For Quick Alerts
ALLOW NOTIFICATIONS  
For Daily Alerts

ಹುಬ್ಬೇರಿಸುವಂತೆ ಮಾಡುವ ಸೌಂದರ್ಯ ನೀಡುವುದು ದಾಲ್ಚಿನ್ನಿ

|

ದಾಲ್ಚಿನ್ನಿ ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಫಂಗಸ್‍ಗಳನ್ನು ಸುಲಭವಾಗಿ ನಿವಾರಿಸುವುದು. ಕಲ್ಮಶ ರಂಧ್ರಗಳನ್ನು ಶುದ್ಧೀಕರಿಸುವುದು, ಉರಿಯೂತವನ್ನು ಕಡಿಮೆ ಮಾಡುವುದು, ಮೊಡವೆಗಳ ನಿವಾರಣೆ ಹೀಗೆ ಅನೇಕ ಬಗೆಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವ ಶಕ್ತಿಯನ್ನು ಇದು ಒಳಗೊಂಡಿದೆ. ಇದರಲ್ಲಿ ಮೆಗ್ನೀಷಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಚರ್ಮದ ಕೋಶಗಳನ್ನು ಪುನರ್ ಉತ್ಪಾದಿಸುವ ಗುಣವನ್ನು ಒಳಗೊಂಡಿದೆ. ಇದು ಎಲ್ಲಾ ಚರ್ಮದವರಿಗೂ ಆಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇದನ್ನು ಪರೀಕ್ಷಿಸಿದ ಬಳಿಕ ತ್ವಚೆಗೆ ಅನ್ವಯಿಸಿಕೊಳ್ಳುವುದು ಸೂಕ್ತ.

ಆರೋಗ್ಯ ಟಿಪ್ಸ್: ಚಿಟಿಕೆಯಷ್ಟು 'ದಾಲ್ಚಿನ್ನಿ' ಪುಡಿಯ ಜಬರ್ದಸ್ತ್ ಪವರ್

ದಾಲ್ಚಿನ್ನಿಯ ಸೂಕ್ತ ಉಪಯೋಗದಿಂದ ಚರ್ಮವನ್ನು ಹೊಗುರಗೊಳಿಸುವುದು, ಬಿಳುಪಾದ ತ್ವಚೆಯನ್ನು ಪಡೆಯಲು, ಸೂಕ್ಷ್ಮಾಣುಗಳಿಂದ ರಕ್ಷಣೆ ಪಡೆದುಕೊಳ್ಳಬಹುದು. ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನವಾದ ದಾಲ್ಚಿನ್ನಿಯಿಂದ ಇನ್ನಷ್ಟು ಸೌಂದರ್ಯ ವರ್ಧಕ ಉಪಯೋಗಗಳನ್ನು ನೀವು ತಿಳಿದುಕೊಳ್ಳಬೇಕು ಮತ್ತು ಅದರ ಉಪಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ನೀಡಿರುವ ವಿವರಣೆಯನ್ನು ಅರಿಯಿರಿ...

ಮುಖದ ಪೌಡರ್ ಆಗಿ ಬಳಕೆ

ಮುಖದ ಪೌಡರ್ ಆಗಿ ಬಳಕೆ

- 2 ಟೀಚಮಚ ದಾಲ್ಚಿನ್ನಿ ಪುಡಿಯನ್ನು 3 ಟೀಚಮಚ ಕಾರ್ನ್‍ಸ್ಟ್ರಾಚ್ ಪುಡಿಗೆ ಸೇರಿಸಿ.

- ಬಳಿಕ 5 ಹನಿಯಷ್ಟು ಬಾದಾಮಿ ಎಣ್ಣೆಯನ್ನು ಸೇರಿಸಿ, ಹಳೆಯ ಕಾಂಪ್ಯಾಕ್ಟ್ ಡಬ್ಬಕ್ಕೆ ವರ್ಗಾಯಿಸಿ ಒತ್ತಿಡಿ.

- ಈ ಪೌಡರ್ ಮಿಶ್ರಣವನ್ನು ನಿಮಗೆ ಅಗತ್ಯವಿರುವಾಗ ಮುಖಕ್ಕೆ ಅನ್ವಯಿಸಿ.

