For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು ನೈಸರ್ಗಿಕ ಫೇಸ್ ಪ್ಯಾಕ್

By Hemanth
|

ಮಹಿಳೆ ಹೆಚ್ಚು ಹೊಟ್ಟೆಕಿಚ್ಚು ಪಡುವುದು ತನಗಿಂತ ಸುಂದರವಾಗಿರುವ ಮತ್ತೊಬ್ಬ ಮಹಿಳೆಯ ನೋಡಿದಾಗ. ಇಂತಹ ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಲು ಏನು ಬೇಕಾದರೂ ಮಾಡಬಹುದು. ಹಣವಿರುವವರು ಬ್ಯೂಟಿ ಪಾರ್ಲರ್ ಗಳಿಗೆ ಆಗಾಗ ಭೇಟಿ ನೀಡಬಹುದು ಅಥವಾ ಬೇರೆ ಚಿಕಿತ್ಸೆ ಮಾಡಬಹುದು. ಇನ್ನು ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳನ್ನು ತಂದು ತ್ವಚೆಯ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಬಹುದು. ಇದೆಲ್ಲದರ ಪ್ರಯತ್ನದ ಹೊರತಾಗಿಯೂ ಹೆಚ್ಚಿನ ಮಹಿಳೆಯರಿಗೆ ನಿಸ್ತೇಜ ಚರ್ಮ ಮತ್ತು ಇತರ ಸಮಸ್ಯೆಗಳು ಕಾಣಿಸುವುದು.

ನಿಮಗೆ ನೈಸರ್ಗಿಕವಾಗಿ ಕಾಂತಿಯುತ ತ್ವಚೆ ಬೇಕಾದರೆ ಈ ಲೇಖನವನ್ನು ತಪ್ಪದೆ ಓದಬೇಕು. ಮನೆಯಲ್ಲೇ ತಯಾರಿಸುವ ಫೇಸ್ ಪ್ಯಾಕ್ ಬಳಸಿಕೊಂಡು ತ್ವಚೆಯ ಕಾಂತಿ ಪಡೆಯುವುದು ಹೇಗೆ ಎಂದು ತಿಳಿಯಿರಿ. ಇದಕ್ಕೆ ಬೇಕಾಗಿರುವುದು ಮುಲ್ತಾನಿ ಮಿಟ್ಟಿ ಮತ್ತು ಮಾವಿನ ಹಣ್ಣು. ಮುಲ್ತಾನಿ ಮಿಟ್ಟಿಯು ಹೆಚ್ಚಾಗಿ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಮಾವಿನ ಹಣ್ಣಿನಲ್ಲಿ ಹಲವಾರು ರೀತಿಯ ತ್ವಚೆಗೆ ಲಾಭವಿದೆ. ಇದು ನಿಸ್ತೇಜ ಚರ್ಮಕ್ಕೂ ನೆರವಾಗುವುದು. ಮನೆಯಲ್ಲೇ ತಯಾರಿಸಬಹುದಾದ ಫೇಸ್ ಪ್ಯಾಕ್ ಗಳ ಬಗ್ಗೆ ನೀವಿಲ್ಲಿ ತಿಳಿಯಿರಿ.

ನಿಮಗೆ ಬೇಕಾಗಿರುವುದು ಇಷ್ಟು ಮಾತ್ರ....
ಒಂದು ಸಣ್ಣ ಮಾವಿನ ಹಣ್ಣು
7-8 ಬಾದಾಮಿ
2-3 ಚಮಚ ಓಟ್ ಮೀಲ್
2 ಚಮಚ ಹಸಿ ಹಾಲು
2 ಚಮಚ ನೀರು
3 ಚಮಚ ಮುಲ್ತಾನಿ ಮಿಟ್ಟಿ

