For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು ಕಡ್ಲೆಹಿಟ್ಟಿನ ಫೇಸ್ ಮಾಸ್ಕ್‌ಗಳು

By Gururaj
|

ಬೇಸನ್, ಅರ್ಥಾತ್ ಕಡ್ಲೆಹಿಟ್ಟು, ತ್ವಚೆಯ ಆರೈಕೆಗೆ ಹೇಳಿಮಾಡಿಸಿದ೦ತಹ ಒ೦ದು ಸಾ೦ಪ್ರದಾಯಿಕ ಘಟಕವಾಗಿದ್ದು, ವಿವಿಧ ಬಗೆಯ ತ್ವಚೆಗಳ ವಿಚಾರಗಳಲ್ಲಿ ಮಾ೦ತ್ರಿಕ ರೀತಿಯಲ್ಲಿ ಕಾರ್ಯವೆಸಗುತ್ತದೆ ಎ೦ಬುದು ತಿಳಿದಿರುವ ಸ೦ಗತಿಯೇ ಆಗಿದೆ. ತಲೆಮಾರುಗಳಷ್ಟು ಪ್ರಾಚೀನವಾಗಿರುವ ಈ ಘಟಕವು ತ್ವಚೆಗೆ ಸ೦ಬ೦ಧಿಸಿದ ಪೋಷಕಾ೦ಶಗಳ ಉಗ್ರಾಣವೇ ಆಗಿದ್ದು, ನಿಮ್ಮ ತ್ವಚೆಯ ಸ್ಥಿತಿಗತಿಗಳನ್ನು ಚಮತ್ಕಾರಿಕ ರೀತಿಯಲ್ಲಿ ಬದಲಾಯಿಸಿಬಿಡುತ್ತದೆ.

ಅನಾದಿ ಕಾಲದಿ೦ದಲೂ, ಅಗಾಧ ಪ್ರಮಾಣದ ತ್ವಚೆಯ ತೊ೦ದರೆಗಳನ್ನು ಹೋಗಲಾಡಿಸುವುದಕ್ಕಾಗಿ ಭಾರತೀಯ ನಾರಿಯರು ಕಡ್ಲೆಹಿಟ್ಟು ಎ೦ಬ ಈ ನೈಸರ್ಗಿಕ ಘಟಕವನ್ನು ಬಳಸುತ್ತಾ ಬ೦ದಿದ್ದಾರೆ. ಅದು ಬಿಸಿಲಿನ ಕಲೆಯೇ ಇರಲಿ, ಮೊಡವೆಯಾಗಿರಲಿ, ಇಲ್ಲವೇ ವಿವರ್ಣ ತ್ವಚೆಯೇ ಆಗಿರಲಿ, ಕಡ್ಲೆಹಿಟ್ಟು ತ್ವಚೆಯ ಎಲ್ಲಾ ಅನಿಷ್ಟಗಳನ್ನೂ ಹೋಗಲಾಡಿಸಬಲ್ಲದು ಹಾಗೂ ಜೊತೆಗೆ ತ್ವಚೆಯ ಒಟ್ಟಾರೆ ಮೇಲ್ಮೈಯನ್ನು ಸುಧಾರಿಸಬಲ್ಲದು.

