For Quick Alerts
ALLOW NOTIFICATIONS  
For Daily Alerts

ಮುಖದ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸಲು ನೈಸರ್ಗಿಕ ಸ್ಕ್ರಬ್

By Divya Pandith
|

ನಿರಂತರವಾಗಿ ಬಿಸಿಲಿಗೆ ತೆರೆದುಕೊಳ್ಳುವುದು, ಧೂಳಿನಲ್ಲಿ ಓಡಾಟ ನಡೆಸುವುದು, ಅತಿಯಾದ ಜಿಡ್ಡಿನ ತ್ವಚೆ ಹೊಂದುವುದರಿಂದ ಹಾಗೂ ಆನುವಂಶಿಕ ಸಮಸ್ಯೆಯಿಂದಾಗಿ ಕೆಲವು ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಅವುಗಳಲ್ಲಿ ಮುಖದ ಮೇಲೆ ವ್ಯಕ್ತವಾಗುವ ಕಪ್ಪುಕಲೆ/ಡಾರ್ಡ್ ಸ್ಪಾಟ್ ಸಹ ಒಂದು. ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಗಾಢವಾದ ಕಪ್ಪು ಚುಕ್ಕೆಗಳು ಕಿಣ್ವಗಳಲ್ಲಿ ಕಂಡು ಬಂದಾಗ ಕಿರಿಕಿರಿ ಉಂಟಾಗುವುದು. ಅದರಲ್ಲೂ ಅವು ಮುಖದ ಮೇಲೆ ಕಾಣಿಸಿಕೊಂಡರೆ ಗಂಭೀರ ಸಮಸ್ಯೆಯಷ್ಟೇ ಚಿಂತೆ ಕಾಡುವುದು.

ಮುಖದ ಮೇಲೆ ಕಪ್ಪು ಕಲೆ/ಚುಕ್ಕೆಗಳು ಕಾಣಿಸಿಕೊಳ್ಳುವುದರಿಂದ ಮುಖದ ಆಕರ್ಷಣೆ ಕುಂದುವುದು. ಈ ಸಮಸ್ಯೆ ಪ್ರಾಥಮಿಕ ಸ್ಥಿತಿಯಲ್ಲಿರುವಾಗಲೆ ಸೂಕ್ತ ಪರಿಹಾರ ಅಥವಾ ಆರೈಕೆಯನ್ನು ಕೈಗೊಳ್ಳಬೇಕು. ಇಲ್ಲವಾದರೆ ಶಾಶ್ವತವಾಗಿ ಕಿರಿಕಿರಿಯನ್ನುಂಟುಮಾಡುತ್ತಲೇ ಇರುತ್ತವೆ. ಇವು ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಕೆಲವು ನೈಸರ್ಗಿಕ ಆರೈಕೆಗೆ ಒಳಗಾಗುವುದು ಅಥವಾ ನೈಸರ್ಗಿಕ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

best face scrub for dark spots

ಸೂರ್ಯನ ಯುವಿ ಕಿರಣ ಹಾಗೂ ಧೂಳಿನಿಂದ ಉಂಟಾಗುವ ಈ ಸಮಸ್ಯೆಗೆ ನೈಸರ್ಗಿಕ ಚಿಕಿತ್ಸಾ ವಿಧಾನ ಅನುಸರಿಸುವುದರ ಮೂಲಕ ತ್ವಚೆಯಲ್ಲಿ ಕಾಣಿಸಿಕೊಳ್ಳುವ ನಿರ್ಜೀವ ಕೋಶಗಳು ನಿರ್ಮೂಲವಾಗುವುದು ಆಳದಲ್ಲಿ ಅಡಗಿರುವ ಕಪ್ಪು ಚುಕ್ಕಿಗಳು ಮಾಯವಾಗುವುದು. ನೀವು ಈ ಬಗೆಯ ಸಮಸ್ಯೆಗಳನ್ನು ಅನುಭವಿಸುತಿದ್ದು, ವಿವಿಧ ಪರಿಹಾರಕ್ಕೆ ಹುಡುಕಾಡ ನಡೆಸುತ್ತಿದ್ದರೆ ಈ ಆರೈಕೆಗಳು ನಿಮಗೆ ಬಹು ಉಪಯೋಗಕ್ಕೆ ಬರುವುದು...

ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳ ನಿವಾರಣೆಗೆ ನೈಸರ್ಗಿಕ ಸ್ಕ್ರಬ್‍ಗಳು

1. ನಿಂಬು ಮತ್ತು ಸಕ್ಕರೆ
2. ಓಟ್ ಮತ್ತು ಜೇನುತುಪ್ಪ.
3. ಉಪ್ಪು ಮತ್ತು ನಿಂಬೆ
4. ಆಪಲ್ ಸೈಡರ್ ವಿನೆಗರ್, ಹಾಲಿನ ಕೆನೆ ಮತ್ತು ಅಕ್ಕಿ ಹಿಟ್ಟು.
5. ಸೌತೆಕಾಯಿ
6. ಶ್ರೀಗಂಧದ ಪುಡಿ ಮತ್ತು ಗ್ಲಿಸರಿನ್
7. ಆಲೂಗಡ್ಡೆ ಸಿಪ್ಪೆ ಮತ್ತು ಜೇನುತುಪ್ಪ.

