ಬ್ಯೂಟಿ ಟಿಪ್ಸ್: ಜೋತು ಬಿದ್ದ ಚರ್ಮಕ್ಕೆ ನೈಸರ್ಗಿಕ ಮನೆಮದ್ದುಗಳು

Posted By: Heamanth
Subscribe to Boldsky

ವಯಸ್ಸಾದವರ ಮುಖ ಹಾಗೂ ದೇಹ ನೋಡಿದರೆ ಚರ್ಮ ಜೋತು ಬಿದ್ದಿರುವುದು ಗೋಚರಿಸುವುದು. ವಯಸ್ಸಾಗುತ್ತಾ ಹೋದಂತೆ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಚರ್ಮ ಜೋತು ಬೀಳುವುದು ಸಾಮಾನ್ಯ. ಆದರೆ ಇಂದಿನ ದಿನಗಳಲ್ಲಿ ಹದಿಹರೆಯದವರ ಮುಖದ ಚರ್ಮವು ಜೋತು ಬೀಳಲು ಆರಂಭವಾಗಿದೆ. ಇದರಿಂದ ಹಲವಾರು ಮಂದಿ ಭೀತಿ ಪಡುವುದು ಇದೆ. ಆದರೆ ಈ ಸಮಸ್ಯೆಯು ದೇಹವನ್ನು ಅತಿಯಾಗಿ ಬಿಸಿಲಿಗೆ ಒಡ್ಡಿದಾಗ ಕಾಲಜನ್ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಹಾನಿಯಾಗುವುದರಿಂದ ಬರುವುದು. ಸಿಗರೇಟ್ ಸೇದುವುದು ಮತ್ತು ಕಲುಷಿತ ವಾತಾವರಣವು ನೆರಿಗೆ ಮತ್ತು ಚರ್ಮ ಜೋತು ಬೀಳಲು ಇತರ ಕಾರಣಗಳಾಗಿವೆ.

ಎಲ್ಲಾ ಕ್ರೀಮ್ ಗಳನ್ನು ಬಳಸಿದ ಬಳಿಕ ಏನಾದರೂ ನೈಸರ್ಗಿಕ ವಿಧಾನದಿಂದ ಇದನ್ನು ಪರಿಹರಿಸಬಹುದೇ ಎಂದು ನೀವು ಕಾಯುತ್ತಿದ್ದರೆ ಈ ಲೇಖನ ನಿಮಗೆ ಸರಿಯಾಗಿದೆ. ಈ ಲೇಖನದಲ್ಲಿ ಮುಖದ ಚರ್ಮವನ್ನು ಬಿಗಿಗೊಳಿಸುವ ಕೆಲವೊಂದು ಮನೆಮದ್ದುಗಳನ್ನು ಹೇಳಲಾಗಿದೆ. ಮನೆಯಲ್ಲಿ ಸಿಗುವಂತಹ ಕೆಲವು ಸರಳ ಸಾಮಗ್ರಿಗಳನ್ನು ಬಳಸಿಕೊಂಡು ನೀವು ಇದನ್ನು ತಯಾರಿಸಿಕೊಳ್ಳಬಹದು. ಈ ಮನೆಮದ್ದುಗಳು ಯಾವುದು ಮತ್ತು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳುವ.

1. ಕಾಫಿ

1. ಕಾಫಿ

ಕಾಫಿಯಲ್ಲಿ ಇರುವಂತಹ ಕೆಫಿನ್ ಅಂಶವು ಚರ್ಮದಲ್ಲಿರುವ ಹೆಚ್ಚುವರಿ ಮೊಶ್ಚಿರೈಸರ್ ನ್ನು ತೆಗೆದುಹಾಕಿ ಚರ್ಮವು ಬಿಗಿಗೊಳ್ಳಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

1/4 ಕಪ್ ಕಾಫಿ ಹುಡಿ, 1/4 ಕಪ್ ಬ್ರೌನ್ ಶುಗರ್, ಮೂರು ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ತೈಲ, 1/2 ಚಮಚ ದಾಲ್ಚಿನಿ ಹುಡಿ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಪಾತ್ರೆಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಕರಗಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು ಕೆಲವು ನಿಮಿಷ ಹಾಗೆ ಬಿಡಿ. ಅಂತಿಮವಾಗಿ ಬಿಸಿನೀರಿನಿಂದ ತೊಳೆಯಿರಿ ಮತ್ತು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

2. ಟೊಮೆಟೋ

2. ಟೊಮೆಟೋ

ಟೊಮೆಟೋವು ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಅದನ್ನು ಬಿಗಿಗೊಳಿಸುವುದು. ಜೋತುಬೀಳುವ ಚರ್ಮಕ್ಕೆ ಒಂದು ಸರಳ ಮನೆಮದ್ದನ್ನು ತಯಾರಿಸುವ.

ಬೇಕಾಗುವ ಸಾಮಗ್ರಿಗಳು

1 ಟೊಮೆಟೋ

ಹತ್ತಿ ಉಂಡೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಟೊಮೆಟೋವನ್ನು ಹಿಂಡಿಕೊಂಡು ಅದರ ರಸ ತೆಗೆಯಿರಿ. ಈ ರಸದಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಅದನ್ನು ಮುಖಕ್ಕೆ ಹಚ್ಚಿ. ಇದನ್ನು 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ. ಜೋತು ಬೀಳುವ ಚರ್ಮಕ್ಕೆ ಇದು ತುಂಬಾ ಸರಳ ಮನೆಮದ್ದು.

