For Quick Alerts
ALLOW NOTIFICATIONS  
For Daily Alerts

ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಬೇಕಿಂಗ್ ಸೋಡಾ-ಅಕ್ಕಿಹಿಟ್ಟಿನ ಸ್ಕ್ರಬ್

By Sushma Charhra
|

ಚರ್ಮವನ್ನು ಆರೋಗ್ಯಯುತವಾದ ಕಾಪಾಡಿಕೊಳ್ಳುವುದು ಮತ್ತು ಹೊರಗಿನ ಕಲ್ಮಶಗಳಿಂದ ರಕ್ಷಿಸಿಕೊಂಡು ಚರ್ಮವು ಯಾವಾಗಲೂ ಹೊಳೆಯುವಂತೆ ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸ., ವರ್ಷದ ಯಾವುದೇ ಕಾಲವಿರಲಿ, ಚರ್ಮದ ರಕ್ಷಣೆ ಕಾಲಕ್ಕೆ ತಕ್ಕಂತೆ ಕಠಿಣವಾಗೇ ಇರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮತ್ತೂ ಕಷ್ಟ. ಇನ್ನು ಎಣ್ಣೆ ತ್ವಚೆ ಹೊಂದಿರುವವರಿಗೆ ಖಂಡಿತವಾಗ್ಲೂ ಚರ್ಮದ ಆರೈಕೆ ದೊಡ್ಡ ಹೊಣೆಗಾರಿಕೆಯಂತೆ ಕಾಣಿಸುತ್ತೆ. ಉತ್ತಮ ಚರ್ಮ ಯಾರಿಗೆ ತಾನೇ ಬೇಡ ಹೇಳಿ. ಎಲ್ಲರಿಗೂ ಚೆಂದದ ಚರ್ಮವನ್ನು ಹೊಂದಿರಬೇಕು ಎಂಬ ಬಯಕೆ ಇದ್ದೇ ಇರುತ್ತೆ.

ಪ್ರತಿದಿನ ಮತ್ತು ಪ್ರತಿವಾರವೂ ಚರ್ಮದ ಆರೈಕೆ ಮಾಡುತ್ತಲೇ ಇದ್ದರೆ ನೀವು ನಿಮ್ಮ ವಯಸ್ಸನ್ನೂ ಮೀರಿದ ಚರ್ಮದ ಸೌಂದರ್ಯವನ್ನು ಪಡೆಯಲು ಸಾಧ್ಯವಿದೆ. ಅದರಲ್ಲಿ ಚರ್ಮಕ್ಕೆ ಸ್ಕ್ರಬ್ ಮಾಡಿಕೊಳ್ಳುವುದು ಒಂದು ಪ್ರಮುಖ ವಿಧಾನವಾಗಿದೆ. ಕ್ಲೆನ್ಸಿಂಗ್ ಮತ್ತು ಮಾಯ್ಚರೈಸಿಂಗ್ ನ ಜೊತೆಗೆ ಸ್ಕ್ರಬ್ಬಿಂಗ್ ಕೂಡ ಚರ್ಮದ ಹೊಳಪಿಗೆ ಚರ್ಮದ ಆರೈಕೆಯ ವಿಧಾನದಲ್ಲಿ ಮಹತ್ವದ ಹಂತವಾಗಿದೆ.

