For Quick Alerts
ALLOW NOTIFICATIONS  
For Daily Alerts

ತುಂಬಾ ಕಡಿಮೆ ಖರ್ಚಿನಲ್ಲಿ ಸುಂದರವಾಗಿ ಕಾಣಲು ಇಲ್ಲಿದೆ ನೋಡಿ ಸರಳ ಟಿಪ್ಸ್

|

ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಇದು ಮಹಿಳೆಯೇ ಆಗಿರಲಿ ಅಥವಾ ಪುರುಷರೇ ಆಗಿರಲಿ ಸುಂದರವಾಗಿ ಕಾಣಬೇಕೆಂಬ ಆಸೆಯು ಇದ್ದೇ ಇರುವುದು. ಮಹಿಳೆಯರಲ್ಲಿ ಮಾತ್ರ ಹೆಚ್ಚೇ ಎನ್ನಬಹುದು. ಇಂತಹ ಬಯಕೆ ಈಡೇರಿಸಿಕೊಳ್ಳಲು ಮಹಿಳೆಯರು ಇನ್ನಿಲ್ಲದಂತೆ ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವರು. ಇಷ್ಟು ಮಾತ್ರವಲ್ಲದೆ ವಾರಕ್ಕೊಮ್ಮೆಯಾದರೂ ಬ್ಯೂಟಿ ಪಾರ್ಲರ್ ಗಳಿಗೆ ತೆರಳಿ ಅಲ್ಲಿ ಅಂದ ಹೆಚ್ಚಿಸಿಕೊಳ್ಳುವರು.

ಇದಕ್ಕಾಗಿ ತಮ್ಮ ಬಜೆಟ್ ನಲ್ಲಿ ಸಿಂಹಪಾಲನ್ನು ಮೀಸಲಿಡುವರು. ಇಂದಿನ ದುಬಾರಿ ದುನಿಯಾದಲ್ಲಿ ಮೇಕಪ್ ಗೆ ಖರ್ಚು ಮಾಡುವಷ್ಟು ಹಣವನ್ನು ಮಹಿಳೆಯರು ಬೇರೆ ಯಾವುದಕ್ಕೂ ಮಾಡವಲ್ಲವೆಂದರೆ ಅದು ಅತಿಶಯೋಕ್ತಿಯಾಗದು. ತನ್ನ ತ್ವಚೆಯು ಸುಂದರವಾಗಿ ಕಾಣಬೇಕು ಎಂದು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ದುಬಾರಿ ಖರ್ಚು ಮಾಡುವ ಬದಲು ಕೆಲವೊಂದು ಮನೆಯಲ್ಲೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ನೀವು ಅತಿ ಕಡಿಮೆ ವೆಚ್ಚದಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಂತಹ ಸೌಂದರ್ಯವರ್ಧಕಗಳು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಕೂಡ ಬೀರದು. ಇಂತಹ ಅಗ್ಗದ, ಪರಿಣಾಮಕಾರಿ ಹಾಗೂ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ಕೆಲವೊಂದು ಸೌಂದರ್ಯವರ್ಧಕಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಸೌಂದರ್ಯವರ್ಧಿಸಿಕೊಳ್ಳಿ.

ಒತ್ತಿ ತೆಗೆಯಿರಿ

ಒತ್ತಿ ತೆಗೆಯಿರಿ

ನಾವು ಇಲ್ಲಿ ಮುಖದ ಮೇಲಿರುವಂತಹ ಮೊಡವೆಗಳನ್ನು ಒತ್ತಿ ತೆಗೆಯಿರಿ ಎಂದು ಹೇಳುತ್ತಿಲ್ಲ. ನೀವು ಪ್ರತಿನಿತ್ಯ ಬಳಸುವಂತಹ ಟೂಥ್ ಪೇಸ್ಟ್ ನ್ನು ಒತ್ತಿ ತೆಗೆದು, ಅದನ್ನು ಮುಖದ ಮೇಲಿರುವಂತಹ ಮೊಡವೆ ಅಥವಾ ಬೊಕ್ಕೆಗೆ ಹಚ್ಚಿರಿ. ಇದರಿಂದ ಮೊಡವೆ ಮತ್ತು ಬೊಕ್ಕೆಗಳು ಮಾಯವಾಗುವುದು. ಮೊಡವೆ ಹಾಗೂ ಬೊಕ್ಕೆಗಳು ಮುಖದ ಸೌಂದರ್ಯ ಕೆಡಿಸುವುದು.

Most Read: ಕೈಗೆ ವಾಚು ಕಟ್ಟುವ ಭಾಗದಲ್ಲಿ ಕಾಣಿಸುವ ಮಣಿಕಟ್ಟಿನ ರೇಖೆಗಳು ಏನು ಹೇಳುತ್ತವೆ?

