For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಮಾಡಿ ನೋಡಿ- ಹುಣಸೆ ಹಣ್ಣಿನ ಫೇಸ್ ಪ್ಯಾಕ್

|

ಮುಖದ ಸೌಂದರ್ಯ ಎಲ್ಲರಿಗೂ ಪ್ರಮುಖವಾದದ್ದು. ಮುಖದ ಕಾಂತಿ ಅಥವಾ ಸೌಂದರ್ಯದಿಂದಲೇ ಇತರರನ್ನು ಆಕಿರ್ಷಿಸಬಹುದು. ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯ ಹಾಗೂ ಮುಖದ ಕಾಂತಿಯ ಬಗ್ಗೆ ವಿಶೇಷ ಕಾಳಜಿಯಿರುತ್ತದೆ. ಹಾಗಾಗಿಯೇ ಅಂಗಡಿಯಲ್ಲಿ ದೊರೆಯುವ ವಿವಿಧ ಉತ್ಪನ್ನಗಳ ಬಳಕೆ ಮಾಡುತ್ತಾರೆ. ಆದರೆ ಆ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕ ಪದಾರ್ಥಗಳು ಒಮ್ಮೆ ಸೌಂದರ್ಯವನ್ನು ಆಕರ್ಷಣೆಯಿಂದ ಕೂಡಿರುವಂತೆ ಮಾಡಬಹುದು. ನಂತರ ಅದರ ಪರಿಣಾಮ ತ್ವಚೆಯ ಮೇಲೆ ಕೆಟ್ಟದ್ದನ್ನುಂಟುಮಾಡಬಹುದು.

ಚರ್ಮದ ಸೌಂದರ್ಯ ಉತ್ತಮ ವಾಗಿರಬೇಕು ಅಥವಾ ಕಾಂತಿಯಿಂದ ಕಂಗೊಳಿಸಬೇಕು ಎಂದರೆ ಅದರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಈ ಕ್ರಮಕ್ಕೆ ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನಗಳು ಉತ್ತಮ ಸಹಕಾರ ನೀಡುವವು. ಹೌದು, ಮನೆಯಲ್ಲಿ ಸಿಗುವ ಹುಣಸೆ ಹಣ್ಣು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಇದರ ರಸದಿಂದ ಮುಖವನ್ನು ತೊಳೆದರೆ ತ್ವಚೆಯು ಸ್ವಚ್ಛತೆಯಿಂದ ಕೂಡಿರುತ್ತದೆ. ಜೊತೆಗೆ ಹೆಚ್ಚಿನ ಆಕರ್ಷಣೆ ನೀಡುವುದು ಎನ್ನಲಾಗುತ್ತದೆ.

 ಹುಣಸೆ ಹಣ್ಣಿನ ಪ್ರಯೋಜನಗಳು

ಹುಣಸೆ ಹಣ್ಣಿನ ಪ್ರಯೋಜನಗಳು

ಹುಣಸೆ ಹಣ್ಣಿನಲ್ಲಿ ಎಎಚ್‍ಎ ಸಮೃದ್ಧವಾಗಿವೆ. ಹುಣಸೆ ಹಣ್ಣನ್ನು ಬಳಸುವುದರ ಮೂಲಕ ಚರ್ಮದ ಮೇಲೆ ಇರುವ ಸತ್ತಕೋಶಗಳನ್ನು ತೆಗೆದುಹಾಕಲು ಸಹಾಯವಾಗುವುದು. ಜೊತೆಗೆ ಚರ್ಮಕ್ಕೆ ಪುನರ್ ಯೌವನ ದೊರೆಯುವುದು. ಇದು ಚರ್ಮಕ್ಕೆ ಆಳವಾದ ಪೋಷಣೆ ನೀಡುವುದರ ಮೂಲಕ ಮೃದು ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕವಾಗಿಯೇ ಎಕ್ಸೋಲೇಯಿಂಗ್ ಏಜೆಂಟ್ ಮತ್ತು ಸೆಲ್ಯುಲೈಟ್ ಇರುವುದರಿಂದ ಚಿಕಿತ್ಸೆಗೆ ಅತ್ಯುತ್ತಮವಾದದ್ದು. ಹುಣಸೆ ಹಣ್ಣು ಪರಿಣಾಮಕಾರಿಯಾಗಿರುವುದರಿಂದ ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುವುದು.

