For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಬೇಕೇ? ಇಲ್ಲಿದೆ ನೋಡಿ 'ಲಿಂಬೆ'ಯ ಸ್ಟೆಪ್-ಬೈ-ಸ್ಟೆಪ್ ಬ್ಯೂಟಿ ಟಿಪ್ಸ್

|

ಆರೋಗ್ಯಕರ ಮತ್ತು ಕಾಂತಿಯುತವಾಗಿ ತ್ವಚೆ ಪಡೆಯಬೇಕಾದರೆ ಆಗ ಚರ್ಮವನ್ನು ತೇವಾಂಶದಿಂದ ಇಟ್ಟು, ಆರೈಕೆ ಮಾಡುವುದು ಅತೀ ಅಗತ್ಯವಾಗಿದೆ. ಹೊರಗಡೆ ಹೋಗಿ ಬ್ಯೂಟಿ ಪಾರ್ಲರ್ ಗಳಲ್ಲಿ ಹಲವಾರು ರೀತಿಯ ಫೇಶಿಯಲ್ ಮಾಡಿಕೊಂಡು ದುಡ್ಡು ಖರ್ಚು ಮಾಡುತ್ತೇವೆ. ಆದರೆ ಮನೆಯಲ್ಲೇ ತಯಾರಿಸುವಂತಹ ಕೆಲವೊಂದು ಸೌಂದರ್ಯವರ್ಧಕಗಳಿಂದ ನಿಮ್ಮ ತ್ವಚೆಯ ಆರೈಕೆ ಮಾಡಿಕೊಂಡು, ಅದನ್ನು ಆರೋಗ್ಯವಾಗಿಡಬಹುದು. ಈ ಲೇಖನದಲ್ಲಿ ಲಿಂಬೆಹಣ್ಣನ್ನು ಬಳಸಿಕೊಂಡು ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿಯುವ.

ಲಿಂಬೆಹಣ್ಣಿನಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ನಮಗೆ ತಿಳಿದಿದೆ. ಸಿಟ್ರಸ್ ಹಣ್ಣುಗಳ ಸಾಲಿಗೆ ಸೇರಿರುವ ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಚರ್ಮವನ್ನು ಶುದ್ಧೀಕರಿಸಿ, ದೊಡ್ಡ ಬೊಕ್ಕೆಗಳು ಕುಗ್ಗುವಂತೆ ಮಾಡುವುದು. ಇದು ಚರ್ಮದ ರಂಧ್ರಗಳಲ್ಲಿ ಇರುವಂತಹ ಕಲ್ಮಷವನ್ನು ತೆಗೆಯುವ ಮೂಲಕ ಆರೋಗ್ಯಕರ ಮತ್ತು ಸ್ವಚ್ಛ ಚರ್ಮ ಪಡೆಯಲು ನೆರವಾಗುವುದು. ಲಿಂಬೆಯಲ್ಲಿ ಇರುವಂತಹ ಅಲ್ಪಾ ಹೈಡ್ರಾಕ್ಸ್ ಆಮ್ಲವು ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಇತರ ಕಲೆಗನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಇನ್ನು ನಿಮ್ಮ ಮುಖದ ಮೇಲೆ ಕಪ್ಪು ಚುಕ್ಕೆಗಳ ಚಿಂತೆಯಿದ್ದರೆ ಅವುಗಳು ಮಾಯವಾಗಲು ತಾಜಾ ಲಿಂಬೆಹಣ್ಣನ್ನು ಬಳಸಬಹುದು. ಕಟುವಾಸನೆಯುಳ್ಳ ಲಿಂಬೆಹಣ್ಣಿನಲ್ಲಿ ನಿಮ್ಮ ಚರ್ಮ ಮತ್ತು ತಲೆಗೂದಲಿಗೆ ಬಹಳಷ್ಟು ಪ್ರಯೋಜನವಾಗುವ ಶಕ್ತಿಯಿಂದ ತುಂಬಿದೆ. ನಿಮ್ಮ ಎಲ್ಲಾ ಸೌಂದರ್ಯ ಅಗತ್ಯಗಳನ್ನು ಕೊಡುವ ಮಿಶ್ರಣಾಂಶವನ್ನು ಹುಡುಕುತ್ತಿದ್ದರೆ, ಲಿಂಬೆಹಣ್ಣಿಗಿಂತಾ ಬೇರೆ ಯಾವುದೂ ಇಲ್ಲ. ಲಿಂಬೆಹಣ್ಣಿನ ರಸದಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಮತ್ತು ಗಂಭೀರ ಪ್ರತಿಕ್ರಿಯೆಯ ಗುಣಗಳನ್ನು ಹೊಂದಿರುವುದರಿಂದ ಚರ್ಮವನ್ನು ಬೆಳ್ಳಗೆ ಮಾಡಲು ಮತ್ತು ಅನಗತ್ಯ ಮಚ್ಚೆಗಳನ್ನು ಕಡಿಮೆಮಾಡುತ್ತದೆ. ಅದು ಚರ್ಮದ ಬಣ್ಣವನ್ನು ಸಮಗೊಳಿಸುತ್ತದೆ.

