ಕಣ್ಣಿನ ಸುತ್ತಲಿನ ಕಪ್ಪು ಕಲೆಗಳ ನಿವಾರಣೆಗೆ ಆಲೂಗಡ್ಡೆಯ ಚಿಕಿತ್ಸೆ!

Posted By: Arshad
Subscribe to Boldsky

ಕಾಲ ಯಾರನ್ನೂ ಕಾಯುವುದಿಲ್ಲ, ಸಮಯದ ಜೊತೆಗೇ ವಯಸ್ಸೂ ಏರುತ್ತಾ ಹೋದಂತೆ ನಮ್ಮ ತ್ವಚೆಯೂ ಹಿಂದಿನ ಸೆಳೆತ ಹಾಗೂ ಕಾಂತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಂದುವುದು. ವಿಶೇಷವಾಗಿ ನಮ್ಮ ಕಣ್ಣುಗಳ ಕೆಳಗಿನ ಚರ್ಮದ ಹೊರಪದರ ಮತ್ತು ಕೆಳಪದರಗಳು ತೀರಾ ತೆಳುವಾಗಿರುವ ಕಾರಣ ಈ ಭಾಗದಲ್ಲಿ ಆರ್ದ್ರತೆ ಮತ್ತು ಚರ್ಮದ ತೈಲಗ್ರಂಥಿಗಳು ಕಡಿಮೆ ಇರುವ ಕಾರಣ ಈ ಭಾಗದಲ್ಲಿ ಕಪ್ಪು ವರ್ತುಲಗಳು ಸುಲಭವಾಗಿ ಮೂಡುತ್ತವೆ.

ಕಪ್ಪು ವರ್ತುಲಗಳು ಮೂಡಲು ವಯಸ್ಸಿನ ಹೊರತಾಗಿ ನಿದ್ದೆಯ ಕೊರತೆ, ಮಾನಸಿಕ ಒತ್ತಡ, ಅಸಮರ್ಪಕ ಆಹಾರ ಸೇವನೆ, ಬಲುಹೊತ್ತು ಟೀವಿ ವೀಕ್ಷಿಸುವುದು, ಕಂಪ್ಯೂಟರ್ ಪರದೆಯನ್ನು ಹೆಚ್ಚು ಹೊತ್ತು ವೀಕ್ಷಿಸುವುದು ಇತ್ಯಾದಿಗಳೂ ಕಾರಣವಾಗಿವೆ. ಇಂದಿನ ಲೇಖನದಲ್ಲಿ ಈ ಕಪ್ಪು ವರ್ತುಲಗಳನ್ನು ನಿವಾರಿಸಲು ಆಲುಗಡ್ಡೆಯ ಬಳಕೆ ಪ್ರಮುಖವಾಗಿರುವ ಹತ್ತು ಸಮರ್ಥ ಮನೆಮದ್ದುಗಳನ್ನು ವಿವರಿಸಲಾಗಿದ್ದು ಇದರಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳಿ:

ಅಷ್ಟಕ್ಕೂ, ಕಪ್ಪು ವರ್ತುಲ ನಿವಾರಣೆಗೆ ಆಲುಗಡ್ಡೆಯೇ ಏಕೆ?

* ಆಲುಗಡ್ಡೆಯಲ್ಲಿ ನೈಸರ್ಗಿಕ ಬಿಳಿಚುಕಾರಕ ಗುಣವಿದ್ದು ಕಣ್ಣುಗಳ ಕೆಳಗಿನ ವರ್ತುಗಳ ಕಲೆಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಎ, ಪಿಷ್ಟ ಹಾಗೂ ಇತರ ಕಿಣ್ವಗಳಿದ್ದು ಚರ್ಮದ ಪೋಷಣೆಗೆ ನೆರವಾಗುತ್ತವೆ ಹಾಗೂ ವಿಶೇಷವಾಗಿ ಕಣ್ಣುಗಳ ಕೆಳಗಿನ ತೆಳುವಾದ ಚರ್ಮಕ್ಕೆ ಈ ಪೋಷಕಾಂಶಗಳು ಹೆಚ್ಚಿನ ನೆರವು ನೀಡಿ ಕಪ್ಪು ವರ್ತುಲಗಳಾಗದಂತೆ ನೆರವು ನೀಡುತ್ತವೆ.

