For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಪೂರ್ತಿ ವಾರಕ್ಕೆ ದಿನಕ್ಕೊಂದರಂತೆ ಫೇಸ್ ಮಾಸ್ಕ್

|

ಪ್ರತಿನಿತ್ಯ ಒಂದೊಂದು ರೀತಿಯ ಮೇಕಪ್ ಹಚ್ಚಿಕೊಂಡು ಕಚೇರಿಗೆ ಹೋಗುವುದು ಇಂದಿನ ಮಹಿಳೆಯರಿಗೆ ಒಂದು ಫ್ಯಾಷನ್ ಆಗಿಬಿಟ್ಟಿದೆ. ಚರ್ಮದ ಆರೈಕೆ ಮಾಡಿಕೊಂಡು ಅದನ್ನು ಕಾಂತಿಯುತವಾಗಿ ಇಟ್ಟುಕೊಂಡರೆ ಆಗ ನಿಮ್ಮ ಸೌಂದರ್ಯವು ಎದ್ದು ಕಾಣುವುದರಲ್ಲಿ ಸಂಶಯವೇ ಇಲ್ಲ. ಪ್ರತಿನಿತ್ಯ ಮಾಸ್ಕ್ ತಯಾರಿಸಿಕೊಂಡು ಅದನ್ನು ಬಳಸಿಕೊಳ್ಳುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

daily skin care routine

ನೀವು ಪ್ರತೀ ದಿನ ಈ ಮಾಸ್ಕ್ ನ್ನು ಬಳಸಿಕೊಂಡು ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಬಹುದು. ಈ ಲೇಖನವನ್ನು ಓದಿಕೊಂಡು ನೀವು ಮಾಸ್ಕ್ ತಯಾರಿಸಿಕೊಂಡು ಬಳಸಿದರೆ ಆಗ ಸೋಮವಾರದ ನಿಸ್ತೇಜ ತ್ವಚೆ ಮತ್ತು ಶುಕ್ರವಾರದ ಕಲ್ಮಷಭರಿತ ತ್ವಚೆಯು ದೂರವಾಗುವುದು. ಸೋಮವಾರದಿಂದ ಭಾನುವಾರದವರೆಗೆ ದಿನಕ್ಕೊಂದು ಮಾಸ್ಕ್ ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ಓದಿಕೊಂಡು ನೀವು ಬಳಸಿಕೊಳ್ಳಿ.

ಸೋಮವಾರ

ಸೋಮವಾರ

ತುಂಬಾ ಆಯಾಸಕರವಾದ ವಾರಾಂತ್ಯದ ಬಳಿಕ ಸೋಮವಾರ ತ್ವಚೆಗೆ ಹೆಚ್ಚಿನ ಪೋಷಣೆ ನೀಡುವ ಮತ್ತು ಶಕ್ತಿ ಕೊಡುವ ಮಾಸ್ಕ್ ಬೇಕಾಗಿದೆ.

ಬೇಕಾಗುವ ಸಾಮಗ್ರಿಗಳು

  • 2-3 ಚಮಚ ಓಟ್ ಮೀಲ್
  • ವಿಧಾನ

    ಓಟ್ ಮೀಲ್ಸ್ ನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಹುಡಿ ಮಾಡಿಕೊಳ್ಳಿ. ಇದಕ್ಕೆ ಕೆಲವು ಹನಿ ಬಿಸಿ ನೀರು ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಮುಖವನ್ನು ಸ್ವಚ್ಛಗೊಳಿಸಿದ ಬಳಿಕ ಇದರ ಒಂದು ಪದರವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

    ಮಂಗಳವಾರ

    ಮಂಗಳವಾರ

    ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರದಂದು ತ್ವಚೆಯು ಸ್ವಲ್ಪ ಕಡಿಮೆ ಆಯಾಸಗೊಂಡಿರುವುದು. ಆದರೆ ನೀವು ವಾರವಿಡಿ ಕಾಂತಿಯನ್ನು ಕಾಪಾಡಿಕೊಳ್ಳಬೇಕಾಗಿರುವ ಕಾರಣದಿಂದಾಗಿ ಈ ಪ್ಯಾಕ್ ನ್ನು ಪರೀಕ್ಷಿಸಲೇಬೇಕು.