ನಿಮ್ಮ ಚರ್ಮವನ್ನು ಸುಧಾರಿಸಲು ಕೆಲವು ಸುಲಭ ಮಾರ್ಗಗಳು ಲಿಂಬೆಹಣ್ಣಿನಲ್ಲಿವೆ. ಲಿಂಬೆಹಣ್ಣಿನ ರಸದಲ್ಲಿ ಸೌಂದರ್ಯವೃದ್ಧಿಮಾಡಿಕೊಳ್ಳಲು ಅದ್ಭುತ ಶ್ರೇಣಿಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವರಿಗೆ ಬಳಸಿದಾಗ ಚರ್ಮ ಕೆರಳಬಹುದು ಮತ್ತು ಅಂತಹವರು ತೆರೆದ ರಂಧ್ರಗಳ ಮೇಲೆ ಬಳಸಬಾರದು. ಲಿಂಬೆ ಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖದ ಮೇಲೆ ಮೆಲ್ಲಗೆ ಉಜ್ಜಿ, 20 ನಿಮಿಷಗಳ ನಂತರ ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಿ. ನಿಮ್ಮ ಕಣ್ಣಿನ ಬಳಿ ಮತ್ತು ಸುತ್ತ ಬಳಸುವುದು ಅಪಾಯಕರ. ಲಿಂಬೆಹಣ್ಣಿನ ಸಿಪ್ಪೆಯಲ್ಲಿರುವ ಆಂಟಿಆಕ್ಸಿಡೆಂಟ್ ನಿಮ್ಮ ಚರ್ಮದ ಮೇಲಿರುವ ಕಲ್ಮಶಗಳನ್ನು ಬಹಳ ಮಟ್ಟಿಗೆ ನಿರ್ಮೂಲಮಾಡುತ್ತದೆ. ಬನ್ನಿ ಈ ಲೇಖನದಲ್ಲಿ ಹಂತ ಹಂತವಾಗಿ ಲಿಂಬೆಯ ಬಳಕೆ ಬಗ್ಗೆ ತಿಳಿಯುವ....

ಮೊದಲ ಹಂತ

ಮೊದಲ ಹಂತ

ಲಿಂಬೆ ಮತ್ತು ಉಪ್ಪಿನ ಸ್ಕ್ರಬ್

ಈ ಸ್ಕ್ರಬ್ ನಿಂದಾಗಿ ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಬಹುದು. ಲಿಂಬೆ-ಉಪ್ಪಿನ ಸ್ಕ್ರಬ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಚರ್ಮವನ್ನು ಶುದ್ಧ ಮತ್ತು ಸೋಂಕಿನಿಂದ ಮುಕ್ತವಾಗಿಡುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ಉಪ್ಪು

*½ ಚಮಚ ಲಿಂಬೆರಸ

*1 ಚಮಚ ನೀರು

ತಯಾರಿಸುವ ವಿಧಾನ

*ತಾಜಾ ಲಿಂಬೆರಸ ಮತ್ತು ಉಪ್ಪನ್ನು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ, ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ತೆಗೆದುಕೊಂಡು ತೊಳೆದಿರುವ ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಇದನ್ನು ಮುಖದಲ್ಲಿ 2-3 ನಿಮಿಷ ಕಾಲ ಮಸಾಜ್ ಮಾಡಿ. ಇದರ ಬಳಿಕ ಬಿಸಿ ನೀರಿನಿಂದ ತೊಳೆದರೆ ಚರ್ಮದ ರಂಧ್ರಗಳು ತೆರೆಯುವುದು.