* ಇದರಲ್ಲಿರುವ ಉರಿಯೂತ ನಿವಾರಕ ಗುಣ ಹಾಗೂ ವಿಶೇಷವಾಗಿ ಅಲುಗಡ್ಡೆಯಲ್ಲಿರುವ catecholase ಎಂಬ ಪೋಷಕಾಂಶ ಕಣ್ಣುಗಳ ಕೆಳಗಿನ ಚರ್ಮದಡಿಯಲ್ಲಿ ನೀರು ತುಂಬಿಕೊಂಡು ಚಿಕ್ಕ ಬೆಲೂನುಗಳಂತಾಗುವುದನ್ನೂ ತಪ್ಪಿಸುತ್ತದೆ.

* ಆಲುಗಡ್ಡೆಗಳು ಈ ಭಾಗದ ಚರ್ಮಕ್ಕೆ ಹೆಚ್ಚಿನ ಆರ್ದ್ರತೆ ನೀಡುವ ಮೂಲಕ ಈ ಭಾಗದ ಚರ್ಮ ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಮತ್ತೊಮ್ಮೆ ನವಚೇತನ ಪಡೆದು ಕಲೆಗಳು ಇಲ್ಲವಾಗಲು ಸಾಧ್ಯವಾಗುತ್ತದೆ.

ಕಪ್ಪು ವರ್ತುಲ ನಿವಾರಣೆಗೆ ಆಲುಗಡ್ಡೆಯನ್ನು ಬಳಸುವುದು ಹೇಗೆ?

ಕೆಳಗೆ ವಿವರಿಸಿದ ಹತ್ತು ವಿಧಾನಗಳಲ್ಲಿ ನಿಮಗೆ ಸೂಕ್ತವೆನಿಸಿದುದನ್ನು ಆರಿಸಿಕೊಂಡು ನಿಯಮಿತವಾಗಿ ಪಾಲಿಸುವ ಮೂಲಕ ಕಪ್ಪು ವರ್ತುಲಗಳನ್ನು ಶೀಘ್ರವೇ ಇಲ್ಲವಾಗಿಸಬಹುದು.

ಹಸಿ ಆಲುಗಡ್ಡೆಯ ರಸ

ಹಸಿ ಆಲುಗಡ್ಡೆಯ ರಸ

ಕಪ್ಪು ವರ್ತುಲಗಳನ್ನು ಸಮರ್ಥವಾಗಿ ನಿವಾರಿಸಬಲ್ಲ ಆಲುಗಡ್ಡೆಯನ್ನು ತುರಿದು ಹಿಂಡಿದ ರಸ, ತಿರುಳನ್ನು ಅರೆದು ಮಾಡಿದ ಲೇಪನ ಅಥವಾ ತೆಳುವಾಗಿ ಕತ್ತರಿಸಿದ ಬಿಲ್ಲೆಯ ರೂಪದಲ್ಲಿ ಬಳಸಬಹುದು.

ರಸದ ರೂಪದ ಬಳಕೆ(ಸಾಮಾನ್ಯ ತ್ವಚೆಗೆ ಸೂಕ್ತ):

ಕೊಂಚ ಹಸಿ ಆಲುಗಡ್ಡೆಯನ್ನು ಚಿಕ್ಕದಾಗಿ ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಒಂದು ಘಂಟೆ ಕಾಲ ಫ್ರಿಜ್ಜಿನಲ್ಲಿರಿಸಿ. ಬಳಿಕ ಎರಡು ಹತ್ತಿಯುಂಡೆಗಳನ್ನು ತಣ್ಣಗಾಗಿರುವ ಈ ರಸದಲ್ಲಿ ಅದ್ದಿ ಕಣ್ಣುಗಳ ಕೆಳಭಾಗವನ್ನು ಅದ್ದಿಕೊಂಡು ಈ ಹತ್ತಿಯುಂಡೆಗಳನ್ನು ಕಪ್ಪಗಾದ ಭಾಗದ ಮೇಲಿರಿಸಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಂಡೆಗಳನ್ನು ನಿವಾರಿಸಿ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಅಥವಾ ಸೋಪು ಬೇಡ. ಬಳಿಕ ಸ್ವಚ್ಛ ಟವೆಲ್ಲಿನಿಂದ ಒರೆಸಿಕೊಳ್ಳಿ.

