For Quick Alerts
ALLOW NOTIFICATIONS  
For Daily Alerts

  ಮದುವೆಗೂ ಮುನ್ನ ಈ ಫೇಶಿಯಲ್‌ಗಳನ್ನು ಎಲ್ಲಾ ಹುಡುಗಿಯರೂ ಟ್ರೈ ಮಾಡಬಹುದು!

  By Sushma Charhra
  |

  ಯಾರು ಯಾರು ಸದ್ಯದಲ್ಲೇ ಮದುವೆಯಾಗಲಿದ್ದೀರೋ ಅಂತ ಹುಡುಗಿಯರಿಗೆ ಇಲ್ಲಿದೆ ನೋಡಿ ಒಂದಷ್ಟು ಗುಡ್ ನ್ಯೂಸ್ ಗಳು..! ನೀವು ನಿಮ್ಮ ಮದುವೆಯ ದಿನ ತುಂಬಾ ಅದ್ಭುತವಾಗಿ ಕಾಣಲು, ನಿಮ್ಮ ಚರ್ಮದ ಅಂದ ಹೆಚ್ಚಿಸಿಕೊಳ್ಳಲು ಹೆಚ್ಚು ಹಣವನ್ನು ವ್ಯಯಿಸಬೇಕಾಗಿಲ್ಲ. ಆ ಮಧುರ ದಿನದಂದು ಯಾರೂ ಕೂಡ ತಮ್ಮ ಸೌಂದರ್ಯದಲ್ಲಿ ತಪ್ಪುಗಳಾಗಲು ಇಚ್ಛಿಸುವುದಿಲ್ಲ. ಚರ್ಮದ ಬಣ್ಣ ಬದಲಾಗಿರುವುದು, ಡಾರ್ಕ್ ಸರ್ಕಲ್ ಗಳು.

  ಕಾಂತಿಹೀನ ತ್ವಚೆ ಯಾವುದೂ ಕೂಡ ಮದುವೆ ದಿನ ಇರಬಾರದು ಎಂದೇ ಎಲ್ಲರೂ ಬಯಸುತ್ತಾರೆ. ಹಾಗಾಗಿ ಕೆಲವು ಬ್ಯೂಟಿ ಟಿಪ್ಸ್ ಗಳು ಮದುವೆಗೂ ಮುನ್ನ ಫಾಲಿಸುವುದು ಬಹಳ ಮುಖ್ಯ, ಆ ಮೂಲಕ ನೀವು ನಿಮ್ಮ ಮದುವೆಯ ದಿನ ಸುಂದರವಾಗಿ, ಆಕರ್ಷಣೀಯವಾಗಿ ಕಾಣಲು ಸಾಧ್ಯವಿದೆ.

  ನೀವು ಮದುವೆಗೂ ಮುನ್ನದ ತಯಾರಿಯಲ್ಲಿ, ಹೆಚ್ಚಿನವರು ಬ್ಯೂಟಿ ಪಾರ್ಲರ್ ಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ ಮತ್ತು ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಉದ್ದೇಶದಿಂದಾಗಿ ಪಾರ್ಲರ್ ನ ಒಡತಿ ಅಥವಾ ಬ್ಯೂಟೀಷಿಯನ್ ಹೇಳಿದ ಎಲ್ಲಾ ರೀತಿಯ ಬ್ಯೂಟಿ ಮಾಹಿತಿಗಳನ್ನು ಪಾಲಿಸುತ್ತಾರೆ. ಆದರೆ ಇದು ನಿಮಗೆ ಸ್ವಲ್ಪ ದುಬಾರಿ ಮತ್ತು ಹೆಚ್ಚು ಸಮಯವನ್ನು ಹಿಡಿಯುವ ಕೆಲಸವಾಗಿರುತ್ತದೆ.. ಆದರೆ ನೀವು ಹೆಚ್ಚು ಶ್ರಮ ವಹಿಸದೇ ಮತ್ತು ಮನೆಯಲ್ಲೇ ಅನೂಕೂಲಕರವಾಗಿದ್ದುಕೊಂಡೇ ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಿದೆ.