ತ್ವಚೆಯ ಸಮಸ್ಯೆಗಳಿಗೆ ಒಳ್ಳೆಯದು

ತ್ವಚೆಯ ಸಮಸ್ಯೆಗಳಿಗೆ ಒಳ್ಳೆಯದು

ನಿಯಮಿತವಾಗಿ ಇದರ ಆರೈಕೆಯನ್ನು ಚರ್ಮಕ್ಕೆ ನೀಡಿದರೆ ಮುಖದ ಮೇಲಿರುವ ಕಪ್ಪು ಕಲೆ, ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲ, ಸುಕ್ಕುಗಟ್ಟುವುದು, ಮೊಡವೆಗಳ ನಿವಾರಣೆ, ಚರ್ಮದ ಬಣ್ಣ ಸೇರಿದಂತೆ ಅನೇಕ ಬಗೆಯ ಸಮಸ್ಯೆಗಳಿಂದ ಮುಕ್ತರಾಗಬಹುದು. ಹುಣಸೆ ಹಣ್ಣಿನ ಜೊತೆ ಇನ್ನಷ್ಟು ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿವುದರ ಮೂಲಕ ಅದರ ಶಕ್ತಿಯನ್ನು ದ್ವಿಗುಣ ಗೊಳಿಸಬಹುದು. ನಿಮಗೂ ನಿಮ್ಮ ತ್ವಚೆ ಅಥವಾ ಚರ್ಮ ಆರೋಗ್ಯಕರವಾಗಿ ಕಂಗೊಳಿಸಬೇಕು ಎನ್ನುವ ಆಶಯವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ಪರಿಚಯಿಸಿರುವ ಹುಣಸೆ ಹಣ್ಣಿನಿಂದ ಮುಖ ತೊಳೆಯುವ ವಿಧಾನ, ಅದರ ತಯಾರಿ ಹಾಗೂ ಬಳಕೆಯ ಬಗ್ಗೆ ಅರಿಯಿರಿ.

ಬೇಕಾಗುವ ಪದಾರ್ಥಗಳು

ಬೇಕಾಗುವ ಪದಾರ್ಥಗಳು

* 2 ಟೇಬಲ್ ಚಮಚ ಹುಣಸೆ ಹಣ್ಣಿನ ತಿರುಳು.

* 1 ಟೇಬಲ್ ಚಮಚ ಮೊಸರು.

* 1 ಟೇ ಚಮಚ ಗುಲಾಬಿ ನೀರು.

* 1 ವಿಟಮಿನ್ ಇ ಮಾತ್ರೆ ಅಥವಾ 1/2 ಟೇಬಲ್ ಚಮಚ ವಿಟಮಿನ್ ಇ ಪೌಡರ್.

* 1 ಟೀ ಚಮಚ ಜೇನುತುಪ್ಪ.

* 1 ಟೀ ಚಮಚ ಜೋಜೋಬಾ ಎಣ್ಣೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

- ಒಂದು ಬಟ್ಟಲಿನಲ್ಲಿ ಹುಣಸೆ ಹಣ್ಣಿನ ತಿರುಳು ಮತ್ತು ಮೊಸರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ನಂತರ ಗುಲಾಬಿ ನೀರನ್ನು ಸೇರಿಸಿ.

- ಒಂದು ವಿಟಮಿನ್ ಇ ಮಾತ್ರೆ ಅಥವಾ ವಿಟಮಿನ್ ಇ ಪುಡಿಯನ್ನು ಮಿಶ್ರಣಕ್ಕೆ ಸೇರಿಸಿ.

- ಜೇನುತುಪ್ಪವನ್ನು ಸೇರಿಸುವುದರ ಮೂಲಕ ಎಲ್ಲಾ ಸಾಮಾಗ್ರಿಗಳನ್ನು ಒಂದಾದ ನಂತರ ಒಂದನ್ನು ಸೇರಿಸುತ್ತಾ ಮಿಶ್ರಣ ಮಾಡುತ್ತಾ ಬನ್ನಿ.

- ಕೊನೆಯದಾಗಿ ಜೋಜೋಬಾ ಎಣ್ಣೆಯನ್ನು ಮಿಶ್ರಣಕ್ಕೆ ಸೇರಿಸಿ.

- ಮಿಶ್ರಣ ಸಿದ್ಧವಾದ ಬಳಿಕ ಅಂಗೈಯಲ್ಲಿ ಮಿಶ್ರಣವನ್ನು ತೆಗೆದುಕೊಂಡು ಮುಖಕ್ಕೆ ಅನ್ವಯಿಸಿ. ಬೆರಳುಗಳ ಸಹಾಯದಿಂದ ಮಸಾಜ್ ಮಾಡಿ.

- ಎರಡು ನಿಮಿಷ ಮುಖದ ಮೇಲೆ ಆರಲು ಬಿಡಿ. ನಂತರ ಮುಖವನ್ನು ತೊಳೆಯಿರಿ.

