For Quick Alerts
ALLOW NOTIFICATIONS  
For Daily Alerts

  ಮುಖದ ಸೌಂದರ್ಯ ಹೆಚ್ಚಿಸಲು ಆಲೂಗಡ್ಡೆ ಮತ್ತು ಅರಿಶಿನದ ಫೇಸ್ ಮಾಸ್ಕ್..

  By Sushma Charhra
  |

  ಬಿಳಿಯಾದ ಮತ್ತು ಹೊಳೆಯವ ಚರ್ಮ ಬೇಕು ಎನ್ನುವುದು ಬಹುಶ್ಯ ಪ್ರತಿಯೊಬ್ಬರ ಕನಸೂ ಆಗಿರುತ್ತದೆ. ಆದರೆ, ಅದರಲ್ಲಿ ಕೆಲವರು ಮಾತ್ರ ಹೊಳೆಯುವ ಮತ್ತು ತಾಜಾವಾಗಿರುವ ಚರ್ಮವನ್ನು ನೈಸರ್ಗಿಕವಾಗಿ ಪಡೆಯಲು ಯಶಸ್ವಿ ಆಗುತ್ತಾರೆ. ಅದೆಷ್ಟೋ ಮಹಿಳೆಯರು ಈಗಾಗಲೇ ಹಲವು ರೀತಿಯ ಬ್ಯೂಟಿ ಪ್ರೊಡಕ್ಟ್ ಗಳನ್ನು ಇದಕ್ಕಾಗಿ ಬಳಸಿ, ಸೋತಿದ್ದಾರೆ. ಯಾಕೆಂದರೆ ಅದರಿಂದ ಹಲವು ಅಡ್ಡ ಪರಿಣಾಮಗಳು ಆಗುವ ಸಾಧ್ಯತೆಗಳಿರುತ್ತೆ. ಅಷ್ಟೇ ಅಲ್ಲದೆ ದುಬಾರಿಯೂ ಆಗಬಹುದು. ಪದೇ ಪದೇ ಬಳಸಿದರೆ ಖಂಡಿತ ಇದು ನಿಮಗೆ ಉತ್ತಮ ಪರಿಹಾರವನ್ನು ನೀಡುವುದಿಲ್ಲ.

  ಹಾಗಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೈಸರ್ಗಿಕ ಬ್ಯೂಟಿ ಪ್ರೊಡಕ್ಟ್ ಗಳನ್ನು ತಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಬಳಸಲು ಇಚ್ಛಿಸುತ್ತಿದ್ದಾರೆ. ಕಳೆಗುಂದಿದ ಮತ್ತು ಕಪ್ಪು ವರ್ಣಕ್ಕೆ ತಿರುಗಿದ ಚರ್ಮದ ಕಾಂತಿ ಹೆಚ್ಚಿಸಲು ಆಲೂಗಡ್ಡೆ ಒಂದು ಅತ್ಯತ್ತಮ ಮನೆ ಔಷಧಿಯಾಗಬಲ್ಲದು. ಇದನ್ನು ಬಳಸುವುದರಿಂದಾಗಿ ಚರ್ಮದ ಟೆಕ್ಚರ್ ಬದಲಾಗುತ್ತೆ ಮತ್ತು ನೆರಿಗೆಗಳನ್ನು ನಿಮ್ಮ ಚರ್ಮದಿಂದ ದೂರ ಓಡಿಸುವ ತಾಕತ್ತು ಇದಕ್ಕಿದೆ ಅಷ್ಟೇ ಅಲ್ಲ ಕಪ್ಪು ಚುಕ್ಕೆಗಳು, ಮೊಡವೆ ಸಮಸ್ಯೆಗಳಿಗೂ ಇದು ಉತ್ತಮವಾಗಿ ವರ್ತಿಸುತ್ತೆಯ ಇಲ್ಲಿ ಆಲೂಗಡ್ಡೆ ಮತ್ತು ಅರಿಶಿನ ಬಳಸಿ ತಯಾರಿಸುವ ಕೆಲವು ಪರಿಣಾಮಕಾರಿ ಮಾಸ್ಕ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದನ್ನು ಓದಿ. ನೀವೂ ಪ್ರಯತ್ನಿಸಿ ನೋಡಿ..