  Pre-wedding DIY Facials

  ಬಹುಶ್ಯಃ ನೀವು ಈಗ ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿರಬಹುದು ಅಲ್ಲವೇ? ಒಂದು ವೇಳೆ ನೀವು ಅದನ್ನು ಆಲೋಚಿಸುತ್ತಿದ್ದರೆ, ಖಂಡಿತ ಸರಿಯಾದ ಲೇಖನವನ್ನು ಓದುತ್ತಿದ್ದೀರಿ. ಎಸ್.. ಈ ಲೇಖನದಲ್ಲಿ ನಾವು ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದು, ಆ ಮೂಲಕ ನೀವು ನಿಮ್ಮ ಸ್ಪೆಷಲ್ ದಿನದಂದೂ ತುಂಬಾ ಸುಂದರವಾಗಿ ಕಾಣಲು ಸಾಧ್ಯವಿದೆ.

  ತಯಾರಿಯು ಮದುವೆಗಿಂತ ತುಂಬಾ ಮೊದಲೇ ಆರಂಭವಾಗಿರಬೇಕು

  ನಿಮ್ಮ ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಮದುವೆಗೂ ಸುಮಾರು 3 ತಿಂಗಳ ಮುನ್ನವೇ ಪ್ರಾರಂಭಿಸಬೇಕು. 3 ತಿಂಗಳ ಸಮಯ ಅನ್ನುವುದು ನಿಜಕ್ಕೂ ನಿಮ್ಮ ಚರ್ಮಕ್ಕೆ ಬಹಳ ಮಹತ್ವಪೂರ್ಣವಾಗಿರುವ ದಿನಗಳಾಗಿರುತ್ತದೆ. ನಾವು ಕೆಳಗಡೆ ತಿಳಿಸುವ ಡೈ ಫೇಶಿಯಲ್ ಗಳು ಕೆಲವು ವಾರಗಳ ಮುಂಚಿನಿಂದಲೇ ಪ್ರಾರಂಭಿಸಿದರೆ ನಿಮ್ಮ ಮದುವೆಯ ದಿನ ನೀವು ಸುಂದರ ಮದುಮಗಳಾಗಿ ಕಂಗೊಳಿಸುತ್ತೀರಿ. ಅಷ್ಟು ಸಮಯ ನೀಡಿದರೆ ಆ ಫೇಶಿಯಲ್ ನ ಎಫೆಕ್ಟ್ ನಿಮ್ಮ ಚರ್ಮಕ್ಕೆ ಆಗಲು ಸಾಧ್ಯವಿದೆ. ನೀವು ಬಳಸುವ ಫೇಶಿಯಲ್ ಪ್ರೊಡಕ್ಟ್ ಗಳು ನಿಮ್ಮ ಚರ್ಮದಲ್ಲಿ ಹೀರಿಕೊಂಡು ಕೊನೆಕ್ಷಣದ ತೊಂದರೆಗಳಿಂದ ನಿಮ್ಮನ್ನ ರಕ್ಷಿಸಿ, ಕಾಂತಿಯುತ ತ್ವಚೆ ಇರುವಂತೆ ನೋಡಿಕೊಳ್ಳುತ್ತೆ.

  ಶುಷ್ಕ ತ್ವಚೆಯವರಿಗೆ ಡೈ ಫೇಶಿಯಲ್

  ಈ ಫೇಶಿಯಲ್ ನ ಪ್ರಮುಖ ಹಂತವೆಂದರೆ ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ತೊಡೆದು ಹಾಕುವುದು ಅಥವಾ ನಿವಾರಣೆ ಮಾಡುವುದು. ಫೇಸ್ ಪ್ಯಾಕ್ ಗಳನ್ನು ಅಪ್ಲೈ ಮಾಡುವುದೇ ಚರ್ಮವನ್ನು ಸ್ವಚ್ಛ ಮತ್ತು ಸುಂದರ ಮಾಡುವ ಉದ್ದೇಶದಿಂದ ಅಲ್ವಾ?

  ನಿಂಬೆಹಣ್ಣು ಮತ್ತು ಹಾಲಿನ ಪುಡಿಯ ಫೇಸ್ ಪ್ಯಾಕ್

  ಇದು ನಿಮಗೆ ಒಂದು ವೇಳೆ ಡ್ರೈ ಸ್ಕಿನ್ ಅಥವಾ ಶುಷ್ಕ ತ್ವಚೆ ಇದ್ದಲ್ಲಿ ಅಧ್ಬುತವಾಗಿ ಕೆಲಸ ಮಾಡುತ್ತೆ. ಯಾಕೆಂದರೆ ಹಾಲಿನ ಪುಡಿ ಮತ್ತು ನಿಂಬೆಹಣ್ಣು ಎರಡರಲ್ಲೂ ಕೂಡ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವ ಕೆಪಾಸಿಟಿ ಇದೆ.