- ನಿತ್ಯವೂ ಈ ಕ್ರಮವನ್ನು ಅನ್ವಯಿಸುವುದರಿಂದ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

 ಹುಣಸೆ ಹಣ್ಣಿನ ಇನ್ನಷ್ಟು ಸರಳ ಫೇಸ್ ಪ್ಯಾಕ್ ಗಳು

ಹುಣಸೆ ಹಣ್ಣಿನ ಇನ್ನಷ್ಟು ಸರಳ ಫೇಸ್ ಪ್ಯಾಕ್ ಗಳು

ಕಡಲೆ ಹಿಟ್ಟು ಮತ್ತು ಹುಣಸೆ ಹಣ್ಣಿನ ತಿರುಳು

ಒಂದುವರೆ ಚಮಚದಷ್ಟು ಕಡಲೆಹಿಟ್ಟನ್ನು ತೆಗೆದುಕೊಂಡು ಅದನ್ನು ಅಷ್ಟೇ ಪ್ರಮಾಣದ ಹುಣಸೆ ಹಣ್ಣಿನ ತಿರುಳಿನ ಜತೆಗೆ ಮಿಶ್ರಣ ಮಾಡಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಟ್ಟು ಒಣಗಲು ಬಿಡಿ. ಎಣ್ಣೆಯಂಶವಿರುವ ಚರ್ಮಕ್ಕೆ ಇದು ತುಂಬಾ ಒಳ್ಳೆಯದು.

 ಓಟ್ಸ್ ಮತ್ತು ಹುಣಸೆ ಹಣ್ಣಿನ ತಿರುಳು

ಓಟ್ಸ್ ಮತ್ತು ಹುಣಸೆ ಹಣ್ಣಿನ ತಿರುಳು

ಒಂದು ಚಮಚ ಓಟ್ಸ್ ನ್ನು ನುಣ್ಣಗೆ ಹುಡಿ ಮಾಡಿಕೊಂಡು ಅದನ್ನು ಹುಣಸೆ ಹಣ್ಣಿನ ತಿರುಳಿನೊಂದಿಗೆ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೊಳೆಯಿರಿ. ಹುಣಸೆ ಹಣ್ಣಿನ ತಿರುಳಿಗೆ ನೀವು ಅರಿಶಿನ, ಮೊಸರು ಅಥವಾ ಅಕ್ಕಿಹಿಟ್ಟನ್ನು ಬಳಸಬಹುದು. ಆದರೆ ವಾರದಲ್ಲಿ ಒಂದು ಅಥವಾ ಎರಡು ಸಲ ಮಾತ್ರ ಬಳಸಿ. ನಿಮ್ಮ ಚರ್ಮದಲ್ಲಿ ಉರಿ ಕಾಣಿಸಿಕೊಂಡರೆ ತಕ್ಷಣ ತಣ್ಣೀರಿನಿಂದ ತೊಳೆಯಿರಿ.

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕೆಲವರಿಗೆ ಕುತ್ತಿಗೆಯ ಕೆಳಭಾಗ ಮತ್ತು ಭುಜದ ಮೇಲ್ಭಾಗದಲ್ಲಿ ಕೊಂಚ ಕಪ್ಪಗಾಗಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಗುಲಾಬಿ ನೀರು ಮತು ಜೇನುತುಪ್ಪ ಮತ್ತು ಹುಣಸೆಹಣ್ಣು ಕಿವುಚಿದ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಪ್ಪಗಾಗಿರುವ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ನೆರಿಗೆ ನಿವಾರಿಸಲು

ಚರ್ಮದ ನೆರಿಗೆ ನಿವಾರಿಸಲು

ಹುಳಿಯಲ್ಲಿರುವ ವಿಟಮಿನ್, ಕರಗದ ನಾರು, ಟಾರ್ಟಾರಿಕ್ ಆಮ್ಲ, ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ವಿಶೇಷವಾದ ಆರೈಕೆ ನೀಡುತ್ತದೆ ಹಾಗೂ ವೃದ್ಧಾಪ್ಯದಿಂದ ದೂರವಿರಿಸುತ್ತದೆ.ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆಹಣ್ಣು ಕಿವುಚಿದ ತಿರುಳು, ಜೇನುತುಪ್ಪ ಮತ್ತು ಕಡಲೆಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಪ್ರತಿದಿನ ರಾತ್ರಿ ನೆರಿಗೆಗಳಿರುವಲ್ಲಿ ತೆಳುವಾಗಿ ಹಚ್ಚುವ ಮೂಲಕ ನೆರಿಗೆಗಳು ದೂರವಾಗುತ್ತವೆ. ಪರಿಣಾಮವಾಗಿ ವೃದ್ಧಾಪ್ಯವೂ ದೂರವೇ ಉಳಿಯುತ್ತದೆ.

English summary

How To Make Tamarind Face pack At Home?

Rich in AHA, tamarind helps in removing dead skin cells from your skin, thus rejuvenating it. It deeply nourishes and moisturises your skin, making it soft and supple. Moreover, tamarind improves your skin tone. You can simply include tamarind in your beauty regime by making a tamarind-enriched face wash at home.
X
Desktop Bottom Promotion