ನಿತ್ಯವೂ ಒಂದೇ ಸಮಯದಲ್ಲಿ ಈ ವಿಧಾನವನ್ನು ಅನುಸರಿಸುವ ಮೂಲಕ ಕೆಲವೇ ದಿನಗಳಲ್ಲಿ ಕಪ್ಪು ವರ್ತುಲಗಳು ಇಲ್ಲವಾಗುತ್ತವೆ.

ಬಿಲ್ಲೆಗಳ ರೂಪದ ಬಳಕೆ(ಸಾಮಾನ್ಯ ತ್ವಚೆಗೆ ಸೂಕ್ತ):

ಬಿಲ್ಲೆಗಳ ರೂಪದ ಬಳಕೆ(ಸಾಮಾನ್ಯ ತ್ವಚೆಗೆ ಸೂಕ್ತ):

ಒಂದು ದೊಡ್ಡ ಆಲುಗಡ್ಡೆಯನ್ನು ಸುಮಾರು ಒಂದು ಘಂಟೆಯ ಕಾಲ ಫ್ರಿಜ್ಜಿನಲ್ಲಿರಿಸಿ.

ಬಳಿಕ ಇದರ ಸಿಪ್ಪೆ ಸುಲಿದು ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿ ನಡುಭಾಗದ ಎರಡು ಅತಿ ಹೆಚ್ಚು ಅಗಲವಾದ ಬಿಲ್ಲೆಗಳನ್ನು ಕಪ್ಪು ವರ್ತುಲಗಳ ಮೇಲಿರಿಸಿ. ಬೆರಳುಗಳಿಂದ ಬಿಲ್ಲೆಗಳ ಮೇಲೆ ಕೊಂಚ ಒತ್ತಡ ಹೇರಿ ಗರಿಷ್ಟ ಭಾಗ ಚರ್ಮಕ್ಕೆ ತಾಕುವಂತೆ ಮಾಡಿ.

ಹೀಗೇ ಸುಮಾರು ಇಪ್ಪತ್ತು ನಿಮಿಷ ಬಿಲ್ಲೆಗಳು ತಾಕಿಕೊಂಡೇ ಇರುವಂತೆ ಬಿಡಿ.

ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಅಥವಾ ಸೋಪು ಬೇಡ. ಬಳಿಕ ಸ್ವಚ್ಛ ಟವೆಲ್ಲಿನಿಂದ ಒರೆಸಿಕೊಳ್ಳಿ.

ನಿತ್ಯವೂ ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸುವ ಮೂಲಕ ಕೆಲವೇ ದಿನಗಳಲ್ಲಿ ಕಪ್ಪು ವರ್ತುಲಗಳು ಇಲ್ಲವಾಗುತ್ತವೆ.

ಆಲುಗಡ್ಡೆ ಮತ್ತು ಸೌತೆಕಾಯಿ: (ಈ ವಿಧಾನ ಎಣ್ಣೆ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ)

ಆಲುಗಡ್ಡೆ ಮತ್ತು ಸೌತೆಕಾಯಿ: (ಈ ವಿಧಾನ ಎಣ್ಣೆ ಚರ್ಮದವರಿಗೆ ಹೆಚ್ಚು ಸೂಕ್ತವಾಗಿದೆ)

ಸೌತೆಕಾಯಿಯಲ್ಲಿರುವ ಕೊಲ್ಯಾಜೆನ್ ಎಂಬ ಪ್ರೋಟೀನ್ ಚರ್ಮಕ್ಕೆ ಬಿಳಿಚುಕಾರಕವಾಗಿಯೂ ತಂಪುಕಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ ಹಾಗೂ ತ್ವಚೆ ನಯವಾಗಿಯೂ ಮೃದುವಾಗಿಯೂ ಇರಲು ನೆರವಾಗುತ್ತದೆ. ಇದರ ರಕ್ತಸ್ರಾವ ತಡೆಗಟ್ಟುವ ಗುಣ ಚರ್ಮದಲ್ಲಿ ಕಲೆಗಳಾಗದಂತೆ ಹಾಗೂ ಒರಟಾಗದಂತೆ ತಡೆಯುತ್ತದೆ. ಸೌತೆಯಲ್ಲಿ 95% ನೀರಿದೆ ಹಾಗೂ ಈ ನೀರು ಚರ್ಮದ ಸೂಕ್ಷ್ಮರಂಧ್ರಗಳಿಂದ ಚರ್ಮದಾಳಕ್ಕೆ ಇಳಿದು ಆರ್ದತೆ ಒದಗಿಸುತ್ತದೆ.

