For Quick Alerts
ALLOW NOTIFICATIONS  
For Daily Alerts

ಕಂಕುಳಿನ ಮೊಡವೆಗಳಿಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By Hemanth
|

ಮೊಡವೆ ಹಾಗೂ ಬೊಕ್ಕೆಗಳು ಮುಖ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲಿಯೂ ಮೂಡುವುದು. ಈ ಸಮಸ್ಯೆಯು ನಮಗೆ ತುಂಬಾ ಕಿರಿಕಿರಿ ಹಾಗೂ ಹೇಸಿಗೆ ಹುಟ್ಟಿಸುವುದು. ಅದರಲ್ಲೂ ಸ್ಲೀವ್ ಲೆಸ್ ಬಟ್ಟೆ ಧರಿಸುವಂತಹ ಮಹಿಳೆಯರಿಗೆ ಇದು ದೊಡ್ಡ ಸಮಸ್ಯೆ. ಹೀಗೆ ಇದ್ದರೆ ಸ್ಲೀವ್ ಲೆಸ್ ಬಟ್ಟೆ ಧರಿಸಿಕೊಂಡು ಹೋಗಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ನಾಲ್ಕು ಜನರ ಮುಂದೆ ಸ್ಲೀವ್ ಲೆಸ್ ಬಟ್ಟೆ ಧರಿಸದಂತೆ ಆಗುವುದು. ದುಗ್ದರಸ ಗ್ರಂಥಿಗಳು ಹಿಗ್ಗಿಕೊಂಡಾಗ ಇಂತಹ ಸಮಸ್ಯೆಯು ಕಂಡುಬರುವುದು. ಕಂಕುಳಿನಡಿಯಲ್ಲಿ ಮೂಡುವ ಬೊಕ್ಕೆಗಳಿಂದಾಗಿ ಕಿರಿಕಿರಿ ಉಂಟಾಗುವುದು.

ಕ್ಷೌರ, ಸೋಂಕು, ಕೋಶದ ರಚನೆಯಿಂದಾಗಿ ಇಂತಹ ಸಮಸ್ಯೆಯು ಬರುವುದು. ಇದನ್ನು ಬೇಗನೆ ಪತ್ತೆ ಮಾಡಬಹುದು. ಯಾಕೆಂದರೆ ಅವುಗಳು ಗುಲಾಬಿ ಬಣ್ಣದಲ್ಲಿರುವುದು. ಹೆಚ್ಚಾಗಿ ಇಂತಹ ಬೊಕ್ಕೆಗಳು ಸೋಂಕಿನಿಂದ ನಿರ್ಮಾಣವಾಗಿರುವುದು ಮತ್ತು ಅದು ಮಾಯವಾಗುವ ತನಕ ನೋವುಂಟು ಮಾಡುವುದು. ಕೆಲವೊಂದು ಸ್ವಚ್ಛತೆಯ ಕ್ರಮಗಳೊಂದಿಗೆ ಮನೆಮದ್ದುಗಳನ್ನು ಬಳಸಿಕೊಂಡರೆ ಇದನ್ನು ನಿವಾರಣೆ ಮಾಡಬಹುದು.

Armpit Lumps

ಸ್ವಲ್ಪವೂ ನೋವಿಲ್ಲದೆ ಅಥವಾ ತುಂಬಾ ಕಡಿಮೆ ನೋವಿನಲ್ಲಿ ಬೊಕ್ಕೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಇದ್ದರೆ ಆಗ ನೀವು ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಲೇಖನದಲ್ಲಿ ಮನೆಯಲ್ಲೇ ಇದ್ದುಕೊಂಡು ನೀವು ಕಂಕುಳಿನ ಮೊಡವೆ ಅಥವಾ ಬೊಕ್ಕೆ ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿಸಿಕೊಡಲಿದ್ದೇವೆ. ಈ ಮನೆಮದ್ದುಗಳ ಬಗ್ಗೆ ನೀವು ತಿಳಿಯಿರಿ.

ಅಕ್ಕಿಹಿಟ್ಟಿನ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
1 ಚಮಚ ಅಕ್ಕಿ ಹಿಟ್ಟು
1-2 ಚಮಚ ಲಿಂಬೆ/ ಕಿತ್ತಳೆ ರಸ

ತಯಾರಿಸುವ ವಿಧಾನ
*ಎಲ್ಲವನ್ನೂ ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.
*ಇದನ್ನು ಕಂಕುಳಿಗೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಸ್ಕ್ರಬ್ ಮಾಡಿ. ಗಡುಸಾಗಿ ಉಜ್ಜಿಕೊಳ್ಳಬೇಡಿ.
*2-3 ನಿಮಿಷ ಕಾಲ ಸ್ಕ್ರಬ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಲಿಂಬೆರಸ
ಬೇಕಾಗುವ ಸಾಮಗ್ರಿಗಳು
ಲಿಂಬೆರಸ
ತಯಾರಿಸುವ ವಿಧಾನ
*ಇದಕ್ಕೆ ಎರಡು ಪರ್ಯಾಯಗಳಿವೆ. ಲಿಂಬೆ ತುಂಡು ಮಾಡಿ ಎರಡು ತುಂಡು ಮಾಡಿ ಮತ್ತು ಇದನ್ನು ಮೊಡವೆಗೆ ಉಜ್ಜಿಕೊಳ್ಳಿ.
*ನೀವು ಇದನ್ನು ದಿನಕ್ಕೆ ಎರಡು ಸಲ, ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಮಾಡಿ.

