For Quick Alerts
ALLOW NOTIFICATIONS  
For Daily Alerts

ಕಣ್ಣಿನ ಬದಿಗಳಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳ ನಿವಾರಿಸುವುದು ಹೇಗೆ ?

By Sushma Charhra
|

ವಯಸ್ಸಾಗುವಿಕೆಯ ಸಂಕೇತವು ಮೊದಲು ಕಣ್ಣು ಮತ್ತು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ವಯಸ್ಸಾಗುವ ಪ್ರಕ್ರಿಯೆಯಲ್ಲಿನ ಸಂಕೇತಗಳನ್ನು ನಿಧಾನಗತಿಗೆ ತರಬಹುದೇ ಹೊರತು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ವಯಸ್ಸಾಗಲೇ ಬೇಕು. ಇಲ್ಲಿ ನಾವು ಕಣ್ಣಿನ ಬಳಿ ಕಾಣಿಸಿಕೊಳ್ಳುವ ನೆರಿಗೆಗಳ ನಿವಾರಣೆಗೆ ನೀವು ಮನೆಯಲ್ಲೇ ಯಾವ ಮದ್ದನ್ನು ಮಾಡಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.

ನಿಮ್ಮ ವಯಸ್ಸನ್ನು ಹೊರತು ಪಡಿಸಿ ಹಲವಾರು ಕಾರಣಗಳಿಂದಾಗಿ ನಿಮ್ಮ ಚರ್ಮವು ವಯಸ್ಸಾದಂತೆ ಕಾಣಿಸಬಹುದು. ಮಾಲಿನ್ಯ, ಧೂಮಪಾನ, ಅನಾರೋಗ್ಯಕಾರಿ ಜೀವನಶೈಲಿ,ಚರ್ಮಕ್ಕೆ ಅತಿಯಾದ ಕೆಮಿಕಲ್ ಗಳ ಬಳಕೆ ಇತ್ಯಾದಿ. ಅದು ಯಾವುದೇ ಕಾರಣ ಇರಲಿ, ಆದರೆ ನೀವು ಈ ಚರ್ಮ ಸುಕ್ಕುಗಟ್ಟುವ ಚಿಹ್ನೆಗಳನ್ನು ಯಾರಿಂದಲೂ ಮರೆಮಾಚುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಖಂಡಿತ ನೀವಿದನ್ನು ನಿಯಂತ್ರಿಸಿಕೊಳ್ಳಬಹುದು.

how to prevent wrinkles around the eyes in kannada

ಹಲವಾರು ರೀತಿಯ ಚರ್ಮದ ಕಾಳಜಿ ನೀಡುವ ಪ್ರೊಡಕ್ಟ್ ಗಳಿವೆ ಮತ್ತು ಶೇಕಡಾ 100 ರಷ್ಟು ಫಲಿತಾಂಶ ನೀಡುವ ಭರವಸೆಯನ್ನೂ ನೀಡುತ್ತದೆ. ಆದರೆ ಅವುಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ, ಯಾಕೆಂದರೆ ಅಂತಹ ಪ್ರೊಡಕ್ಟ್ ಗಳಲ್ಲಿ ರಾಸಾಯನಿಕ ಅಂಶಗಳಿದ್ದು ಅವುಗಳು ನಿಮ್ಮ ಚರ್ಮಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.

ಇಲ್ಲಿದೆ ಕಣ್ಣಿನ ಬದಿಗಳಲ್ಲಿ ಕಾಣಿಸಿಕೊಳ್ಳುವ ನೆರಿಗೆಗಳನ್ನು ತೆಗೆಯಲು ಇರುವ ಕೆಲವು ಮನೆಮದ್ದುಗಳು. ಹಾಗಾದ್ರೆ ಯಾವುದು ಅವುಗಳು ಮತ್ತು ಅದನ್ನು ಬಳಸುವುದು ಹೇಗೆ ಎಂಬ ಬಗೆಗಿನ ಮಾಹಿತಿ ಈ ಕೆಳಗೆ ಬರೆಯಲಾಗಿದೆ. ಮುಂದೆ ಓದಿ.

ನಿಂಬೆ ರಸ

ಬೇಕಾಗುವ ಪದಾರ್ಥಗಳು :
• ನಿಂಬೆ ರಸ
ಬಳಸುವ ವಿಧಾನ ಹೇಗೆ?
1. ನಿಮ್ಮ ಕಣ್ಣುಗಳ ಸುತ್ತ ಇರುವ ನೆರಿಗೆಗಳಿಗೆ ನಿಂಬೆಯ ರಸವನ್ನು ಹಚ್ಚಿಕೊಳ್ಳಿ
2. ನೀವು ನಿಂಬೆಯನ್ನುಕತ್ತರಿಸಿ ಕಣ್ಣಿನ ಸುತ್ತ ಉಜ್ಜಿಕೊಂಡರೂ ಆಗುತ್ತದೆ.
ವಯಸ್ಸಿನ ಕಾರಣದಿಂದಾಗಿ ನಿಮ್ಮಕಣ್ಣಿನ ಸುತ್ತ ಆಗುವ ನೆರಿಗೆಗಳನ್ನು ತೆಗೆಯಲು ಇದು ಸಹಕಾರಿಯಾಗಿದೆ.