ವಿಧಾನ:

ಒಂದು ದೊಡ್ಡ ಹಸಿ ಆಲುಗಡ್ಡೆಯ ಸಿಪ್ಪೆ ಸುಲಿದು ಚಿಕ್ಕದಾಗಿ ತುರಿಯಿರಿ. ಬಳಿಕ ಈ ತುರಿಯನ್ನು ಹಿಂಡಿ ರಸ ಸಂಗ್ರಹಿಸಿ.

ಒಂದು ಸಾಧಾರಣ ಗಾತ್ರದ ಎಳೆಯ ಸೌತೆಕಾಯಿಯನ್ನೂ ತುರಿದು ನುಣ್ಣಗೆ ಅರೆಯಿರಿ.

ಒಂದು ಬೋಗುಣಿಯಲ್ಲಿ ಅರೆದ ಸೌತೆ ಹಾಗೂ ಆಲುಗಡ್ಡೆಯ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಫ್ರಿಜ್ಜಿನಲ್ಲಿ ಸುಮಾರು ಒಂದು ಘಂಟೆ ಇರಿಸಿ. ಬಳಿಕ ಎರಡು ದೊಡ್ಡ ಹತ್ತಿಯುಂಡೆಗಳನ್ನು ಈ ದ್ರವದಲ್ಲಿ ಮುಳುಗಿಸಿ ಕಪ್ಪು ವರ್ತುಗಳ ಮೇಲೆ ತೆಳುವಾಗಿ ಲೇಪಿಸಿದ ಬಳಿಕ ಉಂಡೆಗಳನ್ನು ವರ್ತುಲಗಳ ಮೇಲಿರಿಸಿ ಸುಮಾರು ಇಪ್ಪತ್ತು ನಿಮಿಷ ಪವಡಿಸಿ. ಬಳಿಕ ಉಂಡೆಗಳನ್ನು ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಅನುಸರಿಸಿ.

ಆಲುಗಡ್ಡೆ, ಜೇನು ಮತ್ತು ಆಲಿವ್ ಎಣ್ಣೆ: ( ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತ)

ಆಲುಗಡ್ಡೆ, ಜೇನು ಮತ್ತು ಆಲಿವ್ ಎಣ್ಣೆ: ( ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತ)

ಜೇನಿನಲ್ಲಿರುವ ಉರಿಯೂತ ನಿವಾರಕ ಗುಣ ಚರ್ಮಕ್ಕೆ ಹೆಚ್ಚು ಆರಾಮವನ್ನು ನೀಡುತ್ತದೆ. ಆಲಿವ್ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು ಸಹಾ ಚರ್ಮದ ಆರೈಕೆಗೆ ಪೂರಕವಾಗಿವೆ. ಈ ಮಿಶ್ರಣ ಚರ್ಮದಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಕಪ್ಪು ವರ್ತುಲಗಳನ್ನು ಮತ್ತೆ ಸಹಜವರ್ಣಕ್ಕೆ ತಿರುಗಿಸುವಲ್ಲಿ ಸಮರ್ಥವಾಗಿವೆ.

ವಿಧಾನ:

ಒಂದು ಮಧ್ಯಮ ಗಾತ್ರದ ಆಲುಗಡ್ಡೆಯನ್ನು ತುರಿದು ಒಂದು ಚಿಕ್ಕ ಚಮಚ ಜೇನು ಮತ್ತು ಎರಡು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಕಪ್ಪು ವರ್ತುಲದ ಮೇಲೆ ದಪ್ಪನಾಗಿ ಹಚ್ಚಿಕೊಂಡು ಪವಡಿಸಿ. ಆದರೆ ಕಣ್ಣುಗಳ ಒಳಗೆ ಹೋಗದಂತೆ ಜಾಗ್ರತೆ ವಹಿಸಿ.

