For Quick Alerts
ALLOW NOTIFICATIONS  
For Daily Alerts

  ನಿತ್ಯದ ಸೌಂದರ್ಯ ಕಾಳಜಿಯಲ್ಲಿ ಈ ಕೆಲವು ವ್ಯತ್ಯಾಸಗಳನ್ನು ಮಾಡಿ ನೋಡಿ...

  By Sushma Charhra
  |

  ಪ್ರತಿ ಮಹಿಳೆಯೂ ತಾನು ಸುಂದರವಾಗಿ ಕಾಣಬೇಕು ಎಂದು ಆಶಿಸುತ್ತಾಳೆ ಮತ್ತು ಸರಿಯಾದ ಮಾಹಿತಿಯನ್ನು ಪಡೆದು ಅದನ್ನು ಅನುಸರಿಸಿದಾಗ ಮಾತ್ರ ಆಕೆ ಅತ್ಯದ್ಭುತವಾದ ಸೌಂದರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.ಹಾಗಾದ್ರೆ ಅದನ್ನು ಸಾಧಿಸಿಕೊಳ್ಳುವುದು ಹೇಗೆ? ಹಾಗಿದ್ದರೆ, ನೀವು ನಿಮ್ಮ ಸೌಂದರ್ಯದ ಕಾಳಜಿಯಲ್ಲಿ ಈ ಕೆಲವು ಸರಳ ಭಿನ್ನತೆಗಳನ್ನು ಪಾಲಿಸಿ ನೋಡಿ. ಮತ್ತು ನಿಮ್ಮಲ್ಲಾಗುವ ವ್ಯತ್ಯಾಸ ನಿಮಗೆ ಆಶ್ಚರ್ಯ ಅನ್ನಿಸಬಹುದು. ಈ ಭಿನ್ನತೆಗಳು ಬಹಳ ಸರಳವಾಗಿದೆ..

  ಇವುಗಳನ್ನು ಮಾಡಿಕೊಳ್ಳಲು ಯಾವುದೇ ಅಲಂಕಾರಿಕ ವಸ್ತುಗಳು ಬೇಕಾಗಿಲ್ಲ, ಮೆಷಿನ್ ಗಳಾಗಲೀ, ವಸ್ತುಗಳಾಗಲೀ ಬೇಕಾಗಿಲ್ಲ. ನಿಮಗೆ ಬೇಕಾಗಿರುವುದು ಕೇವಲ ಸ್ವಲ್ಪ ಸಮಯ ಅಷ್ಟೇ..ನಮಗೆ ನಂಬಿಕೆ ಇದೆ, ಸೌಂದರ್ಯದ ಹ್ಯಾಕ್ ಗಳು ಕಲಿಯಲು ಮತ್ತು ಮಾಡಿಕೊಳ್ಳಲು ನೀವು ಸಮಯವನ್ನು ಖಂಡಿತ ಮೀಸಲಿಡುತ್ತೀರಿ ಎಂಬುದಾಗಿ.. ಸರಿಯಾದ ಪದಾರ್ಥಗಳ ಬಳಕೆ ಮತ್ತು ನಿಮ್ಮ ಸೌಂದರ್ಯ ವಾಡಿಕೆಗೆ ಸ್ವಲ್ಪ ಬದಲಾವಣೆ ತಂದರೆ ನೀವು ಮತ್ತಷ್ಟು ಚಿಕ್ಕವರಾಗಿ ಕಾಣಿಸಲು ಸಾಧ್ಯವಿದೆ. ಹಾಗಾದ್ರೆ ನೀವು ಕಿರಿಯವರಂತೆ ಮತ್ತು ಸೌಂದರ್ಯವಂತರಂತೆ ಕಾಣಿಸಿಕೊಳ್ಳಲು ಇರುವ ಕೆಲವು ಬೇಗನೆ ಮಾಡಿಕೊಳ್ಳಬಹುದಾದ ಮತ್ತು ಆಶ್ಚರ್ಯಕರವಾದ ಕೆಲವು ಭಿನ್ನತೆಗಳನ್ನು ನಾವಿಲ್ಲಿ ತಿಳಿಸಲಿದ್ದೇವೆ..ಗಮನಿಸಿ.. ನೀವು ಕಿರಿಯವರಂತೆ ಕಾಣಲು ಮಾಡಬಹುದಾದ ಸರಳ ಸೌಂದರ್ಯ ಸಲಹೆಗಳು