- ಗಣನೀಯವಾಗಿ ಬಳಸುವುದರಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಮೊಡವೆ ನಿವಾರಕ

ಮೊಡವೆ ನಿವಾರಕ

- ಒಂದು ಟೇಬಲ್ ಚಮಚ ದಾಲ್ಚಿನ್ನಿ ಪುಡಿಗೆ ಸಮ ಪ್ರಮಾಣದ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಕ್ರಮ ಅನ್ವಯಿಸುವುದರಿಂದ ಮೊಡವೆ ಬಹುಬೇಗ ನಿವಾರಣೆ ಹೊಂದುವುದು.

ಕೆಟ್ಟ ಉಸಿರಾಟದ ನಿಯಂತ್ರಣ

ಕೆಟ್ಟ ಉಸಿರಾಟದ ನಿಯಂತ್ರಣ

- ಕೆಟ್ಟ ಉಸಿರಾಟದ ಸಮಸ್ಯೆಯಿದ್ದರೆ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ,ಮಿಶ್ರಗೊಳಿಸಿ.

- ಮಿಶ್ರಣದ ನೀರಿನಿಂದ ಬಾಯಿ ಮುಕ್ಕಳಿಸಿ ಅಥವಾ ಗಂಟಲಿನಲ್ಲಿ ಇಟ್ಟುಕೊಂಡು ನಂತರ ಉಳುಗಿ.

- ಹೀಗೆ ಮಾಡುವುದರಿಂದ ದೀರ್ಘ ಸಮಯದ ವರೆಗೆ ಬಾಯಿ ವಾಸನೆ ಬರದಂತೆ ತಡೆಯಬಹುದು.

ಪಾದಗಳ ಆರೈಕೆ

ಪಾದಗಳ ಆರೈಕೆ

- ಒಂದು ಕಪ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.

- ಅದಕ್ಕೆ 5 ಹನಿ ನಿಂಬೆ ರಸ, 5 ಹನಿ ಲ್ಯಾವೆಂಡರ್ ಎಣ್ಣೆ, 1 ಟೀಚಮಚ ಜೇನುತುಪ್ಪ, 1 ಟೇಬಲ್ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣದಲ್ಲಿ 15 ನಿಮಿಷಗಳ ಕಾಲ ಪಾದಗಳನ್ನು ಇಟ್ಟುಕೊಳ್ಳಿ.

- ಪಾದಗಳ ಚರ್ಮವು ಮೃದುವಾದ ನಂತರ ಕಾಲನ್ನು ಹೊರ ತೆಗೆಯಿರಿ.

- ಬಳಿಕ ಪಾದಗಳನ್ನು ಉಜ್ಜುವ ಸ್ಕ್ರಬ್ಬರ್ ನಿಂದ ಉಜ್ಜಿ.

- ನಯವಾದ ಚರ್ಮದಿಂದ ಪಾದಗಳು ಆಕರ್ಷಣೆಯಿಂದ ಕೂಡಿರುವುದು.

ನೆತ್ತಿಯ ಶುದ್ಧೀಕರಣಕ್ಕೆ

ನೆತ್ತಿಯ ಶುದ್ಧೀಕರಣಕ್ಕೆ

- 2 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಚ್ಚಗೆ ಮಾಡಿ.

- ಸ್ವಲ್ಪ ಸಮಯ ಆರಲು ಬಿಡಿ.

- ಬಳಿಕೆ ಟೀಚಮಚ ದಾಲ್ಚಿನ್ನಿ ಪುಡಿ, 10 ಹನಿ ಬಾದಾಮಿ ಎಣ್ಣೆ, 10 ಹನಿ ದ್ರಾಕ್ಷಿ ಬೀಜದ ಎಣ್ಣೆ ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಮಸಾಜ್ ಮಾಡಿ.

- 15 ನಿಮಿಷಗಳ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಸ್ವಚ್ಛಗೊಳಿಸಿ.