ಈ ಲೇಪನವನ್ನು ಸುಮಾರು ಅರ್ಧ ಘಂಟೆಯವರೆಗೆ ಹಾಗೇ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ವಾರದಲ್ಲಿ ಮೂರರಿಂದ ನಾಲ್ಕು ಬಾರಿ, ಅಂದರೆ ದಿನ ಬಿಟ್ಟು ದಿನ ಅನುಸರಿಸಿ.

ಆಲುಗಡ್ಡೆ ಮತ್ತು ಲಿಂಬೆರಸ: (ಅತಿ ಹೆಚ್ಚು ಗಾಢವಾಗಿರುವ ವರ್ತುಲಗಳಿಗೆ ಸೂಕ್ತ)

ಆಲುಗಡ್ಡೆ ಮತ್ತು ಲಿಂಬೆರಸ: (ಅತಿ ಹೆಚ್ಚು ಗಾಢವಾಗಿರುವ ವರ್ತುಲಗಳಿಗೆ ಸೂಕ್ತ)

ಲಿಂಬೆರಸ ಒಂದು ಪ್ರಬಲ ಬಿಳಿಚುಕಾರಕವಾಗಿದ್ದು ಕಪ್ಪುಕಲೆಗಳನ್ನು ಮತ್ತು ವರ್ತುಲಗಳನ್ನು ಹೋಗಲಾಡಿಸಲು ಸಮರ್ಥವಾಗಿದೆ. ಅಲ್ಲದೇ ತುಂಬಿಕೊಂಡಿರುವ ಕಣ್ಣುಗಳ ಕೆಳಭಾಗದಲ್ಲಿ ರಕ್ತಪರಿಚಲನೆ ಹೆಚ್ಚಿಸಿ ಇಲ್ಲಿನ ಕಲ್ಮಶಗಳನ್ನು ನಿವಾರಿಸಿ ತುಂಬಿಕೊಂಡಿರುವ ಚೀಲಗಳನ್ನು ಬರಿದು ಮಾಡುತ್ತದೆ. ಅಲ್ಲದೇ ಲಿಂಬೆ ಚರ್ಮದಾಳಕ್ಕೆ ಇಳಿದು ಪೋಷಣೆಯನ್ನೂ ಒದಗಿಸುತ್ತದೆ ಹಾಗೂ ಸೋಂಕನ್ನೂ ನಿವಾರಿಸುತ್ತದೆ.

ವಿಧಾನ:

ಒಂದು ಮಧ್ಯಮ ಗಾತ್ರದ ಆಲುಗಡ್ಡೆಯನ್ನು ತುರಿದು ನಾಲ್ಕು ದೊಡ್ಡ ಚಮಚ ಲಿಂಬೆರಸ ಬೆರೆಸಿ ನುಣ್ಣಗೆ ಅರೆಯಿರಿ.

ಬಳಿಕ ಈ ಮಿಶ್ರಣವನ್ನು ಒಂದು ಘಂಟೆ ಕಾಲ ಫ್ರಿಜ್ಜಿನಲ್ಲಿರಿಸಿ.

ತಣ್ಣಗಾಗಿರುವ ಈ ಮಿಶ್ರಣವನ್ನು ಎರಡು ದೊಡ್ಡ ಹತ್ತಿಯುಂಡೆಯಲ್ಲಿ ಅದ್ದಿ ದಪ್ಪನಾಗಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ ಬಳಿಕ ಅಲ್ಲಿಯೇ ಇರಿಸಿ ಪವಡಿಸಿ

ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರಿ. ಉತ್ತಮ ಪರಿಣಾಮ ಪಡೆಯಲು ವಾರದಲ್ಲಿ ಮೂರರಿಂದ ನಾಲ್ಕು ಬಾರಿ, ಅಂದರೆ ದಿನ ಬಿಟ್ಟು ದಿನ ಅನುಸರಿಸಿ.