2ನೇ ಹಂತ

2ನೇ ಹಂತ

ಸ್ಕ್ರಬ್ ಮಾಡಿದ ಬಳಿಕ ಲಿಂಬೆಯ ಟೋನರ್ ಕೊಡುವುದು ಅತೀ ಅಗತ್ಯ. ಲಿಂಬೆಯ ರಸವು ಚರ್ಮಕ್ಕೆ ಟೋನಿಂಗ್ ಮಾಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

*2-3 ಚಮಚ ಲಿಂಬೆರಸ

*ಕೆಲವು ಹನಿ ರೋಸ್ ವಾಟರ್

ತಯಾರಿಸುವ ವಿಧಾನ

*ಸ್ವಚ್ಛವಾಗಿರುವ ಪಿಂಗಾಣಿಯಲ್ಲಿ ರೋಸ್ ವಾಟರ್ ಹಾಕಿ. ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

*5 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ನೀರಿನಿಂದ ತೊಳೆದು, ತಣ್ಣೀರು ಹಾಕಿಕೊಳ್ಳಿ.

3ನೇ ಹಂತ

3ನೇ ಹಂತ

ಲಿಂಬೆ ಮತ್ತು ಹಾಲಿನ ಕ್ಲೆನ್ಸರ್

*ಈ ಕ್ಲೆನ್ಸರ್ ನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲದಿಂದಾಗಿ ಇದು ಕಪ್ಪುಕಲೆಗಳನ್ನು ತೆಗೆಯುವುದು. ಈ ಕ್ಲೆನ್ಸರ್ ಬಳಸಿದರೆ ಅದರಿಂದ ಮುಖ ಶುದ್ಧ ಮತ್ತು ಆರೋಗ್ಯವಾಗುವುದು.

ಬೇಕಾಗುವ ಸಾಮಗ್ರಿಗಳು

*1 ಚಮಚ ಲಿಂಬೆರಸ

*1 ಚಮಚ ಹಸಿ ಹಾಲು

ತಯಾರಿಸುವ ವಿಧಾನ

*ಒಂದು ಪಿಂಗಾಣಿಯಲ್ಲಿ ಲಿಂಬೆರಸ ಮತ್ತು ಹಸಿ ಹಾಲು ಹಾಕಿಕೊಳ್ಳಿ. ಇದರಲ್ಲಿ ಹತ್ತಿ ಉಂಡೆ ಅದ್ದಿಕೊಂಡು, ಅದನ್ನು ಮುಖದ ಮೇಲೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದನ್ನು ತೆಗೆಯುವಾಗ ನೀವು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಿರಿ.

4ನೇ ಹಂತ

4ನೇ ಹಂತ

ಲಿಂಬೆ ಮತ್ತು ದಾಳಿಂಬೆಯ ಫೇಸ್ ಪ್ಯಾಕ್

*ದಾಳಿಂಬೆಯು ಚರ್ಮದಲ್ಲಿರುವ ಅತಿಯಾದ ಎಣ್ಣೆಯಂಶವನ್ನು ತೆಗೆದುಹಾಕುವುದು. ಲಿಂಬೆ ಮತ್ತು ದಾಳಿಂಬೆಯ ಮಿಶ್ರಣದಿಂದ ಚರ್ಮದ ಮೊಡವೆಗಳು ಮತ್ತು ಕಪ್ಪು ಕಲೆಗಳು ನಿವಾರಿಸಬಹುದು.