ಅಡುಗೆ ಸೋಡಾ ಮತ್ತು ಉಪ್ಪು
ಬೇಕಾಗುವ ಸಾಮಗ್ರಿಗಳು
1 ಚಮಚ ಅಡುಗೆ ಸೋಡಾ
1 ಚಮಚ ಉಪ್ಪುನೀರು

ತಯಾರಿಸುವ ವಿಧಾನ
1. ಒಂದು ಚಮಚ ಅಡುಗೆ ಸೋಡಾ ಮತ್ತು ಉಪ್ಪು ನೀರನ್ನು ಮಿಶ್ರಣ ಮಾಡಿಕೊಳ್ಳಿ. ದಪ್ಪಗಿನ ಪೇಸ್ಟ್ ಮಾಡಲು ನೀರು ಹಾಕಿ.
2. ಈ ಪೇಸ್ಟ್ ನ್ನು ಕಂಕುಳಿಗೆ ಹಚ್ಚಿಕೊಳ್ಳಿ.
3. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ನೀರಿನಿಂದ ತೊಳೆದು, ಒರೆಸಿಕೊಳ್ಳಿ.

ತೆಂಗಿನೆಣ್ಣೆ
ಬೇಕಾಗುವ ಸಾಮಗ್ರಿಗಳು
ತೆಂಗಿನೆಣ್ಣೆ
ಹತ್ತಿ ಉಂಡೆ

ತಯಾರಿಸುವ ವಿಧಾನ
1. ಸ್ವಲ್ಪ ತೆಂಗಿನೆಣ್ಣೆ ತೆಗೆದುಕೊಂಡು ಅದನ್ನು ಹತ್ತಿ ಉಂಡೆಯಿಂದ ಮೊಡವೆಗಳಿಗ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಿ ಮತ್ತು 5-10 ನಿಮಿಷ ಕಾಲ ಹಾಗೆ ಬಿಡಿ.
2. ತೆಂಗಿನೆಣ್ಣೆಯು ಮೊಡವೆಗಳು ಸಡಿಲವಾಗಲು ನೆರವಾಗುವುದು ಮತ್ತು ನೈಸರ್ಗಿಕವಾಗಿ ಉದುರುವುದು.

ಶ್ರೀಗಂಧ ಮತ್ತು ರೋಸ್ ವಾಟರ್
ಬೇಕಾಗುವ ಸಾಮಗ್ರಿಗಳು
1 ಚಮಚ ಶ್ರೀಗಂಧದ ಹುಡಿ
1 ಚಮಚ ರೋಸ್ ವಾಟರ್

ತಯಾರಿಸುವ ವಿಧಾನ
1. ಒಂದು ಪಿಂಗಾಣಿಯಲ್ಲಿ ಶ್ರೀಗಂಧ ಮತ್ತು ರೋಸ್ ವಾಟರ್ ನ್ನು ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
2. ಇದನ್ನು ಮೊಡವೆಗಳಿಗೆ ಹಚ್ಚಿ ಮತ್ತು ಒಣಗಲು ಬಿಡಿ.
3. ಇದು ಒಣಗಿದ ಬಳಿಕ ತಣ್ಣೀರಿನಿಂದ ಇದನ್ನು ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡಿದರೆ ನಿಮಗೆ ನಿಶ್ಚಿತ ಫಲಿತಾಂಶ ಸಿಗುವುದು.

ಬಾದಾಮಿ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
1 ಚಮಚ ಸಕ್ಕರೆ
2-3 ಚಮಚ ಬಾದಾಮಿ ಎಣ್ಣೆ

ತಯಾರಿಸುವ ವಿಧಾನ
*ಒಂದು ಚಮಚ ಸಕ್ಕರೆ ಮತ್ತು 2 ಚಮಚ ಬಾದಾಮಿ ಎಣ್ಣೆಯನ್ನು ಒಂದು ಪಿಂಗಾಣಿಯಲ್ಲಿ ಹಾಕಿ ಮಿಶ್ರಣ ಮಾಡಿ.
*ಇದನ್ನು ವೃತ್ತಾಕಾರದಲ್ಲಿ ಭಾದಿತ ಜಾಗಕ್ಕೆ ಸ್ಕ್ರಬ್ ಮಾಡಿ.
* ತಣ್ಣೀರಿನಿಂದ ತೊಳೆಯಿರಿ. ಮೂರು ವಾರಗಳ ಕಾಲ ವಾರಕ್ಕೊಂದು ಸಲ ಇದನ್ನು ಬಳಸಿ ನೋಡಿ.

