ಮುಖದ ಅಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆ ಹುಡಿಯ ಫೇಸ್ ಪ್ಯಾಕ್

Posted By: Hemanth
Subscribe to Boldsky

ಬಿಳಿಯಾಗಿ ಕಾಣಿಸಿಕೊಳ್ಳಬೇಕೆನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬಿಳಿಯಾಗಿದ್ದರೆ ಮಾತ್ರ ಸೌಂದರ್ಯ ಎಂದು ತಿಳಿದು ಕೊಂಡವರೂ ಇದ್ದಾರೆ. ಚರ್ಮದ ಬಣ್ಣವನ್ನು ಬಿಳಿಯಾಗಿಸಲು ಇಂದಿನ ದಿನಗಳಲ್ಲಿ ಸಾವಿರಾರು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇವುಗಳು ಚರ್ಮವನ್ನು ಬಿಳಿಯಾಗಿಸಿದರೂ ಒಳಗಿಂದ ಅದನ್ನು ದುರ್ಬಲಗೊಳಿಸುವುದು. ಅಂತಹ ಅಡ್ಡಪರಿಣಾಮ ಬೀರುವಂತಹ ಕ್ರೀಮ್‌ಗಳ ಬದಲಿಗೆ ಮನೆಯಲ್ಲೇ ಸಿಗುವಂತಹ ಕೆಲವು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಚರ್ಮ ಬಿಳಿಯಾಗಿಸಬಹುದು.

ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

ಇಂತಹ ಪ್ರಮುಖ ಸಾಮಗ್ರಿಯೆಂದರೆ ಅದು ಕಿತ್ತಳೆ ಸಿಪ್ಪೆ. ಕಿತ್ತಳೆ ಸಿಪ್ಪೆಯ ಹುಡಿಯನ್ನು ಬಳಸಿಕೊಂಡು ಚರ್ಮವನ್ನು ನೈಸರ್ಗಿಕವಾಗಿ ಬಿಳಿಯಾಗಿಸಬಹುದು. ಕಿತ್ತಳೆ ಸಿಪ್ಪೆಯ ಹುಡಿಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮದಲ್ಲಿನ ಕಪ್ಪು ಕಲೆಗಳನ್ನು ನಿವಾರಣೆ ಮಾಡಿ ಚರ್ಮ ಬಿಳಿಯಾಗಿಸಲು ಪ್ರಮುಖ ಪಾತ್ರ ವಹಿಸುವುದು ಮತ್ತು ಚರ್ಮದ ವಿನ್ಯಾಸ ಸುಧಾರಿಸುವುದು. ಕಿತ್ತಳೆ ಸಿಪ್ಪೆ ಹುಡಿಯೊಂದಿಗೆ ನೀವು ಚರ್ಮದ ಆರೈಕೆ ಹೇಗೆ ಮಾಡಬಹುದು ಎನ್ನುವ ಬಗ್ಗೆ ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿದುಕೊಳ್ಳಿ...

ಕಿತ್ತಳೆ ಸಿಪ್ಪೆ ಹುಡಿ ಮತ್ತು ಬಾದಾಮಿ ಎಣ್ಣೆ

ಕಿತ್ತಳೆ ಸಿಪ್ಪೆ ಹುಡಿ ಮತ್ತು ಬಾದಾಮಿ ಎಣ್ಣೆ

*ಒಂದು ಚಮಚ ಬಾದಾಮಿ ಎಣ್ಣೆ ಮತ್ತು 1/2 ಚಮಚ ಕಿತ್ತಳೆ ಸಿಪ್ಪೆ ಹುಡಿಯನ್ನು ಸರಿಯಾಗಿ ಮಿಶ್ರಣ ಮಾಡಿ.

*ಈ ಪೇಸ್ಟ್ ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಬಿಡಿ.

*ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ನಿಮ್ಮ ಚರ್ಮವು ಬಿಳಿಯಾಗುವುದು.

ಕಿತ್ತಳೆ ಸಿಪ್ಪೆ ಹುಡಿ ಮತ್ತು ಅಲೋವೆರಾ ಲೋಳೆ

ಕಿತ್ತಳೆ ಸಿಪ್ಪೆ ಹುಡಿ ಮತ್ತು ಅಲೋವೆರಾ ಲೋಳೆ

*1/2 ಚಮಚ ಕಿತ್ತಳೆ ಸಿಪ್ಪೆ ಹುಡಿ ಮತ್ತು ಒಂದು ಚಮಚ ಅಲೋವೆರಾ ಲೋಳೆ ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಚರ್ಮವು ಬಿಳಿಯಾಗಿ, ಸುಂದರವಾಗಿ ಕಾಣಬೇಕಾದರೆ ಈ ಮಿಶ್ರಣವನ್ನು ವಾರದಲ್ಲಿ ಒಂದು ಸಲ ಬಳಸಿ.