3. ಪಪ್ಪಾಯಿ

3. ಪಪ್ಪಾಯಿ

ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್ ಇರುವ ಕಾರಣ ಇದು ಚರ್ಮವನ್ನು ತುಂಬಾ ಮೃಧು ಹಾಗೂ ಬಿಗಿಗೊಳಿಸುವುದು. ಪಪ್ಪಾಯಿಯಲ್ಲಿರುವ ಕಿಣ್ವಗಳು ಚರ್ಮ ಜೋತು ಬೀಳುವುದನ್ನು ತಡೆಯುವುದು.

ಬೇಕಾಗುವ ಸಾಮಗ್ರಿಗಳು

ಪಪ್ಪಾಯಿ

1-2 ಚಮಚ ಅಕ್ಕಿ ಹಿಟ್ಟು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಪಪ್ಪಾಯಿಯನ್ನು ಸಣ್ಣದಾಗಿ ತುಂಡು ಮಾಡಿಕೊಂಡು ಅದನ್ನು ರುಬ್ಬಿಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟು ಹಾಕಿ ಪೇಸ್ಟ್ ಮಾಡಿ ಮತ್ತು ಮೇಲ್ಮುಖವಾಗಿ ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷ ಕಾಲ ಹೀಗೆ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿ.

4. ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

4. ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ಮೊಟ್ಟೆಯ ಬಿಳಿ ಲೋಳೆಯಲ್ಲಿ ಪ್ರೋಟೀನ್ ಇದ್ದು, ಇದು ಚರ್ಮದಲ್ಲಿ ಸ್ಥಿತಿಸ್ಥಾಪಕತ್ವ ಸುಧಾರಿಸುವುದು. ಸತ್ತ ಚರ್ಮವನ್ನು ತೆಗೆದುಹಾಕುವ ಇದು ನೈಸರ್ಗಿಕ ಕಾಂತಿಯನ್ನು ಚರ್ಮಕ್ಕೆ ನೀಡುವುದು.

ಬೇಕಾಗುವ ಸಾಮಗ್ರಿಗಳು

1 ಮೊಟ್ಟೆಯ ಬಿಳಿ ಲೋಳೆ

2 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಮೊಟ್ಟೆಯ ಬಿಳಿಭಾಗ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಚರ್ಮ ಬಿಗಿಗೊಳ್ಳಲು ತಿಂಗಳಲ್ಲಿ ಮೂರು ಸಲ ಈ ಮನೆಮದ್ದು ಬಳಸಿ.

5. ಬಾಳೆಹಣ್ಣಿನ ಮಾಸ್ಕ್

5. ಬಾಳೆಹಣ್ಣಿನ ಮಾಸ್ಕ್

ಹಣ್ಣಾಗಿರುವ ಬಾಳೆಹಣ್ಣಿನಲ್ಲಿ ಇರುವಂತಹ ಖನಿಜಾಂಶಗಳು ಮತ್ತು ವಿಟಮಿನ್ ಗಳಲ್ಲಿ ವಯಸ್ಸಾಗುವ ಲಕ್ಷಣ ತಡೆಗಟ್ಟುವ ಗುಣಗಳನ್ನು ಹೊಂದಿದೆ. ಇದನ್ನು ಚರ್ಮ ಬಿಗಿಗೊಳಿಸಲು ಬಳಸಬಹುದು.

ಬೇಕಾಗುವ ಸಾಮಗ್ರಿಗಳು

ಹಣ್ಣಾದ ಬಾಳೆಹಣ್ಣು

2-3 ಚಮಚ ಲಿಂಬೆಜ್ಯೂಸ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಹಿಚುಕಿಕೊಂಡಿರುವ ಬಾಳೆಹಣ್ಣನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಕೆಲವು ಹನಿ ಲಿಂಬೆರಸವನ್ನು ಬಾಳೆಹಣ್ಣಿನ ಮೇಲೆ ಹಾಕಿಕೊಳ್ಳಿ. 15 ನಿಮಿಷ ಕಾಲ ಇದನ್ನು ಮುಖದ ಮೇಲೆ ಹಾಗೆ ಬಿಟ್ಟ ಬಳಿಕ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

6. ಮೊಸರು

6. ಮೊಸರು

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ರಂಧ್ರಗಳನ್ನು ಕುಗ್ಗಿಸುವುದು ಮತ್ತು ಚರ್ಮ ಬಿಗಿಗೊಳಿಸುವುದು. ಇದರಿಂದ ಚರ್ಮ ಜೋತು ಬೀಳುವುದು ತಪ್ಪುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಮೊಸರು

ಕೆಲವು ಹನಿ ಲಿಂಬೆರಸ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಲಿಂಬೆರಸ ಮತ್ತು ಮೊಸರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಇನ್ನು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

English summary

prevent-sagging-skin-with-these-skin-tightening-masks

Many of you who face this might be looking at some natural remedies to prevent sagging skin, isn't it? Well, you are at the right place! Presenting to you some of the home remedies for facial skin tightening. You can try these easy remedies with ingredients which are easily available in your home. So, let us see what they are and how to use them.