1. ನಿಂಬು ಮತ್ತು ಸಕ್ಕರೆ

ನಿಂಬೆ ರಸ ಹಾಗೂ ಸಕ್ಕರೆಯ ಸಂಯೋಗವು ಚರ್ಮದಲ್ಲಿ ಇರುವ ನಿರ್ಜೀವ ಕೋಶಗಳನ್ನು ತೆಗೆಯಲು ಉತ್ತಮ ಪರಿಹಾರ. ಇದರ ಇನ್ನೊಂದು ಉಪಯೋಗವೆಂದರೆ ಚರ್ಮದಲ್ಲಿ ಇರುವ ಕಪ್ಪು ಕಲೆ ಅಥವಾ ಚುಕ್ಕೆಯನ್ನು ತೆಗೆಯಲು ಸಹಾಯ ಮಾಡುವುದು. ಈ ಆರೈಕೆಯ ಪ್ರಾರಂಭಿಸುವಾಗ ಹರಳು ಹರಳಾಗಿರುವ ಸಕ್ಕರೆಯನ್ನು ಉಪಯೋಗಿಸಬೇಕು.

ಪದಾರ್ಥಗಳು:
- 1/2 ಟೀ ಚಮಚ ಸಕ್ಕರೆ.
- 1/2 ಟೀ ಚಮಚ ನಿಂಬೆ ರಸ.

ವಿಧಾನ:
- ಸ್ವಚ್ಛವಾದ ಬೌಲ್ ಅಲ್ಲಿ ನಿಂಬೆ ರಸ ಹಾಗೂ ಸಕ್ಕರೆಯನ್ನು ಸೇರಿಸಿ.
- ಮಿಶ್ರಣವನ್ನು ಬೆರಳುಗಳ ಸಹಾಯದಿಂದ ತೆಗೆದುಕೊಂಡು ಮುಖದ ಮೇಲೆ ಅನ್ವಯಿಸಿ.
- ಬಳಿಕ ವೃತ್ತಾಕಾರದ ಚಲನೆಯ ಮೂಲಕ ಮಸಾಜ್ ಮಾಡಿ. 2-3 ನಿಮಿಷಗಳ ಕಾಲ ಮುಂದುವರಿಸಿ.
- 15 ನಿಮಿಷ ಆರಲು ಬಿಡಿ. ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ.

2. ಓಟ್ಸ್ ಮತ್ತು ಜೇನುತುಪ್ಪ

ಈ ಎರಡು ಘಟಕಗಳ ಸಂಯೋಗವು ಚರ್ಮದ ಮೇಲಿರುವ ನಿರ್ಜೀವ ಕೋಶಗಳನ್ನು ನಿವಾರಿಸುವುದು. ಜೇನುತುಪ್ಪದಲ್ಲಿ ಬ್ಲೀಚಿಂಗ್ ಏಜೆಂಟ್ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಇವೆ. ಇವು ಗಾಢವಾದ ಕಪ್ಪು ಕಲೆಯನ್ನು ತೆಗೆದು, ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಜೊತೆಗೆ ತ್ವಚೆಯು ತಾಜಾತನದಿಂದ ಕೂಡಿರುವಂತೆ ಮಾಡುವುದು.

ಪದಾರ್ಥಗಳು:
1 ಟೀ ಮಚಮ ಓಟ್ಸ್.
1/2 ಟೀ ಚಮಚ ಜೇನುತುಪ್ಪ.
1 ಟೀಚಮಚ ಹಾಲು.

ವಿಧಾನ:
- ಓಟ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ.
- ಓಟ್ಸ್‌ನ ಪುಡಿಗೆ ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಮಿಶ್ರಗೊಳಿಸಿ.
- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
- ಸ್ವಲ್ಪ ಸಮಯದ ನಂತರ ಮೃದು ನೀರಿನಲ್ಲಿ ಸ್ವಚ್ಛಗೊಳಿಸಿ.
- ಉತ್ತಮ ಫಲಿತಾಂಶಕ್ಕೆ ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.