ಚರ್ಮವನ್ನು ಮೃದುಗೊಳಿಸಲು ಮತ್ತು ಚರ್ಮವನ್ನು ಕಲೆರಹಿತವಾದ ಫರ್ಫೆಕ್ಟ್ ಚರ್ಮವಾಗಿ ಪರಿವರ್ತಿಸಲು ಸ್ಕ್ರಬ್ಬಿಂಗ್ ಒಂದು ಅಧ್ಬುತ ವಿಧಾನವಾಗಿದೆ.ಕೆಲವು ನಿಮಿಷ ಚರ್ಮವನ್ನು ಸ್ಕ್ರಬ್ ಮಾಡುವುದರಿಂದ ನಿಮ್ಮ ಚರ್ಮದಲ್ಲಿ ಸತ್ತುಹೋಗಿದ್ದ ಜೀವಕೋಶಗಳು ಹೊರಹೋಗುತ್ತವೆ ಮತ್ತು ಆರೋಗ್ಯಯುತ ಚರ್ಮದಂತೆ ನಿಮ್ಮ ಚರ್ಮವು ಕಾಂತಿ ಹೊಂದುತ್ತದೆ. ಹಾಗಾಗಿ ಮಿನುಗುವ ಚರ್ಮವನ್ನು ನೀವು ಪಡೆಯಬಹುದಾಗಿದೆ.

Soda Scrub

ಫೇಶಿಯಲ್ ಸ್ಕ್ರಬ್ ನ್ನು ಯಾಕೆ ಬಳಕೆ ಮಾಡಬೇಕು?
ನಿಮ್ಮ ಚರ್ಮವು ತಾಜಾತನ ಪಡೆಯಲು ಮತ್ತು ಸತ್ತ ಜೀವಕೋಳಗಳ ನಿವಾರಣೆಗೆ ಪ್ರಮುಖವಾಗಿ ಸ್ಕ್ರಬ್ಬಿಂಗ್ ಮಾಡಬೇಕು. ಸರಿಯಾಗಿ ಮೂರು ದಿನಗಳಿಗೊಮ್ಮೆಯಾದರೂ ಉತ್ತಮ ರೀತಿಯಲ್ಲಿ ನಿಮ್ಮ ಚರ್ಮಕ್ಕೆ ಸ್ಕ್ರಬ್ಬಿಂಗ್ ಮಾಡಿದರೆ ನಿಮ್ಮ ಚರ್ಮವು ಹೊಳಪು ಪಡೆಯಲಿದೆ. ಆದರೆ ನೀವು ದಿನನಿತ್ಯ ಬಳಸುವ ಸೋಪು ಇಲ್ಲವೇ ಫೇಸ್ ವಾಶ್ ನಿಂದ ಯಾವುದೇ ಸ್ಕ್ರಬ್ಬಿಂಗ್ ಮಾಡಿಕೊಳ್ಳಲು ಸಾಧ್ಯವಿಲ್ಲ.

ನಿಮ್ಮ ಚರ್ಮದಲ್ಲಿ ಕಾಂತಿ ಬರಲು ಸ್ಕ್ರಬ್ಬಿಂಗ್ ಏನು ಮಾಡುವುದೋ ಅದನ್ನು ಫೇಶಿಯಲ್ ಕ್ಲೆನ್ಸರ್ ಗಳು ಮಾಡಲು ಸಾಧ್ಯವಿಲ್ಲ. ಸ್ಕ್ರಬ್ ನಲ್ಲಿ ಸಣ್ಣಸಣ್ಣ ವಸ್ತುಗಳಿದ್ದು, ಅವು ಸಣ್ಣಸಣ್ಣ ಮಣಿಗಳಂತೆ ನಿಮ್ಮ ಚರ್ಮದ ಮೇಲೆ ವರ್ತಿಸಬೇಕು. ಈ ಪ್ರಕ್ರಿಯೆ ಮಾತ್ರ ನಿಮ್ಮ ಚರ್ಮದ ಸತ್ತ ಮತ್ತು ಹಳೆಯ ಜೀವಕೋಶಗಳನ್ನು ತೆಗೆಯಲು ನೆರವು ನೀಡುತ್ತದೆ.