  . ಬೇಕಾಗುವ ಸಾಮಗ್ರಿಗಳು :

  ಹಾಲಿನ ಪುಡಿ

  ನಿಂಬೆ ರಸ

  . ಮಾಡುವ ವಿಧಾನ ಹೇಗೆ ಗೊತ್ತಾ :

  1. ಒಂದು ಸ್ಪೂನ್ ಹಾಲಿನ ಪುಡಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಿ

  2. ಅದರ ಪೇಸ್ಟ್ ನ್ನು ತಯಾರಿಸಿ ಮತ್ತು ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ

  3. 20 ನಿಮಿಷದ ನಂತರ ಮುಖವನ್ನು ತೊಳೆಯಿರಿ

  4. ಇದಾದ ನಂತರ ಸ್ವಲ್ಪ ಮಾಯ್ಚಿರೈಸರ್ ನ್ನು ಮುಖಕ್ಕೆ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.

  ಬೆಣ್ಣೆಹಣ್ಣು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್

  . ಬೇಕಾಗುವ ಸಾಮಗ್ರಿಗಳು :

  ಆಲಿವ್ ಆಯಿಲ್

  ಅವಕಾಡೋ ಅಥವಾ ಬೆಣ್ಣೆ ಹಣ್ಣು

  ಜೇನುತುಪ್ಪ

  ಸಕ್ಕರೆ

  ಮಾಡುವ ವಿಧಾನ ಹೇಗೆ ಗೊತ್ತಾ :

  ಹಂತ 1 :

  1. ಮೊದಲಿಗೆ , ಒಂದು ಟೇಬಲ್ ಚಮಚ ಸಕ್ಕರೆ ಮತ್ತು 1 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ .

  2. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ವೃತ್ತಾಕಾರದಲ್ಲಿ ಅಪ್ಲೈ ಮಾಡಿ .

  3. ಇದನ್ನು 5 ನಿಮಿಷ ಹಾಗೆಯೇ ಮುಂದುವರಿಸಿ ಇದು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ನೆರವು ನೀಡುತ್ತೆ.

  4. ಸ್ವಲ್ಪ ಹದ ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ

  ಹಂತ 2: ಮಾಸ್ಕ್

  ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ನೈಸರ್ಗಿಕ ಎಣ್ಣೆ ಅಂಶವಿದ್ದು, ಇದು ನಿಮ್ಮವನ್ನು ರಿಫ್ರೆಶ್ ಮಾಡಲು ನೆರವಾಗುತ್ತೆ, ಮತ್ತು ಜೇನುತುಪ್ಪವು ಬೆಸ್ಟ್ ಮಾಯ್ಚಿರೈಸರ್ ಆಗಿದ್ದು ಚರ್ಮವನ್ನು ಹೈಡ್ರೇಟ್ ಮಾಡಲು ಸಹಕಾರಿಯಾಗಿದೆ.

  . ಮಾಡುವ ವಿಧಾನ ಹೇಗೆ ಗೊತ್ತಾ :

  1. ಒಂದು ಬೆಣ್ಣೆಹಣ್ಣು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ, ಅದನ್ನು ಜೇನುತುಪ್ಪದ ಜೊತೆ ಸೇರಿಸಿ. ಇದೊಂದು ಗಟ್ಟಿಯಾದ ಅಂಟುವಂತ ಪೇಸ್ಟ್ ಆಗಿರಲಿ.

  2. ಇದನ್ನು ನಿಮ್ಮ ಮುಖದಲ್ಲಿ ಕ್ಲೆನ್ಸ್ ಮಾಡಿದ ಭಾಗಕ್ಕೆಲ್ಲ ಅಪ್ಲೈ ಮಾಡಿ ಮತ್ತು ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ.

  3. ಇದನ್ನು 20 ನಿಮಿಷ ಹಾಗೆಯೇ ಮುಖದಲ್ಲಿ ಇಟ್ಟುಕೊಳ್ಳಿ. ನಂತರ ನಾರ್ಮಲ್ ನೀರಿನಿಂದ ಮುಖವನ್ನು ತೊಳೆಯಿರಿ

