For Quick Alerts
ALLOW NOTIFICATIONS  
For Daily Alerts

ಕೋರಿಯನ್ ಬ್ಯೂಟಿ ಸೀಕ್ರೆಟ್ಸ್ ಅನಾವರಣ! ಗ್ಲಾಸ್ ಸ್ಕಿನ್... ಇದು ನಿಜನಾ?

By Divya Pandit
|

ನೀವು ಕೊರಿಯಾದ ಮಹಿಳೆಯರನ್ನು ಎಂದಾದರೂ ನೋಡಿದ್ದೀರಾ? ಅವರನ್ನು ನೀವು ಇಷ್ಟಪಡುತ್ತೀರಾ? ನೀವು ಅವರನ್ನು ನೋಡಿದ್ದರೆ ಖಂಡಿತವಾಗಿಯೂ ಇಷ್ಟಪಡುತ್ತೀರಿ! ಏಕೆಂದರೆ ಅವರ ತ್ವಚೆಯು ಅನನ್ಯ ಹೊಳಪು ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ. ಅವರ ಚರ್ಮವು ನೈಸರ್ಗಿಕವಾಗಿಯೇ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇವರಲ್ಲಿ ವಯಸ್ಸಾದ ಮಹಿಳೆಯರು ಸಹ ಯೌವನದಲ್ಲಿ ಇರುವಾಗ ಹೊಂದುವಂತಹ ಚರ್ಮದ ಗುಣಮಟ್ಟವನ್ನು ಹೊಂದಿರುತ್ತಾರೆ. ಇದರ ಪರಿಣಾಮದಿಂದಲೇ ಅವರ ಸೌಂದರ್ಯವು ಸದಾ ಆಕರ್ಷಕವಾಗಿ ಬೆಳಗಿರುತ್ತವೆ. ಇವರ ಈ ಸೌಂದರ್ಯದ ಹಿಂದೆ ಅಡಗಿರುವುದು ಅವರ ಪುರಾತನ ಕಾಲದ ಸೌಂದರ್ಯ ಆರೈಕೆಯ ಪದ್ಧತಿ.

ಇವರ ಆರೈಕೆಯ ಕ್ರಮದಿಂದಲೇ ಅವರ ಚರ್ಮವು ಕನ್ನಡಿಯಂತೆ ಹೊಳೆಯುವುದು. ಹಾಗಾಗಿಯೇ ಕೊರಿಯಾದ ಮಹಿಳೆಯರ ತ್ವಚೆಯನ್ನು "ಗಾಜಿನ ಚರ್ಮ" ಎಂದು ಕರೆಯುತ್ತಾರೆ. ಇವರ ಈ ಸುಂದರ ಚರ್ಮಕ್ಕೆ ಯಾವೆಲ್ಲಾ ಕ್ರಮವನ್ನು ಅನುಸರಿಸುತ್ತಾರೆ? ಅವರ ಆರೈಕೆ ವಿಧಾನ ಏನು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ವಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ಈ ಮುಂದೆ ಸೂಕ್ತ ವಿವರಣೆಯೊಂದಿಗೆ ಮಾಹಿತಿಯನ್ನು ನೀಡಿದೆ... ಮುಂದೆ ಓದಿ

Korean Beauty Secret Unveiled: Glass Skin… Is It Real?

*ತೈಲ ಶುದ್ಧೀಕರಣವನ್ನು ಅನುಸರಿಸುತ್ತಾರೆ

ತಮ್ಮ ತ್ವಚೆ ಅಥವಾ ಚರ್ಮದ ಮೇಲೆ ಯಾವುದೇ ಕಲ್ಮಶಗಳಿದ್ದರೆ ಅದನ್ನು ತೆಗೆಯಲು ತೈಲ ಶುದ್ಧೀಕರಣದ ಕ್ರಮವನ್ನು ಅನುಸರಿಸುತ್ತಾರೆ. ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ಎಣ್ಣೆಯ ಮಸಾಜ್ ಮೂಲಕ ತೆಗೆಯಬಹುದು ಎನ್ನುವುದನ್ನು ಅವರು ನಂಬುತ್ತಾರೆ. ಅಲ್ಲದೆ ಅದೇ ಕ್ರಮವನ್ನು ಅನುಸರಿಸುವರು. ಇದರಿಂದ ಮುಖದ ಮೇಲಿರುವ ಕಲ್ಮಶಗಳನ್ನು ಸರಳ ಹಗೂ ನಾಜೂಕು ವಿಧಾನದಿಂದ ಮುಕ್ತಗೊಳಿಸುವರು.