ನಿಮ್ಮ ಮುಖದಲ್ಲಿ ಕಳೆಯೇ ಇಲ್ಲದೆ, ಯಾವುದೇ ಹೊಳಪು ಇಲ್ಲದಿರುವಂತೆ ಗೋಚರಿಸಲು ಪ್ರಮುಖ ಕಾರಣವಾಗಿರುವುದೇ ನಿಮ್ಮ ಚರ್ಮದಲ್ಲಿರುವ ಸತ್ತ ಮತ್ತು ಹಳೆಯ ಜೀವಕೋಶಗಳಾಗಿರುತ್ತವೆ, ಸ್ಕ್ರಬ್ಬಿಂಗ್ ನಿಂದಾಗಿ ನೀವು ಈ ಜೀವಕೋಶಗಳನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಿದೆ ಮತ್ತು ಹೊಸ ಜೀವಕೋಶಗಳ ಬೆಳವಣಿಗೆಗೆ ಇದು ನೆರವಾಗಲಿದೆ. ಈ ವಿಧಾನವನ್ನು ಎಕ್ಸ್ಫೋಲಯೇಷನ್ ಎಂದೂ ಕೂಡ ಕರೆಯಲಾಗುತ್ತೆ.

ಮನೆಯಲ್ಲೇ ತಯಾರಿಸಿರುವ ಸ್ಕ್ರಬ್ ಗಳು ಹೇಗೆ ಪ್ರಯೋಜನಕಾರಿಯಾಗಿವೆ?
ಯಾವಾಗಲೂ ಮನೆಯಲ್ಲೇ ತಯಾರಿಸುವ ಬ್ಯೂಟಿ ಪ್ರೊಡಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದಾಗಿ ಅನಗತ್ಯವಾಗಿ ಚರ್ಮದ ಮೇಲೆ ಕೆಮಿಕಲ್ ಗಳ ಪ್ರಯೋಗವಾಗದೆ, ಚರ್ಮದ ಆರೋಗ್ಯವು ಸದಾ ಹೊಳಪಿನಿಂದ ಮತ್ತು ಯೌವನಾತ್ಮಕವಾಗಿ ಗೋಚರಿಸಲು ನೆರವಾಗುತ್ತೆ. ಮನೆಯಲ್ಲೇ ತಯಾರಿಸುವ ಸ್ಕ್ರಬ್ ಗಳು ಯಾವುದೇ ಅಡ್ಡ ಪರಿಣಾಮಗಳನ್ನು ಮಾಡದೇ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ, ಕೆಮಿಕಲ್ ನಿಂದ ನೀವು ಮುಕ್ತರಾಗಿರಲು ಸಹಕಾರಿಯಾಗಿರುತ್ತೆ. ಮನೆಯಲ್ಲೇ ತಯಾರಿಸುವ ಸ್ಕ್ರಬ್ ಗಳಲ್ಲಿ ಒಂದೆನಿಸಿರುವ ಅಕ್ಕಿಹಿಟ್ಟು ಮತ್ತು ಬೇಕಿಂಗ್ ಸೋಡಾವು ಚರ್ಮವನ್ನು ಆರೋಗ್ಯಯುತವಾಗಿ ಮತ್ತು ಚರ್ಮವನ್ನು ಸ್ವಚ್ಛಗೊಳಿಸಲು ನೆರವು ನೀಡುತ್ತೆ.

