For Quick Alerts
ALLOW NOTIFICATIONS  
For Daily Alerts

ಪಪ್ಪಾಯ ಹಣ್ಣಿನ ಚಿಕಿತ್ಸೆ- ಒಂದೆರಡು ದಿನಗಳಲ್ಲಿ ಮೊಡವೆಗೆ ಪರಿಹಾರ

|

ಮುಖದ ಮೇಲೆ ಮೊಡವೆ ಮೂಡಲು ಹಲವಾರು ರೀತಿಯ ಬಾಹ್ಯ ಅಂಶಗಳು ಕಾರಣವಾಗಬಹುದು. ಮೊಡವೆ ಮೂಡುವುದರಿಂದ ಮುಖದ ಅಂದ ಕೆಡುವುದು ಮಾತ್ರವಲ್ಲದೆ, ಕಲೆಗಳು ಕೂಡ ಮೂಡುವುದು. ಅತಿಯಾದ ಎಣ್ಣೆಯಂಶ, ಕೊಳೆ ಮತ್ತು ಇತರ ಕಲ್ಮಷಗಳಿಂದ ಮೊಡವೆ ಮೂಡುವುದು. ಮುಖ ಮಾತ್ರವಲ್ಲದೆ ಎದೆ, ಕುತ್ತಿಗೆ ಬೆನ್ನು ಇತ್ಯಾದಿ ಕಡೆಗಳಲ್ಲೂ ಇದು ಮೂಡುವುದು. ಇದರಿಂದ ಮೊಡವೆ ನಿವಾರಣೆ ಮಾಡಲು ಪ್ರತಿಯೊಬ್ಬರು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಕ್ರೀಮ್ ಗಳನ್ನು ಬಳಸಿಕೊಳ್ಳುವರು.

Papaya

ಆದರೆ ಈ ಕ್ರೀಮ್ ಗಳು ಕೆಲವೊಂದು ಸಲ ಅಡ್ಡಪರಿಣಾಮಗಳನ್ನು ಬೀರುವುದು. ಹಾಗಾಗಿ ಕೆಲವೊಂದು ನೈಸರ್ಗಿಕದತ್ತವಾದ ಹಣ್ಣುಗಳು ಹಾಗೂ ತರಕಾರಿಗಳನ್ನು ಬಳಸಿಕೊಂಡು ಮೊಡವೆ ನಿವಾರಣೆ ಮಾಡಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರದು ಮತ್ತು ನಿಯಮಿತವಾಗಿ ಬಳಸಿಕೊಂಡರೆ ಫಲಿತಾಂಶ ಕೂಡ ಸ್ಪಷ್ಟ. ಈ ಲೇಖನದಲ್ಲಿ ನಾವು ಪಪ್ಪಾಯಿ ಬಳಸಿಕೊಂಡು ಮೊಡವೆ ನಿವಾರಿಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಪಪ್ಪಾಯಿಯು ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮದ ಉರಿಯೂತ ಮತ್ತು ಕೆಂಪಾಗುವುದನ್ನು ನಿವಾರಣೆ ಮಾಡಿ ಮೊಡವೆ ತೆಗೆಯುವುದು. ಚರ್ಮದ ಸತ್ತ ಕೋಶಗಳನ್ನು ತೆಗೆಯುವ ಪಪ್ಪಾಯಿಯು ಚರ್ಮಕ್ಕೆ ಪುನರ್ಚೇತನ ನೀಡುವುದು. ಪಪ್ಪಾಯಿ ಬಳಸಿಕೊಂಡು ಮೊಡವೆಯನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ.

ಪಪ್ಪಾಯಿ ಮತ್ತು ಜೇನುತುಪ್ಪ

ಪಪ್ಪಾಯಿ ಮತ್ತು ಜೇನುತುಪ್ಪ

ಕಾಯಿ ಪಪ್ಪಾಯಿ ಬಳಸಿಕೊಂಡರೆ ಆಗ ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಇದು ನಿವಾರಣೆ ಮಾಡುವುದು. ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು. ಪಪ್ಪಾಯಿಯ ಅರ್ಧ ಭಾಗದ ಸಿಪ್ಪೆ ತೆಗೆದು, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಒಂದು ಬ್ಲೆಂಡರ್ ಗೆ ಪಪ್ಪಾಯಿ ಮತ್ತು ಜೇನುತುಪ್ಪ ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಮುಖ ಹಾಗೂ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 40-45 ನಿಮಿಷ ಕಾಲ ಹಾಗೆ ಬಿಡಿ. 45 ನಿಮಿಷ ಬಳಿಕ ಸಾಮಾನ್ಯ ನೀರು ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿ.

Most Read: ಕೂದಲು ಉದುರುವ ಸಮಸ್ಯೆ ಇದ್ದರೆ, ಖಾರ ಮೆಣಸು ಬಳಸಿ ನೋಡಿ!