ಸ್ಕ್ರಬ್ ಮಾಡಿ

ಸ್ಕ್ರಬ್ ಮಾಡಿ

ಮೇಕಪ್ ಮಾಡಿಕೊಂಡು ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಮಯ ಹಾಗೂ ಹಣವು ಬೇಕಾಗುತ್ತದೆ. ಇದರ ಬದಲಿಗೆ ನೀವು ಸುಲಭವಾಗಿ ಸ್ಕ್ರಬ್ ಮಾಡಬೇಕು. ದಾಲ್ಚಿನಿ ಎಣ್ಣೆ ಮತ್ತು ಸ್ವಲ್ಪ ಸಕ್ಕರೆ ತೆಗೆದುಕೊಂಡು ಮಿಶ್ರಣ ಮಾಡಿ ಅದರಿಂದ ಸ್ಕ್ರಬ್ ಮಾಡಿದರೆ ನೀವು ಒಳ್ಳೆಯ ರೀತಿಯಿಂದ ತುಟಿ ಹಾಗೂ ಮುಖವನ್ನು ಸ್ಕ್ರಬ್ ಮಾಡಬಹುದು. ಇದರಿಂದ ಮುಖದ ಮೇಲಿರುವಂತಹ ಸತ್ತ ಚರ್ಮದ ಕೋಶಗಳು ಎದ್ದು ಬರುವುದು. ದಾಲ್ಚಿನ್ನಿಯು ನಿಮಗೆ ಕಾಂತಿ ಮತ್ತು ತೇವಾಂಶ ನೀಡುವುದು. ಇದನ್ನು ನೀವು ಪರೀಕ್ಷೆ ಮಾಡಿ.

ಅಡುಗೆ ಸೋಡಾ

ಅಡುಗೆ ಸೋಡಾ

ನೀವು ಹೆಚ್ಚಾಗಿ ಸೆಲ್ಫಿ ತೆಗೆದುಕೊಳ್ಳುವಾಗ ನಗಬೇಕಾಗುತ್ತದೆ. ಕೇವಲ ಇದಕ್ಕೆ ಮಾತ್ರವಲ್ಲದೆ ಯಾರಾದರೂ ಪರಿಚಿತರು ಸಿಕ್ಕಿದರೂ ಆಗ ನಗಬೇಕು. ಈ ಸಂದರ್ಭದಲ್ಲಿ ಹಲ್ಲುಗಳು ಎದ್ದು ಕಾಣುವುದು. ಇಲ್ಲಿ ಹಲ್ಲುಗಳ ಹೊಳಪು ತುಂಬಾ ಪ್ರಾಮುಖ್ಯತೆ ಪಡೆಯುವುದು. ಇದಕ್ಕಾಗಿ ನೀವು ಹಲವಾರು ಟೂಥ್ ಪೇಸ್ಟ್ ಗಳನ್ನು ಬಳಸಿರಬಹುದು. ಇಲ್ಲಿ ನೀವು ಒಂದು ಸಲ ಅಡುಗೆಸೋಡಾ ಬಳಸಿ ನೋಡಿ. ಆಗ ನಿಮಗೆ ಹಲ್ಲುಗಳು ಮುತ್ತಿನಂತೆ ಹೊಳೆಯುವುದು ಕಂಡುಬರುವುದು. ಒದ್ದೆ ಬ್ರಷ್ ನ್ನು ನೀವು ಅಡುಗೆ ಸೋಡಾದಲ್ಲಿ ಮುಳುಗಿಸಿ ಮತ್ತು ಅದನ್ನು ಸಾಮಾನ್ಯದಂತೆ ಹಲ್ಲುಜ್ಜಿಕೊಳ್ಳಿ. ಇದರ ಬಳಿಕ ನೀರು ಹಾಕಿ ಬಾಯಿ ಮುಕ್ಕಳಿಸಿಕೊಳ್ಳಿ. ಇದನ್ನು ನೀವು ನಿಯಮಿತವಾಗಿ ಮಾಡಿದರೆ ಹಲ್ಲುಗಳು ಹೊಳೆಯುವುದರಲ್ಲಿ ಸಂಶಯವೇ ಇಲ್ಲ.