ಟೊಮಾಟೋ ಮತ್ತ್ತು ಆಲುಗಡ್ಡೆ (ಸೂಕ್ಷ್ಮ ಸಂವೇದಿ ತ್ವಚೆಗೆ)

ಟೊಮಾಟೋ ಮತ್ತ್ತು ಆಲುಗಡ್ಡೆ (ಸೂಕ್ಷ್ಮ ಸಂವೇದಿ ತ್ವಚೆಗೆ)

ಟೊಮಾಟೋ ಸಹಾ ಕಡಿಮೆ ಪ್ರಾಬಲ್ಯದ ಬಿಳಿಚುಕಾರಕವಾಗಿದ್ದು ಲಿಂಬೆ ಅಥವಾ ಇತರ ಬಿಳಿಚುಕಾರಕಗಳು ಚರ್ಮಕ್ಕೆ ಉರಿ ತರಿಸಿದರೆ ಅವುಗಳ ಬದಲಿಗೆ ಬಳಸಬಹುದು. ಇದರಲ್ಲಿರುವ ಲೈಕೋಪೀನ್ ಎಂಬ ಪೋಷಕಾಂಶ ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ತ್ವಚೆಯ ಕಪ್ಪು ವರ್ತುಲಗಳನ್ನು ನಿವಾರಿಸಲೂ ನೆರವಾಗುತ್ತದೆ. ಅಲ್ಲದೇ ಟೊಮಾಟೋದಲ್ಲಿರುವ ವಿಟಮಿನ್ ಎ ಘಾಸಿಗೊಂಡ ಜೀವಕೋಶಗಳನ್ನು ಸರಿಪಡಿಸುತ್ತದೆ ಹಾಗೂ ಹೊಸ ಜೀವಕೋಶಗಳ ಉತ್ಪತ್ತಿಗೂ ನೆರವಾಗುತ್ತದೆ.

ವಿಧಾನ:

ಒಂದು ಚೆನ್ನಾಗಿ ಹಣ್ಣಾದ, ಮಧ್ಯಮ ಗಾತ್ರದ ಟೊಮಾಟೋವನ್ನು ಕತ್ತರಿಸಿ ಸಿಪ್ಪೆ, ಬೀಜ ನಿವಾರಿಸಿ ತಿರುಳನ್ನು ಸಂಗ್ರಹಿಸಿ ಹಾಗೂ ಮಧ್ಯಮ ಗಾತ್ರದ ಆಲುಗಡ್ಡೆಗಳನ್ನು ಚಿಕ್ಕದಾಗಿ ತುರಿಯಿರಿ.

ಎರಡನ್ನೂ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಅರೆಯಿರಿ. ಈ ಮಿಶ್ರಣವನ್ನು ಎರಡು ದೊಡ್ಡ ಹತ್ತಿಯುಂಡೆಯಲ್ಲಿ ಅದ್ದಿ ದಪ್ಪನಾಗಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ ಬಳಿಕ ಅಲ್ಲಿಯೇ ಇರಿಸಿ ಪವಡಿಸಿ

ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮವನ್ನು ಪಡೆಯಲು ನಿತ್ಯವೂ ಒಂದೇ ಸಮಯದಲ್ಲಿ ಕಪ್ಪು ವರ್ತುಲಗಳು ನಿವಾರಣೆಯಾಗುವರೆಗೂ ಅನುಸರಿಸಿ.

ಬಾದಾಮಿ ಎಣ್ಣೆ ಮತ್ತು ಆಲುಗಡ್ಡೆ: (ಮೊಡವೆಗಳಿರುವ ತ್ವಚೆಗೆ ಹಾಗೂ ಕಣ್ಣುಗಳ ಕೆಳಗೆ ಊದಿಕೊಂಡಿದ್ದರೆ)

ಬಾದಾಮಿ ಎಣ್ಣೆ ಮತ್ತು ಆಲುಗಡ್ಡೆ: (ಮೊಡವೆಗಳಿರುವ ತ್ವಚೆಗೆ ಹಾಗೂ ಕಣ್ಣುಗಳ ಕೆಳಗೆ ಊದಿಕೊಂಡಿದ್ದರೆ)