ಜೇನುತುಪ್ಪ

ಬೇಕಾಗುವ ಪದಾರ್ಥಗಳು :
• ಅಕ್ಕಿ ಹಿಟ್ಟು
• ಜೇನುತುಪ್ಪ
ಬಳಸುವ ವಿಧಾನ ಹೇಗೆ?
1. ಅಕ್ಕಿ ಹಿಟ್ಟಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಸಹಕಾರಿಯಾಗಿದೆ.
2. ಒಂದು ಚಮಚ ಅಕ್ಕಿ ಹಿಟ್ಟನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇರಿಸಿ
3. ಈ ಮಾಸ್ಕ್ ನ್ನು ಕಣ್ಣಿನ ಬದಿಯ ನೆರಿಗೆ ಗಳಿಗೆ ಹಚ್ಚಿಕೊಳ್ಳಿ. ಒಣಗುವವರೆಗೂ ಹಾಗೆಯೇ ಬಿಡಿ ಮತ್ತು ನಂತರ ತೊಳೆದುಕೊಳ್ಳಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿ.

ಪೆಟ್ರೋಲಿಯಂ ಜೆಲ್ಲಿ

ಬೇಕಾಗುವ ಪದಾರ್ಥಗಳು :
• ಪೆಟ್ರೋಲಿಯಂ ಜೆಲ್ಲಿ
ಬಳಸುವ ವಿಧಾನ ಹೇಗೆ?
1. ಪೆಟ್ರೋಲಿಯಂ ಜೆಲ್ಲಿಯಿಂದ ನಿಮ್ಮ ನೆರಿಗೆಗಳ ಸುತ್ತ ವೃತ್ತಾಕಾರದಲ್ಲಿ ಸುಮಾರು 5 ನಿಮಿಷ ಮಸಾಜ್ ಮಾಡಿ.
2. ಪ್ರತಿದಿನ ದಿನಕ್ಕೆ ಒಂದು ಬಾರಿಯಾದರೂ ಹೀಗೆ ಮಾಡಿ.ಮಲಗುವ ಮುನ್ನ ಮಾಡಿದರೆ ಕೆಲವೇ ವಾರಗಳಲ್ಲಿ ವ್ಯತ್ಯಾಸ ಗಮನಿಸಿಕೊಳ್ಳಬಹುದು.

ಕೊಬ್ಬರಿ ಎಣ್ಣೆ

ಬೇಕಾಗುವ ಪದಾರ್ಥಗಳು :
• ಕೊಬ್ಬರಿ ಎಣ್ಣೆ
ಬಳಸುವ ವಿಧಾನ ಹೇಗೆ?
1. ನಿಮ್ಮ ನೆರಿಗೆಗಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ತೆಗೆದುಕೊಂಡು ಮಸಾಜ್ ಮಾಡಿ.
2ಅರಿಶಿನದ ಪುಡಿ ಮತ್ತು ಕೊಬ್ಬರಿ ಎಣ್ಣೆ ಸೇರಿಸಿ ಮುಖಕ್ಕೆ ಮಾಸ್ಕ್ ಕೂಡ ತಯಾರಿಸಿಕೊಳ್ಳಬಹುದು.
3. 1 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿಕೊಳ್ಳಿ
4. ಇದನ್ನು ನಿಮ್ಮ ಕಣ್ಣಿನ ಬದಿಗಳಿಗೆ ಅಪ್ಲೈ ಮಾಡಿ ಮತ್ತು 20 ನಿಮಿಷ ಹಾಗೆಯೇ ಬಿಡಿ. ಸಹಜವಾಗಿರುವ ನೀರಿನಲ್ಲಿ 20 ನಿಮಿಷದ ನಂತರ ತೊಳೆಯಿರಿ.

ಆಲಿವ್ ಎಣ್ಣೆ

ಬೇಕಾಗುವ ಪದಾರ್ಥಗಳು :
•1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
•1 ಟೀ ಸ್ಪೂನ್ ನಿಂಬೆ ರಸ
ಬಳಸುವ ವಿಧಾನ ಹೇಗೆ?
1. 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಮತ್ತು 1 ಟೀ ಸ್ಪೂನ್ ತಾಜಾ ನಿಂಬೆ ರಸವನ್ನು ಸೇರಿಸಿ.
2. ಇದನ್ನು ನಿಮ್ಮ ಕಣ್ಣಿನ ಬದಿಗಳಲ್ಲಿ ನೆರಿಗೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಸುಮಾರು 15 ನಿಮಿಷ ಹಾಗೆಯೇ ಬಿಡಿ.
3. 20 ನಿಮಿಷದ ನಂತರ, ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ. ಎರಡು ದಿನಗಳಿಗೊಮ್ಮೆ ನೀವು ಇದನ್ನು ಮಾಡಿದರೆ ಉತ್ತಮವಾದ ಮತ್ತು ವೇಗವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ.