ಬೇಕಾಗುವ ಸಾಮಗ್ರಿಗಳು

*ದಾಳಿಂಬೆ ಸಿಪ್ಪೆ

*ಲಿಂಬೆರಸ

ಇದನ್ನು ತಯಾರಿಸುವುದು ಹೇಗೆ

*ಮೊದಲನೇಯದಾಗಿ ದಾಳಿಂಬೆ ಸಿಪ್ಪೆಯನ್ನು ಒಣಗಿಸಿ, ಬಳಿಕ ಹುಡಿ ಮಾಡಿಕೊಳ್ಳಿ. ಇದಕ್ಕೆ ಲಿಂಬೆರಸ ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಲ್ಳಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 20-30 ನಿಮಿಷ ಕಾಲ ಹಾಗೆ ಬಿಡಿ.

*30 ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ. ಅಂತಿಮವಾಗಿ ಸ್ವಲ್ಪ ಮೊಶ್ಚಿರೈಸರ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

 ನೆನಪಿನಲ್ಲಿಡಬೇಕಾದ ಸಲಹೆಗಳು

ನೆನಪಿನಲ್ಲಿಡಬೇಕಾದ ಸಲಹೆಗಳು

*ಲಿಂಬೆರಸವನ್ನು ಹಾಕಿದ ಕೂಡಲೇ ನೀವು ಬಿಸಿಲಿಗೆ ಮೈಯೊಡ್ಡದೆ ಇರಲು ಸಂಜೆ ವೇಳೆ ಫೇಶಿಯಲ್ ಹಚ್ಚಿಕೊಳ್ಳಿ.

*ಫೇಶಿಯಲ್ ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಲು ಮರೆಯಬೇಡಿ. ಯಾಕೆಂದರೆ ಲಿಂಬೆರಸವು ಚರ್ಮವನ್ನು ಒಣಗಿಸುವುದು.

*ಚರ್ಮದಲ್ಲಿ ತೆರೆದ ಗಾಯವಿದ್ದರೆ ಆಗ ನೀವು ಲಿಂಬೆರಸ ಬಳಸಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗಬಹುದು.

*ಚರ್ಮದ ಮೇಲಿನ ಹೆಚ್ಚುವರಿ ತೈಲತ್ವವನ್ನು ಕಡಿಮೆಮಾಡಲು ವಿಧಾನಗಳನ್ನು ಹುಡುಕುತ್ತಿದ್ದರೆ, ಲಿಂಬೆಹಣ್ಣಿನ ರಸವನ್ನು ನೇರವಾಗಿ ಚರ್ಮದ ಮೇಲೆ ಬಳಿಯಿರಿ. ಆದರೆ ನಿಮಗೆ ಸೂಕ್ಷ್ಮ ಚರ್ಮವಿದ್ದಲ್ಲಿ ಲಿಂಬೆಹಣ್ಣಿನ ರಸವನ್ನು ಲೇಪಿಸ ಬೇಡಿ ಇಲ್ಲದಿದ್ದರೆ ಕೆಟ್ಟ ಪರಿಣಾಮ ಬೀರಬಹುದು. ಆದಾಗ್ಯೂ ನಿಮಗೆ ಒಣ ಚರ್ಮವಿದ್ದು ಅದನ್ನು ಮೃದುವಾಗಿಸಬೇಕಿದ್ದಲ್ಲಿ, ಸ್ವಲ್ಪ ಎಳನೀರು ಮತ್ತು ಸ್ವಲ್ಪ ಲಿಂಬೆಹಣ್ಣಿನ ರಸ ಬೆರಸಿ ಲೇಪಿಸಿ ಪ್ರಯತ್ನಿಸಿ.

ಸೌಂದರ್ಯ ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!

English summary

Lemon Clean Up At Home: Simple Step-by-step Guide

Keeping your skin hydrated and pampering it on a regular basis is essential to achieve a healthy and clear skin. We use different products on our face and spend both our time and money in salons to get a clear and glowing skin. But how many of you knew that you can do your own clean up at home with just a single kitchen ingredient? Yes. You read that right and it is nothing but lemon.
X
Desktop Bottom Promotion