For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಸೌತೆಕಾಯಿ ಫೇಶಿಯಲ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್...

By Sushma Charhra
|

ನಾವೆಲ್ಲರೂ ನಮ್ಮ ಚರ್ಮ ಮತ್ತು ಕೂದಲಿನ ಕಾಳಜಿ ತೆಗೆದುಕೊಳ್ಳುವುದನ್ನು ಪ್ರೀತಿಸುತ್ತೇವೆ. ಆದರೆ ಹೆಚ್ಚಿನವರು ಚರ್ಮದ ಕಾಳಜಿಗಾಗಿ ಮತ್ತು ಮಸಾಜ್ , ಫೇಶಿಯಲ್ ಇತ್ಯಾದಿ ಬ್ಯೂಟಿ ಚಿಕಿತ್ಸೆಗಳಿಗಾಗಿ ಅತಿಯಾಗಿ ಹಣ ತೆಗೆದುಕೊಳ್ಳುವ ಪಾರ್ಲರ್ ಗಳ ಮೊರೆ ಹೋಗುತ್ತೇವೆ. ಆದರೆ ಅವರು ನಿಜಕ್ಕೂ ನಮಗೆ ಹಿತವಾದದ್ದಾ? ಹೀಗೆ ಕೇಳಿದರೆ ಉತ್ತರ ಖಂಡಿತ ಇಲ್ಲ ಎನ್ನುವುದೇ ಆಗಿರುತ್ತದೆ. ಇದಕ್ಕೆ ಕಾರಣ ಸಲೂನ್ ನಲ್ಲಿ ನೀಡಲಾಗುವ ಚಿಕಿತ್ಸೆಗಳಲ್ಲಿ ಬಹಳಷ್ಟು ರಾಸಾಯನಿಕಗಳಿರುತ್ತವೆ.

ಒಂದು ವೇಳೆ ನೀವು ಹಣ್ಣಿನ ಮಸಾಜ್ ಇಲ್ಲವೇ ಹಣ್ಣಿನ ಫೇಶಿಯಲ್ ಅಥವಾ ಕ್ಲೀನ್ ಅಪ್ ಗಳನ್ನು ಮಾಡಿಸಿಕೊಂಡರೂ ಕೂಡ ಅದರಲ್ಲೂ ಕೆಲವು ಬಗೆಯ ಕೆಮಿಕಲ್ ಗಳಿರುವ ಸಾಧ್ಯತೆಯಿದೆ. ನೀವು ಹಣ್ಣಿನ ಚಿಕಿತ್ಸೆ ತೆಗೆದುಕೊಂಡಿದ್ದೀರಿ ಎಂದಾದರೆ ಅದು ನೈಸರ್ಗಿಕವಾಗಿಯೇ ಇರುತ್ತೆ ಮತ್ತು ರಾಸಾಯನಿಕ ರಹಿತವಾಗಿಯೇ ಇರುತ್ತೆ ಎಂದು ಹೇಳಲಾಗುವುದಿಲ್ಲ.

Cucumber face pack

ಹಾಗಾದ್ರೆ, ನಾವೇನು ಮಾಡಬೇಕು? ಮನೆಯಲ್ಲೇ ಫೇಶಿಯಲ್ ಮಾಡಿಕೊಂಡರೆ ಹೇಗಿರುತ್ತೆ? ಕೇಳೋಕೆ ಕುತೂಹಲಕಾರಿಯಾಗಿದೆ ಅಲ್ವಾ? ನಮ್ಮನ್ನ ನಂಬಿ. ನಾವು ಹೇಳುವ ಯಾವುದೇ ವಿಚಾರ ಕಠಿಣವಾಗಿ ಇರುವುದಿಲ್ಲ.ಬದಲಾಗಿ ನೀವು ಸುಲಭದಲ್ಲಿ ಕಡಿಮೆ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಬಹುದು.

ಈ ಫೇಶಿಯಲ್ ಗಳನ್ನು ನೀವು ಮನೆಯಲ್ಲೇ 3 ಹಂತಗಳಲ್ಲಿ ತಯಾರಿಸಿಕೊಳ್ಳಬಹುದು. ಅವುಗಳು ಯಾವುವೆಂದರೆ ಟೋನರ್, ಸ್ಕ್ರಬ್ ಮತ್ತು ಫೇಸ್ ಪ್ಯಾಕ್... ಈ ಎಲ್ಲದನ್ನು ತಯಾರಿಸಿಕೊಳ್ಳುವುದಕ್ಕೆ ನಿಮಗೆ ಬೇಕಾಗಿರುವ ಪ್ರಮುಖವಾದ ಒಂದು ಪದಾರ್ಥವೆಂದರೆ ಅದು ಸೌತೆಕಾಯಿ..ಎಸ್.. ಸೌತೆಕಾಯಿಯಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಹಾಗಾದ್ರೆ ಸೌತೆಕಾಯಿಯಿಂದ ಹೇಗೆ ನಿಮ್ಮ ಫೇಶಿಯಲ್ ಕಿಟ್ ತಯಾರಿಸಿಕೊಳ್ಳಬಹುದು ಎಂಬ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. ಹಂತಹಂತವಾಗಿ ಅದರ ವಿಧಾನವನ್ನು ವಿವರಿಸಲಾಗಿದೆ. ಮುಂದೆ ಓದಿ...