    ಬೇಕಾಗುವ ಸಾಮಗ್ರಿಗಳು

    • 2-3 ಚಮಚ ಮೊಸರು
    • ವಿಧಾನ

      ಇದರಿಂದ ಚರ್ಮದಲ್ಲಿರುವ ಅತಿಯಾದ ಎಣ್ಣೆಯು ಹೊರಬರುವುದು ಮತ್ತು ನಿಮ್ಮ ಚರ್ಮವು ಎಣ್ಣೆಯುಕ್ತ ಮತ್ತು ತಾಜಾವಾಗಿ ಕಾಣಿಸುವುದು. ಸುವಾಸನೆ ರಹಿತವಾಗಿರುವ ಮೊಸರನ್ನು ತೆಗೆದುಕೊಳ್ಳಿ ಮತ್ತು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಇನ್ನೊಂದು ವಿಧಾನವಿದೆ ನೋಡಿ-ಒಂದು ಟೊಮೆಟೊ ಮತ್ತು ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಜೇನುತುಪ್ಪದ ಬದಲಿಗೆ ಬಾದಾಮಿ ಎಣ್ಣೆಯನ್ನೂ ಸೇರಿಸಬಹುದು. ಜೀವಸತ್ವಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ತ್ವಚೆಗೆ ಆರೋಗ್ಯಕರ ಕಾಂತಿಯನ್ನು ನೀಡುತ್ತದೆ.

      ಬುಧವಾರ

      ಬುಧವಾರ

      ವಾರದ ಮಧ್ಯದಲ್ಲಿ ನೀವು ಸತ್ತ ಚರ್ಮದ ಕೋಶಗಳು ಮತ್ತು ಕಲ್ಮಷವನ್ನು ಚರ್ಮದಿಂದ ತೆಗೆದುಹಾಕಬೇಕಾಗುತ್ತದೆ. ಈ ಮಾಸ್ಕ್ ಕಪ್ಪು ಕಲೆಗಳ ನಿವಾರಣೆ ಮಾಡಲಿದೆ.

      ಬೇಕಾಗುವ ಸಾಮಗ್ರಿಗಳು

      • 2 ಚಮಚ ಹಸಿರು ಮಣ್ಣು
      • ರಾತ್ರಿ ಬೆಳಗಾಗುವುದರೊಳಗೆ ತ್ವಚೆಯ ಸೌಂದರ್ಯ ಹೆಚ್ಚಿಸುವ ಮಾಸ್ಕ್‌ಗಳು

        ವಿಧಾನ

        ಹಸಿರು ಮಣ್ಣನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಕಣ್ಣಿನ ಭಾಗವನ್ನು ಬಿಟ್ಟುಬಿಡಿ. ಇದು ಒಣಗುವ ತನಕ ಸುಮಾರು 20-30 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಒಣ ಚರ್ಮವಾಗಿದ್ದರೆ ಆಗ ನೀವು ಹಸಿರು ಮಣ್ಣಿನ ಜತೆಗೆ ಮೊಸರನ್ನು ಬೆರೆಸಿಕೊಂಡು ಬಳಸಿ.

        ಗುರುವಾರ

        ಗುರುವಾರ

        ವಾರಾಂತ್ಯಕ್ಕೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖದ ಮೇಲಿನ ಕಲ್ಮಷವನ್ನು ತೆಗೆದುಹಾಕಿ, ಸ್ವಚ್ಛ ಮಾಡಿಟ್ಟುಕೊಳ್ಳಬೇಕು.

        ಬೇಕಾಗುವ ಸಾಮಗ್ರಿಗಳು

        • 1 ಚಮಚ ಜೇನುತುಪ್ಪ
        • ಕೆಲವು ಹನಿ ಲಿಂಬೆರಸ
        • ವಿಧಾನ

          ಜೇನುತುಪ್ಪ ಮತ್ತು ಕೆಲವು ಹನಿ ತಾಜಾ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದನ್ನು ಚರ್ಮಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. 15 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯರಿ ಮತ್ತು ಒರೆಸಿಕೊಳ್ಳಿ. ಇದರ ಬಳಿಕ ಮೊಶ್ಚಿರೈಸರ್ ಬಳಸಿಕೊಂಡು ನೀವು ಮುಖಕ್ಕೆ ಮಸಾಜ್ ಮಾಡಿ. ಇನ್ನೊಂದು ವಿಧಾನ ಇಲ್ಲಿದೆ ನೋಡಿ-ಸ್ವಲ್ಪ ಬಾದಾಮಿ(ಸಣ್ಣಗೆ ತುಂಡು ಮಾಡಿರುವುದು) ಮತ್ತು ಎರಡು ಚಮಚ ಜೇನುತುಪ್ಪ, ಒಂದು ಚಮಚ ಮೊಸರು ತೆಗೆದುಕೊಳ್ಳಿ. ಈ ಮೂರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ತ್ವಚೆಗೆ ಪುನಶ್ವೇತನ ನೀಡುವಂತಹ ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿದ ಬಳಿಕ ನೀವು ಕೂಡ ಇದರ ರುಚಿ ನೋಡಬಹುದು.

