ಕಿರಿಕಿರಿ ನೀಡುವ ಇಸುಬು ಸಮಸ್ಯೆಗೆ 'ಬೇವಿನ ಎಣ್ಣೆ' ಪರ್ಫೆಕ್ಟ್ ಮನೆಮದ್ದು

By Sushma Charhra
Subscribe to Boldsky

ಎಸ್ಜಿಮಾ ಅಥವಾ ಇಸುಬು (Eczema) ಚರ್ಮದ ಒಂದು ರೀತಿಯ ಸಮಸ್ಯೆಯಾಗಿದ್ದು, ಇದರ ಜೊತೆಗೆ ತುರಿಕೆ, ಸಿಪ್ಪೆ ಸುಲಿದು ಹೋಗುವಂತಹ ಚರ್ಮ, ಶುಷ್ಕ ತ್ವಚೆ, ನೋವು, ಒಡೆದ ಚರ್ಮ ಇತ್ಯಾದಿ ಚರ್ಮದ ಸಮಸ್ಯೆಗಳು ಕೆಲವರ ಬಹುದೊಡ್ಡ ಕಾಯಿಲೆಯಾಗಿರುತ್ತದೆ. ಇದೊಂದು ಗಂಭೀರವಾದ ಕಾಯಿಲೆಯಾಗಿರುವುದರಿಂದಾಗಿ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ ಮತ್ತು ಕೆಲವು ಕ್ರಮಗಳನ್ನು ಅನುಸರಿಸಿ ಈ ಸಮಸ್ಯೆ ಹೆಚ್ಚಾಗದಂತೆ ತಡೆಯಬಹುದಾಗಿದೆ. ಅಂತಹ ಒಂದು ಔಷಧಿ ಎಂದರೆ ಅದು ಬೇವಿನ ಎಣ್ಣೆ.

ಬೇವು ಆಯುರ್ವೇದದ ಪ್ರಕಾರ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಒಂದು ಪದಾರ್ಥವಾಗಿದೆ. ಕೇವಲ ಬೇವಿನ ಎಲೆಗಳು ಮತ್ತು ಸಸ್ಯ ಮಾತ್ರ ಅಲ್ಲ, ಇದರಿಂದ ತೆಗೆಯುವ ಎಣ್ಣೆ ಕೂಡ ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ.

eczema

ಉರಿಯೂತವನ್ನು ಗುಣಪಡಿಸುವ ಗುಣಗಳನ್ನು ಈ ಬೇವಿನ ಎಣ್ಣೆ ಹೊಂದಿರುವುದರಿಂದಾಗಿ ತುರಿಕೆ ಮತ್ತು ನೋವು ಇತ್ಯಾದಿ ಸಮಸ್ಯೆಗಳನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ. ಚರ್ಮದ ಕಿರಿಕಿರಿಯನ್ನು ತಪ್ಪಿಸಲೂ ಕೂಡ ಬೇವು ಬಹಳವಾಗಿ ಉಪಕಾರಿಯಾಗಿರುವ ವಸ್ತುವಾಗಿದೆ. ಹಾಗಾದ್ರೆ ಎಸ್ಕೀಮಾ ಎಂಬ ಚರ್ಮದ ಕಾಯಿಲೆಯನ್ನು ಗುಣಪಡಿಸಲು ಬೇವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ನಾವು ಈ ಲೇಖನದಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ದಯವಿಟ್ಟು ಗಮನಿಸಿ ಮತ್ತು ನಿಮ್ಮಲ್ಲಿ ಯಾರಾದರೂ ರೀತಿಯ ಚರ್ಮದ ಕಿರಿಕಿರಿ ಅನುಭವಿಸುತ್ತಿದ್ದರೆ, ಅವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

. ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ

ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಫಂಗಲ್ ಗುಣಗಳು ಕೊಬ್ಬರಿ ಎಣ್ಣೆಯಲ್ಲಿ ಇರುವುದರಿಂದಾಗಿ ಅದು ಬೇವಿನ ಎಣ್ಣೆಯ ಜೊತೆಗೆ ಸೇರಿ ಉರಿಯೂತ ಸೇರಿದಂತೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಬೇಕಾಗುವ ಪದಾರ್ಥಗಳು

• 1 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ

• ಕೆಲವು ಹನಿ ಬೇವಿನ ಎಣ್ಣೆ

ಬಳಸುವ ವಿಧಾನ ಹೇಗೆ?