ಅಕ್ಕಿಹಿಟ್ಟು ಮತ್ತು ಬೇಕಿಂಗ್ ಸೋಡಾ ಸ್ಕ್ರಬ್
ಅಕ್ಕಿಹಿಟ್ಟು ಮತ್ತು ಬೇಕಿಂಗ್ ಸೋಡಾದಿಂದ ತಯಾರಿಸಿರುವ ಸ್ಕ್ರಬ್ ಮೃದು ಪದರಗಳನ್ನೊಳಗೊಂಡಂತೆ ಇರುತ್ತದೆ. ಎಣ್ಣೆ ತ್ವಚೆ ಹೊಂದಿರುವವರಿಗೆ ಇದು ಅತ್ಯಂತ ಉತ್ತಮವಾದ ಸ್ಕ್ರಬ್ ಆಗಿದೆ. ಇದು ನಿಮಗೆ ಹೊಳಪಿನ ಮತ್ತು ಫ್ರೆಶ್ ಆಗಿರುವ ಚರ್ಮವನ್ನು ನೀಡಲು ಸಹಕಾರಿಯಾಗಿದೆ. ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ತೆಗೆದು ಚರ್ಮದ ರಂದ್ರಗಳನ್ನು ಸ್ವಚ್ಛಗೊಳಿಸಿ, ನಿಮ್ಮ ಚರ್ಮವು ಹೊಳೆಯುವಂತೆ ಮಾಡುವ ತಾಕತ್ತು ಈ ಸ್ಕ್ರಬ್ ಗಿದೆ. ಅನಗತ್ಯವಾಗಿ ಚರ್ಮದಲ್ಲಿ ಸೇರಿಕೊಂಡಿರುವ ಕೊಳೆಯನ್ನು ಇದು ಹೊರತೆಗೆಯುತ್ತೆ.

ತಯಾರಿಕೆಯ ವಿಧಾನ ಮತ್ತು ಬಳಕೆ ಮಾಡುವುದು ಹೇಗೆ?

ಈ ಸ್ಕ್ರಬ್ ತಯಾರಿಕೆಗೆ ಬೇಕಾಗುವ ಪದಾರ್ಥಗಳು
• ಬೇಕಿಂಗ್ ಸೋಡಾ -ತುಂಬಾ ಅಲ್ಲ, ಸ್ವಲ್ಪವೇ ಸ್ವಲ್ಪ
• ಅಕ್ಕಿಯನ್ನು ಪುಡಿ ಮಾಡಿ, ಇಲ್ಲವೇ ಅಕ್ಕಿಹಿಟ್ಟನ್ನೇ ಬಳಸಿ -ಒಂದು ಟೇಬಲ್ ಸ್ಪೂನ್
• ಜೇನುತುಪ್ಪ -ಒಂದು ಟೀ ಸ್ಪೂನ್
ಮೇಲಿನ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ..ತಯಾರಿಸಿದ ಮಿಶ್ರಣವನ್ನು ನಿಮ್ಮ ಮುಖ, ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡಿ. ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿಕೊಂಡರೆ ಚರ್ಮದ ಎಲ್ಲಾ ಭಾಗಕ್ಕೂ ಹಚ್ಚಬಹುದು. ಎರಡರಿಂದ ಮೂರು ನಿಮಿಷ ಚೆನ್ನಾಗಿ ಸ್ಕ್ರಬ್ ಮಾಡಿ.ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿದರೆ ಬಹಳ ಒಳ್ಳೆಯದು. ಕಣ್ಣಿನ ಸುತ್ತ ಮಾಡುವುದು ಬೇಡ.ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯರಿ. ಈ ರೀತಿ ಈ ಸ್ಕ್ರಬ್ ನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಬಳಕೆ ಮಾಡಿದರೆ ನಿಮ್ಮ ಚರ್ಮವು ಕಾಂತಿಯುತವಾಗಿ., ಆರೋಗ್ಯಯುತವಾಗಿ ಇರಲು ಸಾಧ್ಯವಿದೆ.

