For Quick Alerts
ALLOW NOTIFICATIONS  
For Daily Alerts

ಡಾರ್ಕ್ ಸರ್ಕಲ್ಸ್ ಇದೆಯೇ? ಹಾಗಾದರೆ ಹಾಲಿನ ಚಿಕಿತ್ಸೆ ಪ್ರಯತ್ನಿಸಿ

|

ಮುಖದ ಅಂದಗೆಡಲು ಹಲವಾರು ಕಾರಣಗಳು ಇವೆ. ಮೊಡವೆ, ಕಪ್ಪುಕಲೆಗಳು, ಕಣ್ಣು ವೃತ್ತಗಳು ಇತ್ಯಾದಿಗಳು ಮುಖದ ಅಂದ ಕೆಡಿಸುವುದು. ವರ್ಣದ್ರವ್ಯ ಕುಂದುವುದು ಅಥವಾ ಕಣ್ಣಿನ ಕೆಳಗಡೆ ಕಪ್ಪು ವೃತ್ತವು ಮೂಡುವುದರಿಂದ ನಿಮ್ಮ ಸಂಪೂರ್ಣ ಮುಖವು ತುಂಬಾ ನಿಸ್ತೇಜವಾಗಿ ಕಾಣಿಸಬಹುದು. ಈ ಕಪ್ಪು ಕಲೆಗಳು ನಿದ್ರೆಯ ಕೊರತೆ, ಬಿಸಿಲಿಗೆ ಅತಿಯಾಗಿ ಮೈಯೊಡ್ಡುವ ಪರಿಣಾಮ, ಅಲರ್ಜಿ ಇತ್ಯಾದಿಗಳಿಂದ ಬರಬಹುದು.

ಕ್ರೀಮ್ ಗಳನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಒಂದು ಮಟ್ಟದಲ್ಲಿ ಈ ಕಪ್ಪು ವೃತ್ತಗಳನ್ನು ನಿವಾರಣೆ ಮಾಡಬಹುದು. ಆದರೆ ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಇದಕ್ಕಾಗಿ ನಿಮ್ಮ ಮುಖದ ಅಂದವನ್ನು ಕೆಡಿಸದೆ, ಯಾವುದೇ ಅಡ್ಡಪರಿಣಾಮಗಳನ್ನು ಬೀರದೆ ಇರುವಂತಹ ನೈಸರ್ಗಿಕ ಮನೆಮದ್ದಗಳನ್ನು ಬಳಸಿಕೊಂಡರೆ ಅದು ತುಂಬಾ ಒಳ್ಳೆಯದು.

Milk To Get Rid Of Dark Circles

ಈ ಲೇಖನದಲ್ಲಿ ನಾವು ತುಂಬಾ ಸರಳ ಹಾಗು ಅಗ್ಗವಾಗಿ ಅಡುಗೆ ಮನೆಯಲ್ಲಿ ಲಭ್ಯವಿರುವಂತಹ ಒಂದು ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಹಾಲನ್ನು ಬಳಸಿಕೊಂಡು ತಯಾರಿಸಬಹುದಾದ ಮನೆಮದ್ದು. ಹಾಲಿನಲ್ಲಿ ಇರುವಂತಹ ವಿಟಮಿನ್ ಎ ಮತ್ತು ಬಿ6 ಚರ್ಮದ ಹೊಸ ಕೋಶಗಳನ್ನು ಬೆಳೆಸಿ, ಚರ್ಮವು ತುಂಬಾ ಆರೋಗ್ಯಕಾರಿಯಾಗಿರುವಂತೆ ಮಾಡುವುದು. ಇದರಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮವು ಕಾಂತಿಯುತವಾಗಿ ಇರುವಂತೆ ಮಾಡುವುದು. ಕಪ್ಪು ವೃತ್ತಗಳ ನಿವಾರಣೆ ಮಾಡಲು ಹಾಲನ್ನು ಬಳಸುವುದು ಹೇಗೆ ಎಂದು ನೀವು ತಿಳಿಯಿರಿ.

ಹಾಲು ಮತ್ತು ರೋಸ್ ವಾಟರ್

ರೋಸ್ ವಾಟರ್ ನಲ್ಲಿರುವಂತಹ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಉರಿಯೂತ ಮತ್ತು ಚರ್ಮ ಕೆಂಪಾಗುವುದನ್ನು ತಡೆಯುವುದು. ತಣ್ಣಗಿನ ಹಾಲು ಮತ್ತು ರೋಸ್ ವಾಟರ್ ನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿಕೊಳ್ಳಬೇಕು. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಹಾಕಿಬಿಡಿ ಮತ್ತು ಅದನ್ನು ಸ್ವಲ್ಪ ಹಿಂಡಿಕೊಂಡು ಕಣ್ಣಿನ ಕೆಳಭಾಗದಲ್ಲಿ ಇಟ್ಟುಬಿಡಿ. ಹೀಗೆ ಸುಮಾರು 20 ನಿಮಿಷ ಹಾಗೆ ಬಿಡಿ. ಬಳಿಕ ತಣ್ಣೀರು ಬಳಸಿಕೊಂಡು ತೊಳೆಯಿರಿ. ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿ.