Multani Mitti face pack

ತಯಾರಿಸುವ ವಿಧಾನ
• ಬಾದಾಮಿಯನ್ನು ರುಬ್ಬಿಕೊಂಡು ಹುಡಿ ಮಾಡಿ ಒಂದು ಗಾಜಿನ ಪಿಂಗಾಣಿಗೆ ಹಾಕಿ.
• ಮಾವಿನ ತಿರುಳು ಮತ್ತು ಹೇಳಿದಷ್ಟು ಪ್ರಮಾಣದ ಓಟ್ ಮೀಲ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಪಿಂಗಾಣಿಗೆ ಹಾಕಿ.
• ಇದಕ್ಕೆ ಹಾಲು ಮತ್ತು ನೀರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಬಳಸುವ ವಿಧಾನ
*ಮುಖ ಹಾಗೂ ಕುತ್ತಿಗೆಗೆ ಇದನ್ನು ಸರಿಯಾಗಿ ಹಚ್ಚಿಕೊಳ್ಳಿ.
*ಐದು ನಿಮಿಷ ಕಾಲ ಇದನ್ನು ನಿಧಾನವಾಗಿ ಸ್ಕ್ರಬ್ ಮಾಡಿ.
*15-20 ನಿಮಿಷ ಕಾಲ ಇದನ್ನು ಹಾಗೆ ಬಿಡಿ.
*ಉಗುರುಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

ಮಾವಿನಹಣ್ಣಿನ ಲಾಭಗಳು
*ಮಾವಿನ ಹಣ್ಣಿನಲ್ಲಿ ಪೊಟಾಶಿಯಂ ಸಮೃದ್ಧವಾಗಿದ್ದು, ಇದು ತ್ವಚೆಗೆ ಉತ್ತಮ ಮಟ್ಟದಲ್ಲಿ ತೇವಾಂಶ ನೀಡುವುದು. ಇದರಿಂದ ತ್ವಚೆಯು ತುಂಬಾ ಕಾಂತಿ ಹಾಗೂ ತಾಜಾವಾಗಿರುವುದು.
*ಇದರಲ್ಲಿ ವಿಟಮಿನ್ ಸಿ ಇದೆ. ಈ ವಿಟಮಿನ್ ನಲ್ಲಿ ಕಾಂತಿಯನ್ನು ಉಂಟುಮಾಡುವ ಗುಣಗಳು ಇವೆ. ಇದು ಚರ್ಮದ ಬಣ್ಣ ಉತ್ತಮಪಡಿಸುವುದು.
*ಹಣ್ಣುಗಳ ರಾಜನೆಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ಅಲ್ಪಾ ಹೈಡ್ರೋಕ್ಸಿ ಆಮ್ಲವಿದೆ. ಇದು ತ್ವಚೆಯ ಬೊಕ್ಕೆಗಳ ನಿವಾರಣೆ ಮಾಡಿ ಚರ್ಮದವನ್ನು ಮೃದುವಾಗಿಡುವುದು.
*ಮಾವಿನ ಹಣ್ಣಿನಲ್ಲಿರುವಂತಹ ವಿಟಮಿನ್ ಬಿ ಹಲವಾರು ವಿಧಾನಗಳಿಂದ ತುಂಬಾ ಲಾಭಕಾರಿ. ಫ್ರೀ ರ್ಯಾಡಿಕಲ್ ನಿಂದ ಅಕಾಲಿಕವಾಗಿ ವಯಸ್ಸಾಗುವುದನ್ನು ಇದು ತಪ್ಪಿಸುವುದು ಮತ್ತು ಚರ್ಮದ ಸಂಪೂರ್ಣ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವುದು.