3. ಉಪ್ಪು ಮತ್ತು ನಿಂಬೆ ರಸ

ಉಪ್ಪು ಮತ್ತು ನಿಂಬೆ ರಸದ ಸಂಯೋಗವು ಚರ್ಮದ ಮೇಲಿರುವ ಸೋಂಕು ಮತ್ತು ಅಲರ್ಜಿಯನ್ನು ತೆಗೆಯುವುದು. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಚರ್ಮದ ಆರೋಗ್ಯವನ್ನು ಕಾಪಾಡುವಂತಹ ವಿಟಮಿನ್ ಸಿ ಅನ್ನು ಒಳಗೊಂಡಿದೆ. ಕಪ್ಪು ಕಲೆಯನ್ನು ತೆಗೆಯಲು ಇದು ಉತ್ತಮ ಸಹಕಾರ ನೀಡುವುದು.

ಪದಾರ್ಥಗಳು:
1 ಟೀಚಮಚ ಉಪ್ಪು
ಸ್ವಲ್ಪ ನಿಂಬೆ ರಸ
1 ಟೀಚಮಚ ಜೇನುತುಪ್ಪ

ವಿಧಾನ:
- ಒಂದು ಬೌಲ್ ಅಲ್ಲಿ ನಿಂಬೆರಸ, ಉಪ್ಪು ಮತ್ತು ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ.
- ಸ್ವಲ್ಪ ಸಮಯದ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 2-3 ಬಾರಿ ಅನ್ವಯಿಸಿ.

4. ಆಪಲ್ ಸೈಡರ್ ವಿನೆಗರ್, ಹಾಲಿನ ಕೆನೆ ಮತ್ತು ಅಕ್ಕಿ ಹಿಟ್ಟು

ಚರ್ಮದಲ್ಲಿ ಉತ್ಪಾದನೆಯಾಗುವ ಮೆಲನಿನ್ ಉತ್ಪಾದನೆಯನ್ನು ನಿಯಂತ್ರಿಸುವಲ್ಲಿ ಆಪಲ್ ಸೈಡರ್ ವಿನೆಗರ್ ಸಹಾಯ ಮಾಡುವುದು. ಅಕ್ಕಿ ಹಿಟ್ಟು ಎಕ್ಸೋಲೇಯರ್ ಆಗಿ ಕೆಲಸ ನಿರ್ವಹಿಸುವುದು. ಜೊತೆಗೆ ಕಲೆಯನ್ನು ತಿಳಿಗೊಳಿಸುವುದು. ಹಾಲಿನ ಕೆನೆ ಚರ್ಮದ ಪೋಷಣೆ ಹಾಗೂ ಹೈಡ್ರೇಟಿಂಗ್ ಮಾಡುವುದು.

ಪದಾರ್ಥಗಳು:
1 ಟೀ ಚಮಚ ಅಕ್ಕಿ ಹಿಟ್ಟು
1/2 ಟೀ ಚಮಚ ಆಪಲ್ ಸೈಡರ್ ವಿನೆಗರ್
1 ಟೀಚಮಚ ಹಾಲಿನ ಕೆನೆ

ವಿಧಾನ:
- ಆಪಲ್ ಸೈಡರ್ ವಿನೆಗರ್ ಅನ್ನು ನೇರವಾಗಿ ತ್ವಚೆಗೆ ಅನ್ವಯಿಸಬಾರದು. ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ದುರ್ಬಲಗೊಳಿಸಬೇಕು.
- ಒಂದು ಬೌಲ್‍ಅಲ್ಲಿ ದುರ್ಬಲ ಗೊಳಿಸಿದ ವಿನೆಗರ್, ಅಕ್ಕಿ ಹಿಟ್ಟು ಮತ್ತು ಹಾಲಿನ ಕೆನೆ ಸೇರಿಸಿ ಮಿಶ್ರಗೊಳಿಸಿ.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ.
- 10 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 1-2 ಬಾರಿ ಅನ್ವಯಿಸಿ.

5. ಸೌತೆಕಾಯಿ

ಸೌತೆಕಾಯಿ ಕಪ್ಪು ಕಲೆ ಹಾಗೂ ಕಣ್ಣಿನ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ವೃತ್ತಾಕಾರವನ್ನು ಅದ್ಭುತ ರೀತಿಯಲ್ಲಿ ಪರಿಹರಿಸುವುದು. ಇದರೊಂದಿಗೆ ನಿಂಬೆ, ಹಾಲು ಮತ್ತು ಸಕ್ಕರೆ ಸೇರಿಸಿದರೆ ಶಕ್ತಿಯು ದ್ವಿಗುಣವಾಗುವುದು. ವರ್ಣದ್ರವ್ಯವನ್ನು ತೊಡೆದುಹಾಕಲು ಸಹಾಯ ಮಾಡುವುದು.