ಈ ಸ್ಕ್ರಬ್ ಹೇಗೆ ನಿಮ್ಮ ಚರ್ಮದಲ್ಲಿ ಮ್ಯಾಜಿಕ್ ಮಾಡಲಿದೆ?
ಈ ಹೋಮ್ ಮೇಡ್ ಸ್ಕ್ರಬ್ ನಿಮ್ಮ ಚರ್ಮವನ್ನು ಹಿಂದೆಂದಿಗಿಂತಲೂ ಸಾಕಷ್ಟು ಆರೋಗ್ಯಯುತವಾಗಿ ಮತ್ತು ಹೊಳಪಾಗುವಂತೆ ಮಾಡುವುದರಲ್ಲಿ ಆಶ್ಚರ್ಯವೇ ಬೇಡ.
ಅಕ್ಕಿಹಿಟ್ಟು - ಸ್ಕ್ರಬ್ ತಯಾರಿಸಲು ಅತ್ಯುತ್ತಮವಾದ ವಸ್ತು ಎಂದೇ ಪರಿಗಣಿಸಲಾಗಿದೆ. ಅಕ್ಕಿಹಿಟ್ಟು ಚರ್ಮದ ಡೆಡ್ ಸೆಲ್ ಗಳನ್ನು ಹೊರತೆಗೆಯಲು ಅತ್ಯಂತ ಪರಿಣಾಮಕಾರಿಯಾಗಿ ವರ್ತಿಸುವ ತಾಕತ್ತನ್ನು ಹೊಂದಿದೆ. ಫೇಶಿಯಲ್ ನಲ್ಲಿ ಸ್ಕ್ರಬ್ಬಿಂಗ್ ಮಾಡುವ ಪ್ರಮುಖ ಉದ್ದೇಶವೇ ಇದಾಗಿರುತ್ತದೆ. ಹಾಗಾಗಿ ಪ್ರಮುಖ ಕೆಲಸವನ್ನು ಅಕ್ಕಿಹಿಟ್ಟು ನಿರ್ವಹಿಸುತ್ತದೆ.

ಬೇಕಿಂಗ್ ಸೋಡಾ -ಇದು ಚರ್ಮದಲ್ಲಿ ರಕ್ತಸಂಚಾರ ಹೆಚ್ಚಳವಾಗಲು ನೆರವಾಗುತ್ತೆ. ಇದರಿಂದಾಗಿ ಚರ್ಮದ ಆರೋಗ್ಯವು ಹೆಚ್ಚಳವಾಗುತ್ತೆ. ಇದು ಕಾಂತಿ ಕಳೆದುಕೊಂಡಿರುವ ಚರ್ಮವನ್ನು ಕಾಂತಿಯುತವಾಗಿಸುತ್ತೆ ಮತ್ತು ಡ್ರೈ ಆಗಿರುವ ಚರ್ಮವನ್ನು ಸರಿಪಡಿಸುತ್ತೆ. ಬೆಣ್ಣೆ ಅಥವಾ ಎಣ್ಣೆಯನ್ನು ಸ್ಕ್ರಬ್ಬಿಂಗ್ ನಲ್ಲಿ ಬಳಸಿದರೆ,ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮವನ್ನು ಹೊಳಪಿಗೆ ತರಲು ಅದು ನೆರವಾಗುತ್ತೆ.