  Turmeric Face Mask

  1. ಬಿಳಿಯ ತ್ವಚೆ ಪಡೆಯಲು ಆಲೂಗಡ್ಡೆ ಮತ್ತು ಅರಿಶಿನ ಫೇಸ್ ಮಾಸ್ಕ್ :

  ಬೇಕಾಗುವ ಸಾಮಗ್ರಿಗಳು :

  1 ಆಲೂಗಡ್ಡೆಯನ್ನು ಪೇಸ್ಟ್ ಮಾಡಿಕೊಳ್ಳಿ

  ಅರ್ಧ ಟೀ ಸ್ಪೂನ್ ಕಾಸ್ಮೆಟಿಕ್ ಅರಿಶಿನ

  2 ಟೇಬಲ್ ಸ್ಪೂನ್ ನೈಸರ್ಗಿಕವಾದ ಅಲವೀರಾ ಜೆಲ್

  ಫೇಸ್ ಮಾಸ್ಕ್ ತಯಾರಿಸುವ ವಿಧಾನ ಹೇಗೆ ?

  • ಒಂದು ಬೌಲ್ ತೆಗೆದುಕೊಳ್ಳಿ, ಮೇಲೆ ಹೇಳಿದ ಪ್ರಮಾಣದಲ್ಲಿ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ.

  • ಚೆನ್ನಾಗಿ ಕದಲಿಸಿ. ಅವೆಲ್ಲವೂ ಮಿಕ್ಸ್ ಆಗಿ ಸ್ಮೂತ್ ಆಗಿರುವ ಪೇಸ್ಟ್ ತಯಾರಿಸಿ. ಎಲ್ಲವೂ ಸರಿಯಾಗಿ ಮಿಕ್ಸ್ ಆಗಿದೆಯಾ ಎಂದು ಗಮನಿಸಿಕೊಳ್ಳಿ

  • ನಿಮ್ಮ ಮುಖಕ್ಕೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.

  • ವೃತ್ತಾಕಾರದಲ್ಲಿ ಮುಖದಲ್ಲಿ ಸ್ಕ್ರಬ್ ಮಾಡಿ. ಸುಮಾರು 10 ನಿಮಿಷ ನಿಮ್ಮ ಸ್ಕ್ರಬ್ಬಿಂಗ್ ನಡೆಯಬೇಕು. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಸುಮಾರು 30 ನಿಮಿಷ ಈ ಪ್ಯಾಕ್ ನಿಮ್ಮ ಮುಖದಲ್ಲಿರಲಿ..

  • 30 ನಿಮಿಷದ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ

  • ವಾರಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಉತ್ತಮ ಲಾಭವನ್ನು ಗಳಿಸಿ.

  • ಚರ್ಮಕ್ಕೆ ಆಲೂಗಡ್ಡೆಯಿಂದ ಆಗುವ ಲಾಭಗಳು

  • ಆಲೂಗಡ್ಡೆಯಲ್ಲಿ catecholase ಎನ್ಝೈಮ್ಸ್ ಗಳಿರುತ್ತೆ. ಇದು ಡಾರ್ಕ್ ಸ್ಪಾಟ್ ಗಳನ್ನು ಕಡಿಮೆಗೊಳಿಸಲು ನೆರವಾಗುತ್ತೆ. ಅಷ್ಟೇ ಅಲ್ಲ ಆಕ್ನೆಯ ಸಮಸ್ಯೆಗೂ ಕೂಡ ಇದು ಪರಿಹಾರ ನೀಡುತ್ತೆ.

