ಚಳಿಗಾಲದಲ್ಲಿ ಒಣ ಚರ್ಮಗಳಿಗೆ ಮನೆಮದ್ದುಗಳು

By: Hemanth
Subscribe to Boldsky

ಚಳಿಗಾಲ ಬಂತೆಂದರೆ ಸಾಕು. ಮೈಯಲ್ಲಿ ಒಣಗಿ ನಿಸ್ತೇಜವಾಗುವುದು. ಕೆಲವೊಂದು ಸಲ ಕೈಗಳು ಒಡೆದು ಚರ್ಮ ಕಿತ್ತು ಬರುವುದು ಇದೆ. ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುವುದು. ಮಾಯಿಶ್ಚರೈಸರ್ ಹಚ್ಚಿಕೊಂಡರೂ ಕೆಲವೇ ಗಂಟೆಗಳಲ್ಲಿ ಇಂತಹ ಸಮಸ್ಯೆ ಮರುಕಳಿಸುವುದು. ಚಳಿಗಾಲದಲ್ಲಿ ಕೈಗಳು ಒಣಗದೆ ಇರುವಂತಹ ಕೆಲವು ಮನೆಮದ್ದಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಬಳಸಿಕೊಂಡರೆ ಕೈಗಳು ಕಾಂತಿಯುತವಾಗಿ ಕಾಣುವುದು ಮತ್ತು ಎಲ್ಲರ ಮುಂದೆ ಹೋಗಲು ನಿಮಗೆ ಆಗುವಂತಹ ಮುಜುಗರ ತಪ್ಪಿಸಬಹುದು.

ಗಾಳಿಯಲ್ಲಿ ಮಾಯಿಶ್ಚರೈಸರ್ ಇಲ್ಲದೆ ಇರುವ ಕಾರಣದಿಂದಾಗಿ ಕೈಗಳು ಒಣಗಿ ಒಡೆಯಬಹುದು. ದೀರ್ಘ ಕಾಲದ ತನಕ ಕೈಗಳು ತೇವಾಂಶದಿಂದ ಇರಬೇಕೆಂದರೆ ಕೈಗಳಿಗೆ ನೈಸರ್ಗಿಕ ಮಾಯಿಶ್ಚರೈಸರ್ ನೀಡುವುದು ಅಗತ್ಯವಾಗಿದೆ. ಅಡುಗೆ ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಕೈಗಳಿಗೆ ತೇವಾಂಶ ನೀಡಬಹುದು. ಇದು ತುಂಬಾ ಪರಿಣಾಮಕಾರಿ ಕೂಡ. ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಮುಂದೆ ಓದಿಕೊಳ್ಳಿ.....  

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲವು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಇದು ಚರ್ಮದ ಪದರಗಳ ತುಂಬಾ ಕೆಳಹಂತಕ್ಕೆ ತಲುಪುವುದು. ಬಾಧಿತ ಚರ್ಮಕ್ಕೆ ಆಲಿವ್ ತೈಲದಿಂದ ಮಸಾಜ್ ಮಾಡಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಬೇಕು ಅಥವಾ ಉಗುರುಬೆಚ್ಚಗಿನ ನೀರಿನಿಂದ ತೊಳೆಯಬೇಕು. ದಿನಿನಿತ್ಯವು ಇದನ್ನು ಬಳಸಿದರೆ ಚರ್ಮವು ಚಳಿಗಾಲದಲ್ಲಿ ಕಾಂತಿ ಪಡೆಯುವುದು ಖಚಿತ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯು ಚರ್ಮಕ್ಕೆ ಪೋಷಣೆ ನೀಡುವಂತಹ ಮತ್ತೊಂದು ಮನೆಮದ್ದಾಗಿದೆ. ಚಳಿಗಾಲದಲ್ಲಿ ಒಣಚರ್ಮದ ಸಮಸ್ಯೆ ನಿವಾರಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಇದನ್ನು ಕೈಗಳಿಗೆ ಮಸಾಜ್ ಮಾಡಿಕೊಂಡು ಹಾಗೆ ಬಿಡಿ. ಮೃದು ಹಾಗೂ ಕಾಂತಿಯುತ ಚರ್ಮ ಪಡೆಯಲು ದಿನದಲ್ಲಿ ಹಲವಾರು ಸಲ ಇದನ್ನು ಬಳಸಿ.

