ಯ ಮೂಲೆಗಳಲ್ಲಿ ಕಂಡುಬರುವ ಸುಕ್ಕನ್ನು ಕಾಗೆಯ ಕಾಲಿಗೆ ಹೋಲಿಸುತ್ತಾರೆ. ಇದು ವಯಸ್ಸಾದ ಚಿಹ್ನೆಯ ಇನ್ನೊಂದು ಕುರುಹು ಎಂದು ಹೇಳಲಾಗುತ್ತದೆ. ಇದು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ರಾತ್ರಿ ಹೊತ್ತು ಸೂಕ್ತ ಕ್ರೀಮ್‍ಗಳನ್ನು ಅನ್ವಯಿಸುವುದನ್ನು ಮರೆಯಬಾರದು.

ಸೂಕ್ಷ್ಮ ರೇಖೆಗಳು

ಸೂಕ್ಷ್ಮ ರೇಖೆಗಳು

30 ವರ್ಷದ ನಂತರ ಸಾಮಾನ್ಯವಾಗಿ ಮುಖದ ಮೇಲೆ ಸೂಕ್ಷ್ಮ ರೇಖೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿನ್‍ನ ಸ್ಥಗಿತ ಉಂಟಾದರೆ ಚರ್ಮದಲ್ಲಿ ಸೂಕ್ಷ್ಮ ರೇಖೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗೆ ಸೂಕ್ತ ಆರೈಕೆ ಮಾಡುವುದರ ಮೂಲಕ ಗುಣಮುಖ ಹೊಂದಬಹುದು.

ಸುಕ್ಕುಗಳು

ಸುಕ್ಕುಗಳು

ಚರ್ಮವು ಮಡಿಕೆಯಾಗುವುದು, ತೈಲಾಂಶ ಕಡಿಮೆಯಾಗಿ ಒರಟಾಗಿರುವಂತೆ ಕಾಣಿಸಿಕೊಳ್ಳುವುದರ ಮೂಲಕ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಬಹುತೇಕ ಮಹಿಳೆಯರು ತಮ್ಮ 25 ನೇ ವರ್ಷದಲ್ಲಿಯೇ ಸುಕ್ಕನ್ನು ಹೊಂದುತ್ತಾರೆ ಎನ್ನಲಾಗುವುದು. ಸೂರ್ಯನ ಕಿರಣ ಪ್ರಭಾವ, ಅನಾರೋಗ್ಯಕರ ಜೀವನ ಶೈಲಿ, ಧೂಮಪಾನ ಮತ್ತು ಕುಡಿಯುವಿಕೆಯಿಂದ ಅಕಾಲಿಕ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುವುದು.

ಜೋತು ಬೀಳುವ ಚರ್ಮ

ಜೋತು ಬೀಳುವ ಚರ್ಮ

ಚರ್ಮದ ಕುಸಿತವು ವಯಸ್ಸಾದ ಚಿಹ್ನೆಯನ್ನು ಎತ್ತಿ ತೋರಿಸುತ್ತದೆ. ಇದು ಸಾಮಾನ್ಯವಾಗಿ ಎಲಾಸ್ಟಿನ್ ನಷ್ಟದಿಂದ ಉಂಟಾಗುತ್ತದೆ. ವಯಸ್ಸಾದ ಈ ಚಿಹ್ನೆಯು ಡ್ರೂಪಿಯನ್ ಕಾಣುವಂತೆ ಮಾಡುತ್ತದೆ. ವಯಸ್ಸಾಗದೆ ಬಹುಬೇಗ ಈ ಸಮಸ್ಯೆ ಕಾಣಿಸಿಕೊಂಡರೆ ಸೂಕ್ತ ರೀತಿಯ ಆರೈಕೆಯ ಮೂಲಕ ಚೇತರಿಕೆ ಕಾಣಬಹುದು.

ಅತಿಯಾದ ರಂಧ್ರಗಳು

ಅತಿಯಾದ ರಂಧ್ರಗಳು

ಮುಖದಲ್ಲಿ ಕಾಣಿಸಿಕೊಳ್ಳುವ ವಿಸ್ತಾರವಾದ ರಂಧ್ರಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ. ರಂಧ್ರಗಳು ವಿಸ್ತರಿಸುವಾಗ ಸೂಕ್ತ ರೀತಿಯ ಕಾಳಜಿ ವಹಿಸಬೇಕು. ಇಲ್ಲವಾದರೆ ಬಹುಬೇಗ ವಯಸ್ಸಾದ ಚಿಹ್ನೆಗಳು ವಿಸ್ತರಣೆ ಹೊಂದುತ್ತಾ ಹೋಗುತ್ತದೆ.

English summary

Signs Of Skin Ageing You Must Never Overlook

Most of the telltale signs of ageing often go overlooked, unless they become too prominent and hard to conceal. A majority of women start to experience the signs of ageing after the age of 25. Early treatment of these signs can make a world of difference to the health and appearance of your skin. Today, at Boldsky, we've zeroed in on certain signs of skin ageing that you must never overlook, as early treatment can minimize their appearance and make sure that your skin ages gracefully. So, read on to know more about these telltale signs of ageing, here:
X
Desktop Bottom Promotion