  • ಆಲೂಗಡ್ಡೆಯಲ್ಲಿ ಪೊಟಾಷಿಯಂ ಅಂಶವಿರುತ್ತೆ. ಇದು ನಿಮ್ಮ ಚರ್ಮವನ್ನು ಮಾಯ್ಚಿರೈಸ್ ಮಾಡುತ್ತೆ ಮತ್ತು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ.

  • ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಇದೆ. ಇದು ಹೊಸ ಜೀವಕೋಶಗಳು ಹುಟ್ಟುವುದಕ್ಕೆ ನೆರವಾಗುತ್ತೆ

  • ಆಲೂಗಡ್ಡೆಯವಲ್ಲಿರುವ ಕ್ಯಾಲ್ಸಿಯಂ ಅಂಶಗಳು ಶುಷ್ಕ ತ್ವಚೆಯ ನಿವಾರಣೆಗೆ ನೆರವಾಗುತ್ತೆ ಮತ್ತು ಚರ್ಮದ ಮೇಲಿನ ಪದರದ ರಕ್ಷಣೆಯನ್ನು ಮಾಡುತ್ತೆ.

  • ಆಲೂಗಡ್ಡೆಯಲ್ಲಿ ಮೆಗ್ನೀಷಿಯಂ ಅಂಶಗಳಿರುತ್ತೆ. ಇದು ಫ್ರೀ ರ್ಯಾಡಿಕಲ್ ಗಳನ್ನು ಅವಾಡ್ ಮಾಡಿ ನೆರಿಗೆಗಳು ಸೃಷ್ಟಿಯಾಗುವುದನ್ನು ತಡೆಯುತ್ತೆ.

  • ಆಲೂಗಡ್ಡೆಯು ಚರ್ಮದ ಗಟ್ಟಿತನದ ರಕ್ಷಣೆ ಮತ್ತು ತಾಜಾವಾಗಿರಲು ನೆರವಾಗುತ್ತೆ ಯಾಕೆಂದರೆ ಇದರಲ್ಲಿ ವಿಟಮಿನ್ ಸಿ ಅಂಶವಿರುತ್ತೆ. ಇದು ಕೋಲಾಜಿನ್ ತಯಾರಿಕೆಯನ್ನು ಹೆಚ್ಚಿಸುತ್ತೆ. ಮತ್ತು ಇದರಲ್ಲಿರುವ ಝಿಂಕ್ ಅಂಶವು ತೊಂದರೆಗೆ ಒಳಗಾದ ಚರ್ಮದ ಟಿಶ್ಯೂವನ್ನು ಸರಿಪಡಿಸಲು ನೆರವಾಗುತ್ತೆ.

  • ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ಮತ್ತು ಚರ್ಮದಲ್ಲಿರುವ ಕೊಳೆಯ ಅಂಶದ ನಿವಾರಣೆಗೆ ಆಲೂಗಡ್ಡೆ ಪರಿಣಾಮಕಾರಿಯಾಗಿ ವರ್ತಿಸುತ್ತೆ.

  • ಆಲೂಗಡ್ಡೆಯಲ್ಲಿ ಬ್ಲೀಚಿಂಗ್ ಗುಣಗಳು ಕೂಡ ಇದ್ದು, ಇದು ಮೆಲಮೈನ್ ತಯಾರಿಕೆಯನ್ನು ಕಡಿಮೆಗೊಳಿಸಲು ನೆರವಾಗುತ್ತೆ. ಹಾಗಾಗಿ ಹೈಪರ್ ಪಿಗ್ಮೆಂಟೇಷನ್  ಸಮಸ್ಯೆಯನ್ನು ಕಡಿಮೆ ಮಾಡುತ್ತೆ ಜೊತೆಗೆ ಚರ್ಮವನ್ನು ಪರಿಣಾಮಕಾರಿಯಾಗಿ ಬಿಳಿಗೊಳಿಸುವ ತಾಕತ್ತು ಇದಕ್ಕಿದೆ.

  • ನಿಮಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲದ ಸಮಸ್ಯೆ ಇದ್ದಲ್ಲಿ, ಆಲೂಗಡ್ಡೆಯ ರಸವು ಕಣ್ಣಿನ ಕೆಳಭಾಗದ ಕಪ್ಪು ವರ್ತುಲದ ನಿವಾರಣೆಯಲ್ಲಿ ಮ್ಯಾಜಿಕ್ ಮಾಡಲಿದೆ. ಅಷ್ಟೇ ಅಲ್ಲ ಕಣ್ಣಿನ ಕೆಳಗೆ ಜೋತು ಬಿದ್ದಂತಾಗುವ ಚರ್ಮದ ನಿವಾರಣೆಗೂ ಕೂಡ ಇದೊಂದು ಅಧ್ಬುತ ಮೆಡಿಸಿನ್ ನಂತೆ ವರ್ತಿಸುತ್ತೆ.

  • ಆಲೂಗಡ್ಡೆ ರಸವನ್ನು ಹಚ್ಚುವುದರಿಂದಾಗಿ ಯಾರು ಮೊಡವೆ ಮತ್ತು ಆಕ್ನೆ ಮಾರ್ಕ್ ಗಳ ಸಮಸ್ಯೆಯಿಂದ ಬಳಲುತ್ತಿರುತ್ತೀರೋ ಅವರಿಗೆ ಅಧ್ಬುತವಾಗಿ ಕೆಲಸ

  ಮಾಡುತ್ತೆ., ಹಸಿ ಆಲೂಗಡ್ಡೆಯ ರಸವನ್ನು ಇದಕ್ಕೆ ಬಳಕೆ ಮಾಡಬೇಕು.

  • ನಿಮಗೆ ಶುಷ್ಕ ತ್ವಚೆ ಮತ್ತು ಚರ್ಮದಲ್ಲಿ ಪೊರೆಪೊರೆಯಾಗುವ ಸಮಸ್ಯೆ ಇದ್ದರೆ, ಆಲೂಗಡ್ಡೆ ಫೇಶಿಯಲ್ ಒಂದು ಅಧ್ಬುತವಾದ ಮನೆಯಲ್ಲೇ ತಯಾರಿಸುವ ಫೇಸ್ ಮಾಸ್ಕ್ ಆಗಲಿದೆ ಮತ್ತು ಕಪ್ಪು ಚರ್ಮವನ್ನು ತಿಳಿಗೊಳಿಸುತ್ತೆ.

  • ಹಸಿ ಆಲೂಗಡ್ಡೆಯ ತುಂಡುಗಳನ್ನು ಮಹಿಳೆಯರು ತಮ್ಮ ನೆರಿಗೆಗಳ ಟ್ರೀಟ್ ಮೆಂಟ್ ಗೆ ಕೂಡ ಬಳಕೆ ಮಾಡಬಹುದು.

  • ಚರ್ಮವನ್ನು ತಿಳಿಗೊಳಿಸಿಕೊಳ್ಳಲು ಆಲೂಗಡ್ಡೆಯಿಂದ ತಯಾರಿಸಬಹುದಾದ ಒಂದು ರೆಸಿಪಿಯನ್ನು ಮಾತ್ರ ನಾವಿಲ್ಲಿ ವಿವರಿಸಿದ್ದೇವೆ. ಇದು ನೆರಿಗೆಗಳು, ಸ್ಕ್ಯಾಲಿಸ್ಕಿನ್ ಮತ್ತು ಆಕ್ನೆ ಮಾರ್ಕ್ ಗಳ ನಿವಾರಣಗೆ ನಿಮಗೆ ಸಹಾಯ ಮಾಡಲಿದೆ.