ಚಮಚದ ಚಿಕಿತ್ಸೆ

ಚಮಚದ ಚಿಕಿತ್ಸೆ

ಚಮಚವು ಕೇವಲ ತಿನ್ನಲು ಮಾತ್ರವಲ್ಲ ಎಂದು ನಿಮಗೆ ತಿಳಿದಿದೆಯಾ? ಹೌದು, ಇದರಿಂದ ಊದಿಕೊಂಡಿರುವ ಕಣ್ಣುಗಳನ್ನು ಕೂಡ ಸರಿಪಡಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಮೂರರಿಂದ ನಾಲ್ಕು ಚಮಚಗಳನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ. 10-15 ನಿಮಿಷ ಕಾಲ ಚಮಚವು ಪ್ರಿಡ್ಜ್ ನಲ್ಲಿ ಇರಲಿ. ಊದಿಕೊಂಡಿರುವ ಕಣ್ಣುಗಳ ಕೆಳಗಡೆ ನೀವು ಈ ಚಮಚವನ್ನು ಇಡಿ. ಒಂದು ತನ್ನ ತಂಪನ್ನು ಕಳಕೊಂಡ ಬಳಿಕ ಮತ್ತೊಂದನ್ನು ಪ್ರಿಡ್ಜ್ ನಿಂದ ತೆಗೆದು ಆ ಭಾಗಕ್ಕೆ ಇಟ್ಟುಬಿಡಿ. ನಿಮಗೆ ತೃಪ್ತಿಯಾಗುವ ತನಕ ಹೀಗೆ ಮಾಡಿ. ಫಲಿತಾಂಶ ಖಂಡಿತವಾಗಿಯೂ ಸಿಗುವುದು.

Most Read: ತ್ವಚೆಯ ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು

ವ್ಯಾಕ್ಸಿಂಗ್

ವ್ಯಾಕ್ಸಿಂಗ್

ಮಹಿಳೆಯರ ಮುಖದಲ್ಲಿ ಕೂದಲು ಬಂದರೆ ಅದು ಸೌಂದರ್ಯಕ್ಕೆ ಕಪ್ಪುಚುಕ್ಕೆ ಇದ್ದಂತೆ. ಇದರಿಂದ ಮಹಿಳೆಯರ ಮುಖವನ್ನು ಕೂದಲಿನಿಂದ ಮುಕ್ತವಾಗಿ ಇಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಸಲ ನಮಗೆ ಕಚೇರಿ ಹಾಗೂ ವ್ಯಸ್ತ ವೇಳಾಪಟ್ಟಿಯಿಂದ ಸಮಯವೇ ಸಿಗುವುದಿಲ್ಲ. ದಕ್ಕಾಗಿ ನಾವು ನಿಮಗೆ ತುಂಬಾ ಸರಳವಾಗಿರುವಂತಹ ವಿಧಾನವನ್ನು ಹೇಳಿಕೊಡಲಿದ್ದೇವೆ. ಇದನ್ನು ನೀವು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದು ಮುಖದ ಮೇಲಿನ ಕೂದಲಿನ ಸಮಸ್ಯೆಗೆ ತುಂಬಾ ಲಾಭಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕೆ ನೀವು ವ್ಯಯಿಸಬೇಕಾಗಿರುವುದು ಅರ್ಧ ಗಂಟೆ ಮತ್ತು ಕೆಲವು ಚಮಚ ಸಕ್ಕರೆ ಮಾತ್ರ. ಎರಡು ಚಮಚ ಸಕ್ಕರೆ ತೆಗೆದುಕೊಳ್ಳಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನೀರು. ಎಲ್ಲವನ್ನು ಸರಿಯಾಗಿ ಬೆರೆಸಿಕೊಳ್ಳಿ. ಎಲ್ಲವೂ ಸರಿಯಾಗಿ ಮಿಶ್ರಣವಾದ ಬಳಿಕ ನೀವು ಇದನ್ನು ತಣ್ಣಗಾಗಲು ಬಿಡಿ. ಇದನ್ನು ನೀವು ಮುಖದ ಮೇಲೆ ಹಚ್ಚಿಕೊಳ್ಳಿ. ಇದರ ಬಳಿಕ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸಿಕೊಂಡು ವಿರುದ್ಧ ದಿಕ್ಕಿನಿಂದ ಕೂದಲನ್ನು ತೆಗೆಯಿರಿ. ಇಷ್ಟು ಮಾತ್ರ ಮಾಡಿದರೆ ಸಾಕು. ಇದು ಅನಗತ್ಯ ಕೂದಲು ತೆಗೆಯುವುದು. ಇಷ್ಟು ಮಾತ್ರವಲ್ಲದೆ ಸುಂದರ ಹಾಗೂ ನಯವಾದ ಚರ್ಮವನ್ನು ನೀಡುವುದು. ಇಷ್ಟು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ಇದು ತೆಗೆಯುವುದು.

English summary

Inexpensive remedies for glowing skin

Everyone craves flawless skin and that youthful glow. After all, there’s nothing wrong with wanting to look your best. But daily facials and salon visits aren’t exactly economical, are they? Fortunately for you, there are certain quick-fix beauty tricks that are definitely a step in the direction of flawless perfection.Here are some simple, but more importantly, inexpensive tips and tricks that every girl should know
X
Desktop Bottom Promotion