For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು

|
ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಈ 8 ಮಾರ್ಗಗಳನ್ನ ಅನುಸರಿಸಿ...ಪರಿಹಾರವಾಗುತ್ತೆ | BoldSky Kannada

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ವೃತ್ತಿ ಹಾಗೂ ವೈಯಕ್ತಿಕ ಜೀವನದ ಮಧ್ಯೆ ಸಮಯವೆನ್ನುವುದು ಶೂನ್ಯಕ್ಕೆ ಸಮಾನವಾಗಿದೆ. ತಮ್ಮ ದೇಹದ ಕಡೆ ಗಮನಹರಿಸಲು ಹೆಚ್ಚಿನವರಿಗೆ ಒಂದು ಗಂಟೆಯೂ ಸಮಯ ಸಿಗದು. ಮಹಿಳೆಯರು ಹೆಚ್ಚಾಗಿ ತಮ್ಮ ಸೌಂದರ್ಯದ ಕಡೆ ಗಮನಹರಿಸುವವರು. ಆದರೆ ಅವರಿಗೂ ಮನೆ ಹಾಗೂ ಕಚೇರಿ ಕೆಲಸದ ಮಧ್ಯೆ ಸಮಯವೇ ಸಿಗದು. ಸೌಂದರ್ಯದ ಆರೈಕೆ ಮಾಡದೆ ಇದ್ದರೆ ಆಗ ಸೌಂದರ್ಯವು ಅದಾಗಿಯೇ ಮಬ್ಬಾಗುವುದು. ಇದನ್ನು ತಡೆಯಲು ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್, ಲೋಷನ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿಕೊಳ್ಳುವಿರಿ. ಇದು ಕೆಲವೊಮ್ಮೆ ತುಂಬಾ ದುಬಾರಿಯಾಗಿರುವುದು.

Natural Night Face Packs

ಇನ್ನು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಸಮಯ ಕಳೆಯುವಿರಿ. ಇದು ನಿಮ್ಮ ತಿಂಗಳ ಬಜೆಟ್ ನ್ನು ಮತ್ತೆ ಹೆಚ್ಚಾಗಿಸುವುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಕೂದಲು ಹಾಗೂ ತ್ವಚೆಯ ಆರೈಕೆ ಮಾಡಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗುವುದು. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ರಾತ್ರಿ ತಯಾರಿಸಿಕೊಂಡು ಹಚ್ಚಬಹುದಾಗಿರುವಂತಹ ಕೆಲವೊಂದು ಫೇಸ್ ಪ್ಯಾಕ್ ಗಳ ಬಗ್ಗೆ. ಇದು ನಿಮ್ಮ ತ್ವಚೆಯ ಕಾಂತಿಯನ್ನು ವೃದ್ಧಿಸುವುದು. ಇಷ್ಟು ಮಾತ್ರವಲ್ಲದೆ ನೈಸರ್ಗಿಕವಾಗಿರುವಂತಹ ಈ ಫೇಸ್ ಪ್ಯಾಕ್ ಗಳನ್ನು ನೀವು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇದನ್ನು ಮಲಗುವ ಮೊದಲು ಮುಖಕ್ಕೆ ಹಚ್ಚಿಕೊಂಡರೆ ಸಾಕು. ಈ ಫೇಸ್ ಪ್ಯಾಕ್ ಗಳು ಯಾವುದು ಮತ್ತು ಅದನ್ನು ತಯಾರಿಸುವುದು ಹೇಗೆ ಎಂದು ತಿಳಿಯಲು ಓದುತ್ತಾ ಸಾಗಿ.