  ಎಣ್ಣೆ ಚರ್ಮದವರಿಗೆ ಡ್ರೈ ಫೇಶಿಯಲ್

  ಎಣ್ಣೆ ಚರ್ಮದವರಿಗೆ ಆಕ್ನೆ ಏಳುವುದು ಮತ್ತು ಮೊಡವೆಗಳು ಏಳುವುದು ಸರ್ವೇಸಾಮಾನ್ಯ. ಇದನ್ನು ತಡೆಯಲು ಇರುವ ಉತ್ತಮ ಔಷಧಿ ಎಂದರೆ ಅದು ವಿಟಮಿನ್ ಸಿ.ನಿಂಬೆ ರಸ ಮತ್ತು ಕಿತ್ತಲೆಯಲ್ಲಿ ಈ ಅಂಶವಿದ್ದು, ಇದರಿಂದ ತಯಾರಿಸಿರುವ ಫೇಸ್ ಪ್ಯಾಕ್ ಗಳು ನಿಮ್ಮ ಚರ್ಮದ ರಕ್ಷಣೆಗೆ ನೆರವಾಗಿ ಚರ್ಮದಲ್ಲಿರುವ ರಂದ್ರಗಳನ್ನು ನಿವಾರಿಸಿ, ಚರ್ಮವನ್ನು ಗಟ್ಟಿಗೊಳಿಸಿ ಕಾಂತಿಯುತವಾಗಿಸುವ ಸಾಮರ್ಥ್ಯ ಇದಕ್ಕಿದೆ.

  ನಿಂಬೆಹಣ್ಣು ಮತ್ತು ಕಿತ್ತಲೆಸಿಪ್ಪೆಯ ಫೇಸ್ ಪ್ಯಾಕ್

  ಬೇಕಾಗುವ ಸಾಮಗ್ರಿಗಳು :

  ನಿಂಬೆ ಹಣ್ಣು

  ಟೊಮೆಟೋ

  ಕಿತ್ತಲೆ ಸಿಪ್ಪೆ

  ಮಾಡುವ ವಿಧಾನ ಹೇಗೆ ಗೊತ್ತಾ

  1. ಒಂದು ಮೀಡಿಯಮ್ ಸೈಜಿನ ಟೋಮೆಟೋ ತೆಗೆದುಕೊಂಡು ಮಿಕ್ಸಿ ಮಾಡಿ ಅದರ ರಸವನ್ನು ತೆಗೆಯಿರಿ

  2. ಅದಕ್ಕೆ ಎರಡು ಹನಿ ಫ್ರೆಶ್ ಆಗಿರುವ ನಿಂಬೆರಸವನ್ನು ಸೇರಿಸಿ ಮತ್ತು ಅದಕ್ಕೆ ಒಣಗಿಸಿ ಇಟ್ಟುಕೊಂಡ ಕಿತ್ತಲೆ ಸಿಪ್ಪೆಯ ಪುಡಿಯನ್ನು ಸೇರಿಸಿ.

  3. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ನಿಮ್ಮ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಹಚ್ಚಿಕೊಳ್ಳಿ

  4. ಇದು ಸುಮಾರು 15 - 20 ನಿಮಿಷ ಹಾಗೆಯೇ ನಿಮ್ಮ ಮುಖದಲ್ಲಿ ಇರಲಿ. ನಂತರ ನಾರ್ಮಲ್ ನೀರಿನಿಂದ ಮುಖವನ್ನು ತೊಳೆಯಿರಿ

  5. ಆದರೆ ನೆನಪಿರಲಿ, ಈ ಪದಾರ್ಥಗಳು ನಿಮ್ಮ ಮುಖಕ್ಕೆ ಸರಿಹೊಂದಿದರೆ ಮಾತ್ರ ಪುನಃ ಪ್ರಯತ್ನಿಸಿ. ಇಲ್ಲದೇ ಇದ್ದರೆ ಬಿಟ್ಟುಬಿಡಿ.

  ಅಲೋವೆರಾ ಮತ್ತು ಅರಿಶಿನದ ಪುಡಿಯ ಫೇಸ್ ಪ್ಯಾಕ್

  ಅರಿಶಿನವು ನಿಮ್ಮ ಚರ್ಮವನ್ನು ಹೆಚ್ಚು ಹೊಳಪಿನಿಂದ ಕೂಡಿರುವಂತೆ ಮಾಡುತ್ತೆ. ಮತ್ತು ಅಲೋವೆರಾವು ಚರ್ಮವನ್ನು ಹೈಡ್ರೇಟ್ ಮಾಡುತ್ತೆ. ಅಷ್ಟೇ ಅಲ್ಲ ಚರ್ಮವು ತಿಳಿಯಾಗಿ, ಮೃದುವಾಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

  . ಬೇಕಾಗುವ ಸಾಮಗ್ರಿಗಳು :

  ಅಲೋವೆರಾ ಜೆಲ್

  ಅರಿಶಿನದ ಪುಡಿ

  ಮಾಡುವ ವಿಧಾನ ಹೇಗೆ ಗೊತ್ತಾ :

  1. ಒಂದು ಬೌಲ್ ನಲ್ಲಿ ಒಂದು ಟೇಬಲ್ ಸ್ಪೂನ್ ಅಲವೀರಾ ಜೆಲ್ ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪವೇ ಸ್ವಲ್ಪ ಅರಿಶಿನವನ್ನು ಸೇರಿಸಿ. ಚೆನ್ನಾಗಿ ಎರಡನ್ನೂ ಮಿಕ್ಸ್ ಮಾಡಿ.