  • ಕೆಲವು ಆಲೂಗಡ್ಡೆಯ ತುಂಡನ್ನು ಫ್ರಿಡ್ಜ್ ನಲ್ಲಿ ಇಡಿ. ಸುಮಾರು 30 ನಿಮಿಷ ಅದು ಹಾಗೆಯೇ ಫ್ರಿಡ್ಜ್ ನಲ್ಲಿ ಇರಲಿ.. ನಂತರ ಆ ಆಲೂಗಡ್ಡೆಯ ತುಂಡುಗಳನ್ನು ಕಣ್ಣುಗಳ

  ಮೇಲೆ ಇಟ್ಟುಕೊಳ್ಳಿ. ಇದರಿಂದಾಗಿ ನಿಮ್ಮ ಕಣ್ಣುಗಳಿಗೆ ಆರಾಮವಾಗುತ್ತೆ ಮತ್ತು ಕಣ್ಣುಗಳು ತಂಪಾಗಿ ಆರೋಗ್ಯವಾಗಿರಲು ನೆರವಾಗುತ್ತೆ.

  • ಸೂರ್ಯನ ಕಿರಣಗಳಿಂದ ನಿಮಗೆ ತೊಂದರೆಯಾಗಿದ್ದು, ಟ್ಯಾನ್ ಆಗಿದ್ದರೆ ಆಲೂಗಡ್ಡೆಯ ತುಂಡುಗಳನ್ನು ಪ್ರತಿ ದಿನ ಚರ್ಮದ ಮೇಲೆ ಇಟ್ಟುಕೊಳ್ಳಿ. ಮತ್ತು ಅದರಿಂದ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಟ್ಯಾನ್ ಆಗಿರುವ ಭಾಗದ ಕಪ್ಪು ಕಲೆಗಳು ಒಂದೇ ವಾರದಲ್ಲಿ ನಿವಾರಣೆಯಾಗಲಿದೆ.

  Turmeric Face Mask

  2. ಚರ್ಮಕ್ಕೆ ಅರಿಶಿನ ದಿಂದ ಆಗುವ ಲಾಭಗಳು

  • ಅರಿಶಿನವು ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲಮೇಟರಿ ಅಂಶಗಳನ್ನು ಹೊಂದಿದೆ. ಇದೂ ಗುಣಗಳು ಚರ್ಮಕ್ಕೆ ಕಾಂತಿಯನ್ನು ಮತ್ತು ಆರೋಗ್ಯವನ್ನು ನೀಡುತ್ತೆ. ಚರ್ಮವು ನೈಸರ್ಗಿಕ ಬಣ್ಣಕ್ಕೆ ಬರುವಂತೆ ಮಾಡುವ ತಾಕತ್ತು ಅರಿಶಿನಕ್ಕೆ ಇದೆ.

  • ಅರಿಶಿನದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಗಳಿಂದಾಗಿ ನಿಮ್ಮ ಚರ್ಮದ ಹೋಲುಗಳ ಅಥವಾ ಗುಳಿಗಳ ನಿವಾರಣೆಗೆ ಇದು ನೆರವಾಗಿ ಚರ್ಮವು ತಾಜಾ ವಾಗುವಂತೆ ಮಾಡುತ್ತೆ ಮತ್ತು ಕಲೆಗಳನ್ನು ನಿವಾರಿಸುವ ತಾಕತ್ತು ಅರಿಶಿನಕ್ಕೆ ಇದೆ.

  • ಆಕ್ನೆಯ ಸಮಸ್ಯೆಯಿಂದ ಬಳಲುವವರಿಗೆ ನಾವು ಮೇಲೆ ತಿಳಿಸಿರುವ ಫೇಸ್ ಮಾಸ್ಕ್ ಅಧ್ಬುತವಾಗಿ ಕೆಲಸ ಮಾಡುತ್ತೆ.

