For Quick Alerts
ALLOW NOTIFICATIONS  
For Daily Alerts

ಚರ್ಮದ ಸಮಸ್ಯೆಗಳ ನಿವಾರಣೆಗೆ ಲಿಂಬೆ ಮತ್ತು ಜೇನುತುಪ್ಪ

By Hemanth
|

ಮೊಡವೆ ಹಾಗೂ ಕಲೆಗಳು ಇಲ್ಲದೆ ಇರುವಂತಹ ತ್ವಚೆಯ ಆಸೆ ಪ್ರತಿಯೊಬ್ಬರಿಗೂ ಇರುವುದು. ಇಂತಹ ತ್ವಚೆ ಪಡೆದರೆ ಅದರಿಂದ ಮುಖದ ಕಾಂತಿಯು ವೃದ್ಧಿಸುವುದು. ಆದರೆ ಚರ್ಮಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ದೇಹದ ಆರೋಗ್ಯದಿಂದಾಗಿ ಬರುವಂತದ್ದಾಗಿದೆ. ಇದರಿಂದ ತ್ವಚೆಯ ಆರೋಗ್ಯಕ್ಕೆ ದೇಹದ ಆರೋಗ್ಯವು ಅತೀ ಅಗತ್ಯ. ಇಂತಹ ಸಮಯದಲ್ಲಿ ಜೇನುತುಪ್ಪವು ತ್ವಚೆಯ ರಕ್ಷಣೆ ಮಾಡಿ, ಕಾಂತಿ ಹೆಚ್ಚಿಸುವುದು.

ಪ್ರತಿನಿತ್ಯ ತ್ವಚೆಗೆ ಜೇನುತುಪ್ಪ ಬಳಸಿಕೊಳ್ಳಬೇಕು. ಜೇನುತುಪ್ಪ ಬಳಸಿಕೊಂಡರೆ ಮೊಡವೆ ಹಾಗೂ ಕಲೆಗಳು ನಿವಾರಣೆಯಾಗುವುದು. ಇಷ್ಟು ಮಾತ್ರವಲ್ಲದೆ ಒಣ ಚರ್ಮಕ್ಕೂ ಇದು ಪರಿಣಾಮಕಾರಿ. ಜೇನುತುಪ್ಪದಂತೆ ಮತ್ತೊಂದು ತ್ವಚೆಯ ಆರೈಕೆಯ ನೈಸರ್ಗಿಕ ಸಾಮಗ್ರಿಯೆಂದರೆ ಅದು ನಿಂಬೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಚರ್ಮವು ತುಂಬಾ ಆರೋಗ್ಯಕಾರಿಯಾಗಿರುವಂತೆ ಮಾಡುವುದು.

ಈಗ ಜೇನುತುಪ್ಪ ಮತ್ತು ನಿಂಬೆರಸ ಜತೆಯಾಗಿ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ತ್ವಚೆಯ ಲಾಭಗಳು ಇವೆ. ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಇದರ ಲಾಭಗಳು ಯಾವುದು ಮತ್ತು ಕಾಂತಿಯುತ ತ್ವಚೆಗೆ ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ....

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಮಾಯಿಶ್ಚರೈಸರ್ ಚರ್ಮಕ್ಕೆ ಅತೀ ಅಗತ್ಯ. ಯಾವುದೇ ರೀತಿಯ ಚರ್ಮವಿದ್ದರೂ ಮಾಯಿಶ್ಚರೈಸರ್ ಮಾಡಿದರೆ ಅದರಿಂದ ಚರ್ಮವು ತೇವಾಂಶ ಪಡೆದುಕೊಂಡು ಚರ್ಮವು ಮೃದುವಾಗಿರುವಂತೆ ಮಾಡುವುದು. ಜೇನುತುಪ್ಪ ಮತ್ತು ಲಿಂಬೆರಸ ಬಳಸಿಕೊಂಡು ಮಾಯಿಶ್ಚರೈಸರ್ ತಯಾರಿಸುವುದು ಹೇಗೆ ಎಂದು ತಿಳಿಯುವ. ಎರಡು ಚಮಚ ಲಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನಾಲೂ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಅರ್ಧ ಗಂಟೆ ಕಾಲ ಮಸಾಜ್ ಮಾಡಿಕೊಳ್ಳಿ. 30 ನಿಮಿಷ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸತ್ತ ಚರ್ಮದ ಕೋಶ ತಡೆಯುವುದು