ಜೇನುತುಪ್ಪ

ಜೇನುತುಪ್ಪ

ನೈಸರ್ಗಿಕವಾಗಿ ಲಭ್ಯವಿರುವಂತಹ ಜೇನುತುಪ್ಪವು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಇದು ಒಣಚರ್ಮದ ನಿವಾರಣೆ ಮಾಡುವುದು. ಬಾಧಿತ ಪ್ರದೇಶಕ್ಕೆ ಜೇನುತುಪ್ಪ ಹಚ್ಚಿಕೊಳ್ಳಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಫಲಿತಾಂಶ ಬೇಕಾದರೆ ದಿನನಿತ್ಯವು ಈ ಮನೆಮದ್ದನ್ನು ಬಳಸಿಕೊಳ್ಳಿ.

ಮೊಸರು

ಮೊಸರು

ಒಣ ಮತ್ತು ಒಡೆದ ಚರ್ಮಕ್ಕೆ ಮೊಸರು ಮಾಯಿಶ್ಚಿರೈಸರ್ ಆಗಿ ಕೆಲಸ ಮಾಡುವುದು. ಒಣ ಕೈಗಳಿಗೆ ತಾಜಾ ಮೊಸರನ್ನು ಹಚ್ಚಿಕೊಳ್ಳಿ. ಸುಮಾರು 20-25 ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ದಿನದಲ್ಲಿ ಎರಡು ಸಲ ಇದನ್ನು ಬಳಸಿದರೆ ಪರಿಣಾಮಕಾರಿ ಫಲಿತಾಂಶ ಸಿಗುವುದು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಇರುವಂತಹ ಪೋಷಕಾಂಶಗಳು ಚಳಿಗಾಲದಲ್ಲಿ ನಿಮ್ಮ ಕೈಗಳಿಗೆ ಒಳ್ಳೆಯ ಪೋಷಣೆ ನೀಡುವುದು. ಬಾಳೆಹಣ್ಣನ್ನು ಕಿವುಚಿಕೊಂಡು ಅದಕ್ಕೆ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ಕೈಗಳಿಗೆ ಸರಿಯಾಗಿ ಹಚ್ಚಿಕೊಳ್ಳಿ. 20-5 ನಿಮಿಷ ಕಾಲ ಇದನ್ನು ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆಯಿರಿ. ವಾರದಲ್ಲಿ 4-5 ಸಲ ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾ ಲೋಳೆ ತೇವಾಂಶ ನೀಡುವ ಅಂಶದಂತೆ ಕೆಲಸ ಮಾಡುವುದು ಮತ್ತು ಚರ್ಮದ ವಿನ್ಯಾಸ ಮೃಧುಗೊಳಿಸುವುದು. ಅಲೋವೆರಾ ಲೋಳೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಟ್ಟ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನದಲ್ಲಿ 2-3 ಸಲ ಬಳಸಿದರೆ ಅದರಿಂದ ಚಳಿಗಾಲದಲ್ಲಿ ಕೈಗಳು ಮೃಧುವಾಗುವುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ

ಚಳಿಗಾಲದಲ್ಲಿ ಒಣಚರ್ಮದ ನಿವಾರಣೆ ಮಾಡುವಲ್ಲಿ ತೆಂಗಿನೆಣ್ಣೆಯು ಪ್ರಮುಖ ಪಾತ್ರ ವಹಿಸುವುದು. ಚರ್ಮಕ್ಕೆ ಪೋಷಣೆ ನೀಡುವ ಗುಣಗಳನ್ನುಹೊಂದಿರುವ ನೈಸರ್ಗಿಕ ತೈಲವನ್ನು ದಿನನಿತ್ಯವು ಬಳಸಿದರೆ ಫಲಿತಾಂಶ ಸಿಗುವುದು. ತೆಂಗಿನೆಣ್ಣೆಯನ್ನು ಕೈಗಳಿಗೆ ಹಚ್ಚಿಕೊಂಡು ದಿನವಿಡಿ ಹಾಗೆ ಬಿಟ್ಟರೆ ಫಲಿತಾಂಶ ಖಚಿತ.

ಹಾಲಿನ ಕೆನೆ

ಹಾಲಿನ ಕೆನೆ

ಚಳಿಗಾಲದಲ್ಲಿ ಕೈಗಳಿಗೆ ತೇವಾಂಶ ನೀಡುವ ಮನೆಮದ್ದುಗಳಲ್ಲಿ ಅಂತಿಮವಾಗಿ ಹಾಲಿಕ ಕೆನೆಯು ಸ್ಥಾನ ಪಡೆದಿದೆ. ಇದನ್ನು ಕೈಗಳಿಗೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಮಸಾಜ್ ಮಾಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮಾಯಿಶ್ಚರೈಸರ್ ಹೊಂದಿರುವ ಚರ್ಮ ಪಡೆಯಲು ದಿನದಲ್ಲಿ 4-5 ಸಲ ಇದನ್ನು ಬಳಸಿ.