ಉಬ್ಬಿಕೊಂಡಂತ ತುಟಿಗೆ

ಉಬ್ಬಿಕೊಂಡಂತ ತುಟಿಗೆ

ದಾಲ್ಚಿನ್ನಿಯಲ್ಲಿ ಉತ್ಕರ್ಷಣ ನಿರೋಧಕ ಹೊಂದಿರುವುದರಿಂದ ಇದನ್ನು ತುಟಿಗೆ ಅನ್ವಯಿಸುವುದರಿಂದ ಬಹುಬೇಗ ಕೆಂಪು ಬಣ್ಣ ಹಾಗೂ ಕೊಬ್ಬಿನಿಂದ ಕೂಡಿರುವಂತೆ ಮಾಡುವುದು.

- ಒಂದು ಟೀ ಚಮಚ ಪೆಟ್ರೋಲಿಯಮ್ ಜೆಲ್ಲಿಗೆ ಒಂದು ಚಿಟಕಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ತುಟಿಗೆ ಅನ್ವಯಿಸಿ 15 ನಿಮಿಷಗಳ ಕಾಲ ಆರಲು ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ಸ್ವಚ್ಛಗೊಳಿಸಿ.

- ಇದು ಸ್ವಲ್ಪ ಸುಡುವಂತಹ ಸಂವೇದನೆ ಉಂಟಾಗುವುದು. ಅತಿಯಾಗಿ ಸುಡುವಂತಹ ಸಂವೇದನೆ ಉಂಟಾದರೆ ತಕ್ಷಣವೇ ಸ್ವಚ್ಛಗೊಳಿಸಿ.

ನೈಸರ್ಗಿಕ ಬ್ರೌನ್ಜರ್

ನೈಸರ್ಗಿಕ ಬ್ರೌನ್ಜರ್

- ನುಣುಪಾದ ದಾಲ್ಚಿನ್ನಿ ಪೌಡರ್ ಅನ್ನು ಬೇಬಿ ಪೌಡರ್ ಜೊತೆ ಸೇರಿಸಿ.

- ನಿಮಗೆ ಬ್ರೌನ್ಜರ್ ಯಾವ ಬಣ್ಣದವರೆಗೆ ಅಗತ್ಯವಿದೆಯೋ ಅಲ್ಲಿಯ ವರೆಗೂ ದಾಲ್ಚಿನ್ನಿ ಪುಡಿಯನ್ನು ಮಿಶ್ರಮಾಡಿ.

- ಬಳಿಕ ನಿಮಗೆ ಅಗತ್ಯವಿರುವಾಗ ಅನ್ವಯಿಸಿ.

ಕೀಟಗಳ ಕಚ್ಚುವಿಕೆ

ಕೀಟಗಳ ಕಚ್ಚುವಿಕೆ

- ದಾಲ್ಚಿನ್ನಿ ಆಂಟಿಬ್ಯಾಕ್ಟೀರಿಯಾ ಗುಣವನ್ನು ಒಳಗೊಂಡಿದೆ.

- ಕೀಟಗಳು ಕಚ್ಚಿದ ಜಾಗದಲ್ಲಿ ದಾಲ್ಚಿನ್ನಿ ಪುಡಿಯನ್ನು ಅನ್ವಯಿಸಿ.

- ಸ್ವಲ್ಪ ಸಮಯದಲ್ಲಿಯೇ ನೋವು ನಿವಾರಣೆಯಾಗುವುದು.

ಬಾಡಿ ಲೋಷನ್

ಬಾಡಿ ಲೋಷನ್

- 1 ಟೇಬಲ್ ಚಮಚ ಶಿಯಾ ಬೆಣ್ಣೆ, 1/2 ಕಪ್ ತೆಂಗಿನ ಎಣ್ಣೆ, 10 ಹನಿ ಬಾದಾಮಿ ಎಣ್ಣೆ, 10 ಹನಿ ದ್ರಾಕ್ಷಿ ಬೀಜದ ಎಣ್ಣೆ, 2 ವಿಟಮಿನ್ ಇ ಮಾತ್ರೆಯ ಎಣ್ಣೆ, 1 ಟೀಚಮಚ ದಾಲ್ಚಿನ್ನಿ ಪುಡಿ ಸೇರಿಸಿ, ಸಣ್ಣ ಉರಿಯಲ್ಲಿ ಬಿಸಿಮಾಡಿ.