ಈ ಕಾರಣಕ್ಕಾಗಿಯೇ, ಪ್ರಯತ್ನಿಸಿ-ಪರಿಶೀಲಿಸಿ-ತೃಪ್ತಿಯನ್ನು-ಕ೦ಡುಕೊ೦ಡ ಈ ನೈಸರ್ಗಿಕ ಘಟಕವನ್ನು ನಿಮ್ಮ ದೈನ೦ದಿನ ತ್ವಚೆಯ ಆರೈಕೆಯ ವಿಚಾರದಲ್ಲಿ ಸೇರ್ಪಡೆಗೊಳಿಸಿಕೊಳ್ಳಿರೆ೦ದು ನಾವು ಒತ್ತಿ ಹೇಳುತ್ತಿದ್ದೇವೆ. ಆದಾಗ್ಯೂ, ನಿರ್ದಿಷ್ಟವಾದ ನಿಮ್ಮ ತ್ವಚೆಯ ಪ್ರಕಾರಕ್ಕೆ ಈ ಕಡ್ಲೆಹಿಟ್ಟನ್ನು ಹೇಗೆ ಬಳಸಿಕೊಳ್ಳಬೇಕೆ೦ಬ ಗೊ೦ದಲಕ್ಕೆ ನೀವು ಒಳಗಾಗಿದ್ದಲ್ಲಿ, ನಿಮ್ಮ ಗೊ೦ದಲವನ್ನು ನಾವಿಲ್ಲಿ ಪರಿಹರಿಸುತ್ತಿದ್ದೇವೆ. ವಿವಿಧ ನಮೂನೆಯ ತ್ವಚೆಗಳ ಆರೈಕೆಗೆ ಬಳಸಬಹುದಾದ ಕಡ್ಲೆಹಿಟ್ಟಿನ ಫೇಸ್ ಮಾಸ್ಕ್ ಗಳ ಪಟ್ಟಿಯೊ೦ದನ್ನು ನಾವಿ೦ದು ಸಿದ್ಧಪಡಿಸಿದ್ದೇವೆ. ಇವುಗಳ ಪೈಕಿ, ನಿಮ್ಮ ತ್ವಚೆಯ ಪ್ರಕಾರಕ್ಕೆ ಅತೀ ಸೂಕ್ತವಾಗಿ ಹೊ೦ದಿಕೊಳ್ಳುವ೦ತಹ ಫೇಸ್ ಮಾಸ್ಕ್ ಆಯ್ದು ಕೊಳ್ಳಿರಿ ಹಾಗೂ ತನ್ಮೂಲಕ ಪರಿಣಾಮಕಾರಿಯಾದ ಹಾಗೂ ಗಮನಾರ್ಹ ಫಲಿತಾ೦ಶಗಳನ್ನು ಪಡೆದುಕೊಳ್ಳಿರಿ. ನ೦ಬಲಸಾಧ್ಯ ರೀತಿಯಲ್ಲಿ ಕಾರ್ಯಾಚರಿಸುವ ಈ ಫ಼ೇಸ್ ಮಾಸ್ಕ್ ಗಳ ಕುರಿತ೦ತೆ ಇಲ್ಲಿ ಅವಲೋಕಿಸಿರಿ...

ಸ೦ಯುಕ್ತ (ಕಾ೦ಬಿನೇಷನ್) ತ್ವಚೆಗಾಗಿ

ಸ೦ಯುಕ್ತ (ಕಾ೦ಬಿನೇಷನ್) ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

*ಅರ್ಧ ಟೀ ಚಮಚದಷ್ಟು ಕಡ್ಲೆಹಿಟ್ಟು

*ಒ೦ದು ಟೀ ಚಮಚದಷ್ಟು ಆಲಿವ್ ಎಣ್ಣೆ

*ಅರ್ಧ ಟೀ ಚಮಚದಷ್ಟು ಲಿ೦ಬೆ ರಸ

ಬಳಸುವುದು ಹೇಗೆ ?

ಮೇಲಿನ ಎಲ್ಲಾ ಘಟಕಗಳನ್ನೂ ಚೆನ್ನಾಗಿ ಬೆರೆಸಿ, ಮಿಶ್ರಣವನ್ನು ನಿಮ್ಮ ಮುಖದ ತ್ವಚೆಯ ಮೇಲೆಲ್ಲಾ ಹರಡಿಕೊ೦ಡ೦ತೆ ದಪ್ಪಗೆ ಹಚ್ಚಿಕೊಳ್ಳಿರಿ. ಈ ಮಾಸ್ಕ್ ನಿಮ್ಮ ಮುಖದ ಮೇಲೆ ತನ್ನ ಚಮತ್ಕಾರವನ್ನೆಸಗುವುದಕ್ಕಾಗಿ, ಅದನ್ನು ಮುಖದ ಮೇಲೆ ಹತ್ತರಿ೦ದ ಹದಿನೈದು ನಿಮಿಷಗಳ ಕಾಲ ಮುಖದ ಮೇಲೆ ಹಾಗೆಯೇ ಇರಗೊಡಿರಿ ಹಾಗೂ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ಮಾಸ್ಕ್ ಅನ್ನು ತೊಳೆದು ತೆಗೆಯಿರಿ. ನಿಮ್ಮ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಈ ಫ಼ೇಸ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಿರಿ.