ಈ ವಿಧಾನ ಮೊಡವೆಗಳಿರುವವರಿಗೆ ಹೆಚ್ಚು ಸೂಕ್ತವಾಗಿದೆ. ಬಾದಾಮಿ ಎಣ್ಣೆಯ ಉರಿಯೂತ ನಿವಾರಣಾ ಗುಣ ಕಣ್ಣುಗಳ ಕೆಳಗಿನ ಚೀಲಗಳನ್ನು ಸರಿಪಡಿಸಲು ನೆರವಾಗುತ್ತದೆ ಹಾಗೂ ಕಪ್ಪು ವರ್ತುಲಗಳನ್ನೂ ನಿವಾರಿಸುತ್ತದೆ. ಇದರಲ್ಲಿರುವ ಪಾಮಿಟಿಕ್ ಆಮ್ಲ ಮತ್ತು ರೆಟಿನಾಲ್ ಎಂಬ ಪೋಷಕಾಂಶ ಚರ್ಮದಾಳದಲ್ಲಿ ಆರ್ದ್ರತೆಯನ್ನು ಒದಗಿಸುವ ಮೂಲಕ ಕಣ್ಣುಗಳ ಕೆಳಗಿನ ಸೂಕ್ಷ್ಮ ತ್ವಚೆಯಲ್ಲಿ ತುಂಬಿಕೊಂಡ ಕಲ್ಮಶ ನಿವಾರಿಸಿ ಹಿಂದಿನ ಸೌಂದರ್ಯವನ್ನು ಮತ್ತೆ ಪಡೆಯಲು ನೆರವಾಗುತ್ತದೆ.

ವಿಧಾನ:

ಸುಮಾರು 3-5 ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಿನಲ್ಲಿ ನೆನೆಸಿಡಿ.

ಮರುದಿನ ಬೆಳಿಗ್ಗೆ ಒಂದು ಮಧ್ಯಮ ಗಾತ್ರದ ಆಲುಗಡ್ಡೆಯ ಸಿಪ್ಪೆ ಸುಲಿದು, ತುರಿದು ನೆನೆಸಿಟ್ಟ ಬಾದಾಮಿಗಳೊಡನೆ ನುಣ್ಣಗೆ ಮಿಕ್ಸಿಯಲ್ಲಿ ಅರೆಯಿರಿ.

ಈ ಮಿಶ್ರಣವನ್ನು ಎರಡು ದೊಡ್ಡ ಹತ್ತಿಯುಂಡೆಗಳಲ್ಲಿ ಅದ್ದಿ ದಪ್ಪನಾಗಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ ಬಳಿಕ ಅಲ್ಲಿಯೇ ಇರಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪವಡಿಸಿ. ಬಳಿಕ ಉಂಡೆಗಳನ್ನು ನಿವಾರಿಸಿ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮವನ್ನು ಪಡೆಯಲು ನಿತ್ಯವೂ ಒಂದೇ ಸಮಯದಲ್ಲಿ ಕಪ್ಪು ವರ್ತುಲಗಳು ನಿವಾರಣೆಯಾಗುವರೆಗೂ ಅನುಸರಿಸಿ.

ಆಲುಗಡ್ಡೆ ಮತ್ತು ಮೊಸರು (ಬಿಸಿಲಿನಿಂದ ಕಪ್ಪಗಾಗಿರುವ ತ್ವಚೆಗೆ)

ಆಲುಗಡ್ಡೆ ಮತ್ತು ಮೊಸರು (ಬಿಸಿಲಿನಿಂದ ಕಪ್ಪಗಾಗಿರುವ ತ್ವಚೆಗೆ)

ಮೊಸರು ಸಹಾ ನೈಸರ್ಗಿಕ ಬಿಳಿಚುಕಾರಕವಾಗಿದ್ದು ಬಿಸಿಲಿಗೆ ಕಪ್ಪಗಾಗಿದ್ದ ತ್ವಚೆಯನ್ನು ಸಹಜವರ್ಣಕ್ಕೆ ತಿರುಗಿಸಲು ನೆರವಾಗುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುವ ಹಾಗೂ ಚರ್ಮದಾಳಕ್ಕೆ ಆರ್ದ್ರತೆಯನ್ನು ಒದಗಿಸುವ ಮೂಲಕ ಚರ್ಮಕ್ಕೆ ಅಗತ್ಯವಾದ ಕಾಂತಿಯನ್ನು ಒದಗಿಸುತ್ತದೆ.