ಪದಾರ್ಥಗಳು:
*1/2 ಸೌತೆಕಾಯಿ
*1 ಟೀಚಮಚ ಹಾಲು
*ಕೆಲವು ಹನಿ ನಿಂಬೆ ರಸ
*1 ಟೀ ಚಮಚ ಸಕ್ಕರೆ

ವಿಧಾನ:
- ಸೌತೆಕಾಯನ್ನು ತುರಿದು, ರಸವನ್ನು ಬೇರ್ಪಡಿಸಿಕೊಳ್ಳಿ.
- 1 ಟೀಚಮಚ ಸೌತೆಕಾಯಿ ರಸಕ್ಕೆ ಕೆಲವು ಹನಿ ನಿಂಬೆ ರಸ, ಹಾಲು ಹಾಗೂ ಸಕ್ಕರೆಯನ್ನು ಸೇರಿಸಿ ಮಿಶ್ರಗೊಳಿಸಿ.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ.
- 5 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಒಮ್ಮೆ ಅನ್ವಯಿಸಿ.

6. ಶ್ರೀಗಂಧದ ಪುಡಿ ಮತ್ತು ಗ್ಲಿಸರಿನ್:

ಶ್ರೀಗಂಧದ ಪುಡಿ ಮತ್ತು ಗ್ಲಿಸರಿನ್ ಮಿಶ್ರಣವು ಚರ್ಮದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಮೆಲನಿನ್ ಅನ್ನು ನಿವಾರಿಸುವುದು. ಚರ್ಮವನ್ನು ಹೆಚ್ಚು ಆರೋಗ್ಯಕರವಾಗಿ ಇರುವಂತೆ ಮಾಡುವುದು.

ಪದಾರ್ಥಗಳು:
1 ಟೀಚಮಚ ಶ್ರೀಗಂಧದ ಪುಡಿ
1 ಟೀಚಮಚ ಅರಿಶಿನ
1 ಟೀಚಮಚ ಗ್ಲಿಸರಿನ್

ವಿಧಾನ:
- ಶ್ರೀಗಂಧದ ಪುಡಿ, ಗ್ಲಿಸರಿನ್ ಮತ್ತು ಅರಿಶಿನವನ್ನು ಸೇರಿಸಿ ಮೃದುವಾದ ಪೇಸ್ಟ್ ಅಂತೆ ಮಿಶ್ರಗೊಳಿಸಿ.
- ಅಂಟಲು ಸಹಾಯ ಮಾಡುವಷ್ಟು ಗ್ಲಿಸರಿನ್ ಬಳಕೆ ಮಾಡಬಹುದು.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ.
- ಸ್ವಲ್ಪ ಸಮಯದ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಎರಡು ಬಾರಿ ಅನ್ವಯಿಸಿ.

7. ಆಲೂಗಡ್ಡೆ ಸಿಪ್ಪೆ ಮತ್ತು ಜೇನುತುಪ್ಪ.

ಆಲೂಗಡ್ಡೆ ಸಿಪ್ಪೆ ಮತ್ತು ಜೇನುತುಪ್ಪದ ಸಂಯೋಜನೆಯು ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುವುದು. ಇವುಗಳ ಬ್ಲೀಚಿಂಗ್ ಗುಣವು ವರ್ಣದ್ರವ್ಯವನ್ನು ಆರೈಕೆ ಮಾಡುವುದು. ಆಲೂಗಡ್ಡೆಯಲ್ಲಿರುವ ಕ್ಯಾಟಕೋಲೇಸ್ ಕಿಣ್ವವು ಚರ್ಮದ ಮೇಲಿರುವ ಕಪ್ಪು ಕಲೆಯನ್ನು ನಿವಾರಿಸಲು ಸಹಾಯ ಮಾಡುವುದು. ಜೇನುತುಪ್ಪ ಚರ್ಮ ಹೊಳಪಿನಿಂದ ಕೂಡಿರುವಂತೆ ಮಾಡುವುದರ ಜೊತೆಗೆ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು.

ಪದಾರ್ಥಗಳು:
*1 ಮಧ್ಯಮ ಗಾತ್ರದ ಆಲೂಗಡ್ಡೆ.
*1 ಟೀಚಮಚ ಜೇನುತುಪ್ಪ.

ವಿಧಾನ:
- ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ಬಳಿಕ ಸಿಪ್ಪೆಯನ್ನು ನುಣ್ಣಗೆ ರುಬ್ಬಿಕೊಳ್ಳಿ.
- ಈ ಪೇಸ್ಟ್‍ಗೆ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.
- ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಮುಖಕ್ಕೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ.
- 5 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 2-3 ಬಾರಿ ಅನ್ವಯಿಸಿ.

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

English summary

Natural Scrubs To Get Rid Of Dark Spots On Face

Dark spots on the skin can be annoying at times especially when it appears on your face. There are several factors that cause dark spots on the skin, but the main reason is the harmful UV rays of the sun. And you'll be surprised to know that the remedies for these are in the form of scrubs using natural ingredients.
Story first published: Friday, July 27, 2018, 15:32 [IST]
X
Desktop Bottom Promotion