ಸತ್ತ ಚರ್ಮದ ಕೋಶ ತಡೆಯುವುದು

ನಾವೆಲ್ಲರೂ ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಸತ್ತ ಚರ್ಮದ ಕೋಶಗಳು. ಇದಕ್ಕೆ ಲಿಂಬೆ ರಸ ಮತ್ತು ಜೇನುತುಪ್ಪ ಮಿಶ್ರಣ ಮಾಡಿಕೊಂಡರೆ ಸತ್ತ ಚರ್ಮದ ಕೋಶ ತೆಗೆದು ಮತ್ತೆ ಅದು ಜಮೆಯಾಗದಂತೆ ತಡೆಯಬಹುದು. ವಾರದಲ್ಲಿ ಎರಡು ಸಲ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಕಪ್ಪು ಕಲೆಗಳ ನಿವಾರಣೆಗೆ

ಕಪ್ಪು ಕಲೆಗಳ ನಿವಾರಣೆಗೆ

ಕಪ್ಪು ಕಲೆಗಳನ್ನು ಲಿಂಬೆರಸ ಮತ್ತು ಜೇನುತುಪ್ಪದಿಂದ ನಿವಾರಣೆ ಮಾಡಬಹುದು. ಇದು ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದಲ್ಲದೆ, ಚರ್ಮದ ಕಾಂತಿ ಹೆಚ್ಚಿಸುವುದು. ಇದನ್ನು ಹೇಗೆ ಬಳಸುವುದು ಎಂದು ತಿಳಿಯಿರಿ. ಒಂದು ಚಮಚ ಓಟ್ ಮೀಲ್ ಹುಡಿ, ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಲಿಂಬೆರಸ ಬಳಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ಲಿಂಬೆರಸ ಮತ್ತು ಜೇನುತುಪ್ಪವನ್ನು ನಿಯಮಿತವಾಗಿ ಬಳಸಿಕೊಂಡರೆ ಮೊಡವೆ ನಿವಾರಣೆಯಾಗಿ ಅದರಿಂದ ಆದ ಕಲೆಗಳು ಕೂಡ ಮಾಯವಾಗುವುದು. ಸಮ ಪ್ರಮಾಣದಲ್ಲಿ ಲಿಂಬೆ ಮತ್ತು ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಹತ್ತಿ ಉಂಡೆಯಿಂದ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಚರ್ಮ ಬಿಳಿಯಾಗಲು

ಚರ್ಮ ಬಿಳಿಯಾಗಲು

ಲಿಂಬೆರಸ ಮತ್ತು ಜೇನುತುಪ್ಪದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕಲೆ ನಿವಾರಿಸಿ ಚರ್ಮವನ್ನು ಬಿಳಿಯಾಗಿಸುವುದು. ಇದರಲ್ಲಿರುವ ನೈಸರ್ಗಿಕ ಚರ್ಮ ಬಿಳಿಯಾಗಿಸುವ ಅಂಶಗಳು ಬಿಳಿ ಹಾಗೂ ಕಾಂತಿಯುತ ಚರ್ಮ ನೀಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಕಡಲೆ ಹಿಟ್ಟು

1 ಚಮಚ ಜೇನುತುಪ್ಪ

2 ಚಮಚ ಲಿಂಬೆ

ಒಂದು ಚಿಟಿಕೆ ಅರಿಶಿನ ಹುಡಿ.