1. ಒಂದು ಬೌಲ್ ನಲ್ಲಿ ಕೊಬ್ಬರಿ ಎಣ್ಣೆ ಮತ್ತು ಬೇವಿನ ಎಣ್ಣೆಯನ್ನು ಬೆರೆಸಿ.

2. ಎಫೆಕ್ಟ್ ಆಗಿರುವ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಅಪ್ಲೈ ಮಾಡಿಕೊಳ್ಳಿ.

3. ಒಂದು ರಾತ್ರಿ ಪೂರ್ತಿ ಹಾಗೆಯೇ ಬಿಡಿ ಮತ್ತು ಮಾರನೇ ದಿನ ಬೆಳಿಗ್ಗೆ ತೊಳೆಯಿರಿ.

4. ನೀವು ವ್ಯತ್ಯಾಸ ಗುರುತಿಸುವವರೆಗೆ ಈ ಔಷಧಿಯನ್ನು ಪುನಾರಾವರ್ತಿಸುತ್ತಾ ಇರಿ.

ಮಕ್ಕಳಿಗೆ ಕಾಡುವ ಇಸುಬು ಸಮಸ್ಯೆಗೆ ಪರಿಹಾರ

. ಬೇವಿನ ಎಣ್ಣೆ ಮತ್ತು ಅರಿಶಿನದ ಪುಡಿ

ಬೇವು ಮತ್ತು ಅರಿಶಿನ ಎರಡರಲ್ಲೂ ಕೂಡ ಗಾಯವನ್ನ ಗುಣಪಡಿಸುವ ಗುಣಗಳಿವೆ ಮತ್ತು ಇದು ಚರ್ಮದ ಸೋಂಕಿನ ನಿವಾರಣೆ ಮತ್ತು ಉರಿಯೂತವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

. ಬೇಕಾಗುವ ಪದಾರ್ಥಗಳು

• ಕೆಲವು ಹನಿಗಳಷ್ಟು ಬೇವಿನ ಎಣ್ಣೆ

• 1 ಟೇಬಲ್ ಸ್ಪೂನ್ ಬೇವಿನ ಪುಡಿ

• 1 ಟೇಬಲ್ ಸ್ಪೂನ್ ಅರಿಶಿನದ ಪುಡಿ

• 1 ಟೇಬಲ್ ಸ್ಪೂನ್ ಜೇನುತುಪ್ಪ

ಬಳಸುವ ವಿಧಾನ ಹೇಗೆ?

1. ಒಂದು ಬೌಲ್ ನಲ್ಲಿ ಬೇವಿನ ಎಣ್ಣೆ, ಬೇವಿನ ಪುಡಿ, ಚಿಟಿಕೆ ಅರಿಶಿನ ಮತ್ತು ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಸಿ.

2. ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ , ಯಾವುದೇ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ

3. ಈ ಪೇಸ್ಟನ್ನು ನಿಮ್ಮ ಚರ್ಮಕ್ಕೆ ತೊಂದರೆಯಾಗಿರುವ ಜಾಗಕ್ಕೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ..

4. 20 ನಿಮಿಷದ ನಂತರ ಸಹಜವಾದ ನೀರಿನಲ್ಲಿ ತೊಳೆಯಿರಿ

5. ನೋವು ನಿವಾರಣೆ ಆಗುವವರೆಗೆ ಈ ರೆಮಿಡಿಯನ್ನು ಪದೇ ಪದೇ ಬಳಕೆ ಮಾಡಬಹುದು.