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ಸ್ ನಲ್ಲಿ ಇರುವಂತಹ ಕೆಲವೊಂದು ಪರಿಣಾಮಕಾರಿ ಗುಣಗಳಿಂದ ಇದನ್ನು ಮುಖದ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬಹುದು ಎಂದು ಪರಿಗಣಿಸಲಾಗಿದೆ. ಓಟ್ ಮೀಲ್ ನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ತ್ವಚೆಗೆ ಪುನರ್ಯೌವನ ನೀಡುವುದು ಮತ್ತು ಚರ್ಮವು ಯಾವುದೇ ಸೋಂಕು ಮತ್ತು ಉರಿಯೂತಕ್ಕೆ ಒಳಗಾಗದಂತೆ ತಡೆಯುವುದು.

ಬೇಕಾಗುವ ಸಾಮಗ್ರಿಗಳು

  • 2 ಚಮಚ ಓಟ್ಸ್
  • 1 ಚಮಚ ಜೇನುತುಪ್ಪ
  • 2-3 ಹನಿ ಲಿಂಬೆರಸ
  • ಫೇಸ್ ಪ್ಯಾಕ್ ತಯಾರಿಸುವ ವಿಧಾನ

    • ಶುದ್ಧವಾಗಿರುವ ಪಿಂಗಾಣಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಓಟ್ಸ್ ನ್ನು ಹಾಕಿಕೊಳ್ಳಿ.

    • ಇದರ ಬಳಿಕ ಜೇನುತುಪ್ಪ ಹಾಕಿ ಮತ್ತು ಕೆಲವು ಹನಿ ತಾಜಾ ಲಿಂಬೆರಸ ಹಾಕಿಕೊಂಡು ಮಿಶ್ರಣ ಮಾಡಿ.

    • ಎಲ್ಲವನ್ನು ಒಂದು ಚಮಚ ಬಳಸಿಕೊಂಡು ಮಿಶ್ರಣ ಮಾಡಿ, ಸ್ಕ್ರಬ್ ನಂತಹ ಪೇಸ್ಟ್ ಮಾಡಿ.

    • ಇದನ್ನು ಸ್ವಚಗೊಳಿಸುವ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

    • ಈ ಪ್ಯಾಕ್ ಹಾಗೆ ಮುಖದ ಮೇಲೆ ಒಣಗಲಿ ಮತ್ತು ಬೆರಳುಗಳಿಂದ ನಿಧಾನವಾಗಿ ಸ್ಕ್ರಬ್ ಮಾಡುತ್ತಾ ಇದನ್ನು ತೆಗೆಯಿರಿ.

    • ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

    ಹಾಲಿನ ಕೆನೆಯ ಫೇಸ್ ಪ್ಯಾಕ್

    ಹಾಲಿನ ಕೆನೆಯ ಫೇಸ್ ಪ್ಯಾಕ್

    ಹಾಲಿನ ಕೆನೆಯಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳ ನಿವಾರಣೆ ಮಾಡಿ ನಿಮಗೆ ಆರೋಗ್ಯಕಾರಿ ಮತ್ತು ಯೌವನಯುತ ತ್ವಚೆ ನೀಡುವುದು. ಇದರಿಂದ ನೀವು ಹಾಲಿನ ಕೆನೆಯನ್ನು ಹಚ್ಚಿಕೊಳ್ಳುವ ಮೂಲಕ ಕಾಂತಿಯುತ ತ್ವಚೆ ಪಡೆಯಬಹುದು.

    Most Read: ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

    ಬೇಕಾಗುವ ಸಾಮಗ್ರಿಗಳು

    • 1 ಚಮಚ ಹಾಲಿನ ಕೆನೆ
    • 1 ಚಮಚ ತಾಜಾ ರೋಸ್ ವಾಟರ್
    • ಹಾಲಿನ ಕೆನೆಯ ಫೇಸ್ ಪ್ಯಾಕ್ ತಯಾರಿಸುವ ವಿಧಾನ

      • ಒಂದು ಪಿಂಗಾಣಿಯಲ್ಲಿ ಹಾಲಿನ ಕೆನೆ ಮತ್ತು ಸ್ವಲ್ಪ ತಾಜಾ ರೋಸ್ ವಾಟರ್ ಹಾಕಿ.

      • ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದನ್ನು ತುಂಬಾ ನಯ ಹಾಗೂ ಮೃಧುವಾದ ಪೇಸ್ಟ್ ಮಾಡಿಕೊಳ್ಳಿ.

      • ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಇರಲಿ.

      • 15 ನಿಮಿಷ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

      ವಿಟಮಿನ್ ಇ ಕ್ಯಾಪ್ಸೂಲ್ ಫೇಸ್ ಪ್ಯಾಕ್

      ವಿಟಮಿನ್ ಇ ಕ್ಯಾಪ್ಸೂಲ್ ಫೇಸ್ ಪ್ಯಾಕ್

      ಚರ್ಮಕ್ಕೆ ಆಗಿರುವಂತಹ ಹಾನಿಯನ್ನು ವಿಟಮಿನ್ ಇ ಕ್ಯಾಪ್ಸೂಲ್ ನಿವಾರಣೆ ಮಾಡುವುದು ಮತ್ತು ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೇಟಿವ್ ಮತ್ತು ಉರಿಯೂತ ಶಮನಕಾರಿ ಗುಣದಿಂದ ತ್ವಚೆಗೆ ಪುನರ್ಶ್ಚೇತನ ನೀಡುವುದು. ಚರ್ಮದ ಮೇಲೆ ಆಗಿರುವಂತಹ ಯುವಿ ಹಾನಿಯಿಂದಲೂ ಇದು ರಕ್ಷಣೆ ನೀಡುವುದು.

      ಬೇಕಾಗುವ ಸಾಮಗ್ರಿಗಳು

      • 2-3 ವಿಟಮಿನ್ ಇ ಕ್ಯಾಪ್ಸೂಲ್ಸ್
      • 1 ಚಮಚ ರೋಸ್ ವಾಟರ್
      • ತಯಾರಿಸುವ ವಿಧಾನ

        • ವಿಟಮಿನ್ ಇ ಕ್ಯಾಪ್ಸೂಲ್ ನ್ನು ತುಂಡು ಮಾಡಿ ಅದರ ಎಣ್ಣೆಯನ್ನು ನೀವು ಒಂದು ಪಿಂಗಾಣಿಗೆ ಹಾಕಿ.

        • ಈಗ ಪಿಂಗಾಣಿಗೆ ರೋಸ್ ವಾಟರ್ ಹಾಕಿಕೊಳ್ಳಿ.

        • ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

        • ಮುಖ ಹಾಗೂ ಕುತ್ತಿಗೆ ಸರಿಯಾಗಿ ತೊಳೆಯಿರಿ ಮತ್ತು ಇದರ ಬಳಿಕ ಫೇಸ್ ಪ್ಯಾಕ್ ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಿ.

        • 10-15 ನಿಮಿಷ ಕಾಲ ಹಾಗೆ ಬಿಡಿ.

        • ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

        Most Read: ಎಣ್ಣೆಯಂಶವಿರುವ ತ್ವಚೆಯ ಸಮಸ್ಯೆಗೆ, 'ಬಾದಾಮಿಯ ಫೇಸ್ ಮಾಸ್ಕ್'

        ಮೊಟ್ಟೆ ಬಿಳೆ ಲೋಳೆ ಫೇಸ್ ಪ್ಯಾಕ್

        ಮೊಟ್ಟೆ ಬಿಳೆ ಲೋಳೆ ಫೇಸ್ ಪ್ಯಾಕ್

        ಪ್ರೋಟೀನ್ ಗಳಿಂದ ಸಮೃದ್ಧವಾಗಿರುವಂತಹ ಮೊಟ್ಟೆಯನ್ನು ಹಾಗೆ ತ್ವಚೆಗೆ ಹಚ್ಚಿಕೊಂಡಾಗ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು. ಮೊಟ್ಟೆಯ ಬಿಳಿ ಲೋಳೆಯು ಚರ್ಮಕ್ಕೆ ಪೋಷಣೆ ನೀಡುವುದು. ಇದು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನ್ನು ತೆಗೆದು ಚರ್ಮಕ್ಕೆ ಪೋಷಣೆ ನೀಡುವುದು.