ಮೊಸರು

ಬೇಕಾಗುವ ಪದಾರ್ಥಗಳು :
•1 ಟೇಬಲ್ ಸ್ಪೂನ್ ಮೊಸರು
•1 ಟೇಬಲ್ ಸ್ಪೂನ್ ಜೇನುತುಪ್ಪ
•ರೋಸ್ ವಾಟರ್
ಬಳಸುವ ವಿಧಾನ ಹೇಗೆ?
1. ಒಂದು ಬೌಲ್ ನಲ್ಲಿ 1 ಟೇಬಲ್ ಸ್ಪೂನ್ ನಷ್ಟು ಮೊಸರು, 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಕೆಲವೇ ಕೆಲವು ಹನಿ ರೋಸ್ ವಾಟರ್ ನ್ನು ಸೇರಿಸಿ
2. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಅದನ್ನು ನಿಮ್ಮ ಕಣ್ಣುಗಳ ಬದಿಯಲ್ಲಿರುವ ನೆರಿಗೆಗಳಿಗೆ ಹಚ್ಚಿಕೊಳ್ಳಿ.
3. ಸುಮಾರು 15 ನಿಮಿಷ ಹಾಗೆಯೇ ಇರಲು ಬಿಡಿ ಮತ್ತು ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

ಅಲೋವೆರಾ

ಬೇಕಾಗುವ ಪದಾರ್ಥಗಳು :
• ಅಲೋವೆರಾ
ಬಳಸುವ ವಿಧಾನ ಹೇಗೆ?
1. ಅಲೋವೆರಾ ಎಲೆಯನ್ನು ಕತ್ತರಿಸಿ ಅದನ್ನು ಲೋಳೆಯನ್ನು ತೆಗೆಯಿರಿ.
2. ಈ ಅಲೋವೆರಾದ ಲೋಳೆರಸವನ್ನು ನೆರಿಗೆಗಳಿರುವ ಜಾಗಕ್ಕೆ ಅಪ್ಲೈ ಮಾಡಿ. 5 ನಿಮಿಷದ ನಂತರ ಸಹಜವಾದ ನೀರಿನಲ್ಲಿ ತೊಳೆಯಿರಿ.

ಪಪ್ಪಾಯ

ಬೇಕಾಗುವ ಪದಾರ್ಥಗಳು :
• ಪಪ್ಪಾಯ
ಬಳಸುವ ವಿಧಾನ ಹೇಗೆ?
1. ಪಪ್ಪಾಯ ಹಣ್ಣನ್ನು ಬ್ಲೆಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ
2. ಎಲ್ಲಿ ನೆರಿಗೆಗಳು ಕಾಣಿಸಿಕೊಂಡಿದೆಯೋ ಅಂತಹ ಜಾಗಕ್ಕೆ ಈ ಪೇಸ್ಟನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ
3. 15 ನಿಮಿಷದ ನಂತರ ಸಹಜವಾಗಿರುವ ನೀರಿನಲ್ಲಿ ತೊಳೆಯಿರಿ ಮತ್ತು ಹಾಗೆಯೇ ಒಣಗಲು ಬಿಡಿ.

ಗ್ರೀನ್ ಟೀ

ಬೇಕಾಗುವ ಪದಾರ್ಥಗಳು :
• ಗ್ರೀನ್ ಟೀ
ಬಳಸುವ ವಿಧಾನ ಹೇಗೆ?
1. ಸ್ವಲ್ಪ ಗ್ರೀನ್ ಟೀ ಯನ್ನು ತಯಾರಿಸಿ ಮತ್ತು ಅದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟು ಬಿಡಿ.
2. ಇದನ್ನು ನಿಮ್ಮ ಕಣ್ಣಿನ ನೆರಿಗೆಗಳಿಗೆ ಹಚ್ಚಿಕೊಳ್ಳಿ. ಇದು ನಿಮ್ ಚರ್ಮದ ನೆರಿಗೆಗಳನ್ನು ತೆಗೆಯಲು ಬಹಳ ಸಹಕಾರಿಯಾಗಿದೆ.

English summary

How To Remove Wrinkles On The Outer Corner Of The Eyes?

The signs of ageing occur first on the skin and eyes. It is surely possible to delay it at least though it is not possible to avoid ageing. So, here are some natural remedies for wrinkles under your eyes. Apart from your age, there are also some factors that can lead to the early signs of ageing like pollution, smoking, unhealthy lifestyle, lack of skin care, etc. So, here are some homemade remedies that help to cure wrinkles on the corner of the eyes. Let us see what they are.
X
Desktop Bottom Promotion