ವಿಧಾನ:

ಒಂದು ಮಧ್ಯಮ ಗಾತ್ರದ ಆಲುಗಡ್ಡೆಯನ್ನು ತುರಿದು ಹಿಂಡಿ ರಸವನ್ನು ಸಂಗ್ರಹಿಸಿ.

ಒಂದು ದೊಡ್ಡ ಚಮಚ ಆಲುಗಡ್ಡೆ ರಸಕ್ಕೆ ಸಮಪ್ರಮಾಣದ ಗಟ್ಟಿ ಮೊಸರನ್ನು ಬೆರೆಸಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಎರಡು ದೊಡ್ಡ ಹತ್ತಿಯುಂಡೆಗಳಲ್ಲಿ ಅದ್ದಿ ದಪ್ಪನಾಗಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ ಬಳಿಕ ಅಲ್ಲಿಯೇ ಇರಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪವಡಿಸಿ. ಬಳಿಕ ಉಂಡೆಗಳನ್ನು ನಿವಾರಿಸಿ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮವನ್ನು ಪಡೆಯಲು ನಿತ್ಯವೂ ಒಂದೇ ಸಮಯದಲ್ಲಿ ಕಪ್ಪು ವರ್ತುಲಗಳು ನಿವಾರಣೆಯಾಗುವರೆಗೂ ಅನುಸರಿಸಿ.

ಪುದೀನಾ ಹಾಗೂ ಆಲೂಗಡ್ಡೆ (ತುಂಬಾ ವರ್ಷಗಳಿಂದ ಕಲೆಗಳು ಇದ್ದರೆ)

ಪುದೀನಾ ಹಾಗೂ ಆಲೂಗಡ್ಡೆ (ತುಂಬಾ ವರ್ಷಗಳಿಂದ ಕಲೆಗಳು ಇದ್ದರೆ)

ಪುದೀನಾ ಎಲೆಗಳಲ್ಲಿರುವ ವಿಟಮಿನ್ ಸಿ ಕೊಲ್ಯಾಜೆನ್ ಉತ್ಪಾದನೆಯನ್ನು ಪ್ರಚೋದಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ ಹಾಗೂ ನೆರಿಗೆ ಇಲ್ಲವಾಗಿಸುತ್ತದೆ. ಅಲ್ಲದೇ ಪುದಿನಾದಲ್ಲಿರುವ ಮೆಂಥಾಲ್ ರಕ್ತಪರಿಚಲನೆಯನ್ನು ಹೆಚ್ಚಿಸಿ ಚರ್ಮಕ್ಕೆ ಆರಾಮ ಒದಗಿಸುತ್ತದೆ ಹಾಗೂ ಹಳೆಯ ಕಲೆಗಳನ್ನೂ ನಿವಾರಿಸಲು ನೆರವಾಗುತ್ತದೆ.

ವಿಧಾನ

ಒಂದು ಮಧ್ಯಮ ಗಾತ್ರದ ಆಲುಗಡ್ಡೆ ಮತ್ತು ಸುಮಾರು ಸಮಪ್ರಮಾಣದ ತಾಜಾ ಪುದಿನಾ ಎಲೆಗಳನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ನುಣ್ಣಗೆ ಅರೆಯಿರಿ. ಈ ದಪ್ಪನೆಯ ಲೇಪನವನ್ನು ಕಪ್ಪು ವರ್ತುಲಗಳ ಮೇಲೆ ದಪ್ಪನಾಗಿ ಹಚ್ಚಿ ಪವಡಿಸಿ. ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಪವಡಿಸಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮವನ್ನು ಪಡೆಯಲು ನಿತ್ಯವೂ ಒಂದೇ ಸಮಯದಲ್ಲಿ ಕಪ್ಪು ವರ್ತುಲಗಳು ನಿವಾರಣೆಯಾಗುವರೆಗೂ ಅನುಸರಿಸಿ.

English summary

How To Remove Dark Circles With Potatoes: Effective Home Remedies

As we grow old, our skin tends to lose its elasticity and its ability to hold the moisture in. The skin under our eyes becomes thinner and then we develop dark circles. Lack of sleep, stress, poor diet, health problems, watching TV for a long time, working in front of the system for a long time, etc., contribute to the development of dark circles. In this article, we teach you the 10 different ways to use potatoes to treat dark circles under the eye. Read on.