*ಸತ್ತ ಜೀವಕೋಶಗಳನ್ನು ತೆಗೆಯುವುದು

ನಿತ್ಯವೂ ತ್ವಚೆಯ ಮೇಲೆ ನಿರ್ಜೀವ ಜೀವಕೋಶಗಳು ಕಾಣಿಸಿಕೊಳ್ಳುವುದು ಸಹಜ. ಇದನ್ನು ಸೂಕ್ತ ಕ್ರಮದಿಂದ ಸ್ವಚ್ಛಗೊಳಿಸಬೇಕು. ಆಗ ತ್ವಚೆಯು ಸುಂದರವಾಗಿ ಹಾಗೂ ಆರೋಗ್ಯಕರವಾಗಿ ಇರುತ್ತದೆ. ಕೊರಿಯಾನ್, ಏಷ್ಯನ್ ಮತ್ತು ಫ್ರೆಂಚ್ ಮಹಿಳೆಯರು ಈ ವಿಧಾನವನ್ನು ಅನುಸರಿಸುವರು. ಅವರಿಗೆ ಸುಂದರ ಹಗೂ ಮೃದುವಾದ ತ್ವಚೆಯನ್ನು ಹೊಂದಲು ಯಾವ ಆರೈಕೆ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಅರಿತಿದ್ದಾರೆ ಎನ್ನಲಾಗುವುದು.

*ಹಾಳೆಯ ಪೇಸ್ ಮಾಸ್ಕ್

ಹಾಳೆ/ಶೀಟ್ ಮುಖವಾಡವು ಬಹಳ ಚಾಲ್ತಿಯಲ್ಲಿರುವ ವಿಧಾನ. ಇದು ಸಂಪೂರ್ಣ ಹಾಗೂ ಹೊಸ ಪರಿಕಲ್ಪನೆ. ಹಾಳೆಯ ಮುಖವಾಡ ಎಂದರೆ ಮೂಲತಃ ಸೀರಮ್ ಎಂದು ಕರೆಯಲ್ಪಡುವ ಪೌಷ್ಟಿಕಾಂಶದ ದ್ರಾವಣದಲ್ಲಿ ನೆನೆಸಿದ ಬಟ್ಟೆ. ಇದನ್ನು ಮುಖದ ಮೇಲೆ ಸರಿಯಾಗಿ ಇರಿಸಿ ನಂತರ ತೆಗೆಯಲಾಗುವುದು. ಇದರಿಂದ ಚರ್ಮವು ಹೊಳಪು ಹಾಗೂ ಶುದ್ಧತೆಯಿಂದ ಕೂಡಿರುವುದು ಎನ್ನಲಾಗುತ್ತದೆ.

*ಐ ಕ್ರೀಮ್/ಕಣ್ಣಿನ ಕ್ರೀಮ್

ಕೊರಿಯನ್ ಮಹಿಳೆಯರು ಕಣ್ಣಿನ ಮಾಸ್ಕ್ ಅನ್ನು ಅಗತ್ಯವಾಗಿ ಬಳಸುತ್ತಾರೆ. ಅದು ಅವರಿಗೊಂದು ಆಯ್ಕೆಯ ವಿಚಾರವಲ್ಲ. ಕಣ್ಣಿನ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ. ಇದರಿಂದ ಚರ್ಮದ ಆರೈಕೆಯ ಫಲಿತಾಂಶವು ಎದ್ದು ಕಾಣುವುದು. ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಲಾಗುವ ಈ ಉತ್ಪನ್ನಗಳಿಂದ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದು.

*ಸನ್ಸ್‍ಕ್ರೀಮ್ ಬಳಕೆ

ಕೊರಿಯನ್ ಮಹಿಳೆಯರು ಹೊರಗೆ ಹೋಗುವಾಗ ಕಡ್ಡಾಯವಾಗಿ ಸನ್ಸ್ ಕ್ರೀಮ್‍ಅನ್ನು ಕಡ್ಡಾಯವಾಗಿ ಬಳಸುತ್ತಾರೆ. ಹಾಗಾಗಿ ಅವರ ತ್ವಚೆಯು ಸೂರ್ಯನ ಕಿರಣದಿಂದ ಸುಡುವುದಿಲ್ಲ. ಹಾಗಾಗಿಯೇ ಅವರ ಚರ್ಮ ಬಹಳ ಆಕರ್ಷಕವಾಗಿ ಇರುತ್ತದೆ. ಇವರ ಚರ್ಮವು ಗಾಜಿನ ಚರ್ಮ ಎನ್ನುವುದು ಏಕೆ ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಗೆ ಮುಂದೆ ನೋಡಿ...

ಗಾಜಿನ ಚರ್ಮ ಎಂದರೇನು?

ಗಾಜಿನ ಚರ್ಮ ಎಂದರೆ ಆರೋಗ್ಯಕರ, ಆಕರ್ಷ ಹಾಗೂ ಕಾಂತೀಯ ತ್ವಚೆಯನ್ನು ಬಿಂಬಿಸುವುದು ಎಂದು ಅರ್ಥ. ಈ ಬಗೆಯ ಸುಂದರ ತ್ವಚೆಯನ್ನು ಹೊಂದುವುದು ಹೇಗೆ ಎನ್ನುವುದರ ಬಗ್ಗೆ ನಿಮ್ಮಲ್ಲಿ ಗೊಂದಲ ಹಾಗೂ ಕುತೂಹಲ ವಿದ್ದರೆ ಅದಕ್ಕೆ ಸಹಾಯ ಮಾಡುವ ಸರಳವಾದ 4 ವಿಧಾನಗಳು ಇಲ್ಲಿವೆ.