  beauty tips

  1. ಬ್ಲೋ ಡ್ರೈಯನ್ನು ಬೇರೆ ವಿಧದಲ್ಲಿ ಬಳಸಿ

  2. ನಿಮ್ಮ ಹುಬ್ಬುಗಳನ್ನು ಎಂದಾದರೂ ಹಿಮ್ಮುಖವಾಗಿ ಬ್ರಷ್ ಮಾಡಿದ್ದೀರಾ?

  3. ಬಿಳಿ ಐಲೈನರ್ ಗಳು ಕಪ್ಪು ಐಲೈನರ್ ಗಳಿಗಿಂತ ಹೆಚ್ಚು ಸುಂದರ

  4. ಲಿಪ್ ಲೈನರ್ ಕೇವಲ ತುಟಿಗಳಿಗೆ ಲೈನ್ ಬರೆಯಲು ಮಾತ್ರವಲ್ಲ

  5. ಪರಿಪೂರ್ಣವಾದ ಬೆಕ್ಕಿನ ಕಣ್ಣನ್ನು ಚಿತ್ರಿಸಿಕೊಳ್ಳಿ

  6. ಐಸ್ ಕ್ಯೂಬ್ ಬಳಸಿ ನಿಮ್ಮ ಮೇಕಪ್ ನ್ನು ಫಿಕ್ಸ್ ಮಾಡಿ

  7. ಬ್ರೋಂಜರ್ ನೊಂದಿಗೆ ನಿಮ್ಮ ಪೌಡರ್ ನ್ನು ಬದಲಾಯಿಸಿ

  ಇವುಗಳ ವಿವರಣೆ ಈ ಕೆಳಗಿದೆ ಗಮನಿಸಿ

  1. ಬ್ಲೋ ಡ್ರೈಯನ್ನು ಬೇರೆ ವಿಧದಲ್ಲಿ ಬಳಸಿ

  ನಿಮಗೆ ಇದು ಸ್ವಲ್ಪ ಆಶ್ಚರ್ಯ ಅನ್ನಿಸಬಹುದು.ಆದರೆ ಇದು ನಿಜ ಸಂಗತಿ. ನೀವು ಇಲ್ಲಿ ಏನು ಮಾಡಬೇಕು ಎಂದರೆ, ನಿಮ್ಮ ಕೂದಲು ಯಾವ ಭಾಗಕ್ಕೆ ಸಾಮಾನ್ಯವಾಗಿ ಬೀಳುತ್ತದೆ ಎಂಬುದನ್ನು ಗಮನಿಸಿ ಮತ್ತು ಅದರ ವಿರುದ್ಧವಾಗಿ ಬ್ಲೋ ಡ್ರೈ ಬಳಸಿ.ಒಮ್ಮೆ ನಿಮ್ಮ ಕೂದಲು ಪೂರ್ಣ ಒಣಗಿದ ನಂತರ, ಅದನ್ನು ಅದು ಯಾವಾಗಲೂ ಬೀಳುವ ಭಾಗಕ್ಕೆ ತಿರುಗಿಸಿ ಮತ್ತು ಈಗ ವ್ಯತ್ಯಾಸವನ್ನು ಗಮನಿಸಿ.ನೀವು ಮೊದಲೆಂದೂ ಕಾಣದಂತಹ ಬೌನ್ಸಿ ಕೂದಲನ್ನು ಪಡೆದಿರುತ್ತೀರಿ. ಈಗ ಸರಳವಾಗಿ ಹೇರ್ ಸೆಟ್ಟಿಂಗ್ ಸ್ಪ್ರೇ ಬಳಸಿ ಆ ಕೂದಲನ್ನು ಬೌನ್ಸ್ ಇರುವಂತೆಯೇ ಫಿಕ್ಸ್ ಮಾಡಿಕೊಳ್ಳಿ.

  2. ನಿಮ್ಮ ಹುಬ್ಬುಗಳನ್ನು ಎಂದಾದರೂ ಹಿಮ್ಮುಖವಾಗಿ ಬ್ರಷ್ ಮಾಡಿದ್ದೀರಾ?

