For Quick Alerts
ALLOW NOTIFICATIONS  
For Daily Alerts

ಸೌಂದರ್ಯವರ್ಧಕ ಉತ್ಪನ್ನವಾಗಿ ಶ್ರೀಗಂಧದ ಪುಡಿಯನ್ನು ಬಳಸಿ

By Divya Pandith
|

ಮುಖದ ಮೇಲಿರುವ ಕಪ್ಪು ಕಲೆ, ಮೊಡವೆಗಳು, ಸುಕ್ಕುಗಟ್ಟುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ನಮ್ಮ ಸೌಂದರ್ಯವನ್ನು ಹಾಳುಮಾಡುತ್ತವೆ. ಕಣ್ಣಿನ ಕೆಳಭಾಗದಲ್ಲಿ ಗೋಚರಿಸುವ ಕಪ್ಪು ಕಲೆಗಳು ಮುಖದ ಸೌಂದರ್ಯವನ್ನು ಮಂಕಾಗಿಸುತ್ತದೆ. ಇವುಗಳ ನಿವಾರಣೆಗೆ ಅನೇಕ ಔಷಧಗಳು ಹಾಗೂ ಮರೆ ಮಾಚುವಂತಹ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವುಗಳಿಂದ ಶಾಶ್ವತವಾದ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಒಂದಿಷ್ಟು ಅಡ್ಡ ಪರಿಣಾಮಗಳನ್ನು ಎದುರಿಸ ಬೇಕಾಗುವುದು.

ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾದ ಶ್ರೀಗಂಧವು ಸೌಂದರ್ಯದ ಆರೈಕೆಗೆ ಬಹು ಉಪಕಾರಿ ಉತ್ಪನ್ನ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಉತ್ತಮವಾಗಿ ಹೋರಾಡುತ್ತವೆ. ಚರ್ಮ ಸುಕ್ಕುಗಟ್ಟುವುದು, ಮಂಕಾಗುವುದು ಹಾಗೂ ಕಲೆಗಳ ನಿವಾರಕವಾಗಿ ಕೆಲಸ ನಿರ್ವಹಿಸುವುದು. ಶ್ರೀಗಂಧ ಆಯುರ್ವೇದದಲ್ಲಿ ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಉತ್ಪನ್ನ. ಇದನ್ನು ಗಣನೀಯವಾಗಿ ಬಳಸುವುದರಿಂದ ಅನೇಕ ರೋಗಗಳನ್ನು ಸಹ ನಿವಾರಿಸಬಹುದು.

ನೀವೂ ಸಹ ಸೌಂದರ್ಯಕ್ಕೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದಾದರೆ ಶ್ರೀಗಂಧದೊಡನೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿ ಆರೈಕೆ ಮಾಡಿ. ಆರೈಕೆಯ ವಿಧಿ ವಿಧಾನಗಳ ಪರಿಚಯವನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ...

ಶ್ರೀಗಂಧದ ಪುಡಿ ಮತ್ತು ಹಾಲು

ಶ್ರೀಗಂಧದ ಪುಡಿ ಮತ್ತು ಹಾಲು

- ಒಂದು ಬೌಲ್‍ನಲ್ಲಿ 1/2 ಟೀಚಮಚ ಗಂಧದ ಪುಡಿ ಮತ್ತು 1 ಟೀಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಒಂದು ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ, ಮಾಯಿಶ್ಚರೈಸ್ ಕ್ರೀಮ್‍ಅನ್ನು ಅನ್ವಯಿಸಿ.

ಶ್ರೀಗಂಧದ ಪುಡಿ ಮತ್ತು ಗುಲಾಬಿ ನೀರು

ಶ್ರೀಗಂಧದ ಪುಡಿ ಮತ್ತು ಗುಲಾಬಿ ನೀರು

- 1/2 ಟೀ ಚಮಚ ಶ್ರೀಗಂಧದ ಪುಡಿಗೆ 2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- 10-15 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಶ್ರೀಗಂಧದ ಪುಡಿ ಮತ್ತು ನಿಂಬೆ ರಸ

ಶ್ರೀಗಂಧದ ಪುಡಿ ಮತ್ತು ನಿಂಬೆ ರಸ

- 1 ಟೀ ಚಮಚ ಶ್ರೀಗಂಧದ ಪುಡಿಗೆ 2 ಟೀ ಚಮಚ ನಿಂಬೆ ರಸ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- 10-15 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು, ಮಾಯಿಶ್ಚರೈಸ್ ಕ್ರೀಮ್‍ಅನ್ನು ಅನ್ವಯಿಸಿ.

 ಶ್ರೀಗಂಧದ ಪುಡಿ ಮತ್ತು ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿ ಮತ್ತು ಶ್ರೀಗಂಧದ ಪುಡಿ

- ವಿಟಮಿನ್ ಇ ಮಾತ್ರೆಯಿಂದ ತೈಲವನ್ನು ತೆಗೆದು 1/2 ಟೀಚಮಚ ಶ್ರೀಗಂಧದ ಪುಡಿಯೊಂದಿಗೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯ ಆರಲು ಬಿಡಿ. ನಂತರ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

 ಶ್ರೀಗಂಧದ ಪುಡಿ, ಸೌತೆಕಾಯಿ ಮತ್ತು ಆಲಿವ್ ಎಣ್ಣೆ

ಶ್ರೀಗಂಧದ ಪುಡಿ, ಸೌತೆಕಾಯಿ ಮತ್ತು ಆಲಿವ್ ಎಣ್ಣೆ

- 1/2 ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಸೌತೆಕಾಯಿ ರಸ ಮತ್ತು 1/2 ಟೀ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯ ಆರಲು ಬಿಡಿ. ನಂತರ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

- 1/2 ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- 10-15 ನಿಮಿಷಗಳ ಕಾಲ ಆರಲು ಬಿಡಿ. ನಂತರ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

ಶ್ರೀಗಂಧದ ಪುಡಿ ಮತ್ತು ಕಿತ್ತಳೆ ರಸ

ಶ್ರೀಗಂಧದ ಪುಡಿ ಮತ್ತು ಕಿತ್ತಳೆ ರಸ

- 1/2 ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಕಿತ್ತಳೆ ರಸ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- 15-20 ನಿಮಿಷಗಳ ಕಾಲ ಆರಲು ಬಿಡಿ. ನಂತರ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

ಶ್ರೀಗಂಧದ ಪುಡಿ ಮತ್ತು ಅಲೋವೆರಾ

ಶ್ರೀಗಂಧದ ಪುಡಿ ಮತ್ತು ಅಲೋವೆರಾ

- 1 ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಅಲೋವೆರಾ ಲೋಳೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸಿ.

- 15 ನಿಮಿಷದ ಬಳಿಕ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

English summary

How To Remove Dark Skin Patches With Sandalwood Powder

Do you have dark patches on your skin that you wish to get rid of? If so, then do read on, as today at Boldsky, we're letting you know about a natural ingredient that can be used for banishing dark skin patches. The component we're talking about is sandalwood aka chandan. An age-old remedy for various beauty ailments, sandalwood is a powerhouse of anti-bacterial properties as well as bleaching agents that can lighten dark patches on your skin like no other ingredient can.
X
Desktop Bottom Promotion