ಅಲೋವೆರಾ

ಅಲೋವೆರಾ

ಈ ನೈಸರ್ಗಿಕ ಉತ್ಪನ್ನದ ಬಳಕೆ ಇಲ್ಲದೆ ಯಾವುದೇ ತ್ವಚೆಯ ಆರೋಗ್ಯ ವೃದ್ಧಿ ಔಷಧಿಗಳು ಪೂರ್ಣಗೊಂಡಿಲ್ಲ ಎನ್ನಬಹುದು. ಅಲೋ ವೆರಾ ಆಳವಾದ ಆದ್ರತೆ ಗುಣಗಳನ್ನು ಹೊಂದಿದೆ, ಚರ್ಮವು ಅದರ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ತೇವಾಂಶದ ಗುಣಲಕ್ಷಣಗಳು ವಾತಾವರಣದಿಂದ ಚರ್ಮಕ್ಕೆ ತೇವಾಂಶವನ್ನು ಸೆಳೆಯಲು ಸಹಾಯ ಮಾಡುತ್ತದೆ. ಇದು ಕಠಿಣ ಮಾರುತಗಳ ವಿರುದ್ಧ ಚರ್ಮವನ್ನು ರಕ್ಷಿಸುತ್ತದೆ.ನಿಮ್ಮ ಕೈ ಮತ್ತು ಮುಖದ ಮೇಲೆ ತಾಜಾ ಅಲೋ ವೆರಾ ಜೆಲ್ ಅನ್ನು ಅನ್ವಯಿಸಿ. 5 ನಿಮಿಷಗಳ ಕಾಲ ಅದನ್ನು ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು ಕೆನೆ ಮತ್ತು ನೈಸರ್ಗಿಕವಾಗಿ ಕೊಬ್ಬಿನ ಆಮ್ಲಗಳೊಂದಿಗೆ ತುಂಬಿರುತ್ತವೆ. ಅದು ಚರ್ಮದ ನೈಸರ್ಗಿಕ ತೇವಾಂಶವನ್ನು ಪುನಃಸ್ಥಾಪಿಸುತ್ತದೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ. ಒಂದು ಬಟ್ಟಲಿನಲ್ಲಿ ಕಿವುಚಿದ ಬೆಣ್ಣೆ ಹಣ್ಣಿಗೆ 2 ಟೇಬಲ್ ಚಮಚ ಆಲಿವ್ ಎಣ್ಣೆ ಸೇರಿಸಿ ಮಿಶ್ರಗೊಳಿಸಿ. ಚರ್ಮಕ್ಕೆ ಅದನ್ನು ಅನ್ವಯಿಸಿ 15 ನಿಮಿಷಗಳ ಕಾಲ ಅದನ್ನು ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಒಣ ಚರ್ಮದವರಿಗೆ ಚಳಿಗಾಲ ಶತ್ರುವಾಗಿದೆ. ಏಕೆಂದರೆ ಮೊದಲೇ ಒಣಚರ್ಮವಾಗಿದ್ದು ಈಗ ಚಳಿಗಾಲದ ಕಾರಣದಿಂದ ಇನ್ನಷ್ಟು ಒಣಗುತ್ತದೆ. ಇವರಿಗೆ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆಯಾಗಿದ್ದು ಚರ್ಮ ಸೌಮ್ಯ ಮತ್ತು ನಯವಾಗಿರಲು ನೆರವಾಗುತ್ತದೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಕೊಂಚ ಕೊಬ್ಬರಿ ಎಣ್ಣೆ ಸವರಿ ಮಲಗುವ ಮೂಲಕ ಒಣಚರ್ಮ ಆರೋಗ್ಯಕರವಾಗಿರುತ್ತದೆ. ಕೊಬ್ಬರಿ ಎಣ್ಣೆ ಚರ್ಮದ ಆಳಕ್ಕೆ ಇಳಿದು ಒಣಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಹಾಗೂ ಚರ್ಮ ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುವ ಮೂಲಕ ಇನ್ನಷ್ಟು ಒಣಗುವುದರಿಂದ ತಡೆಯುತ್ತದೆ.

English summary

Remedies That Can Soothe Dry Hands During The Winter Season

A deficiency of moisture in the air causes the skin on your hands to become dry and cracked. And, store-bought moisturizers and lotions can only give you relief for a few minutes. For long-lasting effect, it is best to treat the skin on your hands with natural ingredients that are packed with skin-nourishing properties capable of hydrating your skin and ensuring that it stays well-moisturized at all times. Here, we've compiled a list of such remedies that can be easily found in your kitchen cabinet. Read on to know more about them and the most effective way to use them:
Subscribe Newsletter