  ಇದು ಕೂಡ ಮತ್ತೊಂದು ರೀತಿಯ ವಿಭಿನ್ನ ಪ್ರಯೋಗ. ಇದುವರೆಗೂ ನೀವು ಈ ರೀತಿಯಲ್ಲಿ ಪ್ರಯತ್ನಿಸಿಲ್ಲದೇ ಇರಬಹುದು.ಆದರೆ ಈಗ ಸಮಯ ಬಂದಿದೆ. ನೀವು ಐಬ್ರೋ ಪೆನ್ಸಿಲ್ ಬಳಸುವ ಮುನ್ನ, ಹಿಮ್ಮುಖವಾಗಿ ನಿಮ್ಮ ಐಬ್ರೋವನ್ನು ಬ್ರಷ್ ಮಾಡಿ ನೋಡಿ. ಹೀಗೆ ಮಾಡುವುದರಿಂದಾಗಿ, ನೀವು ಎಲ್ಲಿ ಐಬ್ರೋನಲ್ಲಿ ಕಡಿಮೆ ಕೂದಲಿಗೆ ಎಂಬುದನ್ನು ಗಮನಿಸಿಕೊಳ್ಳಬಹುದು ಮತ್ತು ಪೆನ್ಸಿಲ್ ನಿಂದ ಆ ಭಾಗವನ್ನು ಫಿಲ್ ಮಾಡಲು ಇದು ಅನುಕೂಲ ಮಾಡಿಕೊಡುತ್ತದೆ ನಂತರ ಉಳಿದ ಭಾಗಕ್ಕೆ ನೀವು ಪೆನ್ಸಿಲ್ ಪ್ರಯೋಗ ಮಾಡಬಹುದು. ಈ ಟ್ರಿಕ್ ಬಳಕೆ ಮಾಡುವುದರಿಂದಾಗಿ ನಿಮ್ಮ ಐಬ್ರೋ ಅಂತವಾಗಿ ಕಾಣುವಂತೆ ಮಾಡುತ್ತದೆ.

  3. ಬಿಳಿ ಐಲೈನರ್ ಗಳು ಕಪ್ಪು ಐಲೈನರ್ ಗಳಿಗಿಂತ ಹೆಚ್ಚು ಸುಂದರ

  ಬಹುಷ್ಯಃ ನೀವಿದನ್ನು ಮೊದಲೇ ತಿಳಿದಿರಬಹುದು. ಆದರೆ ಒಂದು ವೇಳೆ ನಿಮಗೆ ತಿಳಿಯದೇ ಇದ್ದಲ್ಲಿ, ಬಿಳಿ ಐಲೈನರ್ ಗಳು ಕಪ್ಪು ಐಲೈನರ್ ಗಳಿಗಿಂತ ಹೆಚ್ಚು ಸುಂದರವಾಗಿ ಕಾಣುತ್ತದೆ. ಕಪ್ಪು ಐಲೈನರ್ ಗಿಂತ ಬಿಳಿ ಐ ಲೈನರ್ ಗಳನ್ನು ಬಳಕೆ ಮಾಡುವುದರಿಂದಾಗಿ ನಿಮ್ಮ ಕಣ್ಣುಗಳು ಇನ್ನಷ್ಟು ದೊಡ್ಡದಾಗಿ ಮತ್ತು ಬೆಟರ್ ಆಗಿ ಕಾಣುತ್ತದೆ. ಮತ್ತು ಒಂದು ಹೊಸತನದ ಪ್ರಯೋಗ ಮಾಡುವುದರಲ್ಲಿ ತಪ್ಪೇನಿದೆ ಅಲ್ವಾ?