. ಬೇವಿನ ಎಣ್ಣೆ ಮತ್ತು ಹಸಿ ಪಪ್ಪಾಯ

ಹಸಿ ಪಪ್ಪಾಯ ಬೇವಿನ ಎಣ್ಣೆಯ ಜೊತೆ ಸೇರಿದಾಗ ಚರ್ಮದ ತುರಿಕೆ ಮತ್ತು ಕೆಂಪಗಾಗಿರುವುದು ಜೊತೆಗೆ ಶುಷ್ಕ ತ್ವಚೆ ಮತ್ತು ಸಿಪ್ಪೆ ಸುಲಿಯುವಂತಹ ಚರ್ಮ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡಲು ಬಹಳವಾಗಿ ಪ್ರಯೋಜನಕಾರಿಯಾಗಿದೆ.

ಬೇಕಾಗುವ ಪದಾರ್ಥಗಳು

• 1 ಟೇಬಲ್ ಸ್ಪೂನ್ ಹಸಿ ಪಪ್ಪಾಯ ಪಲ್ಪ್

• 3-4 ಹನಿಗಳಷ್ಟು ಬೇವಿನ ಎಣ್ಣೆ

ಬಳಸುವ ವಿಧಾನ ಹೇಗೆ?

1. ಹಸಿ ಪಪ್ಪಾಯ ಪಲ್ಪ್ ಮತ್ತು ಕೆಲವು ಹನಿ ಬೇವಿನ ಎಣ್ಣೆಯನ್ನು ಒಂದು ಬೌಲ್ ನಲ್ಲಿ ಮಿಕ್ಸ್ ಮಾಡಿ.

2. ಈ ಪೇಸ್ಟ್ ನ್ನು ನಿಮಗೆ ಸಮಸ್ಯೆ ಉಂಟಾಗಿರುವ ಜಾಗಕ್ಕೆ ಅಪ್ಲೈ ಮಾಡಿ ಮತ್ತು ಸುಮಾರು 20 ನಿಮಿಷ ಹಾಗೆಯೇ ಬಿಡಿ.

3. 20 ನಿಮಿಷದ ನಂತರ ತೊಳೆಯಿರಿ ಮತ್ತು ಇದನ್ನು ನಿಮ್ಮ ಚರ್ಮದ ಸಮಸ್ಯೆ ನಿವಾರಣೆ ಆಗುವವರೆಗೂ ಆಗಾಗ ಮಾಡುತ್ತಲೇ ಇರಿ.

. ಬೇವಿನ ಎಣ್ಣೆ ಮತ್ತು ತುಳಸಿ

ಚರ್ಮದ ಬಣ್ಣ ಕೆಂಪಗಾಗುವುದು, ನೋವು, ತುರಿಕೆ ಇತ್ಯಾದಿಗಳ ಸಮಸ್ಯೆಗೆ ಬೇವು ಮತ್ತು ತುಳಿಸಿ ಮಿಶ್ರಣ ನಿಮ್ಮ ಸಹಾಯಕ್ಕೆ ಬರಲಿದೆ.

ಬೇಕಾಗುವ ಪದಾರ್ಥಗಳು

• 1 ಕಪ್ ನಷ್ಟು ಬೇವಿನ ಎಲೆಗಳು

• 1 ಕಪ್ ತುಳಸಿ ಎಲೆಗಳು

• ಕೆಲವು ಹನಿ ಬೇವಿನ ಎಣ್ಣೆ

• ನೀರು

ಬಳಸುವ ವಿಧಾನ ಹೇಗೆ?

1. ಒಂದು ಪ್ಯಾನ್ ನಲ್ಲಿ ಬೇವು ಮತ್ತು ತುಳಸಿ ಎಲೆಗಳನ್ನು ಹಾಕಿ ಕುದಿಸಿ.

2. ಎರಡೂ ಎಲೆಗಳು ನೀರಿನಲ್ಲಿ ಕುದಿಸಿದ ನಂತರ ಅದರ ಔಷಧೀಯ ಸತ್ವವು ನೀರಿನೊಂದಿಗೆ ಬೆರೆತಿರುತ್ತದೆ. ಎಲೆಗಳನ್ನು ಸೋಸಿಕೊಳ್ಳಿ ಮತ್ತು ನೀರನ್ನು ಶೇಖರಿಸಿಕೊಳ್ಳಿ.