ಪಪ್ಪಾಯಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಪಪ್ಪಾಯಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ಚರ್ಮದಲ್ಲಿನ ಪಿಎಚ್ ಮಟ್ಟ ಕಾಪಾಡುವುದು ಮತ್ತು ಚರ್ಮದ ಉರಿಯೂತವನ್ನು ನಿವಾರಿಸುವುದು. ಹಣ್ಣಾದ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಸಮಾನ ಪ್ರಮಾಣದ ನೀರು ಹಾಗೂ ಆ್ಯಪಲ್ ಸೀಡರ್ ವಿನೇಗರ್ ಹಾಕಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಮೃಧುವಾದ ಟವೆಲ್ ತೆಗೆದುಕೊಂಡು ಅದನ್ನು ಉಗುರುಬೆಚ್ಚಗಿನ ನೀರಿನಲ್ಲಿ ಅದ್ದಿಕೊಳ್ಳಿ. ಇದನ್ನು ಸ್ವಲ್ಪ ಹಿಂಡಿ ಮುಖದ ಮೇಲೆ ಹಾಕಿಕೊಳ್ಳಿ. ಇದರ ಮೇಲೆ ಪಪ್ಪಾಯಿ, ಆ್ಯಪಲ್ ಸೀಡರ್ ವಿನೇಗರ್ ನ ಪೇಸ್ಟ್ ಹಾಕಿ. ಇದು ಒಣಗುವ ತನಕ ಹಾಗೆ ಇರಲಿ. ಸಾಮಾನ್ಯ ನೀರಿನಿಂದ ತೊಳೆದು, ಒಣಗಲು ಬಿಡಿ.

ಪಪ್ಪಾಯಿ ಮತ್ತು ಕಿತ್ತಳೆ

ಪಪ್ಪಾಯಿ ಮತ್ತು ಕಿತ್ತಳೆ

ಕಿತ್ತಳೆಯು ನೈಸರ್ಗಿಕ ಸಂಕೋಚನದಂತೆ ಕೆಲಸ ಮಾಡುವ ಪರಿಣಾಮ ಚರ್ಮದಲ್ಲಿ ಅತಿಯಾಗಿ ಉತ್ಪತ್ತಿಯಾಗುವಂತಹ ಎಣ್ಣೆಯನ್ನು ಇದು ನಿಯಂತ್ರಿಸುವುದು. ಎರಡು ಚಮಚ ಪಪ್ಪಾಯಿ ಹಣ್ಣಿನ ಪೇಸ್ಟ್ ಮತ್ತು ಒಂದು ಚಮಚ ಕಿತ್ತಳೆ ಹಣ್ಣಿನ ರಸ. ಪಪ್ಪಾಯಿಯನ್ನು ಹಿಚುಕಿ ಅಥವಾ ರುಬ್ಬಿ ಪೇಸ್ಟ್ ಮಾಡಿ. ಇದಕ್ಕೆ ಕಿತ್ತಳೆ ರಸ ಹಾಕಿಕೊಂಡು, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ. 20 ನಿಮಿಷ ಕಾಲ ಹಾಗೆ ಇರಲಿ. 20 ನಿಮಿಷ ಬಿಟ್ಟ ಬಳಿಕ ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

Most Read: ಕೈಗಳ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯುವುದು ಹೇಗೆ?

ಪಪ್ಪಾಯಿ ಮತ್ತು ಶ್ರೀಗಂಧ

ಪಪ್ಪಾಯಿ ಮತ್ತು ಶ್ರೀಗಂಧ

ಶ್ರೀಗಂಧವು ಚರ್ಮದ ಸತ್ತಕೋಶವನ್ನು ಕಿತ್ತುಹಾಕುವುದು ಮತ್ತು ನಿರ್ವಿಷಗೊಳಿಸುವುದು. ಇದಕ್ಕಾಗಿ ನೀವು ಒಂದು ಹಣ್ಣಾದ ಪಪ್ಪಾಯಿ ಬಳಸಿ. ಇದರ ಅರ್ಧ ಭಾಗವನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ಬ್ಲೆಂಡರ್ ಗೆ ಹಾಕಿ. ಇದಕ್ಕೆ ಒಂದು ಚಮಚ ಶ್ರೀಗಂಧದ ಹುಡಿ ಮತ್ತು ಜೇನುತುಪ್ಪ ಹಾಕಿ ರುಬ್ಬಿ ಪೇಸ್ಟ್ ಮಾಡಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

English summary

Papaya Remedies To Cure Acne

Acne can make you feel uneasy at times. They are mainly caused when the pores are clogged with excess oil, dirt and other impurities. The anti-inflammatory properties of papaya help to treat acne by reducing the redness and inflammation. Papaya also helps in removing the dead skin cells and rejuvenates the skin.
X
Desktop Bottom Promotion