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ನ 8 ಲಾಭಗಳು
ಮುಲ್ತಾನಿ ಮಿಟ್ಟಿಯ ಲಾಭಗಳು
*ಮುಲ್ತಾನಿ ಮಿಟ್ಟಿಯಲ್ಲಿ ಕಿತ್ತೊಗೆಯುವಂತಹ ಗುಣಗಳು ಇದ್ದು, ಚರ್ಮದ ರಂಧ್ರಗಳಲ್ಲಿ ಇರುವಂತಹ ವಿಷಕಾರಿ ಅಂಶ ಮತ್ತು ಕಲ್ಮಶಗಳನ್ನು ಇದು ಹೊರಹಾಕಲು ನೆರವಾಗುವುದು ಮತ್ತು ಹಲವಾರು ಸಮಸ್ಯೆಗಳು ನಿವಾರಿಸುವುದು.
*ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು.
*ಮುಲ್ತಾನಿ ಮಿಟ್ಟಿಯಲ್ಲಿ ಇರುವಂತಹ ಮೆಗ್ನಿಶಿಯಂ ಕ್ಲೋರೈಡ್ ನಂತಹ ಅಂಶಗಳು ಮೊಡವೆ ಮತ್ತು ಕಲೆಗಳನ್ನು ನಿವಾರಿಸುವುದು.
*ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿರುವಂತಹ ಮುಲ್ತಾನಿ ಮಿಟ್ಟಿಯು ಚರ್ಮದ ವರ್ಣ ಮರಳಿಸಲು ನೆರವಾಗುವುದು. ನಿಯಮಿತವಾಗಿ ಬಳಕೆ ಮಾಡಿದರೆ ಅದರಿಂದ ಚರ್ಮವು ಮತ್ತಷ್ಟು ಬಿಳಿಯಾಗುವುದು.
*ಇನ್ನು ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ.

ಬಾದಾಮಿ ಲಾಭಗಳು
*ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ನಿಸ್ತೇಜ ಚರ್ಮದ ಸಮಸ್ಯೆಯನ್ನು ನಿವಾರಿಸುವುದು. ಇದನ್ನು ಹಚ್ಚಿದರೆ ನೈಸರ್ಗಿಕ ಕಾಂತಿ ಬರುವುದು ಮತ್ತು ಚರ್ಮವು ತಾಜಾ ಮತ್ತು ಸುಂದರವಾಗಿರುವುದು.
*ಬಾದಾಮಿಯನ್ನು ಬಳಕೆ ಮಾಡುವುದರಿಂದ ಚರ್ಮವು ಹೊಸ ಕೋಶಗಳನ್ನು ಪುನರುಜ್ಜೀವನಗೊಳಿಸಲು ನೆರವಾಗುವುದು. ಇದರಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳಿವೆ. ಇದರಿಂದ ಯೌವನಯುತ ಚರ್ಮ ಪಡೆಯಬಹುದು.
*ಇದರಲ್ಲಿರುವಂತಹ ಕೆಲವೊಂದು ಕೊಬ್ಬಿನಾಮ್ಲಗಳು ಚರ್ಮದ ವರ್ಣವು ಮರಳಿ ಬರಲು ನೆರವಾಗುವುದು.
* ಇನ್ನು ಗಾಢವಾದ ತ್ವಚೆಯನ್ನು ಉಪಚರಿಸಲು ಹಾಲು ಮತ್ತು ಬಾದಾಮಿ ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಕಪ್ಪು ಕಲೆಗಳನ್ನು ತಿಳಿಗೊಳಿಸಿ. ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ ಹಾಗೂ ಮುಖವನ್ನು ಕಲೆ ಮತ್ತು ಸುಕ್ಕಿಲ್ಲದೆ ತಾಜಾಗೊಳಿಸುತ್ತದೆ ಅಂತೆಯೇ ಮುಖದಲ್ಲಿ ಯುವತ್ವ ಶೋಭಿಸುವಂತೆ ಮಾಡುತ್ತದೆ. ಸ್ವಲ್ಪ ಹಾಲನ್ನು ಬಳಸಿ ಬಾದಾಮಿಯ ದಪ್ಪನೆಯ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಸಂಪೂರ್ಣ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಸ್ವಲ್ಪ ಸಮಯ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ನಿತ್ಯವೂ ಈ ಹಂತವನ್ನು ಅನುಸರಿಸಿ.