*ಶುಚಿಗೊಳಿಸುವುದು ಅಥವಾ ಎರಡು ಬಾರಿ ಶುಚಿಗೊಳಿಸುವುದು

ಗಾಜಿನ ಚರ್ಮವನ್ನು ಪಡೆಯಬೇಕು ಎಂದರೆ ಚರ್ಮವನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ಅಲ್ಲದೆ ಚರ್ಮವು ಸದಾ ತೇವಾಂಶದಿಂದ ಕೂಡಿರಬೇಕು. ಹಾಗಾಗಿ ಹೆಚ್ಚು ನೀರು ಸೇವನೆ ಹಾಗೂ ಆಗಾಗ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸುತ್ತಲೇ ಇರಬೇಕು. ಆಗ ಚರ್ಮದಲ್ಲಿ ಅಡಗಿರುವ ಮಣ್ಣು ಅಥವಾ ಕಲ್ಮಶಗಳನ್ನು ತೆಗೆಯಲು ಸಹಾಯವಾಗುವುದು.

*ಟೋನರ್ ಅನ್ವಯಿಸಿ

ಚರ್ಮದ ಆರೈಕೆಗಾಗಿ ಯಾವಾಗಲೂ ಹೈಡ್ರೇಟಿಂಗ್ ಮತ್ತು ನೈಸರ್ಗಿಕ ಟೋನರ್ ಅನ್ನು ಬಳಸಬೇಕು. ನಿದ್ದೆ ಮಾಡುವ ಮೊದಲು ಮುಖವನ್ನು ಚೆನ್ನಾಗಿ ತೊಳೆದು ಟೋನರ್ ಅನ್ನು ಅನ್ವಯಿಸಿ. ಆಗ ಚರ್ಮವು ತೇವ ಪೂರ್ಣವಾಗಿರುತ್ತದೆ.

*ಮಾಯಿಶ್ಚರೈಸರ್ ಎಸೆನ್ಸಿಯಲ್

ಟೋನರ್ ಅನ್ವಯಿಸಿದ ನಂತರ ಮಾಯಿಶ್ಚರೈಸರ್ ಎಸೆನ್ಸಿಯಲ್ ಅನ್ನು ಅನ್ವಯಿಸಬೇಕು. ಅದಕ್ಕಾಗಿ ನೀವು ಒಳ್ಳೆಯ ಮತ್ತು ನೈಸರ್ಗಿಕ ಮಾಯಿಶ್ಚರೈಸರ್ ಆಯ್ಕೆ ಮಾಡಿಕೊಳ್ಳಬೇಕಾಗುವುದು. ಗಾಜಿನ ಚರ್ಮ ಪಡೆಯಲು ಮಾಯಿಶ್ಚರೈಸರ್ ಬಹಳ ಮುಖ್ಯ ಎನ್ನುವುದನ್ನು ಮರೆಯಬಾರದು. ಮಾಯಿಶ್ಚರೈಸರ್ ತ್ವಚೆಯಲ್ಲಿ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುವುದು. ಅಲ್ಲದೆ ಚರ್ಮವು ಮೃದು ಹಾಗೂ ಕೋಮಲವಾಗಿರುವಂತೆ ಮಾಡುತ್ತದೆ.

*ಎಸ್‍ಪಿಎಫ್ ಅನ್ವಯಿಸಿ

ಸೂರ್ಯನ ಕಿರಣಕ್ಕೆ ತೆರೆದುಕೊಳ್ಳುವ ಮುನ್ನ ಎಸ್‍ಪಿಎಫ್ ಕ್ರೀಮ್ ಅನ್ನು ಅನ್ವಯಿಸುವುದನ್ನು ಮರೆಯಬಾರದು. ಇದರಿಂದ ದಿನನಿತ್ಯ ಸೂರ್ಯನ ಕಿರಣದಿಂದ ಉಂಟಾಗುವ ಹಾನಿಯು ಚರ್ಮದ ಮೇಲೆ ಉಂಟಾಗದು. ಕೊರಿಯನ್ ಮಹಿಳೆಯರು ಈ ಕ್ರಮವನ್ನು ನಿತ್ಯ ಅನ್ವಯಿಸುವುದರಿಂದ ತಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವರು. ಅಲ್ಲದೆ ಗಾಜಿನಂತಹ ಚರ್ಮವನ್ನು ಹೊಂದುವುದರ ಮೂಲಕ ಆಕರ್ಷಕ ಸೌಂದರ್ಯವನ್ನು ಪಡೆದುಕೊಳ್ಳುವರು.

English summary

Korean Beauty Secret Unveiled: Glass Skin… Is It Real?

Have you ever seen a Korean woman? Like in person? Well, if you have, you might exactly know what we mean by Korean beauty! Korean women have a unique glow... they are naturally beautiful. Well, for that matter, every woman is beautiful. But the natural glow these Korean women possess is something we need to take a note of. But what makes them stand apart is the age-old beauty secrets that they have been following for generations. Korean women, generally, incorporate some age-old skin care tips in their beauty regime.
Story first published: Friday, August 24, 2018, 8:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more