  4. ಲಿಪ್ ಲೈನರ್ ಕೇವಲ ತುಟಿಗಳಿಗೆ ಲೈನ್ ಬರೆಯಲು ಮಾತ್ರವಲ್ಲ

  ನಿಮಗೆಲ್ಲ ತಿಳಿದಿರುವಂತೆ ಲಿಪ್ ಲೈನರ್ ತುಟಿಗಳ ರೂಪರೇಖೆ ಬರೆಯಲು ಬಳಕೆ ಮಾಡಲಾಗುತ್ತದೆ. ಆದರೆ ಇದು ನಿಜ. ನೀವು ಕೇವಲ ಲಿಪ್ ಲೈನರ್ ನ್ನು ತುಟಿಗಳ ರೂಪುರೇಖೆಗಾಗಿ ಮಾತ್ರವಲ್ಲ ಬದಲಾಗಿ ತುಟಿಯ ಸಂಪೂರ್ಣ ಬಣ್ಣದ ಬದಲಾವಣೆಗೂ ಬಳಕೆ ಮಾಡಬಹುದಾಗಿದೆ. ಅಂದರೆ ನಿಮ್ಮ ಲಿಪ್ ಲೈನರ್ ನ್ನು ಲಿಪ್ ಸ್ಟಿಕ್ ಆಗಿ ಕೂಡ ಪ್ರಯತ್ನಿಸಿ ನೋಡಿ.

  5. ಪರಿಪೂರ್ಣವಾದ ಬೆಕ್ಕಿನ ಕಣ್ಣನ್ನು ಚಿತ್ರಿಸಿಕೊಳ್ಳಿ

  ಪರಿಪೂರ್ಣವಾದ ಬೆಕ್ಕಿನ ಕಣ್ಣಿನ ಚಿತ್ರಣವನ್ನು ಮಾಡಿಕೊಳ್ಳಿ. ಎಸ್ ನಾವು ನಿಮಗೆ ಹೇಗೆ ಅನ್ನುವುದನ್ನು ತಿಳಿಸಿಕೊಡುತ್ತೇವೆ! ಇದು ಹೆಚ್ಚಿನ ಜನರು ಮಾಡಿಕೊಳ್ಳುವುದರಲ್ಲಿ ಅನುತ್ತೀರ್ಣರಾಗುತ್ತಾರೆ. ಮೊದಲಿಗೆ ರೆಕ್ಕೆಯಂತೆ ಐಲೈನರ್ ಬರೆಯಬೇಕು. ಅದಕ್ಕಾಗಿ ಇಲ್ಲಿದೆ ಕೆಲವು ಹ್ಯಾಕಿಂಗ್ ಐಡಿಯಾಗಳು..! ನಿಮ್ಮ ಡೆಬಿಟ್ ಕಾರ್ಡ್ ನ್ನು ತೆಗೆದುಕೊಳ್ಳಿ. ನಿಮ್ಮ ಕಣ್ಣಿನ ಹೊರಗಿನ ಕಾರ್ನರ್ ನಲ್ಲಿ ಇಡಿ. ಈಗ, ಐಲೈನರ್ ತೆಗೆದುಕೊಳ್ಳಿ, ಪೆನ್ಸಿಲ್ ರೀತಿಯ ಐಲೈನರ್ ಆದರೆ ಉತ್ತಮವಾಗುತ್ತದೆ. ಕಾರ್ಡ್ ಸಹಾಯದಿಂದ ನಿಮ್ಮ ಹುಬ್ಬಿನ ಕೊನೆಯಲ್ಲಿ ಒಂದು ಕರ್ಣೀಯ ರೇಖೆಯನ್ನು ಎಳೆಯಿರಿ ಈಗ, ಕಾರ್ಡ್ ನ್ನು ತೆಗೆಯಿರಿ ಮತ್ತು ಈಗ ನಿಮಗೆ ಪರ್ಫೆಕ್ಟ್ ಆಗಿರುವ ಬೆಕ್ಕಿನ ಕಣ್ಣಿನ ಚಿತ್ರ ರೆಡಿಯಾಗಿದೆ. ಎಡಭಾಗದಲ್ಲಿರುವ ಖಾಲಿ ಜಾಗವನ್ನು ಭರ್ತಿ ಮಾಡಿಕೊಂಡರೆ ಹೊರಗಡೆ ಹೋಗಲು ಅಧ್ಬುತವಾಗಿ ತಯಾರಾದಂತೆ.