ಟೋನರ್
ಟೋನರ್ ಅನ್ನುವುದು ಫೇಶಿಯಲ್ ನ ಮೊದಲ ಹಂತವಾಗಿರುತ್ತೆ. ಹಾಗಾದ್ರೆ ಟೋನರ್ ತಯಾರಿಕೆಗೆ ಬೇಕಾಗುವ ಪದಾರ್ಥಗಳಿಂದ ಮೊದಲು ಆರಂಭಿಸೋಣ..

ಬೇಕಾಗುವ ಪದಾರ್ಥಗಳು
1 ಸೌತೆಕಾಯಿ
1 ನಿಂಬೆಹಣ್ಣು
1 ಬಾಟಲಿ, ಟೋನರ್ ನ್ನು ಶೇಖರಿಸಿಟ್ಟು ನಂತರ ಬಳಕೆ ಮಾಡಲು

ಹೇಗೆ ತಯಾರಿಸುವುದು
ಒಂದು ಮಧ್ಯಮ ಗಾತ್ರದ ಪಾತ್ರೆ ತೆಗೆದುಕೊಳ್ಳಿ.
ಸೌತೆಕಾಯಿಯ ಸಿಪ್ಪೆಯನ್ನು ತೆಗೆಯಿರಿ
ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಮತ್ತು ಅದನ್ನು ಗ್ರೈಂಡ್ ಮಾಡಿಕೊಳ್ಳಿ
ಸೋಸುವ ಜಾಲಿ ತೆಗೆದುಕೊಂಡು ಮಿಕ್ಸಿ ಮಾಡಿದ ಮಿಶ್ರಣವನ್ನು ಸೋಸಿ ಕೇವಲ ಸೌತೆಕಾಯಿಯ ರಸ ತೆಗೆದುಕೊಳ್ಳಿ
ನಿಂಬೆಹಣ್ಣನ್ನು ಕತ್ತರಿಸಿ ಅದರ ರಸ ತೆಗೆದು ಸೌತೆಕಾಯಿ ಜ್ಯೂಸಿಗೆ ಸೇರಿಸಿ
ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಸೌತೆಕಾಯಿ ರಸ ಮತ್ತು ನಿಂಬೆರಸ ಎರಡು ಚೆನ್ನಾಗಿ ಕೂಡಿಕೊಳ್ಳಬೇಕು
ಒಂದು ಬಾಟಲ್ ಗೆ ಹಾಕಿ ಶೇಖರಿಸಿ, ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಿ. ಮತ್ತೆ ಇದನ್ನು ಬಳಸಬಹುದಾಗಿದೆ.

ಸಲಹೆ - ಸೌತೆಕಾಯಿಯ ರಸವನ್ನು ಬೇರೆ ವಿಧಾನದಲ್ಲಿ ಬೇಕಿದ್ದರೂ ತೆಗೆಯಬಹುದು. ಅಥವಾ ನಿಮಗೆ ನುಣ್ಣಗೆ ರುಬ್ಬಲು ಸಾಧ್ಯವಾದರೆ ರಸ ತೆಗೆಯದೆಯೂ ಬಳಸಬಹುದು.
ಹೇಗೆ ಹಚ್ಚಿಕೊಳ್ಳುವುದು
ಸ್ವಲ್ಪ ಹತ್ತಿತೆಗೆದುಕೊಳ್ಳಿ ಅದನ್ನು ಟೋನರ್ ನಲ್ಲಿ ಅದ್ದಿ
ವೃತ್ತಾಕಾರದಲ್ಲಿ ನಿಮ್ಮ ಮುಖಕ್ಕೆ ಟೋನರ್ ನ್ನು ಹಚ್ಚಿಕೊಳ್ಳಿ
ಕಿವಿ,ಕಣ್ಣು ಮತ್ತು ಮೂಗನ್ನು ಆದಷ್ಟು ತಪ್ಪಿಸಿ ಹಚ್ಚಿಕೊಳ್ಳಿ
1 ರಿಂದ 2 ನಿಮಿಷಗಳ ವರೆಗೆ ಟೋನರ್ ನಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ
ಅದು ಒಣಗುವವರೆಗೂ ಕಾಯಿರಿ. ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ
ಸ್ವಚ್ಛವಾಗಿರುವ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ
ನೀವು ಹೀಗೆ ಸೌತೆಕಾಯಿ ಟೋನರ್ ಬಳಸುವುದರಿಂದ ಏನು ಲಾಭವಾಗುತ್ತೆ ಎಂದು ಆಲೋಚಿಸುತ್ತಿರಬಹುದು., ಸ್ಕ್ರಬ್, ಫೇಸ್ ಮಾಸ್ಕ್ ಏನು ಮಾಡಲಿದೆ ಎಂಬ ಗೊಂದಲವಿರಬಹುದು. ಖಂಡಿತವಾಗಲೂ ಹಲವಾರು ಉಪಯೋಗಗಳನ್ನು ನೀಡಲಿದೆ.ಆಶ್ಚರ್ಯಕರವಾಗಿರುವ ಲಾಭಗಳನ್ನು ತಿಳಿಯಲು ಮುಂದೆ ಓದಿ. ಖಂಡಿತವಾಗಲೂ ನೀವಿದನ್ನು ಓದುವುದರಿಂದ ನಿಮಗೆ ಲಾಭವಾಗಲಿದೆ.