  2. ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ.

  3. 20 ನಿಮಿಷದ ನಂತರ, ಮುಖವನ್ನು ನಾರ್ಮಲ್ ನೀರಿನಿಂದ ತೊಳೆಯಿರಿ. ಮುಖವನ್ನು ಹಾಗಯೇ ಒಣಗಲು ಬಿಡಿ. ವಾರದಲ್ಲಿ ಎರಡು ದಿನ ಹೀಗೆ ಮಾಡಿ. ಚರ್ಮ ಹೊಳಪು ಪಡೆಯುತ್ತೆ. ಇದರಿಂದ ನೀವು ಮದುವೆಯ ದಿನ ಕಂಗೊಳಿಸಲು ನೆರವಾಗುತ್ತೆ.

  ಎರಡೂ ರೀತಿಯ ತ್ವಚೆ ಇರುವವರಿಗೆ ಡೈ ಫೇಶಿಯಲ್

  ಇದು ನಿಮ್ಮ ಮದುವೆಗೂ ಮುನ್ನದ ಚರ್ಮದ ಕಾಳಜಿಗೆ ಹೇಳಿ ಮಾಡಿಸಿದ ಫೇಸ್ ಪ್ಯಾಕ್ ಎಂದೇ ಹೇಳಬಹುದು. ಬಾಳೆಹಣ್ಣು ಚರ್ಮವನ್ನು ಹೊಳಪು ಗೊಳಿಸಲು ಮತ್ತು ಆಂಟಿ ಏಜಿಂಗ್ ಗುಣಗಳಿಂದಾಗಿ ನಿಮ್ಮ ಚರ್ಮಕ್ಕೆ ಹೆಚ್ಚು ಕಾಂತಿಯನ್ನು ನೀಡಬಲ್ಲದು.

  ಬೇಕಾಗುವ ಪದಾರ್ಥಗಳು

  ಮೊಟ್ಟೆ

  ಬಾಳೆಹಣ್ಣು

  ಜೇನುತುಪ್ಪ

  ಕೊಬ್ಬಿನಂಶವಿರುವ ಹಾಲು ಅಥವಾ ಹಾಲಿನ ಕೆನೆ

  . ಮಾಡುವ ವಿಧಾನ ಹೇಗೆ ಗೊತ್ತಾ :

  1. ಒಂದು ಕಪ್ ಹಾಲನ್ನು ಬಿಸಿ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ

  2. ಇದು ತಣ್ಣಗಾದ ನಂತರ, ಹಾಲಿನ ಮೇಲ್ಬಾಗದಲ್ಲಿ ಉಂಟಾಗುವ ಕೆನೆಯನ್ನು ತೆಗೆಯಿರಿ

  3. ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಪೇಸ್ಟ್ ತಯಾರಿಸಿ

  4. ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ

  5. ನಂತರ ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದನ್ನು ಬಾಳೆಹಣ್ಣಿನ ಮಿಶ್ರಣಕ್ಕೆ ಸೇರಿಸಿ. ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ .

  6. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಅದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ಸುಮಾರು 20 ರಿಂದ 30 ನಿಮಿಷ ಅದು ನಿಮ್ಮ ಮುಖದಲ್ಲಿರಲಿ

  7. ಒಂದು ವೇಳೆ ಮಾಯ್ಚಿರೈಸರ್ ನ ಅಗತ್ಯ ಬಿದ್ದರೆ ಅಪ್ಲೈ ಮಾಡಿಕೊಳ್ಳಿ

  English summary

  Pre-wedding DIY Facials That Every Bride-to-be Must Try

  Here's a good news for all the brides-to-be out there! You can look stunning on your big day without spending much on revitalizing your skin. On the big day, nobody wishes to go wrong with the looks. Dull complexion, discolouration, dark circles and acne have no place on one's wedding day. So it's important to understand and follow some beauty tips much before your wedding, so that you don't mess up on anything. This article will give you a complete guide on some important facials for all skin types before your special day.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more