ಜೇನುತುಪ್ಪ - ಆಂಟಿ ಬ್ಯಾಕ್ಟೀರಿಯಲ್ ಗುಣಗಳಿಂದಾಗಿ ಜೇನುತುಪ್ಪ ಪ್ರಸಿದ್ಧಿ ಪಡೆದಿದೆ.ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹೊಕಲು ಜೇನುತುಪ್ಪ ಸಹಾಯ ಮಾಡುತ್ತೆ. ಒಂದು ವೇಳೆ ಈ ಕೆಲಸ ನಡೆಯದೇ ಹೋದರೆ ಚರ್ಮದಲ್ಲಿ ಆಕ್ನೆಯಂತ ಸಮಸ್ಯೆಗಳು ಹಾಗೆಯೇ ಉಳಿದುಬಿಡುತ್ತವೆ. ಜೇನು ಚರ್ಮವನ್ನು ತಿಳಿಗೊಳಿಸುತ್ತೆ ಮತ್ತು ಆಂಟಿ ಇನ್ಫಮೇಟರಿ ಏಜೆಂಟ್ ನಂತೆ ವರ್ತಿಸುತ್ತೆ. ಚರ್ಮದ ಟಿಷ್ಯೂ ಬಲಿಷ್ಟವಾಗಿ ಮತ್ತೆ ಬೆಳವಣಿಗೆ ಹೊಂದಲು ಇದು ಸಹಕಾರಿ.
ಆದಷ್ಟು ಫ್ರೆಷ್ ಆಗಿರುವ ಪದಾರ್ಥಗಳಿಂದ ಸ್ಕ್ರಬ್ ತಯಾರಿಸಿ ಬಳಕೆ ಮಾಡುವುದು ಒಳ್ಳೆಯದು. ಕೆಲವರು ಹಲವು ದಿನಗಳಿಗೆ ಆಗುವಂತೆ ಸ್ಕ್ರಬ್ ಗಳನ್ನು ತಯಾರಿಸಿಕೊಳ್ಳುತ್ತಾರೆ. ಆಗ ತಯಾರಿಸಿದ ಮಿಶ್ರಣವನ್ನು ಸರಿಯಾಗಿ ಸ್ಟೋರ್ ಮಾಡುವುದು ಪ್ರಮುಖ ವಿಚಾರವಾಗಿರುತ್ತದೆ. ಗಾಳಿಯಾಡದ ಕಂಟೈನರ್ ಗಳಲ್ಲಿ ಅದನ್ನು ಸ್ಟೋರ್ ಮಾಡಿ ಜೋಪಾನ ಮಾಡಿದ್ದೀರಾ ನೋಡಿಕೊಳ್ಳಿ.

ತೇವಾಂಶದಿಂದ ಅದನ್ನು ದೂರವಿರುವಂತೆ ನೋಡಿಕೊಳ್ಳಿ ಮತ್ತು ನೇರವಾಗಿ ಸೂರ್ಯನ ಕಿರಣ ತಾಕದಂತ ಪ್ರದೇಶದಲ್ಲಿ ಜೋಪಾನ ಮಾಡಿ. ಭವಿಷ್ಯದಲ್ಲಿ ನೀವು ಮತ್ತೆ ಅದನ್ನು ಬಳಕೆ ಮಾಡಲು ಆಗ ಮಾತ್ರ ಅದು ಯೋಗ್ಯವಾಗಿರುತ್ತದೆ. ಸ್ಕ್ರಬ್ ನ ಸರಿಯಾದ ಪರಿಣಾಮವನ್ನು ನೀವು ಪಡೆಯಬೇಕು ಎಂದರೆ ನಿಮ್ಮ ಚರ್ಮಕ್ಕೆ ಸರಿಹೊಂದುವ ಸ್ಕ್ರಬ್ ನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮದು ಎಣ್ಣೆ ತ್ವಚೆಯಾಗಿದ್ದರೆ ಆಗ ಖಂಡಿತ ಅಕ್ಕಿಹಿಟ್ಟು ಮತ್ತು ಬೇಕಿಂಗ್ ಸೋಡಾ ದಿಂದ ತಯಾರಿಸಿದ ಸ್ಕ್ರಬ್ ಬಳಕೆ ಮಾಡಿದರೆ ಮೊದಲ ಬಳಕೆಯಲ್ಲೇ ಅದರ ಎಫೆಕ್ಟ್ ಗಮನಿಸಬಹುದಾಗಿರುತ್ತದೆ.

English summary

Homemade Rice Flour and Baking Soda Scrub

Maintaining a healthy skin from within is extremely essential if you wish to flaunt a flawless and glowing skin, no matter which season of the year it is. It is problematic to take a good care of your skin, especially during the summer season and more so when you tend to have an oily skin. A daily or weekly skin care regime can take you a long way in maintaining a skin that glows from within and is full of life, even as you age. Using a scrub is one of the prime activities when following a skin care routine that would otherwise also include deep cleansing and moisturizing.
X
Desktop Bottom Promotion