  6. ಐಸ್ ಕ್ಯೂಬ್ ಬಳಸಿ ನಿಮ್ಮ ಮೇಕಪ್ ನ್ನು ಫಿಕ್ಸ್ ಮಾಡಿ

  ಐಸ್ ಕ್ಯೂಬ್ ಗಳು ಕೇವಲ ಗಾಯ ಮತ್ತು ನೋವನ್ನ ಗುಣಪಡಿಸಲು ಮಾತ್ರವಲ್ಲ. ಐಸ್ ಕ್ಯೂಬ್ ಗಳನ್ನು ನೀವು ನಿಮ್ಮ ಸೌಂದರ್ಯ ಪದಾರ್ಥವಾಗಿಯೂ ಕೂಡ ಬಳಕೆ ಮಾಡಬಹುದು. ಹೇಗೆ ಎಂದು ಕೇಳುತ್ತಿದ್ದೀರಾ? ಹೇಗೆಂದರೆ, ನೀವು ಮೇಕಪ್ ಹಚ್ಚಿಕೊಂಡ ನಂತರ, ಐಸ್ ಕ್ಯೂಬ್ ನಿಂದ ನಿಮ್ಮ ಮುಖವನ್ನು ಕೆಲವು ಸೆಕೆಂಡ್ ರಬ್ ಮಾಡಿದರೆ ನಿಮ್ಮ ಮೇಕಪ್ ಪರ್ಫೆಕ್ಟ್ ಆಗಿ ಸೆಟ್ ಆಗುತ್ತದೆ.

  7. ಬ್ರೋಂಜರ್ ನೊಂದಿಗೆ ನಿಮ್ಮ ಪೌಡರ್ ನ್ನು ಬದಲಾಯಿಸಿ

  ಹೌದು..! ನೀವಿದನ್ನು ಖಂಡಿತ ಪ್ರಯತ್ನಿಸಬಹುದು .ನಿಮ್ಮ ಬ್ರೋಂಜರ್ ನ್ನು ನಿಮ್ಮ ಪೌಡರ್ ನೊಂದಿಗೆ ಬದಲಾಯಿಸಿ ಮತ್ತು ವ್ಯತ್ಯಾಸವನ್ನು ಗಮನಿಸಿ. ಬ್ರೋಂಜರ್ರೇ ನಿಮ್ಮ ಕೆನ್ನೆಗಳಿಗೆ ಅಧ್ಬುತವಾಗಿರುವಾಗ ಯಾಕೆ ಸುಮ್ಮನೆ ಅದನ್ನು ಬಿಡಬೇಕು ಎಂದು ನೀವು ಅಂದುಕೊಳ್ಳುತ್ತಿರಬಹುದು, ಬಟ್ ಒಮ್ಮೆ ಪೌಡರ್ ಬಳಸಿ ನೋಡಿ. ನೀವು ಖಂಡಿತ ಇಷ್ಟಪಡುತ್ತೀರಿ. ಯಾವಾಗಲೂ ಸೌಂದರ್ಯದಲ್ಲಿ ಪ್ರಯತ್ನಗಳಿರಬೇಕು ಆಗಲೇ ಭಿನ್ನವಾಗಿ, ವಿಭಿನ್ನವಾಗಿ ಎಲ್ಲರಿಗೂ ಅತ್ಯಾಕರ್ಷಕವಾಗಿ ಕಾಣಲು ಸಾಧ್ಯವಾಗಿದೆ. ಹೊಸ ಟ್ರೆಂಡ್ ಯಾಕೆ ನಿಮ್ಮಿಂದಲೇ ಪ್ರಾರಂಭವಾಗಬಾರದು ಅಲ್ಲವೇ? ಹಾಗಾಗಿ ಈ ಬ್ಯೂಟಿ ಹ್ಯಾಕ್ ಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ ಮತ್ತು ನೀವು ಎಲ್ಲರಿಗಿಂತ ಭಿನ್ನವಾಗಿ ಸ್ಟೈಲ್ ಮಾಡಿ.

  English summary

  Make These Changes To Your Beauty Routine & See The Difference

  Every woman deserves to look beautiful. And, with the right guidance, she can only look more beautiful than ever. So, how to do that? Well, we've got some amazing hacks that you might be interested in. These hacks are pretty simple. They do not require fancy ingredients, machines, or products. All you need is some time for yourself. And we are pretty sure you would definitely have that. With the right ingredients and a twist to your beauty routine, you can look much younger. So, let's begin with some instant and amazing hacks to make you look younger and prettier.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more