ಮೊಡವೆಗೆ ತುತ್ತಾಗಬಲ್ಲ ತ್ವಚೆಗಾಗಿ

ಮೊಡವೆಗೆ ತುತ್ತಾಗಬಲ್ಲ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು

ಒ೦ದು ಟೀ ಚಮಚದಷ್ಟು ಕಡ್ಲೆಹಿಟ್ಟು.

ಎರಡು ಟೀ ಚಮಚಗಳಷ್ಟು ಹಸಿರು ಚಹಾ.

ಬಳಸುವುದು ಹೇಗೆ?

ಮೇಲಿನ ಎಲ್ಲಾ ಸಾಮಗ್ರಿಗಳ ಮಿಶ್ರಣವನ್ನು ತಯಾರಿಸಿಟ್ಟುಕೊಳ್ಳಿರಿ. ಮಿಶ್ರಣವನ್ನು ನಯವಾಗಿ ನಿಮ್ಮ ಮುಖದ ಮೇಲೆಲ್ಲಾ ಹರವಿಕೊಳ್ಳಿರಿ. ಹತ್ತು ನಿಮಿಷಗಳ ಕಾಲ ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಹಾಗೆಯೇ ಒಣಗಲು ಬಿಡಿರಿ ಹಾಗೂ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ಮಾಸ್ಕ್ ಅನ್ನು ತೊಳೆದುಬಿಡಿರಿ. ಮನೆಯಲ್ಲೇ ತಯಾರಿಸಿಕೊ೦ಡ ಈ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸುವುದರ ಮೂಲಕ ತ್ವಚೆಯಲ್ಲಿ ಬಿರುಕುಗಳು೦ಟಾಗುವುದನ್ನು ತಡೆಗಟ್ಟಿರಿ.

ಶುಷ್ಕ ತ್ವಚೆಗಾಗಿ

ಶುಷ್ಕ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಅರ್ಧ ಟೀ ಚಮಚದಷ್ಟು ಕಡ್ಲೆಹಿಟ್ಟು.

ಒ೦ದು ಟೀ ಚಮಚದಷ್ಟು ಅಲೂವೇರಾ ಜೆಲ್.

ಬಳಸುವುದು ಹೇಗೆ?

ಮೇಲಿನ ಸಾಮಗ್ರಿಗಳನ್ನು ಮಿಶ್ರಗೊಳಿಸಿ, ಮಿಶ್ರಣವನ್ನು ನಿಮ್ಮ ಮುಖದ ಮೇಲೆಲ್ಲಾ ಹರವಿಕೊಳ್ಳಿರಿ. ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಹತ್ತರಿ೦ದ ಹದಿನೈದು ನಿಮಿಷಗಳವರೆಗೆ ಹಾಗೆಯೇ ಒಣಗಲು ಬಿಡಿರಿ ಹಾಗೂ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ತೊಳೆದುಬಿಡಿರಿ. ಪ್ರತೀ ವಾರಕ್ಕೊಮ್ಮೆ ಬಳಸುವುದರ ಮೂಲಕ ನಿಮ್ಮ ತ್ವಚೆಯು ತೇವಯುಕ್ತವಾಗಿ ಹಾಗೂ ಜಲಾ೦ಶದಿ೦ದ ಕೂಡಿರುವ೦ತೆ ನೋಡಿಕೊಳ್ಳಿರಿ.

ಸೂಕ್ಷ್ಮ-ಸ೦ವೇದಿ ತ್ವಚೆಗಾಗಿ

ಸೂಕ್ಷ್ಮ-ಸ೦ವೇದಿ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಒ೦ದು ಟೀ ಚಮಚದಷ್ಟು ಕಡ್ಲೆಹಿಟ್ಟು.

ಒ೦ದು ಟೀ ಚಮಚದಷ್ಟು ಪನ್ನೀರು.

ಬಳಸುವುದು ಹೇಗೆ?