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

ಹಾಲು ಮತ್ತು ಬಾದಾಮಿ

ರಾತ್ರಿ ವೇಳೆ ಒಂದು ಹಿಡಿ ಬಾದಾಮಿ ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಲು ಹಾಕಿ. ಬೆಳಗ್ಗೆ ಎದ್ದ ಬಳಿಕ ಇದನ್ನು ತೆಗೆದು ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಇದಕ್ಕೆ ನೀವು ½ ಚಮಚ ಹಸಿ ಹಾಲು ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕಣ್ಣಿನ ಕೆಳಭಾಗದಲ್ಲಿ ಇರುವಂತಹ ಕಪ್ಪು ವೃತ್ತಗಳ ಮೇಲೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಇದು ಚರ್ಮದಲ್ಲಿ ಹಾಗೆ ಇರಲಿ. ಬಳಿಕ ನೀವು ಇದನ್ನು ತಣ್ಣೀರು ಹಾಕಿಕೊಂಡು ತೊಳೆಯಿರಿ ಮತ್ತು ಒಣಗಿಸಿ. ಹೆಚ್ಚಿನ ಲಾಭ ಪಡೆಯಲು ನೀವು ಜೇನುತುಪ್ಪ ಬಳಸಬಹುದು.

ಹಾಲು ಮತ್ತು ಜೇನುತುಪ್ಪ

ಜೇನುತುಪ್ಪದಲ್ಲಿ ಇರುವಂತಹ ತೇವಾಂಶ ನೀಡುವಂತಹ ಗುಣಗಳು ಚರ್ಮವನ್ನು ಮೊಶ್ಚಿರೈಸ್ ಮತ್ತು ನಯವಾಗಿಸುವುದು. ಒಂದು ಚಮಚ ಹಾಲು ಮತ್ತು ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಹಾಲನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಇದನ್ನು ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಕಣ್ಣಿನ ಕೆಳಭಾಗದ ಕಪ್ಪು ವೃತ್ತಗಳ ಮೇಲೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ನೀವು ವಾರದಲ್ಲಿ 2-3 ದಿನ ಇದನ್ನು ಬಳಸಿಕೊಳ್ಲಿ.

Most Read: ರಾತ್ರಿ ಊಟಕ್ಕೆ ಮೊದಲು ಅಥವಾ ನಂತರ, ಈ ಎಲ್ಲಾ ಸಂಗತಿಗಳು ನೆನಪಿರಲಿ

ಹಾಲು, ಸೌತೆಕಾಯಿ ಮತ್ತು ಲಿಂಬೆರಸ

ಸೌತೆಕಾಯಿಯು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು ಮತ್ತು ಲಿಂಬೆ ಹಾಗೂ ಹಾಲಿನೊಂದಿಗೆ ಮಿಶ್ರಣ ಮಾಡಿದಾಗ ಕಣ್ಣಿನ ಕೆಳಗಡೆ ಇರುವಂತಹ ಕಪ್ಪು ಕಲೆಗಳನ್ನು ಹೋಗಲಾಡಿಸುವುದು. ಸಣ್ಣ ಪಿಂಗಾಣಿಗೆ ಒಂದು ಚಮಚ ಹಸಿ ಹಾಲು, ಒಂದು ಚಮಚ ಸೌತೆಕಾಯಿ ರಸ ಮತ್ತು ಕೆಲವು ಹನಿ ಲಿಂಬೆರಸ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಕಣ್ಣಿನ ಕೆಳಭಾಗಕ್ಕೆ ಹತ್ತಿ ಉಂಡೆಯಿಂದ ಹಚ್ಚಿಕೊಳ್ಳಿ. ನೀರಿನಿಂದ ತೊಳೆಯುವ ಮೊದಲು ಕೆಲವು ನಿಮಿಷ ಕಾಲ ಹಾಗೆ ಇರಲಿ.

English summary

Milk To Get Rid Of Dark Circles

Dark pigmentation or circles under the eyes can make your entire face look dull. These dark circles are often the results of lack of sleep, prolonged exposure to the sun, etc. You can use milk to treat them.
X
Desktop Bottom Promotion