        ಬೇಕಾಗುವ ಸಾಮಗ್ರಿಗಳು

        • ಒಂದು ಮೊಟ್ಟೆಯ ಬಿಳಿ ಲೋಳೆ
        • 2 ಚಮಚ ಮೊಸರು
        • ತಯಾರಿಸುವ ವಿಧಾನ

          • ಒಂದು ಮೊಟ್ಟೆ ತೆಗೆದುಕೊಂಡು ಅದನ್ನು ಒಡೆದು ಅದರಿಂದ ಬಿಳಿ ಲೋಳೆಯನ್ನು ಬೇರ್ಪಡಿಸಿಕೊಳ್ಳಿ. ಇದನ್ನು ಶುದ್ಧವಾಗಿರುವ ಪಿಂಗಾಣಿಗೆ ಹಾಕಿ.

          • ತಾಜಾ ಮತ್ತು ಸುಗಂಧ ಬೆರೆಸದೆ ಇರುವಂತಹ ಮೊಸರನ್ನು ಮೊಟ್ಟೆಯ ಬಿಳಿ ಭಾಗಕ್ಕೆ ಹಾಕಿ ಮತ್ತು ಎರಡು ಸರಿಯಾಗಿ ಕಲಸಿಕೊಳ್ಳಿ.

          • ಈ ಫೇಸ್ ಪ್ಯಾಕ್ ನ್ನು ತೆಗೆದುಕೊಂಡು ಮುಖಕ್ಕೆ ಒಂದು ಪದರವಾಗಿ ಹಾಕಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

          • ಸಾಮಾನ್ಯ ನೀರಿನಿಂದ ತೊಳೆದು ಫೇಸ್ ಪ್ಯಾಕ್ ನ್ನು ತೆಗೆಯಿರಿ.

          • ಬಿಸಿ ನೀರನ್ನು ಮುಖ ತೊಳೆಯಲು ಬಳಸಬೇಡಿ. ಇದರಿಂದ ಫೇಸ್ ಪ್ಯಾಕ್ ನಲ್ಲಿ ಇರುವಂತಹ ಮೊಟ್ಟೆಯು ಬೆಂದು ಹೋಗಬಹುದು.

          ಅಲೋವೆರಾ ಫೇಸ್ ಪ್ಯಾಕ್

          ಅಲೋವೆರಾ ಫೇಸ್ ಪ್ಯಾಕ್

          ಚರ್ಮದಲ್ಲಿ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಂಡು ನೆರಿಗೆ ರಹಿತವಾಗಿ ಮಾಡುವಂತಹ ಕಾಲಜನ್ ನ್ನು ಅಲೋವೆರಾವು ಉತ್ಪತ್ತಿ ಮಾಡುವುದು. ಅಲೋವೆರಾದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮದಲ್ಲಿ ಆಗುವಂತಹ ಯಾವುದೇ ರೀತಿಯ ಉರಿಯೂತ ಮತ್ತು ಕಿರಿಕಿರಿ ಶಮನ ಮಾಡುವಲ್ಲಿ ಪ್ರಮುಖ ನಿರ್ವಹಿಸುವುದು. ಅಲೋವೆರಾದಲ್ಲಿ ಇರುವಂತಹ ಮೊಶ್ಚಿರೈಸರ್ ಚರ್ಮವನ್ನು ತೇವಾಂಶದಿಂದ ಇಟ್ಟು ಎಲ್ಲಾ ಸಮಯದಲ್ಲಿ ಚರ್ಮವು ಕಾಂತಿಯುತವಾಗಿರುವಂತೆ ಮಾಡುವುದು.