ಕಿತ್ತಳೆ ಸಿಪ್ಪೆ ಹುಡಿ, ಅರಿಶಿನ ಹುಡಿ ಮತ್ತು ತೆಂಗಿನೆಣ್ಣೆ

ಕಿತ್ತಳೆ ಸಿಪ್ಪೆ ಹುಡಿ, ಅರಿಶಿನ ಹುಡಿ ಮತ್ತು ತೆಂಗಿನೆಣ್ಣೆ

*ಅರ್ಧ ಚಮಚ ಕಿತ್ತಳೆ ಸಿಪ್ಪೆ ಹುಡಿ ಮತ್ತು ಒಂದು ಚಮಚ ತೆಂಗಿನೆಣ್ಣೆಗೆ ಒಂದು ಚಿಟಿಕೆ ಅರಿಶಿನ ಹಾಕಿ ಸರಿಯಾಗಿ ಕಲಸಿಕೊಳ್ಳಿ.

*ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಹತ್ತು ನಿಮಿಷ ಕಾಲ ಹಾಗೆ ಬಿಡಿ.

*ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿಕೊಂಡರೆ ಮುಖದ ಚರ್ಮವು ಬಿಳಿಯಾಗುವುದು.

ಕಿತ್ತಳೆ ಸಿಪ್ಪೆ ಹುಡಿ ಮತ್ತು ಮೊಟ್ಟೆಯ ಲೋಳೆ

ಕಿತ್ತಳೆ ಸಿಪ್ಪೆ ಹುಡಿ ಮತ್ತು ಮೊಟ್ಟೆಯ ಲೋಳೆ

*ಒಂದು ಮೊಟ್ಟೆಯ ಬಿಳಿ ಲೋಳೆ ಮತ್ತು ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿ

* ಸರಿಯಾಗಿ ಕಲಸಿಕೊಂಡು ಇದನ್ನು ಪೇಸ್ಟ್ ಮಾಡಿ.

*ಮುಖಕ್ಕೆ ಹಚ್ಚಿಕೊಂಡು ಅದನ್ನು 10-15 ನಿಮಿಷ ಕಾಲ ಹಾಗೆ ಬಿಡಿ.

*ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

*ತಿಂಗಳಲ್ಲಿ 2-3 ಸಲ ಇದನ್ನು ಬಳಸಿಕೊಂಡರೆ ಮುಖದ ಕಾಂತಿ ಮರಳಿ ಬರುವುದು ಮತ್ತು ಚರ್ಮವು ಬಿಳಿಯಾಗುವುದು.

ಕಿತ್ತಳೆ ಸಿಪ್ಪೆ ಹುಡಿ ಮತ್ತು ರೋಸ್ ವಾಟರ್

ಕಿತ್ತಳೆ ಸಿಪ್ಪೆ ಹುಡಿ ಮತ್ತು ರೋಸ್ ವಾಟರ್

*1/2 ಚಮಚ ಕಿತ್ತಳೆ ಸಿಪ್ಪೆ ಹುಡಿ ಮತ್ತು 2-3 ಚಮಚ ರೋಸ್ ವಾಟರ್ ಹಾಕಿ ಸರಿಯಾಗಿ ಮಿಶ್ರಣ ಮಾಡಿ.

*ಇದನ್ನು ಮುಖದ ಮೇಲೆ ಸರಿಯಾಗಿ ಹಚ್ಚಿಕೊಂಡು ಸುಮಾರು 10-15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ.

*ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

* ಸುಂದರ ಹಾಗೂ ಕಾಂತಿಯುತ ಚರ್ಮ ಪಡೆಯಲು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಕಿತ್ತಳೆ ಸಿಪ್ಪೆ ಹುಡಿ ಮತ್ತು ಆಲಿವ್ ತೈಲ

ಕಿತ್ತಳೆ ಸಿಪ್ಪೆ ಹುಡಿ ಮತ್ತು ಆಲಿವ್ ತೈಲ

*ಒಂದು ಸಣ್ಣ ಪಿಂಗಾಣಿಯಲ್ಲಿ 1/2 ಚಮಚ ಕಿತ್ತಳೆ ಸಿಪ್ಪೆ ಹುಡಿ ಮತ್ತು 2 ಚಮಚ ಆಲಿವ್ ತೈಲ ಹಾಕಿಕೊಂಡು ಮಿಶ್ರಣ ಮಾಡಿ.

*ಪೇಸ್ಟ್ ಮಾಡಿಕೊಳ್ಳಲು ಕೆಲ ಸಮಯ ಇದನ್ನು ಕಲಸಿಕೊಳ್ಳಿ.

*ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಂಡ ಬಳಿಕ ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಕ್ಲೆನ್ಸರ್ ಮತ್ತು ತಣ್ಣೀರು ಬಳಸಿ ಮುಖ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಕಪ್ಪು ಕಲೆಗಳು ನಿವಾರಣೆಯಾಗಿ ಚರ್ಮವು ಬಿಳಿಯಾಗುವುದು.

English summary

How To Brighten Your Complexion With Orange Peel Powder

Bright complexion is something that most of us yearn for. Not only does it up your beauty quotient but also makes your skin look naturally beautiful. There are numerous natural ingredients that can brighten your skin's complexion, but there is one in particular that has become highly popular in the beauty community. The ingredient we're talking about is the orange peel powder.