3. ಒಂದು ಸ್ಪ್ರೇ ಬಾಟಲ್ ನಲ್ಲಿ ಈ ನೀರನ್ನು ಹಾಕಿಟ್ಟುಕೊಳ್ಳಿ ಮತ್ತು ಅದಕ್ಕೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಶೇಕ್ ಮಾಡಿ..

4. ಈ ಸಲ್ಯೂಷನ್ ನ್ನು ಕಾಟನ್ ಪ್ಯಾಡ್ ಬಳಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ನಿಮ್ಮ ಚರ್ಮದಲ್ಲಿ ಸಮಸ್ಯೆ ಇರುವ ಜಾಗಕ್ಕೆ ಅಪ್ಲೈ ಮಾಡಿಕೊಳ್ಳಿ. ಮತ್ತು ಒಂದು ರಾತ್ರಿ ಪೂರ್ತಿ ಅದು ನಿಮ್ಮ ಚರ್ಮದಲ್ ಇರಲಿ.

5. ಮಾರನೆಯ ದಿನ ಬೆಳಿಗ್ಗೆ ಸಹಜವಾದ ನೀರಿನಲ್ಲಿ ಅದನ್ನು ತೊಳೆದುಕೊಳ್ಳಿ.

. ಬೇವಿನ ಎಣ್ಣೆಯ ಸ್ನಾನ

ಬೇವಿನ ಎಣ್ಣೆಯನ್ನು ಬಳಸಿ ಪ್ರತಿ ದಿನ ಸ್ನಾನ ಮಾಡುವುದರಿಂದಾಗಿ ಚರ್ಮವನ್ನು ಮಾಯ್ಚರೈಸ್ ಮಾಡುತ್ತದೆ ಮತ್ತು ಶುಷ್ಕವಾದ ಮತ್ತು ಸಿಪ್ಪೆ ,ಸುಲಿಯುವಂತ ಚರ್ಮವನ್ನು ಗುಣಪಡಿಸುವ ತಾಕತ್ತನ್ನು ಇದು ಹೊಂದಿದೆ.,

ಬೇಕಾಗುವ ಪದಾರ್ಥಗಳು

• 8-10 ಹನಿ ಬೇವಿನ ಎಣ್ಣೆ

• ಒಂದು ಮುಷ್ಟಿಯಷ್ಟು ಬೇವಿನ ಎಲೆಗಳು

ಬಳಸುವ ವಿಧಾನ ಹೇಗೆ?:

1. ಮೊದಲನೆಯದಾಗಿ, ಒಂದಷ್ಟು ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಮತ್ತು ಆ ನೀರನ್ನು ಸೋಸಿಕೊಳ್ಳಿ .

2. ಸ್ನಾನ ಮಾಡುವ ಬಕೆಟ್ಟಿನ ನೀರಿಗೆ ಇದನ್ನು ಹಾಕಿ ತುಂಬಿಸಿಕೊಳ್ಳಿ.

3. 20 ನಿಮಿಷ ಈ ನೀರನ್ನು ನಿಮಗೆ ಸೋಕಿಕೊಳ್ಳಿ.

4. ಒಂದು ವೇಳೆ ನಿಮಗೆ ಅಗತ್ಯವಿದ್ದರೆ ಬೇವು ಮಿಶ್ರಿತ ಮಾಯ್ಚರೈಸರ್ ನ್ನು ಸ್ನಾನದ ನಂತರ ಹಚ್ಚಿಕೊಳ್ಳಿ. ಇದರಿಂದಾಗಿ ಉತ್ತಮ ಫಲಿತಾಂಶ ಪಡೆಯಬಹುದು.

For Quick Alerts
ALLOW NOTIFICATIONS
For Daily Alerts

    English summary

    How To Use Neem Oil For Eczema?

    Eczema is considered as a skin disease, that brings along issues like itchiness, flaky and dry skin, swelling, cracked skin, etc. It is said that since it is a chronic disease this cannot be completely cured but you can definitely have a control on it and prevent it form increasing further. One such remedy that can be used for this is neem oil. Neem in Ayurveda is considered as 'the healer of all ailments'. Just like the plant, the oil extracted from the plant also has a lot of medicinal values.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more