          ಬೇಕಾಗುವ ಸಾಮಗ್ರಿಗಳು

          • 1 ಚಮಚ ಅಲೋವೆರಾ ಲೋಳೆ
          • 1 ಚಮಚ ಆಲಿವ್ ತೈಲ
          • ತಯಾರಿಸಿಕೊಳ್ಳುವ ಮತ್ತು ಹಚ್ಚಿಕೊಳ್ಳುವ ರೀತಿ

            • ತಾಜಾ ಅಲೋವೆರಾ ಎಲೆಯಿಂದ ನೀವು ಅದರ ಲೋಳೆಯನ್ನು ಹೊರಗೆ ತೆಗೆಯಿರಿ.

            • ಇದನ್ನು ಒಂದು ಪಿಂಗಾಣಿಗೆ ಹಾಕಿ ಮತ್ತು ಅದಕ್ಕೆ ಆಲಿವ್ ತೈಲ ಹಾಕಿ.

            • ಎರಡನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿ.

            • ಈ ಅಲೋವೆರಾ ಫೇಸ್ ಪ್ಯಾಕ್ ನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ.

            • 20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಮೃಧುವಾದ ಟವೆಲ್ ನಿಂದ ಸರಿಯಾಗಿ ಒರೆಸಿಕೊಳ್ಳಿ.

            Most Read: ಒಣ ತ್ವಚೆಯ ಸಮಸ್ಯೆಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

            ಮೊಸರಿನ ಫೇಸ್ ಪ್ಯಾಕ್

            ಮೊಸರಿನ ಫೇಸ್ ಪ್ಯಾಕ್

            ಹಸಿ ಹಾಲಿನಂತೆ ಮೊಸರಿನಲ್ಲಿ ಕೂಡ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆದು ಹೊಸ ಕೋಶಗಳನ್ನು ಉತ್ಪತ್ತಿ ಮಾಡಿ ಚರ್ಮವು ಮತ್ತೆ ಪುನರ್ಯೌವನ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುವುದು. ಇದು ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ, ದಿನವಿಡಿ ಚರ್ಮವು ಮೊಶ್ಚಿರೈಸ್ ಆಗಿ ಉಳಿಯುವಂತೆ ಮಾಡುವುದು.

            ಬೇಕಾಗುವ ಸಾಮಗ್ರಿಗಳು

            • 1 ಕಪ್ ಮೊಸರು
            • 2-3 ಹನಿ ಲಿಂಬೆರಸ
            • ತಯಾರಿಸಿಕೊಳ್ಳುವ ವಿಧಾನ

              • ಒಂದು ಪಿಂಗಾಣಿಗೆ ತಾಜಾ ಮೊಸರು ಹಾಕಿಕೊಳ್ಳಿ.

              • ಇದರ ಬಳಿಕ ಕೆಲವು ಹನಿ ತಾಜಾ ಲಿಂಬೆರಸ ಹಾಕಿ ಮತ್ತು ಎರಡು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ.

              • ತೊಳೆದುಕೊಂಡಿರುವಂತಹ ಮುಖದ ಮೇಲೆ ಇದನ್ನು ನೀವು ಸರಿಯಾಗಿ ಹಚ್ಚಿಕೊಳ್ಳಿ.

              • 10 ನಿಮಿಷ ಕಾಲ ಫೇಸ್ ಪ್ಯಾಕ್ ಮುಖದ ಮೇಲೆ ಹಾಗೆ ಇರಲಿ.

              • ಟಿಶ್ಯೂ ಬಳಸಿಕೊಂಡು ಮೊಸರಿನ ಪ್ಯಾಕ್ ನ್ನು ನೀವು ಒರೆಸಿಕೊಳ್ಳಿ.

              • ತಣ್ಣೀರಿನಿಂದಲೂ ಇದನ್ನು ತೊಳೆದುಕೊಳ್ಳಬಹುದು.

English summary

Natural Night Face Packs for Glowing Skin

Spending some time to maintain a healthy skin and hair does not only help in keeping ourselves groomed but also will enhance our self-confidence. Here are some face packs made of natural ingredients like oatmeal, curd, Vitamin E oil, etc., to get healthy and glowing skin. These face packs can be used during the night time just before you go to bed.
X
Desktop Bottom Promotion