ವಿಧಾನ

ಎಲ್ಲವನ್ನು ಒಂದು ಪಿಂಗಾಣಿಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಮತ್ತು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ತುಟಿಗಳಿಗೆ ಕಾಂತಿ ನೀಡುವುದು

ತುಟಿಗಳಿಗೆ ಕಾಂತಿ ನೀಡುವುದು

ಲಿಂಬೆಯಲ್ಲಿ ಇರುವಂತಹ ಸಿಟ್ರಸ್ ಆಮ್ಲವು ಕಂದು ಬಣ್ಣ ನಿವಾರಣೆ ಮಾಡಿ, ತುಟಿಗಳು ಕಾಂತಿಯುತವಾಗುವಂತೆ ಮಾಡುವುದು. ಜೇನುತುಪ್ಪವು ತುಟಿಗಳಿಗೆ ಪೋಷಣೆ ನೀಡುವುದು. ಇದರಿಂದ ತುಟಿಯು ತುಂಬಾ ಮೃಧು ಹಾಗೂ ಮೊಶ್ಚಿರೈಸ್ ಆಗಿರುವುದು. ಇದನ್ನು ತಯಾರಿಸಲು ಕೆಲವು ಹನಿ ಜೇನುತುಪ್ಪ ಮತ್ತು ಒಂದು ಚಮಚ ಲಿಂಬೆರಸ ತೆಗೆದುಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ತುಟಿಗಳಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ಒದ್ದೆ ಟವೆಲ್ ನಿಂದ ತೊಳೆಯಿರಿ.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಲಿಂಬೆ ಮತ್ತು ಜೇನುತುಪ್ಪದಲ್ಲಿ ಇರುವಂತಹ ಕೆಲವೊಂದು ಅಂಶಗಳು ನೆರಿಗೆ ಕಡಿಮೆ ಮಾಡಲು ನೆರವಾಗುವುದು ಮತ್ತು ಇದರಿಂದ ಚರ್ಮವು ಕಾಂತಿ ಪಡೆಯುವುದು. ಜೇನುತುಪ್ಪ ಮತ್ತು ಲಿಂಬೆಯನ್ನು ಮಿಶ್ರಣ ಮಾಡಿ ನೇರವಾಗಿ ಹಣೆಗೆ ಹಚ್ಚಿಕೊಳ್ಳಬಹುದು. ಅಕ್ಕಿ ಹಿಟ್ಟಿಗೆ ಇವೆರಡನ್ನು ಹಾಕಿ ಮಿಶ್ರಣ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು. ಅಕ್ಕಿ ಹಿಟ್ಟಿನಲ್ಲಿ ಆ್ಯಂಟಿಆಕ್ಸಿಡೆಂಟ್ ಇದೆ.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಇದು ಚರ್ಮಕ್ಕೆ ತೇವಾಂಶ ನೀಡುವುದು. ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಲಿಂಬೆರಸ ಮಿಶ್ರಣ ಮಾಡಿ. ಪೇಸ್ಟ್ ತುಂಬಾ ದಪ್ಪಗಾದರೆ ಮತ್ತೆ ಸ್ವಲ್ಪ ಜೇನುತುಪ್ಪ ಬೆರೆಸಿ. ಇದನ್ನು ಹಣೆಗೆ ಹಚ್ಚಿಕೊಳ್ಳಿ ಮತ್ತು ನೆರಿಗೆ ಇರುವ ಇತರ ಭಾಗಗಳಿಗೆ ಕೂಡ. ಇದನ್ನು ಸರಿಯಾಗಿ ಒಣಗಲು ಬಿಡಿ, ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

English summary

Lemon And Honey To Solve All Your Skin Problems

We all face an umpteen number of skin-related issues. Sometimes, certain skin-related issues can also lead to several health problems. When coming to skin care, some of the most common issues faced are black spots, acne, dry skin, etc.Honey can protect your skin and enhance your beauty in several ways. Applying honey on your face every day can have great benefits. Using a honey mask can aid in treating acne and dark spots. It also treats other issues like dry skin. Let's see what are their benefits and how we can use them for attaining a beautiful and flawless skin, sitting back at your home.
X
Desktop Bottom Promotion