  • ಈಗಾಗಲೇ ಹಲವಾರು ಅಧ್ಯಯನಗಳು ನಡೆದಿದ್ದು ಅರಿಶಿನವು ಯಾವ ರೀತಿ ನಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂಬ ಬಗ್ಗೆ ವಿವರಣೆ ನೀಡಲಾಗಿದೆ. ಎಕ್ಜೀಮಾ, ಅಲೋಪೇಸಿಯ, ಲಿಚನ್ ಪ್ಲಾನುಸ್ ಇತ್ಯಾದಿ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಇದು ಸಹಕಾರಿಯಾಗಿದೆ.

  • ಸೂರ್ಯನ ಕಿರಣಗಳಿಗೆ ಹೆಚ್ಚು ತೆರೆದುಕೊಳ್ಳುವುದು ಚರ್ಮ ಬೇಗನೆ ವಯಸ್ಸಾದಂತೆ ಕಾಣುವ ಹಾಗೆ ಮಾಡಬಹುದು. ಈ ನೇರಳಾತೀತ ಕಿರಣಗಳು ಚರ್ಮದ ಬಣ್ಣದ ಬದಲಾವಣೆ ಮಾಡಲಿದೆ, ಚರ್ಮದ ಗಟ್ಟಿತನವನ್ನು ಕಡಿಮೆಗೊಳಿಸುತ್ತೆ. ಸೂರ್ಯನ ಕಿರಣಗಳು MMP-2 ನ ಸಂಖ್ಯೆಯನ್ನು ಹೆಚ್ಚಿಸುತ್ತೆ. ಇದೊಂದು ಎನ್ಜೈಮ್ ಆಗಿದ್ದು ಚರ್ಮದ ಹೊರಗಿನ ಪದರ ಮತ್ತು ಮೇಲಿನ ಪದರದ ನಡುವಿನ ಗಟ್ಟಿತನವನ್ನು ಕಡಿಮೆಗೊಳಿಸುತ್ತೆ. ಹಾಗಾಗಿ ಇದರ ಸಂಖ್ಯೆಯನ್ನು ಅಧಿಕವಾಗದಂತೆ ನೋಡಿಕೊಂಡರೆ ಚರ್ಮವು ಆರೋಗ್ಯವಾಗಿರಲು ಸಾಧ್ಯವಿದೆ. ಸೂರ್ಯನ ಕಿರಣಗಳಿಂದ ಆಗುವ ಸಮಸ್ಯೆಯನ್ನು ಅರಿಶಿನ ಕಡಿಮೆಗೊಳಿಸಲು ಕಾರಣವೇ ಇದು. ಯಾಕೆಂದರೆ MMP-2 ನ ಸಂಖ್ಯೆಯನ್ನು ಅಧಿಕವಾಗಲು ಅರಿಶಿನ ಬಿಡುವುದಿಲ್ಲ. ಆಗ ಚರ್ಮದ ಎರಡು ಪದರಗಳ ನಡುವೆ ಹೆಚ್ಚು ಅಂತರವಿಲ್ಲದೆ ಚರ್ಮವು ಗಟ್ಟಿಯಾಗಿರುತ್ತೆ.

  • ಅರಿಶಿನವು ಒಂದು ಅಧ್ಬುತ ಆಂಟಿ ಕ್ಯಾನ್ಸರ್ ಟ್ರೀಟ್ ಮೆಂಟ್ ನೀಡುತ್ತೆ. ಇದು ಕ್ಯಾನ್ಸರ್ ನ ಜೀವಕೋಶಗಳನ್ನು ಆಯ್ಕೆ ಮಾಡಿ ಸಾಯಿಸುವ ತಾಕತ್ತು ಹೊಂದಿದೆ. ಚರ್ಮಕ್ಕೆ ಅಲವೀರದಿಂದ ಆಗುವ ಲಾಭಗಳು

  • ಸನ್ ಬರ್ನ್ ಗೆ ಅಲವೀರಾ ಒಂದು ಅಧ್ಬುತ ಥೆರಪಿಯಾಗಬಲ್ಲದು. ಇದರಲ್ಲಿ ಚರ್ಮದ ಒಂದು ಲೆವೆಲ್ ನಲ್ಲಿ ಸಮಸ್ಯೆಯನ್ನು ಗುಣಮುಖವಾಗಿಸುವ ತಾಕತ್ತು ಇದಕ್ಕಿದ್ದು, ಈ ಸೆಲ್ ಗಳ ಪದರವು ಇಡೀ ದೇಹವನ್ನು ಕವರ್ ಮಾಡುವಂತಿರುತ್ತೆ.