ಹಾಲಿನ ಲಾಭಗಳು
*ಹಾಲಿನಲ್ಲಿರುವ ಉತ್ತಮ ಮಟ್ಟದ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪತ್ತಿಗೆ ನೆರವಾಗುವುದು. ಇದರಿಂದ ನೆರಿಗೆ, ಗೆರೆಗಳು ಮತ್ತು ಚರ್ಮ ಜೋತು ಬೀಳುವುದನ್ನು ತಡೆಯಬಹುದು.
*ಹಾಲಿನಲ್ಲಿ ಇರುವಂತಹ ಮೆಗ್ನಿಶಿಯಂ ನಿಸ್ತೇಜ ಚರ್ಮ ನಿವಾರಣೆ ಮಾಡುವುದು. ಆಗಾಗ ಹಾಲನ್ನು ಹಚ್ಚುತ್ತಲಿದ್ದರೆ ಆಗ ಚರ್ಮಕ್ಕೆ ನೈಸರ್ಗಿಕ ಕಾಂತಿ ಬರುವುದು ಮತ್ತು ಮೇಕಪ್ ಇಲ್ಲದೆಯು ಚರ್ಮವು ಸುಂದರವಾಗಿ ಕಾಣುವುದು.
* ಹಾಲಿನಲ್ಲಿ ಇರುವಂತಹ ವಿಟಮಿನ್ ಡಿ ಯು ಹಾನಿಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನಿಂದ ಸುರಕ್ಷೆ ನೀಡುವುದು ಮತ್ತು ಚರ್ಮದ ಸಮಸ್ಯೆಗಳಿಂದ ಕಾಪಾಡುವುದು.

ಓಟ್ ಮೀಲ್ಸ್ ನ ಲಾಭಗಳು
*ಓಟ್ ಮೀಲ್ಸ್ ನಲ್ಲಿ ಉನ್ನತ ಮಟ್ಟದ ಓಟ್ ಮೀಲ್ಸ್ ಇದ್ದು, ಇದು ಎಲ್ಲಾ ರೀತಿಯ ಚರ್ಮಕ್ಕೂ ಸಹಕಾರಿಯಾಗಿದೆ. ಇಸುಬು, ಸೋರಿಯಾಸಿಸ್ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವುದು.
*ಇದರಲ್ಲಿ ಇರುವಂತಹ ನೈಸರ್ಗಿಕವಾದ ಕಿತ್ತುಹಾಕುವ ಗುಣಗಳು ಚರ್ಮದಿಂದ ವಿಷಕಾರಿ ಅಂಶಗಳನ್ನು ತೆಗೆಯುವುದು ಮತ್ತು ಚರ್ಮದ ರಂಧ್ರಗಳು ತುಂಬಾ ಶುದ್ಧ ಹಾಗೂ ಶುಭ್ರವಾಗಿರುವಂತೆ ಮಾಡುವುದು.
*ಓಟ್ ಮೀಲ್ಸ್ ನಲ್ಲಿ ಇರುವಂತಹ ಆರೋಗ್ಯಕಾರಿ ಕೊಬ್ಬು ಚರ್ಮಕ್ಕೆ ತೇವಾಂಶ ನೀಡಲು ನೆರವಾಗುವುದು. ನೀವು ವಾರದಲ್ಲಿ ಒಂದು ಸಲ ಈ ಪ್ಯಾಕ್ ಅನ್ನು ಬಳಸಿಕೊಂಡರೆ ಆಗ ನಿಮಗೆ ಉತ್ತಮ ಫಲಿತಾಂಶ ಕಂಡುಬರುವುದು.

English summary

Homemade Multani Mitti And Mango Face Pack For Glowing Skin

If you too are someone who wishes to have a glowing skin that looks naturally flawless and gorgeous, then do read on. As today at Boldsky, we're letting you know about a homemade face pack that can effectively bring a dewy glow on your skin. Read on to know about the recipe to prepare this glow-boosting face pack.
X
Desktop Bottom Promotion