ಬ್ಯೂಟಿ ಟಿಪ್ಸ್: ಅಕ್ಕಿ ತೊಳೆದ ನೀರಿನ ಸೌಂದರ್ಯ ರಹಸ್ಯಗಳು...

Posted By: Divya pandith
Subscribe to Boldsky

ಅಕ್ಕಿ ನೀರಿನಲ್ಲಿ ಅಗತ್ಯ ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಇರುತ್ತವೆ. ಹಾಗಾಗಿಯೇ ಶತಮಾನಗಳ ಕಾಲದಿಂದಲೂ ಅಕ್ಕಿ ನೀರನ್ನು ಸೌಂದರ್ಯ ವರ್ಧಕ ಉಪಯೋಗಗಳಿಗೆ ಉಪಯೋಗಿಸಿಕೊಂಡು ಬರಲಾಗುತ್ತಿದೆ. ಹೊರಗಿನ ಗಾಳಿಯಲ್ಲಿರುವ ಕಲ್ಮಶಗಳು, ಧೂಳು ಹಾಗೂ ರಾಸಾಯನಿಕ ಉತ್ಪನ್ನಗಳು ನಮ್ಮ ತ್ವಚೆಯ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಇವುಗಳಿಂದ ಅನೇಕ ಬಗೆಯ ತೊಂದರೆಗಳು ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಇವುಗಳ ನಿವಾರಣೆಗಾಗಿ ಇಂದಿಗೂ ಅನೇಕ ಮಹಿಳೆಯರು ಅಕ್ಕಿ ನೀರನ್ನು ಬಳಸುತ್ತಿದ್ದಾರೆ.

ಅಕ್ಕಿ ನೀರಿನಲ್ಲಿರುವ ಪೋಷಕ ಗುಣಗಳೊಂದಿಗೆ ಕೆಲವು ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡಿದರೆ ಇದರ ಶಕ್ತಿಯು ದ್ವಿಗುಣವಾಗುತ್ತದೆ. ನೀವು ನಿಮ್ಮ ತ್ವಚೆಯನ್ನು ಆರೈಕೆ ಮಾಡಬೇಕು ಹಾಗೂ ನಿತ್ಯವೂ ಹೊಳಪಿನಿಂದ ಕೂಡಿರಬೇಕು ಎಂದು ಬಯಸುವುದಾದರೆ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಉತ್ತಮ ಆರೈಕೆ ವಿಧಾನಗಳ ವಿವರಣೆಯನ್ನು ಪರಿಶೀಲಿಸಿ....

ಗುಲಾಬಿ ನೀರು ಮತ್ತು ಅಕ್ಕಿ ನೀರು

ಗುಲಾಬಿ ನೀರು ಮತ್ತು ಅಕ್ಕಿ ನೀರು

- 2-3 ಟೀ ಚಮಚ ಅಕ್ಕಿ ನೀರಿಗೆ 3 ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. ಟೋನರ್ ರೀತಿಯಲ್ಲಿ ಚರ್ಮವನ್ನು ಶುದ್ಧಗೊಳಿಸಿ.

- ಹೀಗೆ ಮಾಡುವುದರಿಂದ ಚರ್ಮದಲ್ಲಿರುವ ಕೊಳಕು ದೂರವಾಗುತ್ತದೆ.

- ಉತ್ತಮ ಫಲಿತಾಂಶಕ್ಕಾಗಿ ಈ ಕ್ರಮವನ್ನು ವಾರದಲ್ಲಿ ಎರಡು ಬಾರಿ ಅನ್ವಯಿಸಿ.

ಗ್ರೀನ್ ಟೀ ಮತ್ತು ಅಕ್ಕಿ ನೀರು

ಗ್ರೀನ್ ಟೀ ಮತ್ತು ಅಕ್ಕಿ ನೀರು

- 2 ಟೇಬಲ್ ಚಮಚ ಅಕ್ಕಿ ನೀರಿಗೆ 1 ಟೇಬಲ್ ಚಮಚ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯಗಳ ನಂತರ ತೊಳೆಯಿರಿ.

- ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮವು ಹೊಳಪು ಹಾಗೂ ಕಾಂತಿಯಿಂದ ಕೂಡಿರುತ್ತದೆ.