- 5 ನಿಮಿಷಗಳ ಕಾಲ ವಿಸ್ಕಿಂಗ್/ತಿರುವಿ, ಉರಿಯನ್ನು ಆರಿಸಿ.

- ಮಿಶ್ರಣವು ತಣ್ಣಗಾದ ಮೇಲೆ ಫ್ರಿಜ್‍ನಲ್ಲಿ ಇರಿಸಿ, ಗಟ್ಟಿಗೊಳಿಸಿ.

- ಗಟ್ಟಿ ಅಥವಾ ಘನ ಸ್ಥಿತಿಗೆ ತಿರುಗಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

- ನಿಯಮಿತವಾಗಿ ಈ ಮಿಶ್ರಣವನ್ನು ಬಾಡಿ ಲೋಷನ್ ರೂಪದಲ್ಲಿ ಅನ್ವಯಿಸುವುದರಿಂದ ಚರ್ಮವು ಆರೋಗ್ಯ ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ.

ಮುಖದ ಮೇಲೆ ಬಿದ್ದಿರುವ ಗೆರೆಗಳು

ಮುಖದ ಮೇಲೆ ಬಿದ್ದಿರುವ ಗೆರೆಗಳು

ಎರಡು ಚಮಚ ಆಲಿವ್ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ ಜತೆಗೆ ದಾಲ್ಚಿನ್ನಿ ಹುಡಿಯನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಂಡರೆ, ಮುಖದ ಮೇಲೆ ಬಿದ್ದಿರುವ ಗೆರೆಗಳು ಮಾಯವಾಗುತ್ತದೆ. ದಾಲ್ಚಿನ್ನಿಯು ಚರ್ಮವು ದಷ್ಟಪುಷ್ಟವಾಗಿ ಕಾಣುವಂತೆ ಮಾಡುವುದು.

ಚರ್ಮದ ಕಿರಿಕಿರಿಗೆ

ಚರ್ಮದ ಕಿರಿಕಿರಿಗೆ

ಮುಖವನ್ನು ಹೊರತುಪಡಿಸಿ ನಿಮ್ಮ ಚರ್ಮದಲ್ಲಿ ಉರಿಯೂತ ಅಥವಾ ಕೆರೆತವಿದ್ದರೆ ಅದಕ್ಕೆ ದಾಲ್ಚಿನ್ನಿ ಹುಡಿ ಒಳ್ಳೆಯ ಔಷಧಿ. ಚರ್ಮದ ವೈದ್ಯರಿಂದ ಹಸಿರು ನಿಶಾನೆ ಸಿಕ್ಕಿದರೆ ಆಗ ಒಂದು ಚಮಚ ದಾಲ್ಚಿನ್ನಿ ಹುಡಿ ಮತ್ತು ಜೇನು ಬೆರೆಸಿ ಕಿರಿಕಿರಿಯಾಗುವ ಜಾಗಕ್ಕೆ ಹಚ್ಚಿಕೊಳ್ಳಿ.

ಸ್ಕ್ರಬ್ ಮಾಡಲು

ಸ್ಕ್ರಬ್ ಮಾಡಲು

ಒಂದು ಚಮಚ ದಾಲ್ಚಿನ್ನಿ ಹುಡಿ, ಎರಡು ಲೋಟ ಕಾಫಿ ಹುಡಿ, ½ ಕಪ್ ಸಮುದ್ರ ಉಪ್ಪು, 2-3 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಸ್ಕ್ರಬ್ ಮಾಡಿದರೆ ದೇಹವು ಚೈತನ್ಯವನ್ನು ಪಡೆಯುವುದು.

English summary

Ingenious Beauty Hacks Using Cinnamon!

Cinnamon has strong antibacterial and antifungal properties, which cleanse the pores of impurities, reduce inflammation and dry out acne. It also contains minerals, in small quantities, like magnesium, iron, calcium and potassium, which accelerate the skin's healing process and regenerate new skin cells. Added to this, cinnamon is a powerhouse of antioxidants which lighten, brighten and tone the skin cells. Thank us later, and try this first. While cinnamon can bring about positive results, it is not suited for all skin types.
X
Desktop Bottom Promotion