          ಶುಕ್ರವಾರ

          ಶುಕ್ರವಾರ

          ವಾರಾಂತ್ಯವು ಬಂದೇ ಬಿಟ್ಟಿರುವುದರಿಂದ ಪಾರ್ಟಿ ಮತ್ತು ಕಾರ್ಯಕ್ರಮಗಳನ್ನು ತ್ವಚೆಯನ್ನು ಸಜ್ಜುಗೊಳಿಸುವುದು ಅತೀ ಅಗತ್ಯವಾಗಿದೆ.

          ಬೇಕಾಗುವ ಸಾಮಗ್ರಿಗಳು

          • ಸೌತೆಕಾಯಿ
          • ಹಾಲು
          • ವಿಧಾನ

            ಸೌತೆಕಾಯಿ ಸಿಪ್ಪೆ ತೆಗೆದು, ಅದನ್ನು ತುರಿಯಿರಿ. ತುರಿದ ಸೌತೆಕಾಯಿ ಮತ್ತು ಕೆಲವು ಹನಿ ಹಸಿ ಹಾಲು ಮಿಶ್ರಣ ಮಾಡಿಕೊಳ್ಳಿ. ಒಂದು ಹತ್ತಿ ಉಂಡೆ ಬಳಸಿಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಈಗ ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಒರೆಸಿಕೊಳ್ಳಿ. ರಾತ್ರಿ ಮಲಗುವ ಮೊದಲು ಹೀಗೆ ಮಾಡಿ.

            ಶನಿವಾರ

            ಶನಿವಾರ

            ಶನಿವಾರ ನೀವು ಪಾರ್ಟಿಗಳಿಗೆ ಹೋಗಬೇಕಾಗಿರುವ ಕಾರಣ ತ್ವಚೆಯು ತುಂಬಾ ಕಾಂತಿಯುತವಾಗಿರುವುದು ಅತೀ ಅಗತ್ಯವಾಗಿದೆ. ಈ ಮಾಸ್ಕ್ ಅದನ್ನೇ ಮಾಡುವುದು.

            ಬೇಕಾಗುವ ಸಾಮಗ್ರಿಗಳು

            • ½ ಅವಕಾಡೊ
            • ವಿಧಾನ

              ಹಣ್ಣು ಅವಕಾಡೊವನ್ನು ತೆಗೆದುಕೊಂಡು ಅದರ ತಿರುಳು ತೆಗೆದು ಹಿಸುಕಿಕೊಳ್ಳಿ. ಮತ್ತು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

              ಭಾನುವಾರ

              ಭಾನುವಾರ

              ಭಾನುವಾರದಂದು ಚರ್ಮಕ್ಕೆ ವಿಶ್ರಾಂತಿ ನೀಡಬೇಕು. ನಿಮ್ಮ ಚರ್ಮಕ್ಕೆ ಸ್ವಲ್ಪ ಮಟ್ಟಿನ ಆರಾಮ ಕೂಡ ಬೇಕಾಗುವುದು.

              ಬೇಕಾಗುವ ಸಾಮಗ್ರಿ

              • ಕೆಲವು ಹನಿ ಲ್ಯಾವೆಂಡರ್ ತೈಲ
              • ವಿಧಾನ

                ಲ್ಯಾವೆಂಡರ್ ತೈಲದಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದನ್ನು ಚರ್ಮವು ಹೀರಿಕೊಳ್ಳಲಿ. ಇದರ ಬಳಿಕ ಅದು ಪರಿಣಾಮ ಬೀರಲು ಆರಂಭಿಸುವುದು. ಇದರ ಬಳಿಕ ನೀವು ಬಟ್ಟೆಯಿಂದ ಒರೆಸಿಕೊಳ್ಳಿ.

English summary

Masks For Each Day Of The Week

A perfect and flawless skin cannot be achieved just by taking care of it once in a while. Proper treatment and pampering on a regular basis are needed to make the skin look perfect. And what if we tell you that there are masks that you can try each day of the week to get that flawless skin? Yes, in this article we'll suggest different masks that you can try every day of the week.Here is a complete list of masks that you can try out from Monday to Sunday. So read on and try these masks right away.
X
Desktop Bottom Promotion