  • ಇದರಲ್ಲಿ ಪೋಷಕಾಂಶಭರಿತ ಗುಣಗಳು ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಬೇಗನೆ ಹೀಲ್ ಮಾಡುವ ತಾಕತ್ತು ಹೊಂದಿದೆ.

  • ಅಲವೀರಾ ಜೆಲ್ ಎರಡು ಪ್ರಮುಖ ಹಾರ್ಮೋನುಗಳನ್ನು ಹೊಂದಿದೆ.ಆಕ್ಸಿನ್ ಮತ್ತು ಗಿಬ್ಬರೆಲಿಯನ್ಸ್. ಇವೆರಡು ಕೂಡ ನೋವುನಿವಾರಕ ಮತ್ತು ಆಂಟಿ ಇನ್ಫ್ಲಮೇಟರಿ ಗುಣಗಳನ್ನು ಹೊಂದಿದ್ದು ಚರ್ಮದ ರಕ್ಷಣೆಗೆ ನೆರವಾಗುತ್ತೆ.

  • ತುರಿಕೆ, ನೋವು ಇತ್ಯಾದಿಗಳನ್ನು ಕೂಡಲೇ ನಿವಾರಿಸುವ ತಾಕತ್ತು ಅಲವೀರಾಕ್ಕಿದೆ. ಇದೊಂದು ಅಧ್ಬುತ ಆಯುರ್ವೇದ ಔಷಧವಾಗಿದ್ದು ದೊಡ್ಡ ಮಟ್ಟದ ಚರ್ಮದ ಕಾಯಿಲೆಗಳ ನಿವಾರಣೆಗೂ ಬಳಸಲಾಗುತ್ತೆ.

  • ನೈಸರ್ಗಿಕವಾಗಿ ಚರ್ಮವು ಹೈಡ್ರೇಟ್ ಆಗಿರುವಂತೆ ಇದು ನೋಡಿಕೊಳ್ಳುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್, ವಿಟಮಿನ್ ಸಿ, ವಿಟಮಿನ್ ಇ, ಅಂಶಗಳಿರುದ್ದು ಚರ್ಮವು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.

  ಹಾಗಾಗಿ ಈ ಮೂರು ವಸ್ತುಗಳನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದಾಗಿ ಚರ್ಮವು ಕಾಂತಿ ಪಡೆದು ಹೊಳೆಯುತ್ತದೆ.ವಾರಕ್ಕೆ ಮೂರು ಬಾರಿ ಇದನ್ನು ಪ್ರಯತ್ನಿಸಿ ನೋಡಿ. ಕ್ಲೆನ್ಸಿಂಗ್ ನಂತರ ಐಸ್ ಕ್ಯೂಬ್ ಗಳನ್ನು ಮುಖಕ್ಕೆ ಇಟ್ಟುಕೊಳ್ಳಿ. ಮೂರೇ ವಾರದಲ್ಲಿ ನೀವು ವ್ಯತ್ಯಾಸವನ್ನು ಗುರುತಿಸಿಕೊಳ್ಳಬಹುದು.

  English summary

  Homemade Potato And Turmeric Face Mask

  Fair and glowing skin is something all of us dream about. But, very few have achieved the success in getting that naturally glowing and fresh face. A lot of women have used a wide range of beauty products and have failed, since there are a lot of side effects, usually accompanied by extensive usage of these products. Here is a recipe of one of the most effective masks for fair skin using potato and turmeric. Take a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more