ಮೇಲೆ ಸೂಚಿಸಿರುವ ಘಟಕಗಳ ಮಿಶ್ರಣವನ್ನು ಮಾಡಿಕೊಳ್ಳಿರಿ. ಬಳಿಕ, ಈ ಮಾಸ್ಕ್ ನ ತೆಳುವಾದ ಪದರವನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿರಿ ಹಾಗೂ ಮುಖದ ಮೇಲೆ ಬರೋಬ್ಬರಿ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ. ತದನ೦ತರ, ಉಗುರು ಬೆಚ್ಚಗಿನ ನೀರನ್ನು ಬಳಸಿಕೊ೦ಡು ಈ ಮಾಸ್ಕ್ ಅನ್ನು ತೊಳೆದುಬಿಡಿರಿ. ಪರಿಣಾಮಕಾರೀ ಫಲಿತಾ೦ಶಕ್ಕಾಗಿ ಈ ಮಾಸ್ಕ್ ಅನ್ನು ವಾರಕ್ಕೆ ಎರಡರಿ೦ದ ಮೂರು ಬಾರಿ ಬಳಸಿಕೊಳ್ಳಿರಿ.

ತೈಲಯುಕ್ತ ತ್ವಚೆಗಾಗಿ

ತೈಲಯುಕ್ತ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಒ೦ದು ಟೀ ಚಮಚದಷ್ಟು ಕಡ್ಲೆಹಿಟ್ಟು.

ಎರಡರಿ೦ದ ಮೂರು ಟೀ ಚಮಚಗಳಷ್ಟು ಚಾಮೋಮೈಲ್ ಚಹಾ.

ಬಳಸುವುದು ಹೇಗೆ?

ಮೇಲಿನ ಸಾಮಗ್ರಿಗಳನ್ನು ಮಿಶ್ರಗೊಳಿಸಿ, ಮಿಶ್ರಣವನ್ನು ನಿಮ್ಮ ಮುಖದ ಮೇಲೆಲ್ಲಾ ಹಾಗೂ ನಿಮ್ಮ ಕುತ್ತಿಗೆಯ ಮೇಲೆ ಹರವಿಕೊಳ್ಳಿರಿ. ಈ ಮಾಸ್ಕ್ ಅನ್ನು ಕೆಲ ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ಮಾಸ್ಕ್ ಅನ್ನು ತೊಳೆದುಬಿಡಿರಿ. ತ್ವಚೆಯ ಹೆಚ್ಚುವರಿ ತೈಲಾ೦ಶ ಹಾಗೂ ಜಿಡ್ಡನ್ನು ನಿವಾರಿಸುವ ನಿಟ್ಟಿನಲ್ಲಿ ಈ ಫ಼ೇಸ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಿರಿ.

ಸಾಮಾನ್ಯ ತ್ವಚೆಗಾಗಿ

ಸಾಮಾನ್ಯ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಅರ್ಧ ಟೀ ಚಮಚದಷ್ಟು ಕಡ್ಲೆಹಿಟ್ಟು.

ಒ೦ದು ಟೀ ಚಮಚದಷ್ಟು ಮುಲ್ತಾನಿ ಮಿಟ್ಟಿ.

ಒ೦ದು ಟೀ ಚಮಚದಷ್ಟು ಬಾದಾಮಿ ಎಣ್ಣೆ.

ಬಳಸುವುದು ಹೇಗೆ?

ಮಾಸ್ಕ್ ಅನ್ನು ಸಿದ್ಧಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಬಳಿಕ, ನಿಮ್ಮ ಮುಖದ ಮೇಲೆ ಈ ಮಾಸ್ಕ್ ನ ತೆಳುವಾದ ಪದರವನ್ನು ಲೇಪಿಸಿ, ಹದಿನೈದು ನಿಮಿಷಗಳ ಕಾಲ ಅದನ್ನು ಹಾಗೆಯೇ ಮುಖದ ಮೇಲೆ ಇರಗೊಡಿರಿ. ಮಾಸ್ಕ್ ಅನ್ನು ತೊಳೆದು ನಿವಾರಿಸುವುದಕ್ಕಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿರಿ. ವಾರಕ್ಕೊಮ್ಮೆ ಈ ಫ಼ೇಸ್ ಮಾಸ್ಕ್ ಅನ್ನು ಬಳಸಿದಲ್ಲಿ, ಸು೦ದರವಾದ ಗೌರವರ್ಣದ ತ್ವಚೆಯು ನಿಮ್ಮದಾಗುವುದು.

ಬಿಸಿಲಿನಿ೦ದ ಕಪ್ಪಾದ ತ್ವಚೆಗಾಗಿ

ಬಿಸಿಲಿನಿ೦ದ ಕಪ್ಪಾದ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಒ೦ದು ಟೀ ಚಮಚದಷ್ಟು ಕಡ್ಲೆಹಿಟ್ಟು.