ಸ್ಕ್ರಬ್
ಸೌತೆಕಾಯಿ ಫೇಷಿಯಲ್ ನ ಮುಂದಿನ ಭಾಗಕ್ಕೆ ತೆರಳುವುದಾದರೆ ಅದು ಸ್ಕ್ರಬ್ ಮಾಡುವುದು. ಇದು ಫೇಶಿಯಲ್ ನ ಪ್ರಮುಖ ವಿಧಾನ. ಯಾಕೆಂದರೆ ಇದು ನಿಮ್ಮ ಚರ್ಮದ ಡೆಡ್ ಸೆಲ್ ಗಳನ್ನು ತೆಗೆಯುತ್ತೆ ಮತ್ತು ಚರ್ಮವನ್ನು ಮೃದುವಾಗಿಸುತ್ತೆ.

ಬೇಕಾಗುವ ಪದಾರ್ಥಗಳು
1 ಸೌತೆಕಾಯಿ
1 ಟೇಬಲ್ ಸ್ಪೂನ್ ಸಕ್ಕರೆ
1 ಲಿಂಬೆ ಹಣ್ಣು

ಮಾಡುವ ವಿಧಾನ
ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಸೇರಿಸಿ
ನಿಂಬೆಹಣ್ಣನ್ನು ಕತ್ತರಿಸಿ, ಅದರ ರಸವನ್ನು ಪಾತ್ರೆಗೆ ಹಾಕಿ
ಸಕ್ಕರೆ ಮತ್ತು ನಿಂಬೆಯ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ
ಈಗ, ಸೌತೆಕಾಯಿಯನ್ನು ಕತ್ತರಿಸಿ ಅದನ್ನು ಸಕ್ಕರೆ ಮತ್ತು ನಿಂಬೆ ಮಿಶ್ರಣದ ರಸದಲ್ಲಿ ಅದ್ದಿ.
ಅದರಿಂದ ನಿಮ್ಮ ಮುಖವನ್ನು ಚೆನ್ನಾಗಿ ತಿಕ್ಕಿಕೊಳ್ಳಿ
ಸುಮಾರು 5 ನಿಮಿಷ ಹೀಗೆ ನಿಮ್ಮ ಮುಖವನ್ನು ರಬ್ ಮಾಡಿ.ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ
ಒಮ್ಮೆ ನೀವು ಸ್ಕ್ರಬ್ಬಿಂಗ್ ಮುಗಿಸಿದ ನಂತರ , ಫೇಶಿಯಲ್ ನ ಮೂರನೇ ಹಂತ ಮತ್ತು ತುಂಬಾ ಮಹತ್ವವಾಗಿರುವ ಹಂತದ ಬಗ್ಗೆ ತಿಳಿದುಕೊಳ್ಳೋಣ. ಅದುವೇ ಫೇಸ್ ಮಾಸ್ಕ್.

ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥಗಳು
2 ಟೇಬಲ್ ಸ್ಪೂನ್ ಸೌತೆಕಾಯಿ ರಸ
1 ಟೇಬಲ್ ಸ್ಪೂನ್ ರೋಸ್ ವಾಟರ್
2 ಟೇಬಲ್ ಸ್ಪೂನ್ ಮುಲ್ತಾನಿ ಮಿಟ್ಟಿ


ಮಾಡುವ ವಿಧಾನ
ಒಂದು ಬೌಲ್ ತೆಗೆದುಕೊಳ್ಳಿ ಮತ್ತು ಅದಕ್ಕೆ ಮುಲ್ತಾನಿ ಮಿಟ್ಟಿ ಸೇರಿಸಿ
ಅದಕ್ಕೆ ಸೌತೆಕಾಯಿ ರಸವನ್ನು ಸೇರಿಸಿ
ನಂತರ ರೋಸ್ ವಾಟರ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ
ಕೆಲವು ನಿಮಿಷ ಆ ಮಿಶ್ರಣವನ್ನು ಹಾಗೆಯೇ ಇಡಿ.ನಂತರ ಅದನ್ನು ಬಳಸಿ
ಹೇಗೆ ಹಚ್ಚಿಕೊಳ್ಳುವುದು?
ಒಂದು ಬ್ರಷ್ ತೆಗೆದುಕೊಂಡು ಮುಖಕ್ಕೆ ಫೇಸ್ ಪ್ಯಾಕ್ ನ್ನು ಹಚ್ಚಿಕೊಳ್ಳಿ
ಬಾಯಿ, ಕಿವಿ ಮತ್ತು ಕಣ್ಣಿನ ಭಾಗಕ್ಕೆ ಅಪ್ಲೈ ಮಾಡಬೇಡಿ
ನಿಮ್ಮ ಕುತ್ತಿಗೆಯ ಭಾಗಕ್ಕೂ ಹಚ್ಚುವುದನ್ನು ಮರೆಯಬೇಡಿ
ಸುಮಾರು 20 ನಿಮಿಷ ಹಾಗೆಯೇ ಬಿಡಿ. ಫೇಸ್ ಪ್ಯಾಕ್ ನಿಮ್ಮ ಮುಖದಲ್ಲಿ ಒಣಗಲಿ
ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಟವೆಲ್ ಬಳಸಿ ಮುಖವನ್ನು ಒರೆಸಿಕೊಳ್ಳಿ

ಈಗ ನಿಮ್ಮ ಸೌತೆಕಾಯಿ ಫೇಷಿಯಲ್ ನ ಎಲ್ಲಾ ಹಂತಗಳು ಮುಗಿದಂತಾಗಿದೆ. ಆದರೆ ಹೀಗೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಇನ್ನೂತಿಳಿದುಕೊಂಡಿಲ್ಲ ಅಲ್ಲವೇ? ಹಾಗಾದ್ರೆ ನಾವು ಈ ಫೇಶಿಯಲ್ ನ್ನು ಯಾಕೆ ಹಚ್ಚಿಕೊಳ್ಳಬೇಕು ಅಥವಾ ಮಾಡಿಕೊಳ್ಳಬೇಕು.. ಇದರಿಂದ ಏನೇನು ಲಾಭಗಳಾಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.. ಸೌತೆಕಾಯಿ ಫೇಶಿಯಲ್ ನ ಲಾಭಗಳು...
ಸೌತೆಕಾಯಿಯು 62 ಶೇಕಡಾ ನೀರಿನ ಅಂಶವನ್ನು ಹೊಂದಿರುವುದರಿಂದ , ನಿಮ್ಮ ಚರ್ಮ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತೆ.
. ಕಪ್ಪು ವರ್ತುಲವನ್ನು ಕಡಿಮೆ ಮಾಡಲು ಸಹಕಾರಿ
. ಆಂಟಿ ಟ್ಯಾನ್ ಏಜೆಂಟ್ ನಂತೆ ವರ್ತಿಸುತ್ತೆ
.ಹೊಳಪಿನ ಚರ್ಮವನ್ನು ಇದು ನೀಡುತ್ತೆ
ಇದು ಕಲೆಗಳನ್ನು ನಿವಾರಿಸುತ್ತೆ ಯಾರಿಗೆ ಶುಷ್ಕ ತ್ವಚೆ ಇರುತ್ತೋ ಅಂತವರಿಗೆ ಇದು ಬಹಳ ಒಳ್ಳೆಯದು, ಯಾಕೆಂದರೆ ಇದು ನಿಮ್ಮ ಚರ್ಮದಲ್ಲಿ ತೇವಾಂಶ ಉಳಿಸುತ್ತೆ.

English summary

How To Do A Cucumber Facial At Home In Three Easy Steps

Boldsky, have curated a summer-special facial kit, especially for you. This facial kit can be made at home in three easy steps. And...what are they, you may ask - toner, scrub and face pack. And, all of these things with just one ingredient - cucumber. Now, that sounds like some good deal, isn't it? So, let's begin with the fun-filled cucumber facial kit recipe, here is the step-by-step instruction.
X
Desktop Bottom Promotion