ಅಕ್ಕಿ ನೀರು ಮತ್ತು ಜೇನುತುಪ್ಪ

ಅಕ್ಕಿ ನೀರು ಮತ್ತು ಜೇನುತುಪ್ಪ

- 2 ಟೀ ಚಮಚ ಅಕ್ಕಿ ನೀರಿಗೆ 1 ಟೇಬಲ್ ಚಮಚ ಜೇನುತುಪ್ಪವನ್ನು ಬೆರೆಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ಮೊಡವೆಗಳ ನಿವಾರಣೆ ಹಾಗೂ ಉತ್ತಮ ತ್ವಚೆಗಾಗಿ ಈ ವಿಧಾನವನ್ನು ವಾರಕ್ಕೊಮ್ಮೆ ಅನ್ವಯಿಸಿ.

ಅಕ್ಕಿ ನೀರು ಮತ್ತು ಅಲೋವೆರಾ

ಅಕ್ಕಿ ನೀರು ಮತ್ತು ಅಲೋವೆರಾ

- 1 ಟೀ ಚಮಚ ಅಕ್ಕಿ ನೀರಿಗೆ 2 ಟೇಬಲ್ ಚಮಚ ಅಲೋವೆರಾ ಜೆಲ್‍ಅನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 30 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ಮೃದುವಾದ ತ್ವಚೆಗಾಗಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನ್ವಯಿಸಿ.

ಅಕ್ಕಿ ನೀರು ಮತ್ತು ಹಾಲಿನ ಪುಡಿ

ಅಕ್ಕಿ ನೀರು ಮತ್ತು ಹಾಲಿನ ಪುಡಿ

- ಒಂದು ಬೌಲ್‍ನಲ್ಲಿ 2 ಟೇಬಲ್ ಚಮಚ ಅಕ್ಕಿ ನೀರು ಮತ್ತು 1 ಟೇಬಲ್ ಚಮಚ ಹಾಲಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 20 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ತ್ವಚೆಗಾಗಿ ಈ ವಿಧಾನವನ್ನು ವಾರಕ್ಕೊಮ್ಮೆ ಅನ್ವಯಿಸಿ.

ಅಕ್ಕಿ ನೀರು ಮತ್ತು ನಿಂಬೆ ರಸ

ಅಕ್ಕಿ ನೀರು ಮತ್ತು ನಿಂಬೆ ರಸ

- 4 ಟೇಬಲ್ ಚಮಚ ಅಕ್ಕಿ ನೀರಿಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 20 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ಮೃದು ಮತ್ತು ಉತ್ತಮ ತ್ವಚೆಗಾಗಿ ಈ ವಿಧಾನವನ್ನು ವಾರಕ್ಕೊಮ್ಮೆ ಅನ್ವಯಿಸಿ.

ಅಕ್ಕಿ ನೀರು ಮತ್ತು ಸೌತೆಕಾಯಿ

ಅಕ್ಕಿ ನೀರು ಮತ್ತು ಸೌತೆಕಾಯಿ

- ಒಂದು ಬೌಲ್ ಸೌತೆಕಾಯಿ ಚೂರನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ 2 ಟೇಬಲ್ ಚಮಚ ಅಕ್ಕಿ ನೀರನ್ನು ಬೆರೆಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ಹೊಳಪಿನ ತ್ವಚೆ ಹಾಗೂ ಉತ್ತಮ ಆರೈಕೆಗಾಗಿ ಈ ವಿಧಾನವನ್ನು ವಾರಕ್ಕೊಮ್ಮೆ ಅನ್ವಯಿಸಿ.

ಅಕ್ಕಿನೀರು ಮತ್ತು ಶ್ರೀಗಂಧದ ಪುಡಿ

ಅಕ್ಕಿನೀರು ಮತ್ತು ಶ್ರೀಗಂಧದ ಪುಡಿ

- 1 ಟೇಬಲ್ ಚಮಚ ಅಕ್ಕಿ ನೀರಿಗೆ 1 ಟೀ ಚಮಚ ಶ್ರೀಗಂಧದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. 15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

- ತ್ವಚೆಯ ಮೇಲಿರುವ ಸುಕ್ಕುಗಳನ್ನು ತಡೆದು ಉತ್ತಮ ಹೊಳಪನ್ನು ಪಡೆಯಲು ಈ ವಿಧಾನವನ್ನು ವಾರಕ್ಕೊಮ್ಮೆ ಅನ್ವಯಿಸಿ.

English summary

How To Make Rice Water A Part Of Your Skin Care Routine

Rice water is a well-kept beauty secret of Asian women. Packed with essential nutrients and antioxidants, rice water has been around since centuries. A true favourite ingredient for clean and clear skin, rice water is still being used by thousands of women across the globe. Today at Boldsky, we're letting you know about numerous ways in which you can effortlessly incorporate rice water in your weekly skin care routine. Give this awesome ingredient a try to achieve the kind of skin you've always dreams of. Take a look at these ways here:
Story first published: Friday, January 19, 2018, 7:01 [IST]