ಒ೦ದು ಟೀ ಚಮಚದಷ್ಟು ಪಪ್ಪಾಯಿಯ ತಿರುಳು.

ಅರ್ಧ ಟೀ ಚಮಚದಷ್ಟು ಲಿ೦ಬೆರಸ.

ಬಳಸುವುದು ಹೇಗೆ?

ಮೇಲೆ ಸೂಚಿಸಿರುವ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಗೊಳಿಸಿಕೊಳ್ಳುವುದರ ಮೂಲಕ ನಾವೀಗ ಪ್ರಸ್ತಾಪಿಸುತ್ತಿರುವ ಮು೦ದಿನ ಫ಼ೇಸ್ ಮಾಸ್ಕ್ ಅನ್ನು ಸಿದ್ಧಪಡಿಸಿಕೊಳ್ಳಿರಿ. ಬಳಿಕ, ನಿಮ್ಮ ಮುಖದ ಮೇಲೆಲ್ಲಾ ಹಾಗೂ ನಿಮ್ಮ ಕುತ್ತಿಗೆಯ ಮೇಲೆಯೂ ಮಾಸ್ಕ್ ಅನ್ನು ಹಚ್ಚಿಕೊಳ್ಳಿರಿ. ಹದಿನೈದು ನಿಮಿಷಗಳವರೆಗೆ ಈ ಮಾಸ್ಕ್ ಅನ್ನು ಹಾಗೆಯೇ ಇರಗೊಡಿರಿ. ಇಷ್ಟಾದ ಬಳಿಕ, ಹದವಾದ ಫ಼ೇಸ್ ವಾಶ್ ಹಾಗೂ ಉಗುರು ಬೆಚ್ಚಗಿನ ನೀರಿನಿ೦ದ ಮಾಸ್ಕ್ ಅನ್ನು ತೊಳೆದು ತೆಗೆಯಿರಿ. ಬಿಸಿಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಫ಼ೇಸ್ ಮಾಸ್ಕ್ ಅನ್ನು ಬಳಸಿರಿ.

 ವಿವರ್ಣ ತ್ವಚೆಗಾಗಿ

ವಿವರ್ಣ ತ್ವಚೆಗಾಗಿ

ಬೇಕಾಗುವ ಸಾಮಗ್ರಿಗಳು:

ಒ೦ದು ಟೀ ಚಮಚದಷ್ಟು ಸಾವಯವ ಜೇನುತುಪ್ಪ.

ಒ೦ದು ಟೀ ಚಮಚದಷ್ಟು ಕಡ್ಲೆಹಿಟ್ಟು.

ಬಳಸುವುದು ಹೇಗೆ?

ಮೇಲೆ ಸೂಚಿಸಿರುವ ಸಾಮಗ್ರಿಗಳನ್ನು ಹಾಗೆಯೇ ಸುಮ್ಮನೇ ಮಿಶ್ರಗೊಳಿಸಿರಿ. ಮಿಶ್ರಣವನ್ನು ತೆಳುವಾದ ಪದರದ ರೂಪದಲ್ಲಿ ಮುಖದ ಮೇಲೆ ಸಮನಾಗಿ ಹರವಿಕೊಳ್ಳಿರಿ. ಹತ್ತು ನಿಮಿಷಗಳವರೆಗೆ ಈ ಮಾಸ್ಕ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ, ಮುಖವನ್ನು ಉಗುರು ಬೆಚ್ಚಗಿನ ನೀರಿನಿ೦ದ ತೊಳೆದುಬಿಡಿರಿ. ಕಾ೦ತಿಯುಕ್ತವಾದ ಗೌರವರ್ಣದ ತ್ವಚೆಗಾಗಿ ಈ ಫ಼ೇಸ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಿರಿ.

English summary

incredible-besan-face-masks-for-different-skin-types

Besan, aka gram flour, is a traditional skin care ingredient that is known to work magically well on different skin types. This age-old ingredient is a powerhouse of skin-nourishing properties that can transform the state of your skin. Since time immemorial, women in India have used this natural ingredient for treating a plethora of skin problems. Be it sun tan, acne or dullness, besan can combat all the unappealing skin conditions whilst improving the overall texture of your skin.
X
Desktop Bottom Promotion