ಅಲೋವೆರಾ ಲೋಳೆ
ಬೇಕಾಗುವ ಸಾಮಗ್ರಿಗಳು
1 ಅಲೋವೆರಾದ ಗಿಡ

ಬಳಸುವ ಕ್ರಮ
*ಅಲೋವೆರಾ ಎಲೆ ತುಂಡು ಮಾಡಿ ಅದರಲ್ಲಿನ ಲೋಳೆ ತೆಗೆಯಿರಿ. ನೀವು ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಲೋಳೆ ಕೂಡ ಬಳಸಬಹುದು.
*ಇದನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 10 ನಿಮಿಷ ಹಾಗೆ ಬಿಡಿ.
* ಸಾಮಾನ್ಯ ನೀರಿನಿಂದ ತೊಳೆಯಿರಿ.
* ಈ ವಿಧಾನವನ್ನು ದಿನದಲ್ಲಿ ಎರಡು ಸಲ ಬಳಸಿ. ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹೀಗೆ ಮಾಡಿ.

ಜೇನುತುಪ್ಪ
1 ಚಮಚ ಜೇನುತುಪ್ಪ
ಬಳಸುವ ವಿಧಾನ
1. ಜೇನುತುಪ್ಪವನ್ನು ನೇರವಾಗಿ ಕಂಕುಳಿನ ಮೊಡವೆಗಳಿಗೆ ಹಚ್ಚಿ.
2. ಇದು ಒಣಗುವ ತನಕ ಹಾಗೆ ಇರಲಿ.
3. ಈ ಜಾಗವನ್ನು ತೊಳೆದರೆ ನಿಮಗೆ ಜೇನುತುಪ್ಪದ ಫಲಿತಾಂಶ ಕಂಡುಬರುವುದು.
4. ನಿಮಗೆ ಫಲಿತಾಂಶ ಬರುವ ತನಕ ಇದನ್ನು ನೀವು ಬಳಸಿ.

ಮೊಟ್ಟೆಯ ಲೋಳೆಯ ಮಾಸ್ಕ್
ಮೊಟ್ಟೆಯಲ್ಲಿ ಒಂದು ಬೆರಳು ಹೋಗುವಷ್ಟು ಜಾಗ ಮಾಡಿಕೊಂಡು ಅದರೊಳಗೆ ಬೆರಳು ಹಾಕಿ. ಬೆರಳಿನಲ್ಲಿ ಬರುವಂತಹ ಮೊಟ್ಟೆಯ ಬಿಳಿ ಲೋಳೆಯನ್ನು ಮೊಡವೆಗಳಿಗೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಕಾಲ ಹಾಗೆ ಬಿಟ್ಟು ಬಿಡಿ. ಮೊಟ್ಟೆಯ ಬಿಳಿ ಲೋಳೆ ಹಚ್ಚಿಕೊಳ್ಳುವ ಮೊದಲು ಮೊಡವೆಗಳಿಗೆ ಲಿಂಬೆರಸವನ್ನು ಹಾಕಿಕೊಳ್ಳಿ. ಇದು ಒಳ್ಳೆಯ ಶಮನಕಾರಿ ಗುಣವನ್ನು ಹೊಂದಿದೆ.

ಲಿಂಬೆರಸ
ಮಲಗುವ ಮೊದಲು ಸ್ವಲ್ಪ ಲಿಂಬೆರಸವನ್ನು ಹತ್ತಿ ಉಂಡೆಯಿಂದ ಕಂಕುಳಿಗೆ ಹಚ್ಚಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ಎದ್ದಾಗ ಮೊಡವೆಗಳು ಒಣಗಿರುತ್ತದೆ ಮತ್ತು ಬಿದ್ದು ಹೋಗುತ್ತದೆ.

ಕಾಫಿ
ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಕಂಕುಳಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ....

ಸಾಸಿವೆ ಮತ್ತು ಜೇನುತುಪ್ಪ
ಸಾಸಿವೆಯಲ್ಲಿ ಸಲಿಸ್ಯಲಿಕ್ ಎನ್ನುವ ಆಮ್ಲವು ಇರುವ ಕಾರಣದಿಂದಾಗಿ ಇದು ಸೋಂಕು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆಯು ಮೊಡವೆಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ¼ ಚಮಚ ಸಾಸಿವೆ ಹುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಕಂಕುಳಲ್ಲಿ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

English summary

Quick Ways To Treat Armpit Lumps

Underarm pimples or lumps are embarrassing, especially when you have to compromise on your sleeveless tops and dresses. It not only makes us lose our confidence to present ourselves in a public gathering, but also leads to irritation and pain. Armpit lumps mainly occur when at least one of the lymph nodes under your arms enlarges. Usually, these are caused due to factors like irritation, which are caused by shaving, infection, cyst formation, etc.
Story first published: Wednesday, May 30, 2018, 18:08 [IST]
X
Desktop Bottom Promotion